ಕೊರೊನಾವೈರಸ್ ಮಧ್ಯೆ ಹಳ್ಳಿಗಳಿಗೆ ಮರಳಲು ಸಾಧ್ಯವಾಗದ ಜನರಿಗೆ ವಸತಿ ಸೌಲಭ್ಯ ಕಲ್ಪಿಸುತ್ತದೆ ಬಿಹಾರ ಸರ್ಕಾರ

ಕೊರೊನಾವೈರಸ್ ಸ್ಪೋಟಗೊಂಡ ಹಿನ್ನಲೆ ಹಳ್ಳಿಗಳಿಗೆ ಮರಳಲು ಸಾಧ್ಯವಾಗದ ಜನರನ್ನು ಇರಿಸುವ ಸಲುವಾಗಿ, ಬಿಹಾರದಾದ್ಯಂತ ಸರ್ಕಾರವು 202 ಶಾಲೆಗಳನ್ನು ಪ್ರತ್ಯೇಕ ಮನೆಗಳನ್ನಾಗಿ ಪರಿವರ್ತಿಸಿದೆ.

ಕೊರೊನಾವೈರಸ್ ಮಧ್ಯೆ ಹಳ್ಳಿಗಳಿಗೆ ಮರಳಲು ಸಾಧ್ಯವಾಗದ ಜನರಿಗೆ ವಸತಿ ಸೌಲಭ್ಯ ಕಲ್ಪಿಸುತ್ತದೆ ಬಿಹಾರ ಸರ್ಕಾರ

Sunday March 29, 2020,

2 min Read

ಬಿಹಾರ ಸರ್ಕಾರ ಕಳೆದ ಎರಡು ಮೂರು ದಿನಗಳಲ್ಲಿ ಸರ್ಕಾರಿ ಶಾಲೆಗಳನ್ನು ಪ್ರತ್ಯೇಕ ಸೌಲಭ್ಯ(ಕ್ವಾರಂಟೈನ್ ಹೋಮ್)ಗಳಾಗಿ ಪರಿವರ್ತಿಸುವಂತೆ ಎಲ್ಲಾ ಜಿಲ್ಲಾ ನ್ಯಾಯಾಧೀಶರಿಗೆ ಸೂಚನೆ ನೀಡಿದೆ. ರಾಜ್ಯ ಮತ್ತು ದೇಶದಲ್ಲಿ ಹೆಚ್ಚುತ್ತಿರುವ ಕೊರೊನಾವೈರಸ್ ಪ್ರಕರಣಗಳನ್ನು ಎದುರಿಸಲು ಈ ಕ್ರಮ ಕೈಗೊಳ್ಳಲಾಗಿದೆ.


ದೇಶದ ವಿವಿಧ ಭಾಗಗಳಿಂದ ಜನರು ಆಗಮಿಸುತ್ತಿರುವುದರಿಂದ ತಮ್ಮ ಗ್ರಾಮಗಳಿಗೆ ಮರಳಲು ವಿಫಲರಾಗಿದ್ದಾರೆಂದು ತಿಳಿದ ನಂತರ ಶಾಲೆಗಳನ್ನು ಪ್ರತ್ಯೇಕ ಸೌಲಭ್ಯಗಳಾಗಿ ಪರಿವರ್ತಿಸುವ ಆದೇಶವನ್ನು ಮಾಡಲಾಗಿದೆ. ಮಾರ್ಚ್ 27ರ ವರೆಗೆ ರಾಜ್ಯದಲ್ಲಿ 9 ಜನ ಕೋವಿಡ್-19 ಸೋಂಕಿತರು ಪತ್ತೆಯಾಗಿದ್ದು ಒಂದು ಸಾವು ಸಂಭವಿಸಿದೆ ಎಂದು ವರದಿಯಾಗಿದೆ. ಇದಲ್ಲದೆ ಸರ್ಕಾರವು ರಾಜ್ಯ-ವ್ಯಾಪಕ, ಎಲ್ಲಾ ಜಿಲ್ಲೆಗಳಿಗೆ, ಉಪವಿಭಾಗಗಳಿಗೆ ಮತ್ತು ಕೇಂದ್ರಕಾರ್ಯಾಲಯಗಳಿಗೂ ಲಾಕ್ ಡೌನ್ ಘೋಷಿಸಿದೆ.


"ಜನರು ಆರೋಗ್ಯಕರ ಭಾರತಕ್ಕೆ ಮನೆಯಲ್ಲಿಯೇ ಉಳಿಯಬೇಕು ಮತ್ತು ಕೋವಿಡ್-19 ಹರಡುವಿಕೆಯನ್ನು ಸಮುದಾಯ ಮಟ್ಟದಲ್ಲಿ ತಡೆಗಟ್ಟಬೇಕಾಗಿದೆ. ದೇಶದ ವಿವಿಧ ಭಾಗಗಳಿಂದ ತಮ್ಮ ಹಳ್ಳಿಗಳಿಗೆ ಮರಳುತ್ತಿರುವ ಜನರು ಶಾಲೆಗಳಲ್ಲಿ ವಾಸಿಸುತ್ತಿದ್ದಾರೆ," ಎಂದು ರಿಪಬ್ಲಿಕ್ ವರ್ಲ್ಡ್ಗೆ ಬಿಹಾರ್ ನ ಗೃಹಮಂತ್ರಿ ಅಮೀರ್ ಸುಭಾನಿ ಹೇಳಿದರು.


