ಭಾರತೀಯ ಮಹಿಳಾ ಉದ್ಯಮಿಗಳಿಗೆ ಇಸ್ರೇಲ್ ನೀಡುತ್ತೆ ಸುವರ್ಣಾವಕಾಶ- ಗಮನ ಸೆಳೆಯುತ್ತಿದೆ ಸ್ಟಾರ್ಟ್ ಟಿಎಲ್​​ವಿ ಬೂಸ್ಟ್ ಕ್ಯಾಂಪ್

ಟೀಮ್​ ವೈ.ಎಸ್​. ಕನ್ನಡ

ಭಾರತೀಯ ಮಹಿಳಾ ಉದ್ಯಮಿಗಳಿಗೆ ಇಸ್ರೇಲ್ ನೀಡುತ್ತೆ ಸುವರ್ಣಾವಕಾಶ- ಗಮನ ಸೆಳೆಯುತ್ತಿದೆ ಸ್ಟಾರ್ಟ್ ಟಿಎಲ್​​ವಿ ಬೂಸ್ಟ್ ಕ್ಯಾಂಪ್

Friday June 09, 2017,

3 min Read

ಜಗತ್ತಿನ ಅಭಿವೃದ್ಧಿಗೆ ಮಹಿಳೆಯರ ಕೊಡುಗೆ ಬೇಕೇಬೇಕು. ತಾಂತ್ರಿಕ ಅಭಿವೃದ್ಧಿಗಳು ಮತ್ತು ನವನವೀನತೆಗಳು ಮಹಿಳೆಯರಿಗೆ ಹೆಚ್ಚು ಇಷ್ಟವಾಗುತ್ತದೆ. ಸ್ಟಾರ್ಟ್ ಟಿಎಲ್​ವಿಯ ಐದನೇ ಆವೃತ್ತಿಗೆ ಭಾರತದಲ್ಲಿ ಈಗ ಅಧಿಕೃತವಾಗಿ ಚಾಲನೆ ಸಿಕ್ಕಿದೆ. ಕಳೆದ ಆವೃತ್ತಿಯಲ್ಲಿ ಈ ಸ್ಪರ್ಧೆಗೆ ಅಭೂತಪೂರ್ವ ಯಶಸ್ಸು ಸಿಕ್ಕಿತ್ತು. ಭಾರತ ಮತ್ತು ಇಸ್ರೇಲ್ ನಡುವಿನ 25 ವರ್ಷಗಳ ಸಂಬಂಧವನ್ನು ಆಚರಿಸಿಕೊಳ್ಳಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಮಹಿಳೆಯರೇ ಮುನ್ನಡೆಸುವ ಸ್ಟಾರ್ಟ್ಅಪ್ ಕಂಪನಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ.

image


ಇಸ್ರೇಲ್​​ನ ವಿದೇಶಾಂಗ ಸಚಿವಾಲಯ ಮತ್ತು ಟೆಲ್ ಅವೈವ್ ಮುನಿಸಿಪಾಲಿಟಿ ಸ್ಟಾರ್ಟ್ ಟಿಎಲ್​ವಿ ವಾರ್ಷಿಕ ಕಾರ್ಯಕ್ರಮವನ್ನು ಆಯೋಜಿಸಿದೆ. ವಿವಿಧ ದೇಶಗಳ 23 ಸ್ಟಾರ್ಟ್​ಅಪ್ ಫೈನಲಿಸ್ಟ್​ಗಳು ಇಸ್ರೇಲ್​ನ ಟೆಲ್ ಅವೈವ್ ನಲ್ಲಿ ಸೆಪ್ಟಂಬರ್ 2017ರಿಂದ ನಡೆಯುವ 5 ದಿನಗಳ ಸ್ಟಾರ್ಟ್ ಅಪ್ ಬೂಸ್ಟ್ ಕ್ಯಾಂಪ್​ನಲ್ಲಿ ಭಾಗಹಿಸಲಿದ್ದಾರೆ. ಡಿಎಲ್ ಡಿ ಇನ್ನೋವೇಶನ್ ಫೆಸ್ಟಿವಲ್ ಇದಕ್ಕೆ ಸಾಥ್ ನೀಡಲಿದೆ.

