ಸಾಧನೆಗೆ ಅಸಾಧ್ಯವಾದದ್ದು ಯಾವುದು ಇಲ್ಲ. ಆದರೆ ಸಾಧಿಸುವ ಛಲವೊಂದಿದ್ದರೆ ಬದುಕನ್ನೇ ಬದಲಿಸಿಕೊಳ್ಳಬಹುದು. ಒಂದು ಸಣ್ಣ ಗ್ಯಾರೇಜ್‌ನಿಂದ ಆರಂಭವಾದ ಈ ಉದ್ಯಮ ಇದು ದೇಶದ 400 ಮಹಾನಗರಗಳನ್ನು ವ್ಯಾಪಿಸಿದೆ. ಇಷ್ಟೆಲ್ಲಾ ಸಾಧನೆಗೆ ಕಾರಣವಾಗಿದ್ದು, ಪೂರಕವಾಗಿದ್ದು ದೃಢತೆ, ಛಲ ಮತ್ತು ಅಂದುಕೊಂಡಿದ್ದನ್ನು ಸಾಧಿಸುವ ವಿಶ್ವಾಸ.
1990ರಲ್ಲಿ ಬೆಂಗಳೂರಿನ ಜಯನಗರದಲ್ಲಿ ಸಣ್ಣದೊಂದು ಗ್ಯಾರೇಜ್ ನಲ್ಲಿ ಆರಂಭಗೊಂಡ ವೈಲ್ಡ್ ಕ್ರಾಫ್ಟ್ ಸಂಸ್ಧೆ ಇಂದು ದೇಶಾದ್ಯಂತ ಪಸರಿಸಿದೆ. ಸಣ್ಣ ಗ್ಯಾರೇಜ್‌ನಲ್ಲಿ ಸ್ನೇಹಿತರೊಂದಿಗೆ ಒಂದು ಹವ್ಯಾಸವಾಗಿ ಶುರುವಾದ ವೈಲ್ಡ್ ಕ್ರಾಫ್ಟ್ ಹೆಮ್ಮರವಾಗಿ ಬೆಳೆದುನಿಂತಿದೆ.
ಬೆಂಗಳೂರು ಮಾತ್ರವಲ್ಲದೆ ದೇಶದಲ್ಲಿ 130 ಎಕ್ಸ್ಕ್ಲೂಸಿವ್ ಮಳಿಗೆಗಳಿವೆ. ದೇಶದ 400 ನಗರಗಳಲ್ಲಿ 300ಕ್ಕೂ ಹೆಚ್ಚು ಮಲ್ಟಿ ಬ್ರಾಂಡೆಂಡ್ ಮಳಿಗೆಗಳು ಆರಂಭಗೊಂಡಿವೆ. ಈ ಪರಿಯಾಗಿ ಬೆಳೆದಿರುವ ವೈಲ್ಡ್ ಕ್ರಾಫ್ಟ್ ಸಂಸ್ಧೆ ಇಂದು ವಿಶ್ವವಿಖ್ಯಾತ 10 ಮಿಲಿಯನ್ ಧನ ಸಹಾಯವನ್ನೂ ಪಡೆಯುವಷ್ಟು ವಿಶ್ವವಿಖ್ಯಾತವಾಗಿದೆ.
1990ರಲ್ಲಿ ಉತ್ಸಾಹಿ ಎಂಜಿನಿಯರ್ ಯುವಕ ದಿನೇಶ್ ಎಂಬುವವರಿಂದ ಆರಂಭಗೊಂಡ ವೈಲ್ಡ್ ಕ್ರಾಫ್ಟ್ ಸಂಸ್ಧೆ ಇಂದು ಭಾರತದ ಶ್ರೇಷ್ಠ ಗುಣಮಟ್ಟದ ಹೊರಾಂಗಣ ಗೇರ್ ಮತ್ತು ಅವುಗಳ ಉಪಕರಣವನ್ನು ತಯಾರಿಸುವ ಕಂಪನಿಯಾಗಿ ಗುರುತಿಸಿಕೊಂಡಿದೆ. ಒಂದೊಮ್ಮೆ ವಿಹಾರಕ್ಕೆ ಹೋದ ದಿನೇಶ್ ಆಕಸ್ಮಿಕ ಅಪಘಾತಕ್ಕೆ ತುತ್ತಾದಾಗ, ವೈಲ್ಡ್ ಕ್ರಾಫ್ಟ್ ಸಂಸ್ಧೆ ಕಲ್ಪನೆಯು ಮೊಳಕೆಯೊಡೆಯಿತು..
