ಬೆಂಗಳೂರಿನ ಈ ಹುಡುಗಿಯ ಸಿಹಿತಿಂಡಿಗಳು ನಿಮ್ಮ ಡಯೆಟ್‌ ಮರೆಸುತ್ತದೆ

ಟೀಮ್​ ವೈ.ಎಸ್​. ಕನ್ನಡ

23rd Dec 2015
 • +0
Share on
close
 • +0
Share on
close
Share on
close

ಸಿಹಿ ತಿಂಡಿಗಳೇ ಹಾಗೆ ಅದು ಎಲ್ಲರಿಗೂ ಪ್ರಿಯವಾಗುತ್ತದೆ. ಹೊಸ ಹೊಸ ತಿಂಡಿ-ತಿನಿಸುಗಳನ್ನು ಸದಾ ಜನ ಬಯಸುತ್ತಾರೆ. ಮಾರುಕಟ್ಟೆಗೆ ಹೊಸ ತಿಂಡಿಗಳು ಬಂದಾಗ ತುಂಬಾ ಇಷ್ಟಪಡುತ್ತಾರೆ. ಹೀಗೆ ಚೋಕೊ ಲಾವಾ ಪಿಜ್ಜಾನ ಒಂದು ತಿನಿಸು ಪಾಪ್ಸ್ ಕಿಚನ್.

ಬೆಂಗಳೂರಿನ ಕೋರಮಂಗಳದಲ್ಲಿ ಪಾಪ್ಸ್ ಕಿಚನ್ ಆರಂಭಿಸಿ, ಈ ಮೂಲಕ ದೇಶದ ಗಮನ ಸೆಳೆದವರು ಶಿವಾಲಿ. ಗ್ರಾಹಕರಿಗೆ ಅತ್ಯುತ್ತಮ ಆಫರ್ ನೀಡುವ ಮೂಲಕ ಪಾಪ್ಸ್ ಕಿಚನ್ ಅನ್ನು ಅತ್ಯಂತ ಜನಪ್ರಿಯಗೊಳಿಸಿದ ಖ್ಯಾತಿ ಶಿವಾಲಿ ಅವರದ್ದು.

image


ಬೆಂಗಳೂರಿನಲ್ಲಿ 2012ರ ಮೇನಲ್ಲಿ ಪಾಪ್ಸ್ ಕಿಚನ್ ಆರಂಭಿಸಲಾಯಿತು. ಶಿವಾಲಿಗೆ ಅವರ ತಂದೆಯೇ ಸ್ಪೂರ್ತಿ. ಅವಳ ತಂದೆ 30 ವರ್ಷಗಳ ಹಿಂದೆ ಬೆಂಗಳೂರಿನ ಮಾರ್ಕ್ಸ್ ರೋಡ್‌ನಲ್ಲಿ ಚಿಲ್ಲರೆ ವ್ಯಾಪಾರದ ಅಂಗಡಿಯನ್ನು ತೆರೆದರು. 2012ರಲ್ಲಿ ಅವರು ಸಾವನ್ನಪ್ಪಿದ ನಂತರ ಶಿವಾಲಿ ಸ್ವಲ್ಪ ಸಮಯ ಕೆಲಸದಿಂದ ವಿರಾಮ ತೆಗೆದುಕೊಂಡರು. ಬಳಿಕ ಸ್ವಲ್ಪ ಕಾಲ ಆತ್ಮಾವಲೋಕನದಲ್ಲಿ ತೊಡಗಿದರು. ಈ ಸಮಯದಲ್ಲಿ ತಮ್ಮ ದೊಡ್ಡ ಅಭಿಮಾನಿಯಾಗಿದ್ದ ತಮ್ಮ ತಂದೆಯ ಹೆಸರಿನಲ್ಲೇ ಹೊಸ ಉದ್ಯಮವನ್ನು ಆರಂಭಿಸಿದರು. ಹೀಗೆ, ಆರಂಭವಾದ ಉದ್ಯಮವೇ ಪಾಪ್ಸ್ ಕಿಚನ್.

ಹಾಗೇ ನೋಡಿದರೆ ಬೇಕಿಂಗ್ ಉದ್ಯಮಕ್ಕೆ ಶಿವಾಲಿ ಏಕಾಏಕಿ ಕಾಲಿಡಲಿಲ್ಲ. 2010ರಲ್ಲಿ ಬೆಂಗಳೂರಿನ ಕ್ರೆಸ್ಟ್ ಕಾಲೇಜ್‌ನಲ್ಲಿ ಪದವಿ ಪಡೆದ ಶಿವಾಲಿ, ಆಕ್ಸೆಂಚರ್‌ನಲ್ಲಿ ಎರಡು ವರ್ಷ ಮಾರ್ಕೆಟಿಂಗ್ ಅಂಡ್ ಕಮ್ಯುನಿಕೇಷನ್ ವಿಚಾರದಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಬೇಕಿಂಗ್ ಉದ್ಯಮಕ್ಕೆ ಕಾಲಿಟ್ಟ ಬಗ್ಗೆ ಸ್ವತಃ ಶಿವಾಲಿಗೆ ಹೆಮ್ಮೆ ಇದೆ.

