ಮಧುಮೇಹ ರೋಗಿಗಳ ಆಶಾಕಿರಣ ಸ್ಮಾರ್ಟ್ ಸಾಕ್ಸ್..!
ಎನ್ಎಸ್ಆರ್
ಸ್ಮಾರ್ಟ್ ಜನರ ಆರೋಗ್ಯವನ್ನು ಮತ್ತಷ್ಟೂ ಸ್ಮಾರ್ಟ್ ಆಗಿ ಕಾಪಾಟಿಕಳ್ಳಲ್ಲು ಹೊಸ ಸಾಕ್ಸ್ವೊಂದು ಮಾರುಕಟ್ಟೆಗೆ ಬಂದಿದೆ. ಸ್ಮಾರ್ಟ್ ಜನರು ಮಾತ್ರ ಬಳಸಬಲ್ಲ ಸ್ಮಾರ್ಟ್ ಸಾಕ್ಸ್ ಇದಾಗಿದೆ. ಮಧುಮೇಹ ರೋಗಿಗಳಿಗೆ ಮತ್ತು ಉತ್ತಮ ಫಿಟ್ನೆಸ್ ಕಾಯ್ದುಕೊಳ್ಳಲ್ಲು ಬಯಸುವ ಜನರಿಗೆ ಈ ಸಾಕ್ಸ್ ಸಖತ್ ಸಹಾಯಕಾರಿಯಾಗಲಿದೆ.
ಮಧುಮೇಹ ರೋಗವೆಂದರೆ ಎಂತವರನ್ನು ಭಯಬೀಳಿಸುವಂತಹ ಮಹಾನ್ ರೋಗ, ಸಣ್ಣದಾಗಿ ಮನುಷ್ಯನನ್ನು ಕಾಡುವ ಮಹಾನ್ ರೋಗ. ಮಧುಮೇಹ ರೋಗಿಗಳು ದೇಹದ ಮೇಲೆ ಗಾಯಗಳಾದಾಗ ಎಚ್ಚರಿಕೆಯಿಂದ ಇರಬೇಕು. ಏಕೆಂದರೆ ಗಾಯ ವಾಸಿಯಾಗದಿದ್ದರೆ ಅದು ಗ್ಯಾಂಗ್ರೀನ್ ಆಗುವ ಭಯ ಇರುತ್ತದೆ. ಮಧುಮೇಹಿಗಳಿಗೆ ಗಾಯವಾದಾಗ ಕೆಲವು ಬಾರಿ ಆ ಜಾಗ ಸಂವೇದನೆ ಕಳೆದುಕೊಳ್ಳುತ್ತದೆ. ಅದರಲ್ಲೂ ಪಾದದಲ್ಲಿ ಗಾಯವಾದರೆ ಇನ್ನಷ್ಟು ಜಾಗ್ರತೆ ವಹಿಸಬೇಕು. ಪಾದದ ಹುಣ್ಣು ಕಾಲನ್ನೇ ಕತ್ತರಿಸುವ ಮಟ್ಟಕ್ಕೆ ಅಪಾಯ ತಂದೊಡ್ಡಬಲ್ಲದು. ಆದರೆ ಇಂತಹ ಅವಗಡ ಸಂಭವಿಸು ಮುನ್ನವೆ ನಿಮ್ಮನ್ನು ಎಚ್ಚರಿಸಲು ‘ಸೆನ್ಸ್ಗೊ’ ಸಾಕ್ಸ್ ನಿಮ್ಮಗೆ ಸಹಾಯ ಮಾಡಲಿದೆ.
ಇದನ್ನು ಓದಿ: ಓದಿದ್ದು ಎಂಬಿಎ, ಆಗಿದ್ದು ಕೋಳಿ ಫಾರ್ಮ್ ಮಾಲೀಕ..!
‘ಸೆನ್ಸ್ಗೊ’ ಸಾಕ್ಸ್ ಧರಿಸಿದರೆ ಪಾದಕ್ಕೆ ಬೀಳುವ ಒತ್ತಡ, ಉಷ್ಣಾಂಶ ಮತ್ತು ಪಾದದ ತಪ್ಪು ಚಲನವಲನದ ಬಗ್ಗೆ ಮೊಬೈಲ್ಗೆ ಮಾಹಿತಿ ನೀಡುತ್ತದೆ. ಇದರಿಂದ ನಮ್ಮ ದೇಹದಲ್ಲಿ ಆಗ ಬೇಕಾದ ಬದಲಾವಣೆ ನಾವು ಯಾವ ರೀತಿ ನಡೆಯಬೇಕು ದಿನ್ಕಕೆ ಎಷ್ಟು ವಾಕಿಂಗ್ ಮಾಡಬೇಕು. ಜಾಗಿಂಗ್ ಮಾಡಿದರೆ. ನಿಮಿಷಕ್ಕೆ ಎಷ್ಟು ಹೆಜ್ಜೆ ಇಟ್ಟರೆ ಉತ್ತಮ ಆರೋಗ್ಯ ಇರುತ್ತದೆ ಎಂಬುದನ್ನೆಲ್ಲ ಇದು ಲೆಕ್ಕಾಚಾರ ಮಾಡಿ ತಿಳಿಸುತ್ತದೆ..
