ಭಾರತದ ಮೊಬೈಲ್​ ಮಾರುಕಟ್ಟೆಯ ಕಥೆ ಮತ್ತು ಅದರ ಬೆಳವಣಿಗೆ...

ಟೀಮ್​ ವೈ.ಎಸ್​. ಕನ್ನಡ

ಭಾರತದ ಮೊಬೈಲ್​ ಮಾರುಕಟ್ಟೆಯ ಕಥೆ ಮತ್ತು ಅದರ ಬೆಳವಣಿಗೆ...

Friday November 18, 2016,

2 min Read

ಭಾರತದಲ್ಲಿ ಮೊಬೈಲ್ ಕ್ರಾಂತಿ ಆದ ದಿನದಿಂದ ಇಲ್ಲಿ ತನಕ ಸಾಕಷ್ಟು ಬೆಳವಣಿಗೆಗಳು ನಡೆದು ಬಿಟ್ಟಿವೆ. ಸ್ಮಾರ್ಟ್ ಫೋನ್ ಬಳಕೆಯಿಂದ ಜನ ಕೂಡ ಸ್ಮಾರ್ಟ್ ಆಗುತ್ತಿದ್ದಾರೆ. ಟೆಕ್ ಫ್ರೆಂಡ್ಲಿ ಜನರಿಂದ ಉದ್ಯಮ ಕೂಡ ಬೆಳೆಯುತ್ತಿದೆ. ಸ್ಟಾರ್ಟ್ಅಪ್ ಮತ್ತು ಉದ್ಯಮಗಳ ವ್ಯಾಪ್ತಿ ದೊಡ್ಡದಾಗುತ್ತಿದೆ. ಹೀಗಂತ ಹೇಳಿಕೊಂಡು ಮಾತು ಆರಂಭಿಸಿದ್ದು VMAX ಸಹ ಸಂಸ್ಥಾಪಕ ಮತ್ತು ಸಿಇಒ ದೀಪಕ್ ಖುರಾನ. ದೆಹಲಿಯಲ್ಲಿ ನಡೆಯುತ್ತಿರುವ ಮೊಬೈಲ್ ಸ್ಪಾರ್ಕ್ 2016ರಲ್ಲಿ ದೀಪಕ್ ಖುರಾನಾ ಯುವರ್ ಸ್ಪೋರಿ ಜೊತೆಗೆ ಮಾತಿಗಿಳಿದ್ರು.

“ ಒಬ್ಬ ಉದ್ಯಮಿಯಾಗಿ ನಾನು ಹಲವು ವಿದದ ಉದ್ಯಮಿಗಳನ್ನು ಬೇಟಿ ಮಾಡಿದ್ದೇನೆ. ಕಳೆದ ಆರು ತಿಂಗಳಿನಲ್ಲಿ ನಾನು ಹಲವು ಸ್ಟಾರ್ಟ್ ಅಪ್​ಗಳನ್ನು ನೋಡಿದ್ದೇನೆ. ಅದ್ರ ಸಂಸ್ಥಾಪಕರನ್ನು ಮಾತನಾಡಿದ್ದೇನೆ. ಅವರ ಸಮಸ್ಯೆಗಳ ಕುರಿತು ಚರ್ಚೆ ಮಾಡಿದ್ದೇನೆ. ಸ್ಟಾರ್ಟ್ ಅಪ್ ಈಗ ಭಾರತೀಯ ಗ್ರಾಹಕರ ಆಸೆಗಳನ್ನು ಪೂರೈಸುವತ್ತ ದಿಟ್ಟ ಹೆಜ್ಜೆ ಇಡುತ್ತಿದೆ. ”
- ದೀಪಕ್ ಖುರಾನಾ, VMAX ಸಹ ಸಂಸ್ಥಾಪಕ ಮತ್ತು ಸಿಇಒ
image


ಮೊಬೈಲ್ ಜಗತ್ತು ಎಲ್ಲದಕ್ಕಿಂತ ವೇಗವಾಗಿ ಬೆಳೆಯುತ್ತಿದೆ. ಇವತ್ತು ಇರುವ ತಂತ್ರಜ್ಞಾನ ಇನ್ನೆರಡು ವರ್ಷಗಳಲ್ಲಿ ಇರುವುದಿಲ್ಲ. ಭಾರತವನ್ನು ಮೊದಲು ಚೆನ್ನಾಗಿ ಅರ್ಥೈಸಿಕೊಂಡರೆ ಮಾತ್ರ ಇಲ್ಲಿರುವ ಗ್ರಾಹಕರನ್ನು ಅರ್ಥಮಾಡಿಕೊಳ್ಳಬಹುದು. ಭಾರತದಲ್ಲಿರುವ ಗ್ರಾಹಕರನ್ನು ದೀಪಕ್ ಖುರಾನಾ ಮೂರು ವಿಭಾಗಗಳಲ್ಲಿ ವಿಂಗಡಿಸಿದ್ದಾರೆ.