ನಾನು ಯಾವತ್ತೂ ಬೇಕಿಂಗ್ ಉದ್ಯಮಕ್ಕೆ ಕಾಲಿಡುತ್ತೇನೆ ಅಂತ ಅಂದುಕೊಂಡಿರಲಿಲ್ಲ. ಇದನ್ನು ನಾನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ, ಇದೇ ನನ್ನ ಉದ್ಯಮವಾಗುತ್ತೆ ಅಂತ ಯಾವತ್ತೂ ಅಂದುಕೊಂಡಿರಲಿಲ್ಲ. ಕಳೆದ ಮೂರು ವರ್ಷದಿಂದ ಆರಂಭಿಸಿದ್ದ ಈ ಬೇಕಿಂಗ್ ಉದ್ಯಮಕ್ಕೆ, ಈಗ ನನ್ನ ವೃತ್ತಿಪರ ಉದ್ಯಮವಾಗಿ ಬಿಟ್ಟಿದೆ. ಈ ಉದ್ಯಮದಿಂದಾಗಿ ಆಹಾರದ ಬಗ್ಗೆ ಒಂದು ಒಳ್ಳೆಯ ದೃಷ್ಟಿಕೋನ ಉಂಟಾಗಿದೆ ಅಂತ ಹಳೆಯ ದಿನಗಳನ್ನು ಶಿವಾಲಿ ನೆನಪಿಸಿಕೊಳ್ಳುತ್ತಾರೆ.

ಬೇಕಿಂಗ್ ಉದ್ಯಮ ಆರಂಭಕ್ಕೂ ಮುನ್ನ, ಶಿವಾಲಿಯವರು ಆರಂಭದಲ್ಲಿ ತಮ್ಮ ಕುಟುಂಬ ಹಾಗೂ ಸ್ನೇಹಿತರಿಗಾಗಿಯೇ ಅಡುಗೆ ಮಾಡುತ್ತಿದ್ದರು. ಇದು ರುಚಿಕರವಾಗಿದ್ದರಿಂದ, ಉತ್ತಮ ಅಭಿಪ್ರಾಯ ವ್ಯಕ್ತವಾಗಿತ್ತು. ಇದನ್ನು ಕೇಳಿದೊಡನೆಯೇ ಶಿವಾಲಿಗೆ ಅಚ್ಚರಿ ಕೂಡ ಆಯಿತು. ಮುಂದೆ ಬೇಕಿಂಗ್ ಉದ್ಯಮ ಆರಂಭಿಸಲು ಇದು ನೆರವಾಯಿತು.

ವಿವೇಕ್ ಓಬಿರಾಯ್ ಅವರ ಚಿಕ್ಕ ಮಗಳಿಗಾಗಿ ಕೇಕ್ ತಯಾರಿಸಿದ್ದು, ಅವರ ಅಡುಗೆಯ ಹಾದಿಯಲ್ಲಿ ಪ್ರಮುಖ ಘಟನೆ. ಜೊತೆಗೆ ತಾನು ಪಾಪ್ಸ್ ಕಿಚನ್ ಕಪ್ ಕೇಕ್ ಹೃತಿಕ್ ರೋಷನ್‌ರಿಗೆ ತಲುಪಿಸಿದ್ದನ್ನು ನೆನಪಿಸಿಕೊಂಡು ಮುಗುಳ್ನಗುತ್ತಾರೆ.

ಬೆಂಗಳೂರಿನಲ್ಲೇ ಹುಟ್ಟಿ ಬೆಳೆದಿರುವ ಶಿವಾಲಿಯವರು ಕಳೆದ 27 ವರ್ಷಗಳಲ್ಲಿ ಬೆಂಗಳೂರು ಹೇಗೆ ಬದಲಾಗಿದೆ ಎಂಬುದನ್ನು ಗಮನಿಸಿದ್ದಾರೆ. ನನಗೆ ಒಳ್ಳೆಯ ಬಾಲ್ಯ ಸಿಕ್ಕಿತ್ತು. ನಾನು ಬಿಷಪ್ ಕಾಟನ್ ಬಾಲಕಿಯರ ಶಾಲೆಯಲ್ಲಿ ಫ್ರೌಡ ಶಿಕ್ಷಣವನ್ನು ಪಡೆದೆ. ವಿದ್ಯಾಬ್ಯಾಸದ ಜೊತೆಗೆ ನನ್ನ ಪೋಷಕರು ನನ್ನನ್ನು ಧ್ವನಿ ತರಭೇತಿ ಕ್ಲಾಸ್‌ಗೆ ಸೇರಿಸಿದ್ದರು. ಅಲ್ಲದೆ ನನ್ನನ್ನು ಪಿಯಾನೋ ಮತ್ತು ಗಿಟರ್ ಕ್ಲಾಸ್‌ಗಳಿಗೆ ಕಳಿಸಿದ್ದರು. ನಾನು ಬಾಲ್ಯದಲ್ಲಿ ಓಟಗಾರ್ತಿಯಾಗಿದ್ದೆ ಎನ್ನುತ್ತಾರೆ ಶಿವಾಲಿ.