ಉತ್ತಮ ಗುಣಮಟ್ಟದ ಹೊರಾಂಗಣ ಗೇರ್ ಮತ್ತು ಅವುಗಳ ಉಪಕರಣಗಳನ್ನು ತಯಾರಿಸುವುದಕ್ಕಾಗಿಯೇ ಜನಿಸಿದ್ದ ವೈಲ್ಡ್ ಕ್ರಾಫ್ಟ್ ಸಂಸ್ಧೆ, 80ರ ಮತ್ತು 90ರ ದಶಕದಲ್ಲಿ ಉಪಕರಣಗಳನ್ನೆಲ್ಲಾ ವಿದೇಶದಿಂದಲೇ ಆಮದು ಮಾಡಿಕೊಳ್ಳುತ್ತಿತ್ತು. ಆದರೆ ಇದು ದಿನೇಶ್ ತಂಡಕ್ಕೆ ತೃಪ್ತಿಯನ್ನೇ ನೀಡಲಿಲ್ಲ. ಈ ಹಿನ್ನೆಲೆಯಲ್ಲಿ ದಿನೇಶ್ ಹಾಗೂ ಅವರ ಸ್ನೇಹಿತರ ತಂಡ ತಮ್ಮದೇ ಆದ ವಿನ್ಯಾಸದಲ್ಲಿ ಉಪಕರಣಗಳ ತಯಾರಿಕೆಗೆ ಮುಂದಾಯಿತು. ಆಗ ಜನ್ಮ ತಾಳಿದ್ದೇ ಈ ವೈಲ್ಡ್ ಕ್ರಾಫ್ಟ್ ಸಂಸ್ಧೆ.
ವೈಲ್ಡ್ ಕ್ರಾಫ್ಟ್ ಸಂಸ್ಧೆ ನಿರ್ಮಾಣವಾಗಿದ್ದು ಹೇಗೆ?
ಸಂಸ್ಥೆಯ ಸಹ ಮಾಲೀಕರಾದ ಗೌರವ್ ದುಬ್ಲಿಶ್ ಹೇಳುವ ಪ್ರಕಾರ “ನಾನು ಮತ್ತು ಸಿದ್ದಾರ್ಥ 2001ರಲ್ಲಿ ಅಲ್ಪಾವಧಿ ಕೆಲಸಗಾರರಾಗಿ ನಮ್ಮ ವೃತ್ತಿಯನ್ನು ರೂಪಿಸಿಕೊಳ್ಳುವುದಕ್ಕಾಗಿ ವೈಲ್ಡ್ ಕ್ರಾಫ್ಟ್ ಕಂಪನಿ ಸೇರಿದ್ದೇವು. ನಂತರ ವಾಣಿಜ್ಯ ಉದ್ದೇಶದಿಂದಾಗಿ 2007ರಲ್ಲಿ ಪೂರ್ಣಪ್ರಮಾಣದ ವೃತ್ತಿಯನ್ನಾಗಿ ಸ್ವೀಕರಿಸಿದ್ದೇವು ಅನ್ನುತ್ತಾರೆ.
