Brands
Discover
Events
Newsletter
More

Follow Us

twitterfacebookinstagramyoutube
Youtstory

Brands

Resources

Stories

General

In-Depth

Announcement

Reports

News

Funding

Startup Sectors

Women in tech

Sportstech

Agritech

E-Commerce

Education

Lifestyle

Entertainment

Art & Culture

Travel & Leisure

Curtain Raiser

Wine and Food

YSTV

ADVERTISEMENT
Advertise with us

ಯೂಟ್ಯೂಬ್​ನಲ್ಲಿ ಇವರು ಸೂಪರ್ ಸ್ಟಾರ್ಸ್- ಡಿಫರೆಂಟ್ ವೀಡಿಯೋಗಳಿಂದಲೇ ಕೋಟಿ ಕೋಟಿ ಇನ್​ಕಂ

ಟೀಮ್​ ವೈ.ಎಸ್​. ಕನ್ನಡ

ಯೂಟ್ಯೂಬ್​ನಲ್ಲಿ ಇವರು ಸೂಪರ್ ಸ್ಟಾರ್ಸ್- ಡಿಫರೆಂಟ್ ವೀಡಿಯೋಗಳಿಂದಲೇ ಕೋಟಿ ಕೋಟಿ ಇನ್​ಕಂ

Sunday December 18, 2016 , 3 min Read

ಇವತ್ತು ಜಗತ್ತಿನಲ್ಲಿ ಯಾರೂ ಕೂಡ ಕೆಲಸ ಇಲ್ಲ ಅನ್ನುವ ಹಾಗೇ ಇಲ್ಲ. ದುಡಿಮೆ ಮತ್ತು ಆದಾಯ ಇಲ್ಲ ಅಂತ ಹೇಳುವ ಹಾಗಿಲ್ಲ. ಯಾಕಂದ್ರೆ ಮನಸ್ಸಿದ್ರೆ ಮಾರ್ಗ. ಹಾಗೇಯೇ ದುಡಿಯುವ ಛಲ ಇದ್ರೆ ಕೆಲಸಕ್ಕೇನು ಕೊರತೆ ಇಲ್ಲ. ಇವತ್ತು ಎಲ್ಲರಿಗೂ ಯೂ ಟ್ಯೂಬ್ ಬಗ್ಗೆ ಗೊತ್ತು. ಸ್ಮಾರ್ಟ್​ಫೋನ್​ಗಳಿಂದಾಗಿ ಇದು ಮತ್ತಷ್ಟು ದೊಡ್ಡ ಸುದ್ದಿ ಮಾಡ್ತಿದೆ. ಯೂಟ್ಯೂಬ್ ಅನ್ನೇ ಬಳಸಿಕೊಂಡು ಸ್ಟಾರ್​ಗಳಾದವರು ಅದೆಷ್ಟೋ ಮಂದಿ ಇದ್ದಾರೆ. ಯೂ ಟ್ಯೂಬ್ ಭವಿಷ್ಯದ ಹೀರೋಗಳನ್ನು ಹುಟ್ಟು ಹಾಕುವ ಫ್ಲಾಟ್​ಫಾರ್ಮ್ ಅಂದ್ರೂ ಅದ್ರಲ್ಲಿ ಅಚ್ಚರಿ ಇಲ್ಲ.

