ಸ್ಮಾರ್ಟ್ಫೋನ್ನಲ್ಲೇ ಆರೋಗ್ಯ ಸಮಸ್ಯೆಗೆ ಉತ್ತರ- ಇದು "ಡಾಕ್ಟರ್ಸ್ ಲೈವ್" ಮ್ಯಾಜಿಕ್
ಟೀಮ್ ವೈ.ಎಸ್. ಕನ್ನಡ
ಇತ್ತೀಚಿನ ದಿನಗಳಲ್ಲಿ ಆರೋಗ್ಯ ಸೇವೆಗಳು ದುಬಾರಿಯಾಗುತ್ತಿವೆ. ಜ್ವರ, ನೆಗಡಿಯಂತಹ ಸಣ್ಣ ಸಣ್ಣ ಸಮಸ್ಯೆಗಳಿಗೆ ಆಸ್ಪತ್ರೆಗೆ ಹೋಗಿ ಗಂಟೆಗಟ್ಟಲೇ ಕಾಯಬೇಕು. ಇಂದಿನ ಬ್ಯುಸಿ ಲೈಫ್ನಲ್ಲಿ ಗಂಟೆಗಟ್ಟಲೇ ಆಸ್ಪತ್ರೆಯಲ್ಲಿ ಸಮಯ ಕಳೆಯಲು ಕಷ್ಟವಾಗುತ್ತದೆ. ಅಂತಹವರಿಗಾಗಿ ಒಂದು ಪರಿಹಾರವೆಂಬಂತೆ ಆರಂಭವಾಗಿದೆ ‘ಡಾಕ್ಟರ್ಸ್ ಲೈವ್’ ಎಂಬ ಹೊಸ ಸ್ಟಾರ್ಟ್ ಅಪ್.
ಅಪ್ಪಟ ಕನ್ನಡಿಗರ ಸಾಹಸ..!
ವೈದ್ಯ ಮತ್ತು ರೋಗಿಗಳ ಲಭ್ಯತೆಯ ಪ್ರಮಾಣದಲ್ಲಿ ಕಡಿಮೆ ಇರುವ ಭಾರತದಂತಹ ಹಳ್ಳಿಗಳ ದೇಶದಲ್ಲಿ "ಡಾಕ್ಟರ್ಸ್ ಲೈವ್" ಆ್ಯಪ್ ಬಳಸಿ ಉತ್ತಮ ಮತ್ತು ಪರಿಣಿತ ವೈದ್ಯರಿಂದ ರೋಗಗಳಿಗೆ ಗುಣಮಟ್ಟದ ಚಿಕಿತ್ಸೆ ಪಡೆಯಬಹದು. ಇದು ಅಪ್ಪಟ ಕನ್ನಡಿಗರ ಸಾಹಸ. ಈ "ಡಾಕ್ಟರ್ಸ್ ಲೈವ್" ಸ್ಟಾರ್ಟ್ಅಪ್ನ ಸಂಸ್ಥಾಪಕರು ಅಪ್ಪಟ ಕನ್ನಡಿಗರು. ಚೇತನ್ ಚೆನ್ನಕೇಶವ ಮತ್ತು ಪ್ರತಾಪ್ ಎಂಬ ಸ್ನೇಹಿತರ ಸಾಹಸವೇ ಈ "ಡಾಕ್ಟರ್ಸ್ ಲೈವ್". ಚೇತನ್ ಮೈಸೂರಿನ ಎಸ್.ಜೆ.ಸಿ.ಇ. ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ನಲ್ಲಿ ಎಂಜಿನಿಯರಿಂಗ್ ಪದವಿ ಪಡೆದವರು. ಪ್ರತಾಪ್ ತುಮಕೂರಿನ ಎಸ್ಐಟಿಯಲ್ಲಿ ಕಂಪ್ಯೂಟರ್ ಸೈನ್ಸ್ ಪದವಿ ಪಡೆದವರು. ಇಬ್ಬರೂ ಅಮೇರಿಕಾದಲ್ಲಿ ಉನ್ನತ ವ್ಯಾಸಂಗ ಪಡೆಯಬೇಕಾದರೆ ಪರಿಚಯವಾದವರು. ಇಬ್ಬರೂ ಕರ್ನಾಟಕದವರೇ ಆದ ಕಾರಣ ಹೊಸ ಸ್ಟಾರ್ಟ್ಅಪ್ ಪ್ರಾರಂಭಿಸುವ ಯೋಚನೆಯನ್ನು ಹಾಕಿಕೊಂಡಿದ್ದರು. ಆಗ ಅವರಿಗೆ ಹೊಳೆದಿದ್ದು ವೈದ್ಯಕೀಯ ಸೇವೆಗೆ ಅಗತ್ಯವಾದ ಆ್ಯಪ್ ತಯಾರಿಸಿ ಮತ್ತಷ್ಟು ತಂತ್ರಜ್ಞರ ಸಹಾದೊಂದಿಗೆ ಪರಿಣಿತ ವೈದ್ಯರನ್ನು ಭೇಟಿ ಮಾಡಿ, ಅವರ ಸಲಹೆ ಸೂಚನೆಯೊಂದಿಗೆ 2014ರಲ್ಲಿ "ಡಾಕ್ಟರ್ಸ್ ಲೈವ್" ಟೆಲಿಮೆಡಿಸಿನ್ ಆ್ಯಪ್ ತಯಾರಿಸಿದ್ರು.
ಆರಂಭದಲ್ಲಿ ತುರ್ತು ಚಿಕಿತ್ಸಾ ವಿಭಾಗದಲ್ಲಿ ನೆರವಾಗಲು ಪ್ರಾರಂಭಿಸಿದ ಈ ಆ್ಯಪ್ ಹೆಚ್ಚಾಗಿ ಪರಿಣಾಮಕಾರಿಯಾಗಲಿಲ್ಲ. ನಂತರ 2015ರಲ್ಲಿ ಇದೇ ಆ್ಯಪ್ನ್ನು ಸಾಮಾನ್ಯ ಚಿಕಿತ್ಸೆ ವಿಭಾಗಕ್ಕೆ ಬದಲಾಯಿಸುತ್ತಾರೆ. ಇದು ಬದಲಾವಣೆಗೆ ನಾಂದಿ ಹಾಡಿತು. ದೇಶದ ವಿವಿಧ ಮಹಾನಗರಗಳ ನಾಗರೀಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
" ಈ ಡಾಕ್ಟರ್ಸ್ ಲೈವ್ ಮೂಲಕ ಉತ್ತಮ ವೈದ್ಯಕಿಯ ಸೇವೆ ಸಿಗುತ್ತದೆ. ಗುಣಮಟ್ಟದ ಚಿಕಿತ್ಸೆ ಪಡೆಯಬಹುದಾಗಿದೆ. ಇದರಿಂದ ರೋಗಿಯ ಸಮಯವೂ ಉಳಿಯುತ್ತದೆ ಆ ಕಾರಣಕ್ಕಾಗಿ ಇದನ್ನು ನಾವು ಅಭಿವೃದ್ಧಿಪಡಿಸಲಾಗಿದೆ."
- ಚೇತನ್ ಚೆನ್ನಕೇಶವ, ಡಾಕ್ಟರ್ಸ್ಲೈವ್ ಸಹ ಸಂಸ್ಥಾಪಕ
"ಡಾಕ್ಟರ್ ಲೈವ್" ಎಂದರೇನು..?
