Brands
Discover
Events
Newsletter
More

Follow Us

twitterfacebookinstagramyoutube
Yourstory

Brands

Resources

Stories

General

In-Depth

Announcement

Reports

News

Funding

Startup Sectors

Women in tech

Sportstech

Agritech

E-Commerce

Education

Lifestyle

Entertainment

Art & Culture

Travel & Leisure

Curtain Raiser

Wine and Food

YSTV

ADVERTISEMENT
Advertise with us

ಅಮೇಜಾನ್ ಕಾಡ್ಗಿಚ್ಚು 2000 ಕಿ.ಮೀ ದೂರದ ಹಿಮಪರ್ವತಗಳನ್ನೇ ಕರಗಿಸುತ್ತಿದೆ

ಅಮೇಜಾನ್ ನಿತ್ಯಹರಿದ್ವರ್ಣ ಕಾಡಿನಲ್ಲಿನ ಕಾಡ್ಗಿಚ್ಚು 2000 ಕಿ.ಮೀ. ದೂರದ ದಕ್ಷಿಣ ಅಮೆರಿಕದ ಆಂಡೀಸ್ ಹಿಮಪರ್ವತ ಶ್ರೇಣಿಯನ್ನು ಕರಗಿಸುತ್ತಿದೆ ಎಂದು ಅಧ್ಯಯನವೊಂದು ಹೇಳಿದೆ.

ಅಮೇಜಾನ್ ಕಾಡ್ಗಿಚ್ಚು 2000 ಕಿ.ಮೀ ದೂರದ ಹಿಮಪರ್ವತಗಳನ್ನೇ ಕರಗಿಸುತ್ತಿದೆ

Sunday December 01, 2019 , 2 min Read

ಸೈಂಟಿಫಿಕ್‌ ರಿಪೋರ್ಟ್ಸ್ ನಿಯತಕಾಲಿಕೆಯಲ್ಲಿ ಪ್ರಕಟವಾದ ಅಧ್ಯಯನದ ವರದಿಯಲ್ಲಿ, ಕಪ್ಪು ಇಂಗಾಲದಂತಹ ಜೀವರಾಶಿ ಸುಡುವಿಕೆಯಿಂದಾಗುವ ಏರೋಸಾಲ್‌ಗಳು ಗಾಳಿಯಿಂದ ಉಷ್ಣವಲಯದ ಆಂಡಿಯನ್ ಹಿಮನದಿಗಳಿಗೆ ಸಾಗಿರಬಹುದು ಎನ್ನಲಾಗಿದೆ.


ಅಲ್ಲಿ ಅವು ಹಿಮದಲ್ಲಿ ಸಂಗ್ರಹವಾಗುತ್ತವೆ ಮತ್ತು ಹಿಮನದಿ ಕರಗುವಿಕೆಯನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿವೆ, ಏಕೆಂದರೆ ಕಪ್ಪು ಇಂಗಾಲ ಅಥವಾ ಧೂಳಿನ ಕಣಗಳಿಂದ ಕಪ್ಪಾದ ಹಿಮವು ಕಡಿಮೆ ಬೆಳಕನ್ನು ಪ್ರತಿಬಿಂಬಿಸುತ್ತದೆ (ಕಡಿಮೆ ಆಲ್ಬೊಡೊ) ಎಂದು ಸಂಶೋಧಕರು ಹೇಳಿದ್ದಾರೆ.


ಬ್ರೆಜಿಲ್‌ನ ರಿಯೊ ಡಿ ಜನೈರೊ ಸ್ಟೇಟ್ ಯೂನಿವರ್ಸಿಟಿಯ ನ್ಯೂಟನ್ ಡಿ ಮಾಗಲ್ಹೇಸ್ ನೆಟೊ ಮತ್ತು ಅವರ ಸಹೋದ್ಯೋಗಿಗಳು ಬೊಲಿವಿಯನ್ ಜೊಂಗೊ ಹಿಮನದಿಯ ಮೇಲೆ ಅಮೆಜಾನ್ ಜಲಾನಯನ ಪ್ರದೇಶದಲ್ಲಿ ಜೀವರಾಶಿ ಸುಡುವ ಸಂಭವನೀಯ ಪರಿಣಾಮವನ್ನು ಊಹಿಸಿದ್ದರು.