ಇಂತಹವೊಂದು ಸಾಕ್ಸ್ ಕಂಡು ಹಿಡಿಯುವ ಪ್ರಯತ್ನದಲ್ಲಿ ಯಶಸ್ವಿಯಾಗಿರುವುದು, ಜೆರುಸಲೇಂನ ಹೀಬ್ರೂ ವಿಶ್ವವಿದ್ಯಾಲಯ ಮತ್ತು ಇಸ್ರೇಲ್ನ ಹದಸಾಹ್ ವೈದ್ಯಕೀಯ ಕಾಲೇಜಿನ ಸಂಶೋಧಕರು. ಪಾದದ ಮೇಲಿನ ಒತ್ತಡವನ್ನು ಗುರುತಿಸಬಲ್ಲ ಹಾಗೂ ತೊಳೆಯಬಹುದಾದ ಸ್ಮಾರ್ಟ್ ಸಾಕ್ಸ್ ಅನ್ನು ಇವರು ಕಂಡು ಹಿಡಿದಿದ್ದಾರೆ. ಈ ಸಾಕ್ಸ್ ಜತೆಗೆ ಸಂಪರ್ಕ ಹೊಂದಿರುವ ಮೊಬೈಲ್ಗೆ ಪಾದದ ತಪ್ಪು ಭಂಗಿ, ಪಾದದ ಅಳತೆಗೆ ಸರಿಯಾಗಿ ಶೂ ಇಲ್ಲದೇ ಇರುವುದು ಹಾಗೂ ಹೆಚ್ಚಿನ ಒತ್ತಡದ ಕುರಿತು ಮಾಹಿತಿ ನೀಡುತ್ತದೆ. ಈ ಸಾಕ್ಸ್ಗೆ ‘ಸೆನ್ಸ್ಗೊ’ ಎಂದು ನಾಮಕರಣ ಮಾಡಲಾಗಿದೆ. ಇದರಲ್ಲಿ ಸೂಕ್ಷ್ಮ ಫ್ಯಾಬ್ರಿ ಕೇಟೆಡ್, ಒತ್ತಡ ಅಳೆಯುವ ಸೆನ್ಸಾರ್ ಗಳಿರುವುದರಿಂದ ನಾವು ನಡೆಯುವಾಗ ಆಗುವ ಒತ್ತಡ, ಯಾವ ರೀತಿ ಶೂ ಧರಿಸಬೇಕು, ದೇಹಕ್ಕೆ ಎಷ್ಟು ವ್ಯಾಯಾಮ ಬೇಕೆನ್ನುವುದು ಈ ಸ್ಮಾರ್ಟ್ ಸಾಕ್ಸ್ ತಿಳಿಸುತ್ತದೆ..
ಮಧುಮೇಹ ಹೊಂದಿರುವವರು ಪಾದದ ಹುಣ್ಣಿನಿಂದ ನರಳುತ್ತಿದ್ದರೆ ಅವರಿಗೆ ‘ಡಯಾಬಿಟಿಕ್ ನ್ಯುರೋಪತಿ’ ಕಾಡುವ ಭಯವಿರುತ್ತದೆ. ಇದು ನರ ವ್ಯವಸ್ಥೆ ಗಂಭೀರ ಪರಿಣಾಮ ಬೀರುತ್ತದೆ. ಹೆಚ್ಚಿನ ಒತ್ತಡ ಮತ್ತು ಕಡಿಮೆ ಪ್ರಮಾಣದ ರಕ್ತದ ಪೂರೈಕೆಯಿಂದ ಈ ಕಾಯಿಲೆ ಬಾಧಿಸುತ್ತದೆ. ಪ್ರಪಂಚದಲ್ಲಿ ಕೋಟ್ಯಂತರ ಜನ ಇದರಿಂದ ನರಳುತ್ತಿದ್ದಾರೆ. ಕ್ರಮೇಣ ಇದು ಕಾಲನ್ನು ಕತ್ತರಿಸಲೇಬೇಕಾದ ಅನಿವಾರ್ಯ ಪರಿಸ್ಥಿತಿಗೆ ತಂದೊಡ್ಡುತ್ತದೆ ಎನ್ನುತ್ತಾರೆ ‘ಸ್ಮಾರ್ಟ್ ಸಾಕ್ಸ್’ ಸಂಶೋಧಕರು.