ಈ ಸ್ಪರ್ಧೆಯ ವಿಜೇತರು ಇಸ್ರೇಲ್​ನ ಉದ್ಯಮಿಗಳ ಜೊತೆ ಸೇರಿಕೊಳ್ಳಲಿದ್ದಾರೆ. ಅಷ್ಟೇಅಲ್ಲ, ವರ್ಕ್ ಶಾಪ್, ಮೀಟಿಂಗ್ ಮತ್ತು ಖ್ಯಾತ ಸಂಸ್ಥೆಗಳಲ್ಲಿ ಭಾಷಣ ಮಾಡುವ ಅವಕಾಶ ಪಡೆಯಲಿದ್ದಾರೆ. ಇಸ್ರೇಲ್​ನ ಖ್ಯಾತ ಉದ್ಯಮಿಗಳು, ಹೂಡಿಕೆದಾರರು ಮತ್ತು ಇತರೆ ವೃತ್ತಿಪರರ ಜೊತೆ ಮಾತುಕತೆ ನಡೆಸಲು ಅವಕಾಶ ಪಡೆಯಲಿದ್ದಾರೆ.

“ ಭಾರತ ಮತ್ತು ಇಸ್ರೇಲ್ ನಡುವಿನ ವ್ಯಾವಹಾರಿಕ ಸಂಬಂಧ ಈ ಮೂಲಕ ಉತ್ತಮವಾಗಲಿದೆ. ಎರಡು ದೇಶಗಳ ನಡುವೆ ಅಭಿವೃದ್ಧಿಗೆ ಇದು ಸಹಕಾರಿ. ಯೋಜನೆಗಳು ಮತ್ತು ಯೋಜನೆಗಳ ವಿನಿಮಯದಿಂದ ಸಾಕಷ್ಟು ಲಾಭವಾಗಲಿದೆ. ಸ್ಟಾರ್ಟ್​ಅಪ್ ಇಕೋ ಸಿಸ್ಟಮ್ ಮತ್ತು ಉದ್ಯಮಿಗಳಿಗೆ ಇದು ಸಹಾಯ ನೀಡಲಿದೆ. ಭಾರತದ ಮಹಿಳಾ ಉದ್ಯಮಿಗಳಿಗೆ ಇದು ಸಾಕಷ್ಟು ವಿಚಾರಗಳನ್ನು ತಿಳಿಸಿಕೊಡಲಿದೆ. ಅಷ್ಟೇ ಅಲ್ಲ ಉದ್ಯಮದ ಸಂಕೀರ್ಣತೆಗಳ ಬಗ್ಗೆ ತಿಳಿಸಿಕೊಡಲಿದೆ. ”
- ಡೇನಿಯಲ್ ಕಾರ್ಮನ್, ಇಸ್ರೇಲ್ ರಾಯಭಾರಿ

ಸ್ಪರ್ಧೆಯ ವಿವರ

ಈ ಸ್ಪರ್ಧೆಯಲ್ಲಿ ಆಸಕ್ತರು ಯಾರು ಬೇಕಾದರೂ ಪಾಲ್ಗೊಳ್ಳಬಹುದು. ಜುಲೈ 7ರ ಒಳಗೆ ನಿಗದಿತ ಫಾರ್ಮ್ ತುಂಬಿ ಕೊಡಬೇಕು.

5 ಫೈನಲಿಸ್ಟ್​​ಗಳನ್ನು ಜುಲೈ 24ರಂದು ದೆಹಲಿಗೆ ಕರೆಸಿಕೊಳ್ಳಲಾಗುತ್ತದೆ. ಅಲ್ಲಿ ಅವರು ಸ್ಟಾರ್ಟ್ ಅಪ್​​ಗಳ ಬಗ್ಗೆ ವಿವರವಾದ ಭಾಷಣ ಮಾಡಬೇಕು. ಅವರ ಉದ್ಯಮದ ತಾಂತ್ರಿಕತೆ ಮತ್ತು ಅದರಿಂದ ಸೋಶಿಯಲ್ ಇಂಪ್ಯಾಕ್ಟ್ ಬಗ್ಗೆ ವಿವರಣೆ ನೀಡಬೇಕು. ಪ್ಯಾನಲಿಸ್ಟ್​​ಗಳು ವಿಜೇತರನ್ನು ಆಯ್ಕೆ ಮಾಡುತ್ತಾರೆ.

ಸ್ಟಾರ್ಟ್ ಟಿಎಲ್​ವಿ ಇಂಡಿಯಾ ಕಾಂಪಿಟೇಷನ್ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಮತ್ತು ಅಪ್ಲಿಕೇಷನ್ ಫಾರ್ಮ್​ಗೆ ಇಲ್ಲಿ ಕ್ಲಿಕ್ ಮಾಡಿ..

