ಊಟ ಫುಲ್ ಫ್ರೀ ...ಆದ್ರೆ ಟೈಮ್ ಗೆ ದುಡ್ಡು ಕೊಡಬೇಕು.. !

ಆರಾಧ್ಯ

ಊಟ ಫುಲ್ ಫ್ರೀ ...ಆದ್ರೆ ಟೈಮ್ ಗೆ ದುಡ್ಡು ಕೊಡಬೇಕು.. !

Tuesday January 19, 2016,

2 min Read

ನಮ್ಮ ಸಿಲಿಕಾನ್ ಸಿಟಿಯಲ್ಲಿ ಹೋಟೆಲ್​ಗಳಿಗೇನು ಕಡಿಮೆ ಇಲ್ಲ. ಪ್ರತಿದಿನ ಒಂದು ಹೊಸ ಹೊಸ ಹೋಟೆಲ್​ಗಳು ಪ್ರಾರಂಭವಾಗುತ್ತಲೇ ಇರುತ್ತದೆ. ಅದೇ ರೀತಿ ನಮ್ಮ ಗಾರ್ಡನ್ ಸಿಟಿಯಲ್ಲಿ ಒಂದು ವಿಭಿನ್ನವಾದ ಹೋಟೆಲ್ ತಲೆಎತ್ತಿದೆ, ಅದರ ಹೆಸರು ವಿನ್ಯೂಟ್ ಬಿಸ್ಟ್ರೋ. ಏನಿದು ಬಹಳ ವಿಭಿನ್ನವಾಗಿದೆ ಹೋಟೆಲ್ ನ ಹೆಸರು ಅಂದುಕೊಂಡ್ರಾ.. ಹೆಸರಿನಷ್ಟೇ ಸ್ಪೇಷಲ್ ಆಗಿದೆ ಈ ಮಿನ್ಯೂಟ್ ಬಿಸ್ಟ್ರೋ ಹೋಟೆಲ್.

image


ಈ ಹೊಟೇಲ್ ನಲ್ಲಿ ನೀವು ಏನ್​ ತಿಂದ್ರು ದುಡ್ಡು ಕೊಡೋ ಅವಶ್ಯಕತೆನೇ ಇಲ್ಲ. ನಿಮಗೆ ಇಷ್ಟ ಬಂದ ತಿಂಡಿಯನ್ನ ಅರ್ಡರ್​ ಮಾಡಿ, ಆರಾಮಗಿ ಕುಳಿತು ತಿಂದು ಬರಬಹುದು. ಅರೇ ಎಲ್ಲಾ ತಿಂಡಿಗಳು ಫ್ರೀ ಯಾಗಿ ಸಿಗುತ್ತವೆ ಅಂತ ಯೋಚನೆ ಮಾಡ್ತಾ ಇದ್ದೀರಾ..! ಖಂಡಿತಾ ಫ್ರೀ ಕಣ್ರೀ..! ಆದ್ರೆ ನೀವು ಇಲ್ಲಿರುವಷ್ಟು ಕಾಲಕ್ಕೆ ದುಡ್ಡು ನೀಡಿದ್ರೆ ಸಾಕು..! ಅಯ್ಯೋ ಇದ್ಯಾವ ಸೀಮೆ ಹೋಟೆಲ್ ಅಂದ್ರಾ..!

image


ಹೌದು ಈ ಹೋಟೆಲ್​ನಲ್ಲಿ ತಿಂಡಿ ಉಚಿತ, ಆದ್ರೆ ಸಮಯಕ್ಕೆ ದುಡ್ಡು ಕೊಡಬೇಕು. ನೀವು ಇಲ್ಲಿಗೆ ಬೇಟಿ ನೀಡಿದ್ರೆ ತಿಂಡಿಗೆ ದುಡ್ಡು ನೀಡಬೇಕಿಲ್ಲ. ಆ ಹೋಟೆಲ್​ನಲ್ಲಿ ಎಷ್ಟು ಸಮಯ ಕಳೆಯುತ್ತೀರೋ ಆ ಸಮಯಕ್ಕೆ ದುಡ್ಡು ನೀಡಿದ್ರೆ ಸಾಕು. ಉದಾಹರಣೆಗೆ ನೀವು ಆ ಹೋಟೆಲಲ್ಲಿ ಒಂದು ಗಂಟೆ ಕಳೆಯುತ್ತೀರಿ ಅಂತಿಟ್ಟುಕೊಳ್ಳಿ. ಆಗ ನೀವು ಅಲ್ಲಿ ನಿಮಿಷಕ್ಕೆ ಎಂಟು ರೂಪಾಯಿಯಂತೆ 400 ರೂಪಾಯಿ ಕೊಡಬೇಕು.