"ಮಧುಮೇಹಿಗಳು ಸ್ಮಾರ್ಟ್ ಸಾಕ್ಸ್ ಧರಿಸಿದರೆ ಪಾದದ ಹುಣ್ಣು ಅಭಿವೃದ್ಧಿಯಾಗುವುದು ಕಡಿಮೆಯಾಗುತ್ತದೆ. ಇದರಿಂದ ಚಿಕಿತ್ಸಾ ವೆಚ್ಚ ಸಹ ಕಡಿಮೆ ಯಾಗುತ್ತದೆ’ ಎನ್ನುತ್ತಾರೆ ಯಕೊವಾ ನಾಹ್ ಮಿಯಾಸ್. ‘ಪ್ರಾರಂಭದಲ್ಲಿ ಗಂಭೀರವಾಗಿರದ ಮಧುಮೇಹಿಗಳ ಪಾದದ ಹುಣ್ಣು ಕ್ರಮೇಣ ಸಾವನ್ನು ತರುತ್ತದೆ. ಆದ್ದ ರಿಂದಲೇ ಸ್ಮಾರ್ಟ್ ಸಾಕ್ಸ್ ಸಂಶೋಧನೆಗೆ ಮುಂದಾದೆವು"
-ಡ್ಯಾನಿ ಬಾವ್ಲಿ, ಸಂಶೋಧಕ
‘ಸದ್ಯ ಲಭ್ಯವಿರುವ ತಂತ್ರಜ್ಞಾನವನ್ನು ಸೂಕ್ತವಾಗಿ ಬಳಸಿಕೊಳ್ಳಬೇಕು. ವಿಶ್ವದೇಲ್ಲೇಡೆ ಮಧುಮೇಹದಿಂದ ಬಳಲುತ್ತಿರುವವರಿಗೆ ಏನಾದ್ರು ಮಾಡನೇಕೆಂದು ಕೊಂಡಾಗಲೆ, ಸಾಕ್ಸ್ ಅನ್ನು ಸ್ಮಾರ್ಟ್ ಆಗಿ ಪರಿವರ್ತಿಸಲು ಮುಂದಾದೆವು’ ಎನ್ನುತ್ತಾರೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ಹದಸಾಹ್ ವೈದ್ಯಕೀಯ ಕಾಲೇಜಿನ ಸಂಶೋಧಕರು. ಸ್ಮಾರ್ಟ್ ಯುಗದಲ್ಲಿ ಸ್ಮಾರ್ಟ್ ಸಾಕ್ಸ್ ಪರಿಚಯಿಸಿದ್ದು, ಶೀಘ್ರವೇ ಇದು ಜನರ ಕೈ ಸೇರಲಿದೆ.
ವಿಶ್ವದೇಲ್ಲಡೆ ಪಾದದ ಹುಣ್ಣಿನ ಸಮಸ್ಯೆಯಿಂದ ಬಳಲುವವರು ಸಂಖ್ಯೆ ಹೆಚ್ಚುದೆ. ಅಂತಹವರಿಗೆಲ್ಲ ‘ಸ್ಮಾರ್ಟ್ ಸಾಕ್ಸ್’ ಮುಂದಿನ ದಿನಗಳಲ್ಲಿ ಸಹಕಾರಿಯಾಗಬಲ್ಲದು ಎಂಬ ಭರವಸೆ ಸಂಶೋಧಕರದ್ದು. ಸೆನ್ಸೊರಾ ಸಾಕ್ಸ್ ಈಗಾಗ್ಲೇ ಮಾರುಕಟ್ಟೆಯಲ್ಲಿ ಲಭ್ಯವಿದೆ. ಆದರೆ ‘ಸೆನ್ಸ್ಗೋ’ ಸಾಕ್ಸ್ ಇದೆಲ್ಲಕ್ಕಿಂತ ಹೆಚ್ಚು ಪರಿಷ್ಕೃತವಾಗಿದ್ದು, ಮಧುಮೇಹ ರೋಗಗದಿಂದ ಬಳಲುವವರ ಬಾಳಿಗೆ ಆಶಾಕಿರಣವಾಗಿದೆ.
1. ಹಳೆಯ ಅಮೂಲ್ಯ ವಸ್ತುಗಳಿಗೆ ಸಖತ್ ರೇಟ್..!