ಇಸ್ರೇಲ್ ರಾಯಭಾರ ಕಚೇರಿ ಸ್ಟಾರ್ಟ್ ಅಪ್ ಇಂಡಿಯಾ, TiE-NCR, ಯಸ್ ಬ್ಯಾಂಕ್ ಮತ್ತು ಯಸ್ ಗ್ಲೋಬಲ್ ಇನ್ಸ್ ಟಿಟ್ಯೂಟ್​​ಗಳ ಜೊತೆ ಒಪ್ಪಂದ ಮಾಡಿಕೊಂಡಿದೆ. ಮಹಿಳೆಯರು ಮುನ್ನಡೆಸುವ ಸ್ಟಾರ್ಟ್ಅಪ್​ಗಳ ಸೋಶಿಯಲ್ ಇಂಪ್ಯಾಕ್ಟ್​​ಗಳಿಗೆ ಹೆಚ್ಚು ಮಹತ್ವ ಇರಲಿದೆ. ಸ್ಟಾರ್ಟ್ ಟಿಎಲ್​ವಿ ಇಸ್ರೇಲ್​ನ ಅತೀ ದೊಡ್ಡ ಹೈಟೆಕ್ ಸಂಸ್ಥೆಯಾಗಿದೆ. ಇದು ಸ್ಟಾರ್ಟ್ ಅಪ್, ಬಂಡವಾಳ ಹೂಡಿಕೆದಾರರನ್ನು ಸೇರಿದಂತೆ ವಿಶ್ವದಾದ್ಯಂತ ಹಲವು ಸುಪ್ರಸಿದ್ಧ ಉದ್ಯಮವನ್ನು ಹೊಂದಿದೆ.

ಇಸ್ರೇಲ್ ಚಿಕ್ಕದೇಶ. ಅಷ್ಟೇ ಅಲ್ಲ ಕೇವಲ 69 ವರ್ಷಗಳ ಇತಿಹಾಸವನ್ನು ಮಾತ್ರ ಹೊಂದಿದೆ. ಆದ್ರೆ ಟೆಕ್ನಾಲಜಿ, ನವನವೀನತೆ, ಕಲೆ ಮತ್ತು ಸಂಸ್ಕೃತಿಗೆ ಹೆಸರು ಮಾಡಿದೆ. ಇಸ್ರೇಲ್ ಅಮೆರಿಕದ ನಂತರ ಅತೀ ಹೆಚ್ಚು ಸ್ಟಾರ್ಟ್ ಅಪ್ ಗಳನ್ನು ಹೊಂದಿರುವ ದೇಶ. ಜಪಾನ್, ಚೀನಾ, ಭಾರತ, ಕೊರಿಯಾ, ಕೆನಡಾ, ಫ್ರಾನ್ಸ್, ಜರ್ಮನಿ ಮತ್ತು ಯುನೈಟೆಡ್ ಕಿಂಗ್ ಡಂಗಳಲ್ಲಿ ಸ್ಟಾರ್ಟ್ ಅಪ್ ಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇಸ್ರೇಲ್​ನಲ್ಲಿ ತಲಾ ಆದಾಯವೂ ಹೆಚ್ಚಿದೆ. ಅಮೆರಿಕಾಕ್ಕಿಂತ ಹೂಡಿಕೆಯನ್ನು 2 ಪಟ್ಟು ಹೆಚ್ಚು ಆಕರ್ಷಿಸುತ್ತಿದೆ. ಯುನೈಟೆಡ್ ಕಿಂಗ್ ಡಂಗಿಂತ 30 ಪಟ್ಟು ಹೆಚ್ಚು ಹೂಡಿಕೆಯನ್ನು ಹೊಂದಿರುವ ದೇಶ ಇಸ್ರೇಲ್ ಆಗಿದೆ. ರಿಸರ್ಚ್ ಅಂಡ್ ಡೆವಲಪ್​ಮೆಂಟ್​​ಗಾಗಿ ಇಸ್ರೇಲ್ ಸರಿಸುಮಾರು 3.9 ರಷ್ಟು ಜಿಡಿಪಿಯನ್ನು ವ್ಯಯ ಮಾಡುತ್ತಿದೆ. ಟೆಲ್ ಅವೈವ್ ಇಸ್ರೇಲ್​ನ ವ್ಯವಹಾರಿಕ ರಾಜಧಾನಿಯಾಗಿದ್ದು ವಿಶ್ವಶ್ರೇಷ್ಟ ಸವಲತ್ತುಗಳನ್ನು ಹೊಂದಿದೆ. ಅಷ್ಟೇ ಅಲ್ಲ ಎಂಎನ್ ಸಿಗಳು ಮತ್ತು ನೂರಾರು ಟೆಕ್ ಸ್ಟಾರ್ಟ್​ಅಪ್​ಗಳು ಇಲ್ಲಿವೆ.