ಬೆಂಕಿಯ ಘಟನೆಗಳು, ಹೊಗೆ ಪ್ಲುಮ್‌ಗಳ ಚಲನೆ, ಮಳೆ ಮತ್ತು ಹಿಮನದಿ ಕರಗುವಿಕೆ ಕುರಿತ 2000 ಮತ್ತು 2016 ರ ನಡುವೆ ಸಂಗ್ರಹಿಸಿದ ದತ್ತಾಂಶವನ್ನು ಬಳಸಿದರು.


ಅಮೆಜಾನ್ ಜಲಾನಯನ ಪ್ರದೇಶಕ್ಕೆ ಹೆಚ್ಚಾಗಿ ಬೆಂಕಿ ತಗುಲಿದ 2007 ಮತ್ತು 2010 ರ ವರ್ಷಗಳ ಮೇಲೆ ಸಂಶೋಧಕರು ತಮ್ಮ ವಿಶ್ಲೇಷಣೆಯನ್ನು ಕೇಂದ್ರೀಕರಿಸಿದ್ದಾರೆ.


ಕಪ್ಪು ಇಂಗಾಲದಿಂದ ಮಾತ್ರ ಆಗುವ ಹಿಮ ಆಲ್ಬೊಡೊ ಕಡಿತ ಮತ್ತು ಈ ಹಿಂದೆ ವರದಿಯಾದ ಪ್ರಮಾಣದ ಧೂಳಿನ ಉಪಸ್ಥಿತಿಯಲ್ಲಿ ಕಪ್ಪು ಇಂಗಾಲವನ್ನು ಅವರು ತನಿಖೆ ಮಾಡಿದರು.


ಕಪ್ಪು ಇಂಗಾಲ ಅಥವಾ ಧೂಳು ವಾರ್ಷಿಕ ಹಿಮನದಿ ಕರಗುವಿಕೆಯನ್ನು ಶೇಕಡಾ 3-4 ರಷ್ಟು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿದೆ ಅಥವಾ ಎರಡೂ ಇದ್ದಾಗ ಶೇಕಡಾ 6 ರಷ್ಟು ಹೆಚ್ಚಾಗುತ್ತದೆ ಎಂದು ಹೇಳಿದ್ದಾರೆ.


ಧೂಳಿನ ಸಾಂದ್ರತೆಯು ಅಧಿಕವಾಗಿದ್ದರೆ, ಧೂಳು ಮಾತ್ರ ವಾರ್ಷಿಕವಾಗಿ ಕರಗುವಿಕೆಯನ್ನು ಶೇಕಡಾ 11-13 ಮತ್ತು ಕಪ್ಪು ಇಂಗಾಲದ ಉಪಸ್ಥಿತಿಯಲ್ಲಿ ಶೇಕಡಾ 12-14 ರಷ್ಟು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಸಂಶೋಧಕರು ಹೇಳಿದ್ದಾರೆ.


ಅಮೆಜಾನ್ ಜೀವರಾಶಿ ಸುಡುವುದರ ಪರಿಣಾಮವು ಹಿಮದಲ್ಲಿನ ಧೂಳಿನ ಅಂಶವನ್ನು ಅವಲಂಬಿಸಿರುತ್ತದೆ ಎಂದು ಸಂಶೋಧನೆಗಳು ಸೂಚಿಸುತ್ತವೆ.


ಜಾಗತಿಕ ಆಹಾರ ಬೇಡಿಕೆಗೆ ಸಂಬಂಧಿಸಿದ ಒತ್ತಡವು ಬ್ರೆಜಿಲಿಯನ್ ಕೃಷಿ ಮತ್ತು ಅರಣ್ಯನಾಶದ ಮತ್ತಷ್ಟು ವಿಸ್ತರಣೆಗೆ ಕಾರಣವಾಗಬಹುದು, ಇದರ ಪರಿಣಾಮವಾಗಿ ಕಪ್ಪು ಇಂಗಾಲ ಮತ್ತು ಇಂಗಾಲದ ಡೈಆಕ್ಸೈಡ್ ಹೊರಸೂಸುವಿಕೆಯು ಆಂಡಿಯನ್ ಹಿಮನದಿಗಳ ಮೇಲೆ ಪರಿಣಾಮ ಬೀರಬಲ್ಲದು ಎಂದು ಸಂಶೋಧಕರು ತಿಳಿಸಿದ್ದಾರೆ.