ಗೌರವ್ ಹೇಳುವ ಪ್ರಕಾರ ವೈಲ್ಡ್ ಕ್ರಾಫ್ಟ್ ಕಂಪನಿ ಶುರುವಾದಂತಹ ಸಮಯದಲ್ಲಿ ಭಾರತದಲ್ಲಿನ ಹೊರಾಂಗಣ ಗೇರ್ ಮತ್ತು ಅವುಗಳ ಉಪಕರಣಗಳ ಮಾರುಕಟ್ಟೆ ಅಸಂಘಟಿತವಾಗಿತ್ತು. ಅಂತರಾಷ್ಟ್ರಿಯ ಟ್ರೆಕ್ಕರ್‌ಗಳ ಒತ್ತಡದಿಂದ ಭಾರತದ ಮಾರುಕಟ್ಟೆಯಲ್ಲಿ ವಿದೇಶಿ ನಿರ್ಮಿತ ಬಳಸಿದ ಗೇರ್‌ಗಳು ಮಾತ್ರ ಲಭ್ಯವಿದ್ದವು ಹಾಗೂ ಕೇವಲ ಒಂದೆರಡು ಬ್ರಾಂಡ್ ಗಳನ್ನು ಮಾತ್ರ ಭಾರತದ ಮಾರುಕಟ್ಟೆಗೆ ಪರಿಚಯಿಸಲಾಗಿತ್ತು. ಭಾರತದ ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ಉಪಕರಣಗಳ ಅವಶ್ಯಕತೆಯನ್ನು ಮನಗಂಡು ಭಾರತದಲ್ಲೆ ತಯಾರಿಸಿದ ಹಾಗೂ ವಿದೇಶಿ ಉಪಕರಣಗಳಿಗಿಂತ ಉತ್ತಮ ಗುಣಮಟ್ಟದ ಗೇರ್‌ಗಳನ್ನು ಉತ್ಪಾದಿಸುವ ಸಲುವಾಗಿ ವೈಲ್ಡ್ ಕ್ರಾಫ್ಟ್ ಆರಂಭಿಸಿದ್ದೆವು ಅನ್ನುತ್ತಾರೆ ಗೌರವ್.
ಉತ್ತಮ ತಂಡದ ಬೆಳವಣಿಗೆ
ಅಲ್ಪಾವಧಿ ಕೆಲಸದಿಂದ ಪೂರ್ಣಪ್ರಮಾಣದ ವೃತ್ತಿಯನ್ನಾಗಿ ಸ್ವೀಕರಿಸಿದ ನಾವು ಇಂದು 3000ಕ್ಕೂ ಅಧಿಕ ಮಳಿಗೆಗಳನ್ನು ಮುನ್ನಡೆಸುವ ಮಟ್ಟಕ್ಕೆ ಬೆಳೆದಿದ್ದೇವೆ. ಈ ಯೋಜನೆಗೆ ನಾವು ಕೈ ಹಾಕಿದಾಗ ಸೀಮಿತ ಶೈಲಿಯ ವ್ಯಾಪಾರ ಚಿಂತನೆಯನ್ನು ಅರ್ಥ ಮಾಡಿಕೊಂಡೆವು. ಶೂನ್ಯದಿಂದ ಶುರು ಮಾಡಿದಾಗ, ಎಲ್ಲಿಂದ ಆರಂಭ ಮಾಡಬೇಕೆಂಬುದರ ಬಗ್ಗೆ ಗೊತ್ತಿರುವುದಿಲ್ಲ. ಆಗ ಎಲ್ಲ ಕ್ಷೇತ್ರಗಳಲ್ಲೂ ಕೈ ಚಳಕ ತೋರಬೇಕಾಗುತ್ತದೆ. ವಿನ್ಯಾಸ, ಹಂಚಿಕೆ, ತಯಾರಿಕೆ ಮತ್ತು ಹಣಕಾಸು ವ್ಯವಹಾರಗಳೆಲ್ಲವನ್ನೂ ನೋಡಿಕೊಳ್ಳಬೇಕಾಗುತ್ತದೆ. ಇಂದು ವೈಲ್ಡ್ ಕ್ರಾಫ್ಟ್ ಅತಿದೊಡ್ಡ ಸಂಸ್ಥೆಯಾಗಿ ಬೆಳೆದು ನಿಂತಿದ್ದು, ಅಂತಾರಾಷ್ಟ್ರೀಯ ಸರಬರಾಜು ಸರಪಳಿಯಾಗಿ ಕಾರ್ಯನಿರ್ವಹಿಸುತ್ತಿದೆ. 2500ಕ್ಕೂ ಹೆಚ್ಚು ತಯಾರಿಕಾ ನೌಕರರನ್ನು ಈ ಸಂಸ್ಥೆ ಹೊಂದಿದೆ ಎನ್ನುತ್ತಾರೆ ಗೌರವ್, ಸಿದ್ದಾರ್ಥ ಮತ್ತು ದಿನೇಶ್.