ಯೂ ಟ್ಯೂಬ್ ಮೂಲಕ ವಿವಿಧ ರೀತಿಯಲ್ಲಿ ಆದಾಯಗಳಿಸಬಹುದು. ಯೂ ಟ್ಯೂಬ್​ಗೆ ತಾನೇ ರಚಿಸಿದ ವೀಡಿಯೋ ಅಪ್ಲೋಡ್ ಮಾಡಿ ಕೋಟಿ ಗಟ್ಟಲೆ ಆದಾಯ ಮಾಡಿದವರು ಇದ್ದಾರೆ. ಯೂ ಟ್ಯೂಬ್ ಎಲ್ಲದಕ್ಕೂ ವೇದಿಕೆ ಆಗಿದೆ. ಶೈಕ್ಷಣಿಕ ವೀಡಿಯೋದಿಂದ ಹಿಡಿದು ಗೇಮಿಂಗ್ ಚಾನಲ್ ತನಕ ಎಲ್ಲವೂ ಯೂ ಟ್ಯೂಬ್​ನಲ್ಲೇ ದೊಡ್ಡ ಸುದ್ದಿ ಮಾಡಿದೆ. ಯೂ ಟ್ಯೂಬ್​ಗೆ ಅಪ್ಲೋಡ್ ಮಾಡಿದ ವೀಡಿಯೋ, ಗಳಿಸುವ ಒಂದೊಂದು ಕ್ಲಿಕ್​ನಲ್ಲೂ ದುಡ್ಡು ಗಳಿಸುವ ಮಾರ್ಗವಿದೆ. ಯೂ ಟ್ಯೂಬ್ ಸ್ಟಾರ್​ಗಳು ಜಾಹೀರಾತು, ಸ್ಪಾನ್ಸರ್ಡ್ ವೀಡಿಯೋ ಮತ್ತು ಸೆಲ್ಫ್ ಪ್ರೊಮೋಷನ್ ಮೂಲಕ ಆದಾಯಗಳಿಸುತ್ತಿದ್ದಾರೆ. ಯೂ ಟ್ಯೂಬ್ ಮೂಲಕ ಆದಾಯಗಳಿಸಿದವರ ಬಗ್ಗೆ ಫೋರ್ಬ್ಸ್ ಪಟ್ಟಿ ತಯಾರಿಸಿದೆ. ಯೂ ಟ್ಯೂಬ್​ನಿಂದಾಗಿ $ 70.5 ಮಿಲಿಯನ್ ಡಾಲರ್ ಆದಾಯಗಳಿಸಿದ್ದಾರೆ.

image


ಪ್ಯುಡಿಪಿ- $15 ಮಿಲಿಯನ್

ಯೂ ಟ್ಯೂಬ್ ಮೂಲಕ ಅತೀ ಹೆಚ್ಚು ಆದಾಯಗಳಿಸಿದವರ ಪಟ್ಟಿಯಲ್ಲಿ ಪ್ಯುಡಿಪಿ ಅಗ್ರಸ್ಥಾನ ಪಡೆದುಕೊಂಡಿದ್ದಾರೆ. ಪ್ಯುಡಿಪಿ ಸುಮಾರು $15ಮಿಲಿಯನ್ ಡಾಲರ್ ಸಂಪಾದಿಸಿದ್ದಾರೆ. ಈತ 2010ರಲ್ಲಿ ಯೂ ಟ್ಯೂಬ್ ಚಾನೆಲ್ ಮಾಡಿ, ಅದಕ್ಕೆ ವೀಡಿಯೋ ಅಪ್ಲೋಡ್ ಮಾಡಿ ಅದರಿಂದ ಆದಾಯಗಳಿಸುತ್ತಿದ್ದಾನೆ. ಪ್ಯುಡಿಪಿ ಕಾಲೇಜ್​ನಿಂದ ಡ್ರಾಪ್ ಔಟ್ ಆದಮೇಲೆ, ಪೋಷಕರಿಂದಲೂ ಬೆಂಬಲ ಸಿಗಲಿಲ್ಲ. ಆದ್ರೆ ಈಗ ಯೂ ಟ್ಯೂಬ್​ನಿಂದ ಗಳಿಸುವ ಆದಾಯದಿಂದ ದೊಡ್ಡ ಹೆಸರು ಮಾಡಿದ್ದಾರೆ. ಯೂ ಟ್ಯೂಬ್​ನಿಂದ $10 ಮಿಲಿಯನ್ ಡಾಲರ್ ಆದಾಯ ಸಂಗ್ರಹಿಸಿದವರ ಪೈಕಿ ಈತ ಮೊದಲಿಗ.

ರೊಮನ್ ಅಟ್ವುಡ್- $8 ಮಿಲಿಯನ್

ರೊಮನ್ ಅಟ್ವುಡ್ ಯೂ ಟ್ಯೂಬ್ ಚಾನೆಲ್​ಗೆ ಸುಮಾರು 10 ಮಿಲಿಯನ್​ಗಿಂತಲೂ ಅಧಿಕ ಸಬ್ ಸ್ಕ್ರೈಬರ್​ಗಳಿದ್ದಾರೆ. ಈತ ಯೂ ಟ್ಯೂಬ್​ನ ಕಾಮಿಡಿ ಸ್ಟಾರ್ ಅಂತಲೇ ಫೇಮಸ್ ಆಗಿದ್ದಾರೆ. ತಮಾಷೆ ಆಗಿರುವ ವೀಡಿಯೋಗಳನ್ನು ತಯಾರಿಸಿ, ಅದನ್ನು ಯೂ ಟ್ಯೂಬ್​ಗೆ ಅಪ್ಲೋಡ್ ಮಾಡಿ ಈ ಮೂಲಕ ಅಟ್ವುಡ್ ಆದಾಯಗಳಿಸುತ್ತಿದ್ದಾರೆ. ಅಟ್ವುಡ್ ಮಾರ್ಕೆಟಿಂಗ್​ನಲ್ಲೂ ಕಲೆಗಾರ. ಈತನ ಚಾನೆಲ್​ಗೆ ಸ್ಕಾಟ್ ಟಾಯ್ಲೆಟ್ ಪೇಪರ್​ನ ಸ್ಪಾನ್ಸರ್​ಶಿಪ್ ಕೂಡ ಇದೆ.