image


ವಿದೇಶಗಳಲ್ಲಿ ಈ ಥರದ ಪೇ ಪರ್ ಮಿನಿಟ್ ಕೆಫೆಗಳು ಬಹಳ ಫೇಮಸ್. ಅದನ್ನು ನೋಡಿದ ಇನಾಯತ್ ಅನ್ಸಾರಿಯವರು ತಮ್ಮ ಸ್ನೇಹಿತ ನಿಖಿಲ್ ಕಾಮತ್ ಅವರ ಜೊತೆ ಸೇರಿಕೊಂಡು ಈ ಮಿನ್ಯೂಟ್ ಬಿಸ್ಟ್ರೋ ಎಂಬ ಕೆಫೆಯನ್ನು ಆರಂಭಿಸಿದ್ದಾರೆ. ಈ ಹೋಟೆಲ್ ಬೆಂಗಳೂರಿಗೆ ತುಂಬಾ ಹೊಸ ಕಾನ್ಸೆಪ್ಟ್. ಆರಾಮಾಗಿ ಕೂತು ಮಾತಾಡಲು, ಹರಟೆ ಹೊಡೆಯಲು ಇರುವ ಒಂದು ನೆಮ್ಮದಿಯ ತಾಣ. ಅದ್ರಲ್ಲೂ ಕಾಲೇಜು ಯುವಕರಿಗೆ ಹೇಳಿ ಮಾಡಿಸಿ ತಾಣವಾಗಿದೆ ಅಂತನೇ ಹೇಳಬಹುದು. ಇನ್ನು ಮಧ್ಯಾಹ್ನ ಹೋದರೆ ಬಫೆ ಊಟ ಇರುತ್ತೆ. ತುಂಬಾ ಕಾಯಬೇಕಾಗಿಯೂ ಇಲ್ಲ. ಸಂಜೆ ಮಾಂಸಾಹಾರವೂ ಇರುವುದರಿಂದ ನಿಮಿಷಕ್ಕೆ 8 ರೂಪಾಯಿ ನಿಗದಿಗೊಳಿಸಲಾಗಿದೆ.

image


ದಿನ ನಾರ್ಮಲ್ ಹೋಟೆಲ್ ಹೋಗಿ ಬೇಜಾರು ಆಗಿದ್ರೆ ಒಮ್ಮೆ ಈ ಹೋಟೆಲ್ ಗೆ ವಿಸಿಟ್ ಕೊಟ್ಟು ಎಂಜಾಯ್ ಮಾಡಿ.. ಅದ್ಯಾಕೆ ಹೋಗಬೇಕು? ಅಂತೀರಾ.. ಆರಾಮಾಗಿ ಸ್ನೇಹಿತರು ಎಲ್ಲಾ ಸೇರಿ ಒಂದು ಕಡೆ ಕೂತು ತಿಂಡಿ ತಿನ್ನುತ ಹರಟೆ ಹೊಡೆಯಬಹುದು.. ಇಲ್ಲಾ ಅಂದ್ರೆ ನಿಮಗೆ ಏನಾದರೂ ಕೆಲಸವಿದ್ರೆ ಯಾರ ತೊಂದರೆಯೂ ಇಲ್ಲದೆ ನಿಮ್ಮ ಕೆಲಸವನ್ನ ಮಾಡಿಕೊಳ್ಳಬಹುದು.. ಪುಸ್ತಕ ಓದಬೇಕು ಅಂದ್ರೆ ಅಲ್ಲೇ ನಿಮಗೆ ಬೇಕಾದಷ್ಟು ಸಮಯ ಕುಳಿತು ಪುಸ್ತಕ ಓದಬಹುದು.. ಬೇಕಾದ್ರೆ ಸ್ನೇಹಿತರ ಜೊತೆ ಸೇರಿ ಸಿನಿಮಾ ಕೂಡ ನೋಡಬಹುದು.

image


ಒಟ್ನಲ್ಲಿ ಬೆಂಗಳೂರಿನಲ್ಲಿ ಪ್ರಥಮ ಬಾರಿಗೆ ಪ್ರಾರಂಭವಾಗಿರುವ ಈ ಹೋಟೆಲ್ ಯುವಕರಿಗೆ, ಪ್ರೇಮಿಗಳಿಗೆ ಹಾಗೂ ಐಟಿ ಉದ್ಯಮಿಗಳಿಗೆ ಫೇವರೆಟ್ ಫ್ಲೇಸ್ ಆಗಿದೆ.. ಇನ್ನು ವಿಕೆಂಡ್ ಬಂತು ಅಂದ್ರೆ ಇಲ್ಲಿ ಜಾಗವೇ ಇರುವುದಿಲ್ಲ ಅಷ್ಟು ಜನ ತುಂಬಿರ್ತಾರೆ.. ಅಷ್ಟೇ ಅಲ್ಲದೇ ಮನೆ ಊಟವನ್ನು ತಂದು ತಿನ್ನಬಹುದು ಅನ್ನೋ ಕಾರಣಕ್ಕೆ ಎಲ್ಲರ ಮೆಚ್ಚಿನ ಕೆಫೆಯಾಗಿದೆ ಮಿನ್ಯೂಟ್ ಬಿಸ್ಟ್ರೋ…