ಕಳೆದ 4 ವರ್ಷಗಳಿಂದ ವೈಲ್ಡ್ ಕ್ರಾಫ್ಟ್ ಸಂಸ್ಥೆಯ ಉತ್ಪನ್ನಗಳ ಮಾರಾಟದಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ಒಂದು ಸಣ್ಣ ಗ್ಯಾರೇಜ್ ನಲ್ಲಿ ಆರಂಭಗೊಂಡ ಈ ಕಂಪನಿ ಈಗ ಅತಿದೊಡ್ಡ ಉದ್ಯಮವಾಗಿ ಬೆಳೆದು ನಿಂತಿದೆ. ಈ ಹಣಕಾಸು ವರ್ಷದಲ್ಲಿ ವೈಲ್ಡ್ ಕ್ರಾಫ್ಟ್ 50 ಕೋಟಿ ಆದಾಯವನ್ನು ಗಳಿಸಿದೆ. ಮುಂದಿನ ವರ್ಷಾಂತ್ಯದಲ್ಲಿ ಈ ಕಂಪನಿ 250 ಕೋಟಿಯಷ್ಟು ಆದಾಯವನ್ನು ಸಂಗ್ರಹಿಸುವ ಉದ್ದೇಶವನ್ನು ಹೊಂದಿದೆ ಎನ್ನುತ್ತಾರೆ ವೈಲ್ಡ್ ಕ್ರಾಫ್ಟ್ ಕಂಪನಿಯ ಗೌರವ್.
ಬೆಂಗಳೂರಿಗೆ ಸೀಮಿತಗೊಂಡಿದ್ದ ವೈಲ್ಡ್ ಕ್ರಾಫ್ಟ್ ಸಂಸ್ಥೆಯನ್ನು 2009ರಲ್ಲಿ ಭೌಗೋಳಿಕವಾಗಿ ಭಾರತದಾದ್ಯಂತ ವಿಸ್ತರಿಸಲು ತಂಡ ನಿರ್ಧರಿಸಿದೆ. ಆರಂಭದಲ್ಲಿ ಬೆಂಗಳೂರಿನಲ್ಲಿ ಆರಂಭಗೊಂಡಿದ್ದ ವೈಲ್ಡ್ ಕ್ರಾಫ್ಟ್ ಸಂಸ್ಥೆ, ಮಹಾನಗರಗಳಾದ ಹೈದರಾಬಾದ್, ಚೆನ್ನೈ ಮತ್ತು ಪುಣೆ ನಗರಗಳಿಗೆ ವಿಸ್ತಾರವಾಗುವ ಉದ್ದೇಶವನ್ನು ಹೊಂದಿದೆ. ಗ್ರಾಹಕರ ಅಭಿಪ್ರಾಯಗಳನ್ನು ಸಂಗ್ರಹಿಸಿದ ನಂತರವೇ ಭೌಗೋಳಿಕ ಬಾಗಗಳನ್ನು ವಿಸ್ಥರಿಸುವ ಕಾರ್ಯಕ್ಕೆ ನಿರ್ಧರಿಸಲಾಗಿದೆ ಎಂದು ಗೌರವ್ ಹೇಳುತ್ತಾರೆ.
