ಆವೃತ್ತಿಗಳು
Kannada

ವಿಮಾನ ನಿಲ್ದಾಣದ ಲಾಂಚ್​​​ನಲ್ಲಿ ಹುಟ್ಟಿಕೊಂಡ ಪಝಲ್ ಸ್ನ್ಯಾಕ್ಸ್..!

ಟೀಮ್​​ ವೈ.ಎಸ್​​.

YourStory Kannada
23rd Sep 2015
 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on

ಬಹುತೇಕ ಸಂದರ್ಭಗಳಲ್ಲಿ ಹೊಸ ಆರಂಭದ ಆಲೋಚನೆ ಪ್ರತಿಕೂಲ ಸಂದರ್ಭಗಳಲ್ಲೇ ಬರುತ್ತದೆ. ಇದೇ ರೀತಿ ಹುಟ್ಟಿಕೊಂಡ ನೂತನ ಸಂಸ್ಥೆ ಎಕ್ಸ್ಪಿಡೈಟ್ ಫುಡ್ಸ್.. ಯುರೋಪಿಯನ್ ಕಂಪೆನಿಯೊಂದರಲ್ಲಿ ಇಂಡಿಯನ್ ಸೇಲ್ಸ್ ಆಪರೇಷನ್​​ಗಳನ್ನು ನೋಡಿಕೊಳ್ಳುತ್ತಿದ್ದ ಅಭಿನವ್ ಗುಪ್ತಾ ಇದರ ಸಂಸ್ಥಾಪಕರು..

ಕೆಲಸದ ನಿಮಿತ್ತ ಮುಂಬೈನಿಂದ ಬರೋಡಾಗೆ ಹೊರಟಿದ್ದ ಅಭಿನವ್ ಅಂದು ಕೊಂಚ ಬೇಗನೇ ಏರ್​ಪೋರ್ಟ್ ತಲುಪಿದ್ದರು.. ಆಗ ಅವರ ಗಮನ ಹರಿದಿದ್ದು ವೃತ್ತಪತ್ರಿಕೆಯೊಂದರಲ್ಲಿ ಬಂದಿದ್ದ ಭಾರತೀಯ ಗ್ರಾಮಗಳ ಆರ್ಥಿಕತೆಗೆ ಸಂಬಂಧಪಟ್ಟ ಕಥೆಯೊಂದರ ಕುರಿತು..

ಈ ಘಟನೆ ಅವರ ಪಾಲಿನ ಸ್ಮರಣೀಯ ಗಳಿಗೆ.. ಅಭಿನವ್ ಗಮನಿಸಿದ್ದು ಭಾರತದ ಅತಿ ದೊಡ್ಡ ಶಕ್ತಿ ಈ ದೇಶದ ಜನಸಂಖ್ಯೆ ಅನ್ನುವ ಸಂಗತಿ.. ಕೆಲವು ವಾರಗಳ ಯೋಚನೆ, ಚಿಂತನೆ ಹಾಗೂ ರಿಸರ್ಚ್​ಗಳ ನಂತರ ಅಭಿನವ್ ಸ್ನ್ಯಾಕ್ಸ್ ಅಥವಾ ಕುರುಕಲು ತಿಂಡಿಗಳ ಉತ್ಪಾದನೆಯ ಯೋಜನೆ ಸಿದ್ಧಪಡಿಸಿದರು.. ಈ ಮೂಲಕ ಎಕ್ಸಪಿಡಿಯಟ್ ಫುಡ್ ಹಾಗೂ ಇದರ ಕುರುಕಲು ತಿಂಡಿಗಳ ಬ್ರಾಂಡ್ ಪಝಲ್ ಸ್ನ್ಯಾಕ್ಸ್ ಮಾರುಕಟ್ಟೆಗೆ ಪ್ರವೆಶ ಪಡೆಯಿತು.. ಈ ಬ್ರಾಂಡ್ ಗುಜರಾತ್ ಸಾಂಪ್ರದಾಯಿಕ ತಿನಿಸುಗಳು ಹಾಗೂ ಭಾರತೀಯ ಶೈಲಿಯ ಕೆಲವು ತಿನಿಸುಗಳೂ ಸೇರಿದಂತೆ ಸುಮಾರು 24 ವಿಧದ ಸ್ನ್ಯಾಕ್ಸ್​​ಗಳನ್ನು ಆರಂಭಿಸಿತು.