ಈ ಹಿಂದೆ ಪ್ರಶಸ್ತಿ ಗೆದ್ದ ಭಾರತೀಯ ಕಂಪನಿಗಳು

ಕಳೆದ ವರ್ಷದ ಸ್ಟಾರ್ಟ್ ಟೆಲ್ ಅವೈವ್ ವರ್ಕ್ ಶಾಪ್​ನಲ್ಲಿ ಭಾರತ ಮೌಸಮಿ ಆಚಾರ್ಯ ಮತ್ತು ಕೊಮಲ್ ತಲ್ವಾರ್ ಭಾಗಿಯಾಗಿದ್ದರು. ಮೌಸಮಿ ಆಚಾರ್ಯ ಅಡ್ವೆನಿಯೊ ಅನ್ನುವ ಕಡಿಮೆ ವೆಚ್ಚದ ಹೆಲ್ತ್ ಕೇರ್ ನ ಸಂಸ್ಥಾಪಕಿ. ಕೋಮಲ್ ಆನ್ಲೈನ್ ಪೇಟೆಂಟ್ ಮತ್ತು ಅನಾಲಿಸಿಸ್ XLPAT ಸಂಸ್ಥೆಯನ್ನು ಹೊಂದಿದ್ದಾರೆ.

2013ರಲ್ಲಿ ನೌ ಫ್ಲೋಟ್ಸ್ ಅನ್ನುವ ಕಂಪನಿ ಸ್ಟಾರ್ಟ್ ಟಿಎಲ್​ವಿಯಲ್ಲಿ ಪಾಲ್ಗೊಂಡಿತ್ತು.

“ ನಾವು ಹಲವು ಉತ್ತಮ ಸಂಬಂಧಗಳನ್ನು ಅಲ್ಲಿ ಕಂಡುಕೊಂಡೆವು. ಅಷ್ಟೇ ಅಲ್ಲ ನಾವು ಬೇಟಿಯಾದ ವ್ಯಕ್ತಿಗಳೆಲ್ಲಾ ಗೆಳೆಯರಾದರು. ಅವಕಾಶ ನೀಡಿದ ಇಸ್ರೇಲ್ ರಾಯಭಾರ ಕಚೇರಿಗೆ ಧನ್ಯವಾದಗಳು ”
- ರೊನಕ್ ಕುಮಾರ್ ಸಮಂತ್ರೆ, ನೌಫ್ಲೋಟ್ಸ್ ಸಹಸಂಸ್ಥಾಪಕ

ಒಟ್ಟಿನಲ್ಲಿ ಭಾರತೀಯ ಸ್ಟಾರ್ಟ್ ಅಪ್ ಲೋಕಕ್ಕೆ ಇದು ಸಾಕಷ್ಟು ಹೊಸತನ್ನು ಕಲಿಸುತ್ತಿದೆ. ಮುಂದಿನ ದಿನಗಳಲ್ಲಿ ಎರಡೂ ದೇಶಗಳ ಮಧ್ಯೆ ಸಂಬಂಧ ಗಟ್ಟಿಯಾಗುವುದು ಗ್ಯಾರೆಂಟಿ.

ಇದನ್ನು ಓದಿ:

1. ಮಳೆಯಲಿ ಹೊಸ ಪರಿಚಿತರ ಜೊತೆಯಲ್ಲಿ..! 

2. ಒಂದು ರೂಪಾಯಿನಲ್ಲಿ ಅಡಗಿದೆ ನಿಮ್ಮ ಆರೋಗ್ಯದ ರಹಸ್ಯ- ಸಿಂಪಲ್​ ಆಗಿದೆ ತರಕಾರಿಯಲ್ಲಿ ವಿಷ ಪರೀಕ್ಷೆ ಮಾಡುವ ಯಂತ್ರ

3. ಡಿಸೈನರ್ "ಬೋಟಿಕ್ " ! ಮಹಿತಾ ಪ್ರಸಾದ್ ಡಿಸೈನ್ಸ್