ಕೋವಿಡ್-19 ಬಗೆಗಿನ ಚರ್ಚೆಯ ಪ್ರಮುಖ ಸಭೆಯಲ್ಲಿ ಶುಕ್ರವಾರ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್. (ಚಿತ್ರಕೃಪೆ: ಹಿಂದೂಸ್ತಾನ್ ಟೈಮ್ಸ್)




ಇದರ ಪರಿಣಾಮವಾಗಿ, 101 ಪಂಚಾಯಿತಿಗಳಲ್ಲಿ ಶಾಲೆಗಳನ್ನು ಪ್ರತ್ಯೇಕ ಮನೆಗಳ (ಕ್ವಾರಂಟೈನ್) ಸೌಲಭ್ಯಗಳಾಗಿ ಪರಿವರ್ತಿಸಲಾಗಿದೆ. ಪ್ರತಿ ಪಂಚಾಯಿತಿಯಲ್ಲಿ ಎರಡು ಶಾಲೆಗಳನ್ನು ಪರಿವರ್ತಿಸಲಾಗಿದ್ದು, ಒಟ್ಟು ಸೌಲಭ್ಯಗಳ ಸಂಖ್ಯೆ 202 ಆಗಿದೆ. ವೈರಸ್ ರೋಗಲಕ್ಷಣಗಳನ್ನು ಅದರ ಪ್ರಾಥಮಿಕ ಹಂತದಲ್ಲಿ ಪ್ರದರ್ಶಿಸುವ ಸಂದರ್ಭದಲ್ಲಿ ಶಂಕಿತ ರೋಗಿಗಳಿಗೆ ಸುರಕ್ಷಿತವಾಗಿ ಅವಕಾಶ ಕಲ್ಪಿಸುವುದು ಇದರ ಉದ್ದೇಶ.


"ಜಿಲ್ಲೆಯಲ್ಲಿ ಕೋವಿಡ್-19 ಹರಡುವುದನ್ನು ತಡೆಯಲು ಸರ್ಕಾರವು ಸಾಮಾಜಿಕ ಅಂತರ ಮತ್ತು ಪ್ರತ್ಯೇಕತೆಯ ಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುತ್ತಿದೆ," ಎಂದು ಸಿವಿಲ್ ಸರ್ಜನ್ ಡಾ. ಪುರುಷೋತ್ತಮ್ ಕುಮಾರ್ ಅವರು ಹೇಳಿದ್ದಾರೆ, ವರದಿ ಎಡೆಕ್ಸ್ ಲೈವ್.


ಬಿಹಾರದ ಸ್ಥಳೀಯ ಜನರು ವೈದ್ಯರು, ವೈದ್ಯಕೀಯ ಅಧಿಕಾರಿಗಳು ಮತ್ತು ಜಿಲ್ಲಾ ಆರೋಗ್ಯ ಅಧಿಕಾರಿಗಳಿಂದ ಕೊರೊನಾವೈರಸ್ ಬಗ್ಗೆ ವೈದ್ಯಕೀಯ ಮಾಹಿತಿಯನ್ನು ಪಡೆಯಬಹುದು. ಜಿಲ್ಲಾಡಳಿತವು ಈ ಉದ್ದೇಶಕ್ಕಾಗಿ, ಹಂಟಿಂಗ್ ಲೈನ್ ಅನ್ನು ಅಭಿವೃದ್ಧಿಪಡಿಸಿದೆ, ಇದು ವೈರಸ್ ಶಂಕಿತರನ್ನು ಹುಡುಕುವ ಸಾಧನವಾಗಿದ್ದು, ಜೊತೆಗೆ ಆರೋಗ್ಯಕ್ಕೆ ಸಂಬಂಧಿಸಿದ ಮಾಹಿತಿ ಮತ್ತು ಸಲಹೆಯನ್ನು ನೀಡುತ್ತದೆ. ಹಂಟಿಂಗ್ ಲೈನ್ ಅನುಷ್ಠಾನದೊಂದಿಗೆ, ಯಾರಾದರೂ 06344-228442 ಅನ್ನು ಡಯಲ್ ಮಾಡಬಹುದು ಮತ್ತು ಐದು ಸಂಪರ್ಕಗಳಲ್ಲಿ ಒಂದಕ್ಕೆ ಸಿಗಬಹುದು.


ಮಾರ್ಚ್ 25 ರ ಹೊತ್ತಿಗೆ, ಶಂಕಿತ ಕೋವಿಡ್-19 ರೋಗಿಗಳಿಗೆ ಸಂಬಂಧಿಸಿದ 80 ಕ್ಕೂ ಹೆಚ್ಚು ಮಾಹಿತಿಗಳನ್ನು 48 ಗಂಟೆಗಳ ಒಳಗೆ ಹಂಟಿಂಗ್ ಲೈನ್ ಮೂಲಕ ವರದಿ ಮಾಡಲಾಗಿದೆ ಎಂದು ಶಸ್ತ್ರಚಿಕಿತ್ಸಕ ಹೇಳಿದರು. ರಾಪಿಡ್ ಆಕ್ಷನ್ ಟಾಸ್ಕ್ ಫೋರ್ಸ್‌ನ ವೈದ್ಯಕೀಯ ಸದಸ್ಯರನ್ನು ಹೊಸದಾಗಿ ಪರಿವರ್ತನೆಗೊಂಡ ಪ್ರತ್ಯೇಕ ಸೌಲಭ್ಯಗಳಿರುವಲ್ಲಿ ಶಂಕಿತ ಕೊರೊನಾವೈರಸ್ ರೋಗಿಗಳನ್ನು ಸ್ಥಳಾಂತರಿಸಲು ಇರಿಸಲಾಗಿದೆ ಎಂದು ಅವರು ಹೇಳಿದರು. ಪರಿಶೀಲನೆಗಾಗಿ ರಕ್ತದ ಮಾದರಿಗಳನ್ನು ಸಂಗ್ರಹಿಸಲು ತಂಡವು ವ್ಯವಸ್ಥೆ ಮಾಡುತ್ತಿದೆ .