ಲಿಲಿ ಸಿಂಗ್- $ 7.5 ಮಿಲಿಯನ್

ಲಿಲಿಸಿಂಗ್ ಭಾರತೀಯ ಮೂಲದ ಕೆನಡಿಯನ್ ಸಂಜಾತೆ. ಈಕೆಗೆ ಸೂಪರ್ ವುಮನ್ ಅನ್ನುವ ಖ್ಯಾತಿ ಇದೆ. ಲಿಲಿ 2010ರಲ್ಲಿ ಯೂ ಟ್ಯೂಬ್ ಚಾನೆಲ್ ಆರಂಭಿಸಿದ್ದಳು. ಇಲ್ಲಿ ತನಕ 1.3 ಬಿಲಿಯನ್​ಗಿಂತಲೂ ಅಧಿಕ ಜನ ಈಕೆಯ ಚಾನೆಲ್​ಗೆ ಭೇಟಿ ಕೊಟ್ಟಿದ್ದಾರೆ. ತಮಾಷೆಗಳನ್ನು ಹೊಂದಿರುವ ಮತ್ತು ಸಮಾಜಕ್ಕೆ ಸಂದೇಶಗಳನ್ನು ನೀಡುವ ವೀಡಿಯೋ ಮೂಲಕ ಈಕೆ ಯೂ ಟ್ಯೂಬ್ ಸ್ಟಾರ್ ಆಗಿ ಬೆಳೆದಿದ್ದಾಳೆ.

ಸ್ಮೋಷ್- $ 7 ಮಿಲಿಯನ್

ಅಂಥೋನಿ ಪ್ಯಡಿಲ್ಲಾ ಮತ್ತು ಇಯನ್ ಹೆಕೊಕ್ಸ್ 2005ರಲ್ಲಿ ಸ್ಮೋಷ್ ಚಾನೆಲ್ ಅನ್ನು ಯೂಟ್ಯೂಬ್​ನಲ್ಲಿ ಆರಂಭಿಸಿದ್ರು. ಇದು ಕೂಡ ಕಾಮಿಡಿ ವೀಡಿಯೋಗಳಿಂದಲೇ ಫೇಮಸ್ ಆಗಿದೆ. ಈಗ ಅಂಥೋನಿ ಮತ್ತು ಇಯನ್ ಒಟ್ಟು 7 ಯೂ ಟ್ಯೂಬ್ ಚಾನಲ್​ಗಳನ್ನು ನಡೆಸುತ್ತಿದ್ದಾರೆ. ಕಳೆದ ವರ್ಷ ಇವರು ಸ್ಮೋಷ್ ಅನ್ನುವ ಚಿತ್ರದಲ್ಲಿ ನಟಿಸಿ ಫೇಮಸ್ ಆಗಿದ್ದರು.

ಟೈಲರ್ ಓಕ್ಲೆ- $ 6 ಮಿಲಿಯನ್

2007ರಲ್ಲೇ ಟೈಲರ್ ಓಕ್ಲೆ ಯೂ ಟ್ಯೂಬ್​ನಲ್ಲಿ ಮೊದಲ ವೀಡಿಯೋವನ್ನು ಅಪ್ ಲೋಡ್ ಮಾಡಿದ್ದರು. ಈತ ಲೆಸ್ಬಿಯನ್, ಗೇ, ಬೈ ಸೆಕ್ಸುವಲ್ ಮತ್ತು ಟ್ಯಾನ್ಸ್​ಜೆಂಡರ್ ಹೋರಾಟಗಾರ. 2015ರಲ್ಲಿ ಓಕ್ಲೆಯ ಬಿಂಜ್ ಪುಸ್ತಕ ಬೆಸ್ಟ್ ಸೆಲ್ಲರ್ ಅನ್ನುವ ಖ್ಯಾತಿ ಪಡೆದಿತ್ತು.

ಇದನ್ನು ಓದಿ: ಕೆಲಸದ ಬಗ್ಗೆ ಚಿಂತೆ ಬಿಡಿ- ಜಾಬ್​ ಫಾರ್​ ಹರ್​ ಮೂಲಕ ಉದ್ಯೋಗಕ್ಕೆ ಟ್ರೈ ಮಾಡಿ..!