ಉತ್ಪಾದನಾ ಘಟಕದ ಆರಂಭಿಕ ತೊಡಕುಗಳು:

image


ನನಗೆ ಯಾರ ಸಹಕಾರ ಬೆಂಬಲಗಳೂ ಇರಲಿಲ್ಲ, ಆದರೆ ನನ್ನ ಯೋಚನೆಯ ಬಗ್ಗೆ ನನಗೆ ವಿಶ್ವಾಸವಿತ್ತು.. ಯಾರೊಂದಿಗೆ ಉತ್ಪಾದನಾ ಕ್ಷೇತ್ರದ ಕುರಿತು ಮಾತನಾಡಿದರೂ ಅವರು ಇಲ್ಲಿನ ತೊಡಕುಗಳ ಕುರಿತಾಗಿಯೇ ಮಾತನಾಡುತ್ತಿದ್ದರು.. ಆದರೂ ನನ್ನ ಪ್ರಯತ್ನದಿಂದ ಹಿಂದೆ ಸರಿಯಲಿಲ್ಲ ಅಂದಿದ್ದಾರೆ ಅಭಿನವ್..

ಹೆಜ್ಜೆ ಹಿಂದಿಡದೆ ತಮ್ಮ ಅಷ್ಟೂ ಉಳಿತಾಯದ ಹಣವನ್ನು ಮೂಲ ಬಂಡವಾಳವನ್ನಾಗಿ ಹೂಡಿಕೆ ಮಾಡಿ ಅಭಿನವ್​ಗೆ ಆರಂಭದಲ್ಲಿ ಹಣದ ಸಮಸ್ಯೆ ತಲೆದೋರಿತ್ತು.. ಅವರ ಸ್ನೇಹಿತರಲ್ಲಿ ಕೆಲವೇ ಮಂದಿ ಮಾತ್ರ ಅವರಿಗೆ ಆರ್ಥಿಕ ಸಹಾಯ ನೀಡಿದ್ದರು.. ಈ ವೇಳೆ ಎಲ್ಲಾ ದಾರಿಗಳು ಮುಚ್ಚಿವೆ ಅನ್ನುವ ಸ್ಥಿತಿ ಎದುರಾದಾಗ ಅಭಿನವ್​ಗೆ ಅವರ ಸಂಬಂಧಿಯಿಂದ ಆರ್ಥಿಕ ಸಹಕಾರ ದೊರೆಯಿತು.. ಕೇವಲ ಒಂದೇ ಒಂದು ಫೋನ್ ಕಾಲ್​​ನಲ್ಲಿ ಮನವೊಲಿಸಿದ ಅಭಿನವ್ ಹಣದ ಹೂಡಿಕೆ ಮಾಡಿಕೊಂಡಿದ್ದಷ್ಟೇ ಅಲ್ಲದೇ ದೀರ್ಘಕಾಲಿಕ ಬಿಸಿನೆಸ್​​ಗೆ ಬೆಂಗಾವಲಾಗಿ ನಿಲ್ಲುವ ಅಶ್ವಾಸನೆಯನ್ನೂ ಆ ಸಂಬಂಧಿಯಿಂದ ಪಡೆದುಕೊಂಡರು..

ಮೂಲಧನದ ಸಮಸ್ಯೆ ಪರಿಹಾರವಾದರೂ ಅವರ ಮುಂದೆ ಇನ್ನಷ್ಟು ಸವಾಲುಗಳಿದ್ದವು.. ಸರಿಯಾದ ಉತ್ಪನ್ನಗಳನ್ನು ಉತ್ಪಾದಿಸುವುದು ಎಕ್ಸ್ಪಿಡೈಟ್ ಫುಡ್​​ನ ಮೊದಲ ವರ್ಷದ ಪ್ರಧಾನ್ಯತೆಯಾಗಿತ್ತು.. ಅಭಿನವ್ ಅವರು ತಯಾರಿಸುತ್ತಿದ್ದ ಸ್ನ್ಯಾಕ್ಸ್​​ನ ಗುಣಮಟ್ಟ ಕಾಪಾಡಿಕೊಳ್ಳುವತ್ತ ಹೆಚ್ಚಿನ ಗಮನ ಹರಿಸಿದ್ದರು.. ಆದರೆ ಇದೇ ಗುಣಮಟ್ಟವನ್ನು ಉಳಿಸಿಕೊಂಡು ಹೋಗುವ ಕುರಿತಾಗಿ ಅವರಿಗೆ ಸಂದೇಹವಿತ್ತು..

