ಗಿಡವಾಗಿ ನೆಡಬಲ್ಲ ಪೆನ್ ಗಳಿಂದ ಭವಿಷ್ಯವನ್ನು ಮತ್ತಷ್ಟು ಹಸಿರಾಗಿಸುವ ದಾರಿಯಲ್ಲಿ ನಡೆದಿದೆ ಭೂಭನೇಶ್ವರದ ಈ ಸ್ಟಾರ್ಟ್ ಅಪ್.

ಓಡಿಸ್ಸಾ ಮೂಲದ ಲೀಖನ್, ಯೂಸ್ ಅಂಡ್ ಥ್ರೊ ಪೆನ್ ಗಳನ್ನು ತಯಾರಿಸುತ್ತಿದ್ದು, ತರಕಾರಿ ಮತ್ತು ಹಣ್ಣುಗಳ ಬೀಜಗಳನ್ನು ಅದರಲ್ಲಿ ಅಳವಡಿಸುತ್ತಿದೆ. ಇದು ಮುಂದೆ ಚಿಗುರೊಡೆಯಲ್ಪಟ್ಟು ಮರವಾಗುತ್ತದೆ.

ಗಿಡವಾಗಿ ನೆಡಬಲ್ಲ ಪೆನ್ ಗಳಿಂದ ಭವಿಷ್ಯವನ್ನು ಮತ್ತಷ್ಟು ಹಸಿರಾಗಿಸುವ ದಾರಿಯಲ್ಲಿ ನಡೆದಿದೆ ಭೂಭನೇಶ್ವರದ ಈ ಸ್ಟಾರ್ಟ್ ಅಪ್.

Tuesday July 16, 2019,

2 min Read

ನಮ್ಮ ಪರಿಸರವು ಈಗ ಬೆಳೆಯುತ್ತಿರುವ ರೀತಿಯನ್ನು ನೋಡಿದರೆ, ಪರಿಸರ ಸ್ನೇಹಿ ಜೀವನಶೈಲಿಯು ಒಂದು ಟ್ರೆಂಡ ಆಗಿ ಬದಲಾಗುತ್ತ ಜಗತಿನಾದ್ಯಂತ ವೇಗ ಪಡಿಯುತ್ತಿದೆ.


ಹಸಿರಿನ ಉತ್ಪನ್ನಗಳಿಗೆ ಬೇಡಿಕೆ ವ್ಯಾಪಕವಾಗುತ್ತಿದ್ದು, ಇದನ್ನು ತಯಾರಿಸುವುದು ಅಸಾಧ್ಯವಾದದ್ದೇನು ಆಗಿರುವುದಿಲ್ಲ. ಇದು ಪ್ಲಾಸ್ಟಿಕ್ ನ ತ್ಯಾಜ್ಯವನ್ನು ಕಡಿಮೆಗೊಳಿಸುವಲ್ಲಿ ಸಹಾಯಕಾರಿಯಾಗಿದ್ದು ನಾವು ಬದುಕುತ್ತಿರುವ ಪರಿಸರದ ಗುಣಮಟ್ಟವನ್ನು ವೃದಿಸುತ್ತದೆ.


ನಾವು ಇಂತಹ ಕೆಲಸಗಳ ನೇತ್ರತ್ವದ ಬಗ್ಗೆ ಮಾತನಡುತ್ತಿರುತ್ತೇವೆ,ಆದರೆ ಡಿಟೋರ್ ಒಡಿಶಾ ಒಂದು ಹೆಜ್ಜೆ ಮುಂದೆ ಹೋಗಿ ತನ್ನದೆ ಒಂದು ದಾರಿಯಲ್ಲಿ ಬದಲಾವಣೆಯನ್ನು ತರುತ್ತಿದೆ. ಈ ಒಂದು ಸ್ಟಾರ್ಟಅಪ್ ಪ್ರವಾಸಿಗರಿಗೆ ರಾಜ್ಯದ ರಾಜಧಾನಿಯಾದ ಭುಬನೇಶ್ವರದ ಪಾರಂಪರಿಕ ಗುರುತುಗಳ ಬಗ್ಗೆ ಮಾರ್ಗದರ್ಶನ ನೀಡುತ್ತದೆ.