ರೊಸಾನೋ ಪನ್ಸಿನೋ- $ 6 ಮಿಲಿಯನ್

ಯೂ ಟ್ಯೂಬ್ ಫೇಮಸ್ ಅಡುಗೆ ಕಾರ್ಯಕ್ರಮ Nerdy Nummies ಪ್ರಸಾರವಾಗುವುದೇ ಈ ಚಾನೆಲ್ ಮೂಲಕ. ಈ ಚಾನೆಲ್​ಗೆ ಸುಮಾರು 7.3 ಮಿಲಿಯನ್ ಸಬ್​ಸ್ಕ್ರಬೈರ್​ಗಳಿದ್ದಾರೆ. ಇದು $ 6 ಮಿಲಿಯನ್ ಆದಾಯ ಸಂಪಾದಿಸಿದೆ.

ಮಾರ್ಕಿಪ್ಲೀರ್- $ 5.5 ಮಿಲಿಯನ್

ಲೆಟ್ಸ್ ಪ್ಲೇ ವೀಡಿಯೋ ಗೇಮ್ ಮೂಲಕ ಈ ಚಾನಲ್ ಫೇಮಸ್ ಆಗಿದೆ. ಈ ಚಾನೆಲ್ ಸುಮಾರು $ 5.5 ಮಿಲಿಯನ್ ಆದಾಯ ಸಂಪಾದಿಸಿದೆ. ಅಂದಹಾಗೇ ಈ ಚಾನೆಲ್ ಮಾಡಿದವರ ವಯಸ್ಸು ಜಸ್ಟ್ 26 ಅಂದರೆ ನಂಬಲೇಬೇಕು.

ಜರ್ಮನ್ ಗರ್ಮೆಂಡಿಯಾ- $ 5.5 ಮಿಲಿಯನ್

ಸ್ಪೇನ್​ನಲ್ಲಿ ಈ ಚಾನೆಲ್ ಅತ್ಯಧಿಕ ಸಬ್​ಸ್ಕ್ರೈಬರ್​ಗಳನ್ನು ಹೊಂದಿದೆ. ಕಾಮಿಡಿಯನ್ ಮತ್ತು ಮ್ಯೂಷಿಯನ್ ಆಗಿರುವ ಈತನ ಎರಡು ಯೂ ಟ್ಯೂಬ್ ಚಾನಲ್​ಗಳು ವಿಶ್ವದ ಟಾಪ್ 20 ಚಾನಲ್​ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.

ಒಟ್ಟಿನಲ್ಲಿ ಸ್ಮಾರ್ಟ್ ಆಗಿ ಥಿಂಕ್ ಮಾಡಿದ್ರೆ ಹಣ ಮಾಡುವುದಕ್ಕೆ ಸಾಕಷ್ಟು ಮಾರ್ಗಗಳಿವೆ. ಆದ್ರೆ ಯೋಚಿಸುವ ಶಕ್ತಿ ಮತ್ತು ಅದನ್ನು ಮಾಡವ ಛಲ ಮಾತ್ರ ಇರಬೇಕು. ಇದರ ಜೊತೆಗೆ ಬುದ್ಧಿಗೂ ಕೆಲಸ ಕೊಟ್ರೆ, ಹಣ ಸಂಪಾದಿಸಿ ಆರಾಮವಾಗಿ ಕಾಲ ಕಳೆಯಬಹುದು.

ಇದನ್ನು ಓದಿ:

1. ಕ್ಯಾಶ್​ಲೆಸ್​ ವಹಿವಾಟಿನಲ್ಲೂ ಮಿಂಚಿದ ಬಿಎಂಟಿಸಿ - ಪ್ರಯಾಣಿಕರಿಗೆ ತಟ್ಟಿಲ್ಲ ಪ್ರಯಾಣದ ಬಿಸಿ

2. ಇಂಧೋರ್​ನಲ್ಲಿ ಟೆಲಿ ರಿಕ್ಷಾ ಕಿಂಗ್​- ಲೂಧಿಯಾನದ ಕರಣ್​ವೀರ್​ ಸಿಂಗ್​

3. ಜಾಹೀರಾತು ಲೋಕದ ದಿಗ್ಗಜೆ- ಮಾಡೆಲಿಂಗ್ ಅಂದ್ರೆ ನೀವಂದುಕೊಂಡೆ ಏನೂ ಇಲ್ಲ: ಅನಿಲಾ ಆನಂದ್