ಫಝಲ್​​ ಸ್ನ್ಯಾಕ್​​ನ ಸಂಸ್ಥಾಪಕ ಅಭಿನವ್​​ ಗುಪ್ತಾ

ಫಝಲ್​​ ಸ್ನ್ಯಾಕ್​​ನ ಸಂಸ್ಥಾಪಕ ಅಭಿನವ್​​ ಗುಪ್ತಾ


ನಸುಕಿನ 6 ಗಂಟೆಗೆ ಮನೆ ಬಿಡುತ್ತಿದ್ದ ಅಭಿನವ್ ಹತ್ತಿರದ ಪಟ್ಟಣಗಳಿಗೆ ಹೋಗಿ ಮಾರುಕಟ್ಟೆಯನ್ನು ಅಧ್ಯಯನ ಮಾಡತೊಡಗಿದರು.. ಡಿಸ್ಟ್ರಿಬ್ಯೂಟರ್​​ಗಳನ್ನು ನೇಮಿಸುವುದು ಹಾಗೂ ಆರ್ಡರ್​​ಗಳನ್ನು ತೆಗೆದುಕೊಳ್ಳುವುದು ಇವೇ ಮುಂತಾದ ಮಾರ್ಕೆಟಿಂಗ್​​ನ ಪ್ರಾಥಮಿಕ ಕೆಲಸಗಳನ್ನು ಮುಗಿಸುವಷ್ಟರಲ್ಲಿ ರಾತ್ರಿ 11 ಮುಗಿಯುತ್ತಿತ್ತು..

ಮಾರುಕಟ್ಟೆಯಲ್ಲಿ ಟ್ರೆಂಡ್ ಹುಟ್ಟುಹಾಕುವುದು ಅಭಿನವ್ ಪಾಲಿನ ಮುಂದಿನ ಸವಾಲಾಗಿತ್ತು.. ಅವರು ನೇರವಾಗಿ ಗ್ರಾಹಕರನ್ನು ಭೇಟಿಯಾಗಿ ಸ್ಯಾಂಪಲ್​ಗಳ ಬಗ್ಗೆ ವಿಚಾರಿಸತೊಡಗಿದರು.. ಮೊದಮೊದಲು ಜನರಿಂದ ಬಂದಂತಹ ಪ್ರತಿಕ್ರಿಯೆ ಅಷ್ಟೇನೂ ಸಮಾಧಾನ ತರುವಂತದ್ದಾಗಿರಲಿಲ್ಲ..

ಆ ಸಂದರ್ಭ ಅಭಿನವ್ ಪಾಲಿನ ನಿಜವಾದ ಅಗ್ನಿಪರೀಕ್ಷೆಯಾಗಿತ್ತು.. ಅಭಿನವ್​ಗೆ ಬೇರೆ ಯಾರ ಸಹಾಯವೂ ಇರಲಿಲ್ಲ.. ಅವರು ಏಕಾಂಗಿಯಾಗಿ ಫೀಲ್ಡ್ ಸರ್ವೇ ನಡೆಸಬೇಕಿತ್ತು.. ಗ್ರಾಹಕರ ಬಳಿ ವಿಚಾರಣೆ ನಡೆಸಬೇಕಿತ್ತು.. ಈ ಸಂದರ್ಭದಲ್ಲಿ ಅವರ ಗೈರು ಹಾಜರಾತಿಯಿಂದಾಗಿ ಉತ್ಪಾದನೆಯಾಗುತ್ತಿದ್ದ ಸ್ಯಾಂಪಲ್ ಸ್ನ್ಯಾಕ್​​ಗಳು ಅವರಂದುಕೊಂಡಷ್ಟು ಗುಣಮಟ್ಟ ಹೊಂದಿರಲಿಲ್ಲ.. ಇವೆಲ್ಲದರ ಜೊತೆ ಮುಖ್ಯ ಪಟ್ಟಣಗಳಲ್ಲಿ ಡಿಸ್ಟ್ರಿಬ್ಯೂಟರ್ಸ್​ಗಳನ್ನೂ ನೇಮಿಸಬೇಕಿತ್ತು..

ಅಭಿನವ್​ಗೆ ಈ ಇಕ್ಕಟ್ಟಿನ ಸಂದರ್ಭ ಉದ್ಯಮದ ಬಹುದೊಡ್ಡ ಪಾಠವೊಮದನ್ನು ಕಲಿಸಿತ್ತು.. ಪ್ರಾರಂಭಿಕ ಹಂತದ ಉದ್ಯಮಕ್ಕೆ ಕಾಲಿಡುವ ಯಾರಾದರೂ ಉತ್ಪಾದನೆಯಿಂದ ಮಾರಾಟದವರೆಗೆ ಎಲ್ಲಾ ಜವಬ್ದಾರಿಗಳನ್ನೂ ಹೊತ್ತುಕೊಳ್ಳಲು ಸಿದ್ಧವಾಗಿರಬೇಕು.. ಯಾವುದೇ ಸಂಸ್ಥೆಯ ಆರಂಭದ ದಿನಗಳಲ್ಲಿ ಯಾರ ಮೇಲೂ ಭರವಸೆಯನ್ನಾಗಲಿ ನಂಬಿಕೆಯನ್ನಾಗಲಿ ಇಡಲು ಸಾಧ್ಯವಿಲ್ಲ ಅನ್ನುವ ವಿಚಾರ ಸ್ವತಃ ಅವರ ಗಮನಕ್ಕೆ ಬಂದಿತ್ತು..