ಬೆಂಗಳೂರು ಪ್ರಯೋಗಗಳಿಗೆ, ನವೀನತೆಗೆ ಉತ್ತಮ ಪ್ರದೇಶವಾಗಿದೆ. ಅದರಲ್ಲೂ ಪಾಕಶಾಲೆಯ ಪ್ರಮುಖ ಕೇಂದ್ರವಾಗಿದೆ. ಜೊತೆಗೆ ಸಿಟಿಯಲ್ಲಿನ ಯುವ ಜನಸಂಖ್ಯೆಯನ್ನು ಪರಿಗಣಿಸುವುದಾದರೆ ಅವರು ಅದ್ಭುತ, ಪ್ರಚಂಡವಾದ ಉದ್ಯಮದ ಉಪಾಯಗಳನ್ನು ಹೊಂದಿರುತ್ತಾರೆ. ಅವರ ಕ್ರೀಯಾಶೀಲತೆಗಳನ್ನು ಪ್ರಯೋಗಿಸುವ ಮೂಲಕ ಯುವಕರು ಮುಂದೆ ಉದ್ಯಮಿಗಳಾಗುತ್ತಾರೆ. ಒಂದು ಚಿಕ್ಕ ಉದ್ಯಮ ಬಹಳ ವೇಗವಾಗಿ ಎತ್ತರಕ್ಕೆ ಬೆಳೆಯಬಹುದು. ಅಲ್ಲದೆ ಈ ದಿನಗಳಲ್ಲಿ ಹೂಡಿಕೆದಾರರನ್ನು ಸಹ ಬಹು ವೇಗವಾಗಿ ಕಂಡುಕೊಳ್ಳಬಹುದು ಅನ್ನುತ್ತಾರೆ ಶಿವಾಲಿ.

ಮೊದ ಮೊದಲು ಮನೆಯಿಂದ ಆರಂಭಗೊಂಡ ಈ ಬೇಕಿಂಗ್, ಈಗ ಬಹು ದೊಡ್ಡ ಉದ್ಯಮವಾಗಿ ಬೆಳೆಯುವತ್ತ ಸಾಗಿದೆ. ಗ್ರಾಹಕರ ಮನಸ್ಥಿತಿಯನ್ನು ಅರ್ಥ ಮಾಡಿಕೊಂಡು ಅವರಿಗೆ ಉತ್ಪನ್ನಗಳನ್ನು ಮಾರಲು ಆರಂಭಿಸಿದೆ. ಮುಂದೆ, ಇದು ಅವರಿಗೆ ಇಷ್ಟವಾಗಿ ಹೋಯಿತು. ಈಗ ಪಾಪ್ಸ್ ಕಿಚನ್ ಔಟ್ ಲೆಟ್‌ಗಳನ್ನು ಆರಂಭಿಸುವ ಉದ್ದೇಶ ಹೊಂದಲಾಗಿದೆ ಎನ್ನುತ್ತಾರೆ ಶಿವಾಲಿ.

ಪಾಪ್ಸ್ ಕಿಚನ್ ರುಚಿ ರುಚಿಯಾದ ಸಿಹಿ ತಿಂಡಿಗಳಲ್ಲೇ ಒಂದು ವಿಶೇಷತೆ ಹೊಂದಿದೆ. ಹುಟ್ಟುಹಬ್ಬ, ಮದುವೆ ವಾರ್ಷಿಕೋತ್ಸವ, ನಿಶ್ಚಿತಾರ್ಥ, ಮದುವೆ, ಮತ್ತು ಇತರ ವಿಶೇಷ ಕಾರ್ಯಕ್ರಮಗಳಿಗೆ ಕೇಕ್ ಅಥವಾ ಕಪ್ ಕೇಕ್‌ಗಳನ್ನು ಪಾಪ್ಸ್ ಕಿಚನ್ ಪೂರೈಸುತ್ತದೆ. ತಮ್ಮ ಉತ್ಪನ್ನಗಳನ್ನು ಗ್ರಾಹಕರಿಗೆ ತಲುಪಿಸುವ ಸಲುವಾಗಿ ಫೇಸ್ ಬುಕ್ ಹಾಗೂ ವೆಬ್ ಸೈಟ್ ಗಳನ್ನು ಶಿವಾಲಿ ಬಳಸಿಕೊಳ್ಳುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ಇದರ ಬಗ್ಗೆ ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾರೆ. ಈ ಮೂಲಕ ಗ್ರಾಹಕರ ಗಮನವನ್ನು ಶಿವಾಲಿ ಸೆಳೆಯುತ್ತಾರೆ. ಇಂದು ಸಾಮಾಜಿಕ ಜಾಲತಾಣಗಳು ಬಾಯಿ ಮಾತಿಗಿಂತಲೂ ಪ್ರಭಾವಶಾಲಿಯಾಗಿರುವುದರಿಂದ ಉತ್ಪನ್ನಗಳನ್ನು ಪ್ರಭಾವಶಾಲಿಯಾಗಿ ಬಳಸಿಕೊಂಡೆ ಅನ್ನುತ್ತಾರೆ ಶಿವಾಲಿ.