Detour

ಊರಿಗೆ ಪ್ರವಾಸಕ್ಕೆ ಬಂದ ಪ್ರಯಾಣಿಕರೆಲ್ಲರಿಗೂ ನೆಡಬಹುಬಹುದಾದ ಪೆನ್ ಗಳನ್ನು ವಿತರಿಸಲಾಯಿತು (ಚಿತ್ರ:ಎನ್ ಡಿ ಟಿ ವಿ)

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೇಸ್ ನ ವರದಿಯ ಪ್ರಕಾರ, ಇತ್ತೀಚೆಗೆ ಆದ ಸೈಕ್ಲಾನ್ ಫ್ಯಾನಿಯ ಪರಿಣಾಮದ ನಂತರ , ಡಿಟೋರ್ ಒಡಿಶಾ 124 ನೇಯ ಎಕಮ್ರಾ ವಾಕ್ಸ ಟೌನ್ ಸರ್ಕಿಟ್, ಅನ್ನು ಸಂಘಟಿಸಿತ್ತು. ಈ ಸಮಯದಲ್ಲಿ ಸಂಘಟಕರು ಟೂರಿಸ್ಟಗಳಿಗೆ ಪರಿಸರಸ್ನೇಹಿ ಪೆನ್ ಗಳನ್ನು ಸ್ಮಾರಕ ಚಿಹ್ನೆಯಾಗಿ ವಿತರಿಸಿದರು.


ಈ ಪೆನ್ ಗಳ ಆಸಕ್ತಿದಾಯಕ ವಿಷಯವೆಂದರೆ ಇವು ತರಕಾರಿ, ಹಣ್ಣು ಹಾಗೂ ಹೂವಿನ ಬೀಜಗಳನ್ನು ಹೊಂದಿರುತ್ತವೆ.


ಈ ಪೆನ್ ಗಳು ಲಿಖನ್ ಅವರಿಂದ ತಯಾರಿಸಲ್ಪಡುತ್ತವೆ. ಈ ಒಂದು ಸ್ಟಾರ್ಟಅಪ್ ಒಡಿಸಾದ ಸೆಂಚುರಿಯನ್ ಯುನಿವರ್ಸಿಟಿ ವಿಧ್ಯಾರ್ಥಿಗಳಾದ ಪ್ರೇಮ ಶಂಕರ್ ಪಾಂಡೆ ಮತ್ತು ಎಮ್ ಡಿ ರಾಝಾ ಅವರಿಂದ ಶುರುವಾಯಿತು.


ಎನ್ ಡಿಟಿವಿಯ ಜೊತೆ ಮಾತನಾಡುತ್ತ 21 ವರ್ಷದ ಪ್ರೇಮ ಶಂಕರ್ ಹೇಳಿದ್ದು,


“ನಾವು ಯೂಸ್ ಅಂಡ್ ಥ್ರೊ ಪೆನ್ ಗಳಿಗೆ ಪರಿಸರಸ್ನೇಹಿ ಪರ್ಯಾಯವನ್ನು ತಯಾರಿಸಿದ್ದು, ಇವು ಕೂಡ ಪ್ಲಾಸ್ಟಿಕ್ ರಿಪೀಲ್ ಗಳನ್ನು ಹೊಂದಿವೆ, ಆದರೆ ಪೆನ್ ಗಳ ದೇಹವನ್ನು ರದ್ದಿ ಪೇಪರ್ ಗಳ ಮೂಲಕ ಮಾಡಲಾಗುತ್ತದೆ. ಆದ್ದರಿಂದ ಸಾಮಾನ್ಯ ಪೆನ್ ಗಳಿಗೆ ಇದನ್ನು ಹೋಲಿಸಿದಾಗ ಇವು ಕೇವಲ 10% ಪ್ಲಾಸ್ಟಿಕ್ ಹೊಂದಿರುತ್ತವೆ.ಈ ಯೂಸ್ ಅಂಡ್ ಥ್ರೊ ಪೆನ್ ಗಳು ಸಾಮಾನ್ಯ ಪೆನ್ ಗಳಂತಲ್ಲದೆ ಇವುಗಳನ್ನು ಹುಂಡಿ ಅಥವಾ ಮಣ್ಣಿನಲ್ಲಿ ಎಸೆದು ಪೋಷಿಸಬಹುದು, ಇವು ಒಂದು ವಾರದ ಒಳಗೆ ಸಸಿಯಾಗಿ ಚಿಗುರೊಡೆಯಲ್ಪಡುತ್ತವೆ.”