- ಭಾರತ 3- ಶೇಕಡಾ 55 ರಷ್ಟು ಗ್ರಾಹಕರು- 650 ಮಿಲಿಯನ್ ಜನರು- ಮಾಸಿಕ ಆದಾಯ 1500 ರೂಪಾಯಿ

- ಭಾರತ 2- ಶೇಕಡಾ 30 ರಷ್ಟು ಗ್ರಾಹಕರು- 450 ಮಿಲಿಯನ್ ಜನರು- ಮಾಸಿಕ ಆದಾಯ 8000 ರೂಪಾಯಿ

- ಭಾರತ 1- ಶೇಕಡಾ 15 ರಷ್ಟು ಜನರು

ಭಾರತೀಯ ಗ್ರಾಹಕರ ಸರಾಸರಿ ಆದಾಯ ತುಂಬಾ ಕಡಿಮೆ ಇದೆ. ಭಾರತ 3 ಮಾರುಕಟ್ಟೆಯಲ್ಲಂತೂ ಇದು ಸಿಕ್ಕಾ ಪಟ್ಟೆ ಕಡಿಮೆ ಇದೆ. ಹೀಗಾಗಿ ಡಿಜಿಟಲ್ ಕಂಪನಿಗಳ ಗಮನವೆಲ್ಲಾ ಚಿಕ್ಕದಾಗಿರುವ ಭಾರತ 1 ಮಾರುಕಟ್ಟೆಯ ಮೇಲೆ ಮಾತ್ರ ಇದೆ.

ಇನ್ನು ಮೊಬೈಲ್​ಗಳ ಖರೀದಿ ಬಗ್ಗೆಯೂ ದೀಪಕ್ ತನ್ನದೇ ಅಭಿಪ್ರಾಯವನ್ನು ಮಂಡಿಸುತ್ತಾರೆ. ಶೇಕಡಾ 55ರಷ್ಟು ಗ್ರಾಹಕರು ಸ್ಮಾರ್ಟ್ ಫೀಚರ್ ಫೋನ್​ಗಳ ಬಳಕೆ ಮಾಡುತ್ತಾರೆ. ಭಾರತ 2 ಮಾರುಕಟ್ಟೆಯಲ್ಲಿ 15000ಕ್ಕಿಂತ ಕಡಿಮೆ ಫೋನ್​ಗಳಿವೆ. ಭಾರತ 1ರ ಬಳಕೆದಾರರು ಕಡಿಮೆ ಇದ್ದರೂ, ಈ ಗ್ರಾಹಕರು 15000 ರೂಪಾಯಿಗಳಿಗಿಂತ ಅಧಿಕೆ ಬೆಲೆಯ ಫೋನ್​ಗಳತ್ತ ಆಕರ್ಷಿತರಾಗುತ್ತಾರೆ. ಹೀಗಾಗಿ ಭಾರತದಲ್ಲಿರುವ ಬಹುತೇಕ ಮೊಬೈಲ್ ಆ್ಯಪ್​ಗಳು ಭಾರತ 1 ಮಾರುಕಟ್ಟೆಯ ಮೇಲೆ ಹೆಚ್ಚು ಕೇಂದ್ರೀಕೃತವಾಗಿದೆ.

“ ಒಬ್ಬ ಉದ್ಯಮಿಯಾಗಿ ನಾನು ಆ್ಯಪ್ ಬಿಲ್ಡ್ ಮಾಡುವಾಗ ಭಾರತ 3 ಮಾರುಕಟ್ಟೆಯ ಮೇಲೆ ಹೆಚ್ಚು ಗಮನ ನೀಡಲು ಬಯಸುತ್ತೇನೆ. ಆದ್ರೆ ಇದು ಅಷ್ಟು ಸುಲಭವಾಗಿಲ್ಲ. ಈ ಕೆಟಗರಿಯನ್ನು ನಾವು ಮುಟ್ಟಬೇಕು ಅಂದ್ರೆ ಅದಕ್ಕೆ ವಿಭಿನ್ನ ಪ್ರಯತ್ನ ಇರಲೇ ಬೇಕು. ”
- ದೀಪಕ್ ಖುರಾನಾ, VMAX ಸಹ ಸಂಸ್ಥಾಪಕ ಮತ್ತು ಸಿಇಒ

ಭಾರತದಲ್ಲಿ ಮೊಬೈಲ್ ಮತ್ತು ಆ್ಯಪ್ ಬಳಕೆಯ ವಿಧಾನವ ಮತ್ತು ಗ್ರಾಹಕರನ್ನು ಹಿಡಿದಿಡುವ ಕೆಲಸ ಸುಲಭದಲ್ಲ. ಮುಂದಿನ ದಿನಗಳಲ್ಲಿ ಭಾರತದ ಸ್ಥಿತಿ ಬದಲಾಗುತ್ತದೆ. ಮೊಬೈಲ್ ಕ್ಷೇತ್ರದಲ್ಲಿ ಮತ್ತಷ್ಟು ಮ್ಯಾಜಿಕ್ ನಡೆಯಲಿದೆ ಅನ್ನುವ ವಿಶ್ವಾಸದ ಜೊತೆಗೆ ಮಾತು ಮುಗಿಸಿದ್ರು ದೀಪಕ್ ಖುರಾನಾ.

ಇದನ್ನು ಓದಿ:

1. 'ಜನಸಾಮಾನ್ಯರಿಗಾಗಿ ಜನ್ಮತಳೆಯುವ ಉದ್ಯಮಗಳಿಗೆ ಸರ್ಕಾರದ ನೆರವು' - ರಾಜೀವ್ ಬನ್ಸಲ್ ಅಭಯ

2. ಸ್ಮಾರ್ಟ್​ ಇದ್ದರಷ್ಟೇ ಸಾಕಾಗೋದಿಲ್ಲ- ದೆಹಲಿ-ಎನ್​ಸಿಆರ್​ನಲ್ಲಿ ಹುಟ್ಟಿದ ಮೊಬೈಲ್​ ಆ್ಯಪ್​ಗಳ ಕಥೆಯನ್ನೂ ಕೇಳಿ..!

3. ಸೈಕಲ್ ಸವಾರಿ ಮಾಡುತ್ತಲೇ ಚೆನ್ನೈ ನಗರದ ರಕ್ಷಣೆಗಿಳಿದ ಖಾಕಿ ಪಡೆ..