ಪಾಪ್ಸ್ ಕಿಚನ್ ವಾರದಲ್ಲಿ ಸುಮಾರು ಕೇಕ್‌ ಗಳನ್ನು ತಯಾರಿಸುತ್ತದೆ. ಉತ್ಪನ್ನಗಳನ್ನು ತಯಾರಿಸಿದ ಮೇಲೆಯೇ, ಗ್ರಾಹಕರಿಂದ ಹಣವನ್ನು ಪಡೆಯುತ್ತಾರೆ. ಗ್ರಾಹಕರ ಮನೆ ಬಾಗಿಲಿಗೆ ತಲುಪಿಸಲೆಂದೇ ಕಾರ್ಮಿಕರಿದ್ದಾರೆ. 3 ಡಿ ಕೇಕ್‌ಗಳನ್ನು ತಯಾರಿಸುವುದರಲ್ಲಿ ಹೆಚ್ಚು ಪ್ರಖ್ಯಾತವಾಗಿರುವ ಪಾಪ್ಸ್ ಕಿಚನ್, ಕಾರಿನ ಮೂಲಕ ಗ್ರಾಹಕರಿಗೆ ತಲುಪಿಸಲಾಗುವುದು ಎನ್ನುತ್ತಾರೆ ಶಿವಾಲಿ.

ಶಿವಾಲಿಯವರು ಹೇಳುವಂತೆ ಅವರ ಉತ್ಪನ್ನದ ಗುಣಮಟ್ಟ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಅಡುಗೆಯ ಎಲ್ಲಾ ಕೆಲಸಗಳನ್ನು ವೈಶಾಲಿಯವರೇ ಮಾಡುತ್ತಾರೆ. ಕೆಲವು ಸಹಾಯಕರನ್ನು ಹೊಂದಿದ್ದು ಅವರು ಶಿವಾನಿಗೆ ಸಹಕರಿಸುತ್ತಾರೆ.

ಶಿವಾಲಿಯವರು ಹೊಸ ಹಾಗೂ ವಿಶಿಷ್ಟವಾದ ಪ್ರಯೋಗಗಳನ್ನು ಮಾಡಲು ಬಯಸುತ್ತಾರೆ. ನಾನು ನನ್ನ ಗ್ರಾಹಕರಿಗೆ ಉತ್ತಮ ಗುಣಮಟ್ಟವನ್ನು ಕೊಡುವುದರಲ್ಲಿ ನಂಬಿಕೆಯಿಟ್ಟಿದ್ದೇನೆ. ಮತ್ತು ನನ್ನ USP ಗುಣಮಟ್ಟದೊಂದಿಗೆ ಹೊಂದಾಣಿಕೆಯಾಗುವುದಿಲ್ಲ. ಕೆಲ ವಸ್ತುಗಳನ್ನು ಸಿಂಗಾಪೂರ್‌ನಿಂದ ತರಿಸಿಕೊಳ್ಳಲಾಗುತ್ತಿದೆ. ಮತ್ತು ನಮ್ಮ ಒಟ್ಟಾರೆ ಉದ್ದೇಶವೆಂದರೆ ನಾವು ಗ್ರಾಹಕರು ಹೆಚ್ಚು ಹೆಚ್ಚು ಬಯಸುವಂತೆ ಆಹಾರ ಪೂರೈಸುವುದಾಗಿದೆ


ಲೇಖಕರು: ತನ್ವಿ ದುಬೆ

ಅನುವಾದಕರು: ಶೃತಿ

 • Facebook Icon
 • Twitter Icon
 • LinkedIn Icon
 • WhatsApp Icon
 • Facebook Icon
 • Twitter Icon
 • LinkedIn Icon
 • WhatsApp Icon
 • Share on
  close
  Report an issue
  Authors

  Related Tags