ಯುನಿವರ್ಸಿಟಿ ಕ್ಯಾಂಪಸ್ ನಲ್ಲಿ ಉತ್ಪತಿಯಾಗುವ ಪೇಪರ್ ನ ತ್ಯಾಜ್ಯವನ್ನು ನಿಭಾಯಿಸುವುದು ಈ ಸ್ಟಾರ್ಟಅಪ್ ನ ಮುಖ್ಯ ಗುರಿಯಾಗಿತ್ತು. ನಂತರ ಪ್ರೇಮ ಮತ್ತು ಎಮ್ ಡಿ ರಾಝಾ ಹೊಸ ವಿಚಾರದೊಂದಿಗೆ ಪೇಪರ್ ಪೆನ್ಸಿಲ್ ಗಳನ್ನು ಉತ್ಪಾದಿಸಲು ನಿರ್ಧರಿಸಿದರು, ಮುಂದೆ ಇದೆ ಪರಿಕಲ್ಪನೆಯನ್ನು ಬಳಸಿಕೊಂಡು ಪೇಪರ್ ಪೆನ್ ಗಳನ್ನು ಅಭಿವೃದ್ದಿ ಪಡಿಸಿದರು.


Pen

ಹಳೆ ಸುದ್ದಿ ಪತ್ರಿಕೆಗಳಿಂದ(ರದ್ದಿ) ಮಾಡಲ್ಪಟ್ಟ ನೆಡಬಹುದಾದ ಪೆನ್ ಗಳು (ಚಿತ್ರ:ಎನ್ ಡಿ ಟಿ ವಿ)

ನೇತ್ರತ್ವದ ಬಗ್ಗೆ ಮಾತನಾಡುತ್ತ, ಪ್ರೇಮ ಅವರು ಹೇಳಿದ್ದು,


“ಕಾಲೇಜು ದಿನಗಳಲ್ಲಿ ನಾನು ಮತ್ತು ನನ್ನ ಗೆಳೆಯ ಒಬ್ಬ ಸೇರಿ ತಿನ್ನುವ ವಾಟರ್ ಬಾಲ್ ಗಳನ್ನು ಮಾಡಲು ಪ್ರಯತ್ನಿಸಿದ್ದೇವು, ಅವು ಒಂದೆ ಸಲ ಬಳಸುವ ನೀರಿನ ಬಾಟಲ್ ಗಳಿಗೆ ಪರಿಸರಸ್ನೇಹಿ ಪರ್ಯಾಯಗಳಾಗಿದ್ದವು, ಈ ಪ್ರಾಜೇಕ್ಟ್ ಫೇಲ್ ಆದ ನಂತರ ಕೊನೆ ವರ್ಷದಲ್ಲಿ ನಮಗೇ ಹೊಸದಾದ ಮತ್ತು ಬೆಲೆಯುಳ್ಳಪ್ರಾಜೇಕ್ಟ್ ಸಲ್ಲಿಸಲು ಕೇಳಿಕೊಂಡರು. ನಮ್ಮ ಜನಾಂಗದಲ್ಲಿರುವ ಸಮಸ್ಯೆಗಳಿಗೆ ಪರಿಹಾರ ರೂಪಿಸಲು ವಾರಗಳ ಕಾಲ ಸಮಯ ನೀಡಲಾಯಿತು ಅದೇ ನಮ್ಮ ಪ್ರಾಜೇಕ್ಟ್ ಆಗಿತ್ತು.”


ಈ ಪೆನ್ ನ್ನು ಸಾಮಾನ್ಯ ಉತ್ಪನ್ನಗಳಾದ ಮರುಬಳಕೆಯ ಪೇಪರ್, ಅಂಟು, ರೀಫಿಲ್ ಮತ್ತು ಬೀಜಗಳಿಂದ ತಯಾರಿಸಲಾಗುತ್ತದೆ. ಸ್ಥಾಪಕರು ಪೆನ್ ನ ಉತ್ಪಾದನೆಗಾಗಿ 28,000 ರೂ ಬೆಲೆಬಾಳುವ ಹೊಸ ಯಂತ್ರವನ್ನು ವಿನ್ಯಾಸಗೊಳಿಸಿದ್ದು. ಇದು ಗಂಟೆಗೆ 200 ಪೆನ್ ಗಳನ್ನು ಉತ್ಪಾದಿಸುತ್ತದೆ. ಸಾಮಾನ್ಯವಾದ ಮರುಬಳಕೆಯ ಪೆನ್ ಗಳು 5 ರೂಪಾಯಿ ಬೆಲೆಬಾಳಿದರೆ, ನೆಡಬಲ್ಲ ಪೆನ್ ಗಳು 7 ರೂಪಾಯಿ ಬೆಲೆಬಾಳುತ್ತವೆ.