ತಂಡ ಕಟ್ಟುವ ಕಾಯಕ:

ಅಭಿನವ್ರ ಪ್ರಕಾರ ಉಳಿದ ಸಂಸ್ಥೆಗಳಂತೆಯೇ ಉತ್ಪಾದನಾ ಘಟಕದಲ್ಲಿ ಪರಿಣಿತರ ತಂಡ ಕಟ್ಟುವುದು ಮಹತ್ತರವಾದ ಕೆಲಸ.. ಮೊದಮೊದಲು ಮಾಡಿದ ಸಣ್ಣ ತಪ್ಪುಗಳಿಂದ ಪಾಠ ಕಲಿತ ಅಭಿನವ್ ತಂಡ ಕಟ್ಟುವ ವಿಚಾರದಲ್ಲಿ ಬಹು ಜಾಗರೂಕಾರಾಗಿದ್ದರು.

ಸರಿಯಾದ ಮಾರ್ಕೆಟಿಂಗ್​​​ ಉದ್ಯೋಗಿಗಳನ್ನು ತೆಗೆದುಕೊಳ್ಳುವುದು ಇನ್ನೊಂದು ಸವಾಲಿನ ಸಂಗತಿಯಾಗಿತ್ತು.. ಬ್ರಾಂಡ್ ನೇಮ್ ಗಳಿಸದೇ ಇರುವ ಸಣ್ಣ ಉದ್ದಿಮೆಗಳ ಭಾಗವಾಗಲು ಬಹುತೇಕ ಉದ್ಯೋಗಿಗಳು ಇಷ್ಟಪಡುವುದಿಲ್ಲ.. ಜೊತೆಗೆ ಇಲ್ಲಿ ಹೆಚ್ಚುವರಿಯಾಗಿ ಹಣದ ಹೂಡಿಕೆ ಮಾಡುವುದೂ ಅತ್ಯಗತ್ಯವಾಗಿತ್ತು.. ಅಭಿನವ್ ಈ ಎರಡೂ ಸಮಸ್ಯೆಗಳನ್ನೂ ಸಮಾನಾಂತರವಾಗಿ ತೂಗಿಸಿಕೊಂಡರು..

ಟಯರ್ 2 ಹಾಗೂ ಟಯರ್3 ಅನ್ನುವ ಗುರುತು ಹಾಕಿಕೊಂಡ ಪಟ್ಟಣಗಳಿಗೆ ಉತ್ಪನ್ನಗಳ ಡಿಸ್ಟ್ರಿಬ್ಯೂಷನ್ ಆರಂಭವಾಯ್ತು.. ಕೇವಲ 5 ರೂಪಾಯಿಗೆ ಗುಣಮಟ್ಟದ ಹಾಗೂ ರುಚಿಕಟ್ಟಾದ ತಿನಿಸುಗಳನ್ನು ನೀಡಿದ್ದು ಮಾರುಕಟ್ಟೆಯಲ್ಲಿ ಅಭಿನವ್​ರ ಬ್ರಾಂಡ್​ಗೆ ಹೊಸ ಅವಕಾಶ ನೀಡಿತು..

ಮಾರುಕಟ್ಟೆಯಲ್ಲಿ ತಮ್ಮ ಉತ್ಪನ್ನವನ್ನು ಸಮರ್ಪಕವಾಗಿ ಕೂರಿಸುವತ್ತ ಗಮನ ಹರಿಸಿದ ಅಭಿನವ್ ಮುಂದಿನ 10-12 ತಿಂಗಳುಗಳ ಕಾಲ ಕ್ವಾಲಿಟಿ ಹಾಗೂ ದರಗಳ ವಿಚಾರದಲ್ಲಿ ಏಕರೂಪ ಕಾಪಾಡಿಕೊಳ್ಳುವತ್ತ ಚಿಂತನೆ ನಡೆಸಿದ್ದರು..