"ಡಾಕ್ಟರ್ಸ್ ಲೈವ್" ಎಂಬುದು ಒಂದು ಮೊಬೈಲ್ ಆ್ಯಪ್. ಇದನ್ನು ಡೆಸ್ಕ್ ಟಾಪ್ನಲ್ಲೂ ಬಳಕೆ ಮಾಡಬಹುದಾಗಿದೆ. ನಿಮ್ಮ ಬಳಿಯಿರುವ ಆ್ಯಂಡ್ರಾಯಿಡ್ ಮೊಬೈಲ್ ಮೂಲಕವೇ ವೈದ್ಯರನ್ನು ಭೇಟಿ ಮಾಡಿ ಅಗತ್ಯ ಸಲಹೆಗಳನ್ನು ಪಡೆಯಬುದು. ಅನಿವಾರ್ಯವಾದರೆ ವೈದ್ಯರ ಭೇಟಿಗೆ ಅಪಾಯಿಂಟ್ಮೆಂಟ್ ಕೂಡ ಇದರಲ್ಲೇ ಫಿಕ್ಸ್ ಮಾಡಬಹುದು. ನಿಮ್ಮ ಮೊಬೈಲ್ನಲ್ಲಿ ಈ "ಡಾಕ್ಟರ್ಸ್ ಲೈವ್" ಆ್ಯಪ್ ಡೌನ್ಲೋಡ್ ಮಾಡಿಕೊಂಡು ಆನ್ಲೈನ್ ವ್ಯವಹಾದಿಂದ ನಿಮ್ಮ ಖಾತೆಯಲ್ಲಿನ ಹಣವನ್ನು ಡಾಕ್ಟರ್ಗಳ ಫೀಸ್ಗೆ ಅನುಗುಣವಾಗಿ ಪೇಟಿಎಂನಂತೆ ಹಣ ನೀಡಬಹುದು.
ಎಷ್ಟು ಮಂದಿ ಬಳಕೆದಾದರರು..?
ಈ ಆ್ಯಪ್ನ್ನು ಒಂದೇ ವರ್ಷದಲ್ಲಿ ಸುಮಾರು ಐದು ಸಾವಿರಕ್ಕೂ ಅಧಿಕ ಮಂದಿ ಡೌನ್ ಲೋಡ್ ಮಾಡಿಕೊಂಡಿದ್ದಾರೆ. ನೂರಾರು ಮಂದಿ ದಿನನಿತ್ಯ ಇದನ್ನು ಬಳಸುತ್ತಿದ್ದಾರೆ. ಸದ್ಯ 88 ನುರಿತ ಡಾಕ್ಟರ್ಗಳು ಈ ಆ್ಯಪ್ನೊಂದಿಗೆ ಕೆಲಸ ನಿರ್ವಹಿಸುತ್ತಿದ್ದಾರೆ. ಇದರ ಸೇವೆ ಪಡೆದವರಿಂದಲೂ ಸಹ ಒಳ್ಳೆ ಪ್ರತಿಕ್ರಿಯೆ ಬರುತ್ತಿದೆ. ಭವಿಷ್ಯದ ಯೋಜನೆಗಳು ಈ "ಡಾಕ್ಟರ್ಸ್ ಲೈವ್ "ಆ್ಯಪ್ ಮೂಲಕ ಮುಂದಿನ ದಿನಗಳಲ್ಲಿ ಡಯಾಗ್ನಸ್ಟಿಕ್ ಸೇವೆಗಳನ್ನು ನೇರ ಮನೆಗಳಿಂದಲೇ ರೋಗಿಗಳ ರಕ್ತ, ಮತ್ತು ಯೂರಿನ್ ಮಾದರಿಗಳನ್ನು ಪಡೆದು ಅವರಿಗೆ ಪರೀಕ್ಷಿಸಿದ ವರದಿಗಳನ್ನು ರೋಗಿಗಳ ಮನೆಗೆ ತಲುಪಿಸುವ ಯೋಜನೆಯನ್ನು ಚೇತನ್ ಮತ್ತು ಪ್ರತಾಪ್ ಹಾಕಿಕೊಂಡಿದ್ದಾರೆ.