ವೈಲ್ಡ್ ಕ್ರಾಫ್ಟ್ ಸಂಸ್ಥೆಗೆ ವಿದೇಶಿ ಬಂಡವಾಳ ಹೂಡಿಕೆ
ಬೆಂಗಳೂರಿನ ಸಣ್ಣದೊಂದು ಗ್ಯಾರೇಜ್‌ನಲ್ಲಿ ಆರಂಭಗೊಂಡಿದ್ದ ವೈಲ್ಡ್ ಕ್ರಾಫ್ಟ್, ನಲ್ಲಿ ವಿದೇಶಿ ಬಂಡವಾಳ ಹೂಡಿಕೆಯಾಗಿದೆ. ಸಿಕ್ವೋಯ ಕ್ಯಾಪಿಟಲ್ ಇಂಡಿಯಾ ಅಡ್ವೇಸರ್ ಸಂಸ್ಥೆಯ ಡೈರೆಕ್ಟೆರ್ ಡಿ.ವಿ. ರವಿಶಂಕರ್ ಹೇಳುವ ಪ್ರಕಾರ, 2013ರಲ್ಲಿ ವೈಲ್ಡ್ ಕ್ರಾಫ್ಟ್ ಬೆಳವಣಿಗೆ ಮತ್ತು ಬದಲಾದ ಮಾರುಕಟ್ಟೆಯ ಗತಿಯನ್ನು ನೋಡಿ ಸಿಕ್ವೋಯ ಕ್ಯಾಪಿಟಲ್ ಸಂಸ್ಥೆಯು 60 ಕೋಟಿ ಬಂಡವಾಳ ಹೂಡಿಕೆಯನ್ನು ಮಾಡಲು ಮುಂದಾಗಿದೆ. ವೈಲ್ಡ್ ಕ್ರಾಫ್ಟ್ ಸಂಸ್ಥೆಯ ಮಾರುಕಟ್ಟೆ ಬಗ್ಗೆ ತಿಳಿದಿದ್ದು, ಉದ್ಯಮವನ್ನು ಅರ್ಥ ಮಾಡಿಕೊಂಡು ಮುನ್ನಡೆಸುವ ಶಕ್ತಿ ಇದ್ದು, ಉತ್ಪನ್ನಗಳ ಗುಣಮಟ್ಟವನ್ನು ಕಾಯ್ದುಕೊಳ್ಳುವ ವಿಶ್ವಾಸ ಇದೆ ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.
ವೈಲ್ಡ್ ಕ್ರಾಫ್ಟ್ ಸಂಸ್ಥೆ ಕಳೆದ ಎರಡು ವರ್ಷಗಳಲ್ಲಿ ಗಮನಾರ್ಹ ಬೆಳವಣಿಗೆಯನ್ನು ಕಂಡಿದೆ. ಮಾರುಕಟ್ಟೆಯಲ್ಲಿ ಬಹುದೊಡ್ಡ ನಾಯಕತ್ವವನ್ನು ಮುನ್ನಡೆಸುವ ಸಾಮರ್ಥ್ಯ ಕೂಡ ಹೊಂದಿದೆ. ಮುಂದಿನ ಎರಡು ವರ್ಷದ ಬಗ್ಗೆ ಚಿಂತಿಸದೆ ಮುಂದಿನ 20 ವರ್ಷಗಳನ್ನು ಗಮನದಲ್ಲಿಟ್ಟುಕೊಂಡು ಕಾರ್ಯತಂತ್ರ ರೂಪಿಸುವ ಉದ್ದೇಶ ಹೊಂದಲಾಗಿದೆ ಎನ್ನುತ್ತಾರೆ ವೈಲ್ಡ್ ಕ್ರಾಫ್ಟ್ ಸಂಸ್ಥೆಯ ಗೌರವ್ ಹಾಗೂ ಸಿದ್ದಾರ್ಥ್.