ಆದಾಯ ಮತ್ತು ಬೆಳವಣಿಗೆ:

ಏಪ್ರಿಲ್ 2012ರಲ್ಲಿ ಎಕ್ಸ್ಪಿಡೈಟ್ ಫುಡ್ಸ್ ಶೇ 100ರಷ್ಟು ಬೆಳವಣಿಗೆ ಕಂಡಿತ್ತು.. ಮೊದಲ ವರ್ಷದ ಸಂಘರ್ಷದ ನಂತರ ಎರಡನೆಯ ವರ್ಷದಲ್ಲೇ ಆದಾಯದ ಪ್ರಮಾಣದಲ್ಲಿ ವೃದ್ಧಿಯಾಗಿತ್ತು.. ಈ ಅಭಿವೃದ್ಧಿಯಿಂದ ಪ್ರೇರಿತರಾದ ಅಭಿನವ್ ತಂಡ ಮುಂದಿನ ಕೆಲವು ವರ್ಷಗಳಲ್ಲಿ ಈ ಉತ್ಪನ್ನವನ್ನು ಗಟ್ಟಿಯಾದ ಮಾರುಕಟ್ಟೆಯ ಬ್ರಾಂಡ್ ಆಗಿ ಪರಿವರ್ತಿಸುವ ವಿಶ್ವಾಸದಲ್ಲಿದ್ದಾರೆ..

ಕೇಂದ್ರ ಆಹಾರ ಸಚಿವಾಲಯದ ವರದಿಯ ಪ್ರಕಾರ ಸ್ನ್ಯಾಕ್ಸ್ ಉದ್ಯಮದ ವಹಿವಾಟು ಅಂದಾಜು 100 ಬಿಲಿಯನ್ ತಲುಪಿದೆ.. ಭಾರತದಲ್ಲಿ ಸುಮಾರು 300 ಸಂಸ್ಥೆಗಳ 1000 ಬೇರೆ ಬೇರೆಯ ಸ್ನ್ಯಾಕ್ಸ್​​ಗಳು ಮಾರುಕಟ್ಟೆಯಲ್ಲಿವೆ.. ಕಳೆದ 3 ವರ್ಷಗಳಲ್ಲಿ ಸ್ನ್ಯಾಕ್ಸ್ ಉದ್ಯಮ ಶೇ. 10 ಪ್ರತಿಶತ ಏರಿಕೆಯಾಗಿದೆ.. ಪ್ರಸಿದ್ಧ ಹಲದಿರಾಮ್ ಆನಂದ್ ಅಲ್ಲದೇ, ನಮ್ಕೀನ್​ವಾಲೇ, ಪಕುಮಾನಿಯಾ ಹಾಗೂ ಇಮದುಬೇನ್ ಖಾಕ್ರಾವಾಲೆ ಮಾರುಕಟ್ಟೆಯಲ್ಲಿ ಪೈಪೋಟಿಯಲ್ಲಿವೆ.. ಹಾಗಾಗಿ ಎಕ್ಸ್ಪಿಡೈಟ್ ಫುಡ್ಸ್ ತನ್ನ ಪಝಲ್ ಸ್ನ್ಯಾಕ್ಸ್ ಅನ್ನು ಅತ್ಯಂತ ದೊಡ್ಡ ಮಟ್ಟದಲ್ಲಿ ಲಾಂಚ್ ಮಾಡುವತ್ತ ಚಿಂತನೆ ನಡೆಸಿದೆ..

ಕೇವಲ ಕನಸಿದ್ದರೇ ಸಾಲದು, ಅದನ್ನು ನನಸು ಮಾಡುವ ನಿಟ್ಟಿನಲ್ಲಿ ಎದುರಾಗುವ ಯಾವುದೇ ಸವಾಲನ್ನಾದರೂ ಸ್ವೀಕರಿಸುವ ಧೈರ್ಯವಿರಬೇಕು.. ಆಗ ಮಾತ್ರ ಯಶ ಸಾಧ್ಯ ಅನ್ನುವ ಮಾತನ್ನು ಸಾಬೀತು ಮಾಡಿದ್ದಾರೆ ಎಕ್ಸ್ಪಿಡೈಟ್ ಫುಡ್ ಹಾಗೂ ಪಝಲ್ ಸ್ನ್ಯಾಕ್ಸ್​​ನ ಅಭಿನವ್ ಗುಪ್ತಾ..

 • Share Icon
 • Facebook Icon
 • Twitter Icon
 • LinkedIn Icon
 • Reddit Icon
 • WhatsApp Icon
Share on
Report an issue
Authors

Related Tags

Latest Stories