ಡಾಕ್ಟರ್ಗಳ ಸಲಹೆಯಲ್ಲೇ ಎಲ್ಲಾ ಮುಗಿದು ಬಿಡುವುದಿಲ್ಲ. ವೈದ್ಯರು ಹೇಳಿದ ಮೆಡಿಸಿನ್ಗಳನ್ನು ಕೂಡ ರೋಗಿಗಳ ಮನೆಗೇ ತಲುಪಿಸುವ ಮೂಲಕ ರೋಗಿಗಳು, ವೈದ್ಯರ ನಡುವೆ ನೇರ ಸಂಪರ್ಕ ಒದಗಿಸಿ ಕೊಡುವ ಬಗ್ಗೆ ಈ ಗೆಳೆಯರು ಯೋಚಿಸುತ್ತಿದ್ದಾರೆ. ಈ "ಡಾಕ್ಟರ್ಸ್ ಲೈವ್"ನ್ನು ಜನಸಾಮಾನ್ಯರಿಗೆ ತಲುಪಿಸಲು ಇದರ ಬಗ್ಗೆ ಸರ್ಕಾರದೊಂದಿಗೆ ಮಾತುಕತೆ ನಡೆಸಿ ಟೈ ಅಪ್ ಮಾಡಿಕೊಳ್ಳುವ ಬಗ್ಗೆ ಈ ಇಬ್ಬರು ಗೆಳೆಯರು ಚಿಂತಿಸಿದ್ದಾರೆ. ಇದೊಂದು ವಿನೂತನ ಮಾದರಿಯಾಗಿದ್ದರಿಂದ ಗ್ರಾಮೀಣ ಪ್ರದೇಶಗಳಲ್ಲೂ ಸರ್ಕಾರಿ ಆಸ್ಪತ್ರೆಗಳಿಗೆ ನುರಿತ ವೈದ್ಯರ ವಿಡಿಯೋ ಕಾನ್ಪರೆನ್ಸ್ ಮೂಲಕ ಸ್ಥಳೀಯ ವೈದ್ಯರ ಮೂಲಕವೇ ಸ್ಥಳೀಯ ರೋಗಿಗಳಿಗೆ ಚಿಕಿತ್ಸೆ ಕೊಡಿಸಬಹುದಾದ ಈ "ಡಾಕ್ಟರ್ಸ್ ಲೈವ್" ಆ್ಯಪ್ ಬಗ್ಗೆ ಸರ್ಕಾರದ ಆರೋಗ್ಯ ಸಚಿವರೊಂದಿಗೆ ಚೇತನ್ ಮತ್ತು ಪ್ರತಾಪ್ ಈಗಾಗಲೇ ಮಾತನಾಡಿದ್ದಾರೆ. ಇದಕ್ಕೆ ಸಕಾರತ್ಮಕವಾಗಿ ಪ್ರತಿಕ್ರಿಯೆ ಬಂದಿದ್ದು ಮುಂದಿನ ದಿನಗಳಲ್ಲಿ ಇದು ಗ್ರಾಮೀಣ ಪ್ರದೇಶಕ್ಕೂ ವಿಸ್ತರಣೆಗೊಂಡರೆ ಅನುಮಾನವಿಲ್ಲ. ಒಟ್ಟಿನಲ್ಲಿ "ಡಾಕ್ಟರ್ಸ್ ಲೈವ್" ಭವಿಷ್ಯದ ವೈದ್ಯಕೀಯ ಕ್ಷೇತ್ರದಲ್ಲಿ ಹೊಸದೊಂದು ಮಾರ್ಗವಾಗುವ ಎಲ್ಲ ಲಕ್ಷಣಗಲೂ ಇದೆ.
1. ಕಾಫಿ ಪುಡಿ, ಟೀ ಪೌಡರ್ ಖಾಲಿ ಆದ್ರೆ ಚಿಂತೆ ಬೇಡ- ಹಾಲಿನ ಜೊತೆಗೆ ಅಗತ್ಯವಸ್ತುಗಳು ಕೂಡ ಬಂದೇ ಬರುತ್ತದೆ..!
2. ಕಾಡು ರಕ್ಷಿಸಲು ಮರಗಳ ಮೇಲೆ ಕಲಾಕೃತಿ : ನಾರಿಯರ ಕೈಚಳಕದಲ್ಲಿ ಸ್ವರ್ಗವಾಗಿದೆ ಮಧುಬನಿ