ವರ್ಷಗಳು ಉಳಿದರೂ ಕೂಡ, ವೈಲ್ಡ್ ಕ್ರಾಫ್ಟ್ ಸಂಸ್ಥೆಯ ಮೌಲ್ಯ ಹಾಗೂ ಚಿಂತನೆಗಳಲ್ಲಿ ಯಾವುದೇ ಬದಲಾವಣೆಗಳು ಆಗಿಲ್ಲ. ಇಂದಿಗೂ ಕೂಡ ತನ್ನದೇ ಆದ ಮೌಲ್ಯವನ್ನು ಇದು ಉಳಿಸಿಕೊಂಡಿದೆ. ಒಂದು ಉತ್ಸಾಹಿ, ಹುರುಪಿನ ತಂಡವನ್ನು ಹೊಂದಿದ್ದು, ಪ್ರತಿಯೊಬ್ಬ ಸದಸ್ಯನೂ ಉದ್ಯಮ ಶೀಲತೆ ಹಾಗೂ ವ್ಯಾಪಾರ ಮಾಲೀಕತ್ವದ ನಿಯಂತ್ರಣವನ್ನು ಹೊಂದಿದೆ. ಸಾಮಾಜಿಕ ಹಾಗೂ ಮಾರುಕಟ್ಟೆಯ ಅನುಗುಣ, ಗ್ರಾಹಕರ ಬೇಕು ಬೇಡವನ್ನು ಅರ್ಥ ಮಾಡಿಕೊಂಡು ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಪೂರಕವಾಗಿ ಅತ್ಯಾಧುನಿಕ ಉತ್ಪನ್ನಗಳು ಬಿಡುಗಡೆ ಮಾಡುವ ಉದ್ದೇಶವನ್ನು ವೈಲ್ಡ್ ಕ್ರಾಫ್ಟ್ ಹೊಂದಿದೆ.
ಸ್ವದೇಶಿ ನಿರ್ಮಿತ ವೈಲ್ಡ್ ಕ್ರಾಫ್ಟ್ ಉತ್ಪನ್ನಗಳು
ನಮ್ಮ ತಂಡ ಉತ್ಪನ್ನಗಳ ಗುಣಮಟ್ಟದಮೇಲೆ ಗಮನ ಕೇಂದ್ರಿಕರಿಸಿದ್ದು ಭಾರತೀಯ ಹೊರಾಂಗಣ ಗೇರ್ ಬ್ರಾಂಡ್ ನಿರ್ಮಾಣದ ಬಗ್ಗೆ ಭಾವೋದ್ರಿಕ್ತವಾಗಿದ್ದೆವೆ. ವೈಲ್ಡ್ ಕ್ರಾಫ್ಟ್ ಸಂಸ್ಥೆಯು ವರ್ಷದಿಂದ ವರ್ಷಕ್ಕೆ 50 ರಿಂದ 60 ರಷ್ಟು ಪ್ರಗತಿಯನ್ನು ಕಾಣುತ್ತಿದೆ, ಸಂಸ್ಥೆಯ ಉತ್ಪನ್ನಗಳು ವರ್ಷಕ್ಕೆ ಎರಡು ಮಿಲಿಯನ್‌ಗೂ ಅಧಿಕ ಪ್ರಮಾಣದಲ್ಲಿ ಮಾರಾಟವಾಗುತ್ತಿದ್ದು ಸಂಸ್ಥೆಯ ಪ್ರಗತಿಗೆ ಹಿಡಿದ ಕೈಗನ್ನಡಿಯಾಗಿದೆ ಎನ್ನುತ್ತಾರೆ ಗೌರವ್.
ಭವಿಷ್ಯದ ಯೋಜನೆಗಳು
ವೈಲ್ಡ್‌ಕ್ರಾಫ್ಟ್ ಸಂಸ್ಥೆಯು ಈಗ ಮಧ್ಯಪ್ರಾಚ್ಯ ಮತ್ತು ಆಗ್ನೇಯ ಮಾರುಕಟ್ಟೆಗಳಲ್ಲಿ ಜಾಗತಿಕ ಮಟ್ಟದಲ್ಲಿ ವಿಸ್ಥರಿಸಲು ಯೋಚಿಸುತ್ತಿದ್ದು, ನಾವು ಭಾರತೀಯ ಹವಾಮಾನದಲ್ಲಿ ಹೋಲುವಮಾರುಕಟ್ಟೆಗಳನ್ನು ಎದುರು ನೋಡುತಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ಸಾಧನಗಳನ್ನು ಉತ್ಪಾದಿಸುವ ಉದ್ದೇಶ ಇದೆ ಎನ್ನುತ್ತಾರೆ ಗೌರವ್.