9 ಬಾರಿ ಕೋವಿಡ್‌-19 ಸೋಂಕಿತರಿಗಾಗಿ ಪ್ಲಾಸ್ಮಾ ನೀಡಿದ ದೆಹಲಿಯ ನಿವಾಸಿ

ನವದೆಹಲಿಯ ಜಹಾಂಗೀರ್‌ ಪುರಿಯವರಾದ ತಬ್ರೆಜ್‌ ಖಾನ್‌ ಇದುವರೆಗೂ 9 ಬಾರಿ ತಮ್ಮ ಪ್ಲಾಸ್ಮಾ ದಾನ ಮಾಡಿ ಕೋವಿಡ್‌-19 ಸೋಂಕಿನಿಂದ ಗುಣಮುಖರಾಗಲು ಹಲವರಿಗೆ ನೆರವಾಗಿದ್ದಾರೆ.

9 ಬಾರಿ ಕೋವಿಡ್‌-19 ಸೋಂಕಿತರಿಗಾಗಿ ಪ್ಲಾಸ್ಮಾ ನೀಡಿದ ದೆಹಲಿಯ ನಿವಾಸಿ

Thursday September 10, 2020,

2 min Read

ಕೊರೊನಾ ಸೋಂಕಿನ ಹೆಸರು ವಿಶ್ವದೆಲ್ಲಡೆ ಕೇಳತೊಡಗಿದಾಗ ಯಾರಿಗೂ ಅದು 9 ಲಕ್ಷಕ್ಕೂ ಅಧಿಕ ಜೀವಗಳನ್ನು ಬಲಿತೆಗೆದುಕೊಳ್ಳಬಹುದೆಂಬ ಕಲ್ಪನೆಯಿರಲಿಲ್ಲ.


ಭಾರತದಲ್ಲಿ ಸೋಂಕಿನ ಬಗ್ಗೆ ತುಂಬಾ ಮಾಹಿತಿ ಇಲ್ಲದಿದ್ದಾಗ, ಕೋವಿಡ್‌-19 ಸೋಂಕಿಗೆ ಒಳಗಾದವರು ಇತರಿರಗೂ ಸೋಂಕು ಹರಡಿಸುವರೆಂದು ತಿಳಿದು ಅವರನ್ನು ಸಮಾಜ ಬೇರೆಯವರಂತೆ ನೋಡತೊಡಗಿತು.


ನವದೆಹಲಿಯ ತಬ್ರೆಜ್‌ ಖಾನ ಮತ್ತು ಅವರ ಕುಟುಂಬವು ಕೋವಿಡ್-19‌ ಸೋಂಕಿಗೆ ಒಳಗಾಗಿ ಚೇತರಿಸಿಕೊಂಡಿತು. ಮಾರ್ಚ್‌ 18 ರಂದು ಜಹಾಂಗೀರ್‌ ನಗರದ ನಿವಾಸಿಯಾದ ತಬ್ರೆಜ್‌ ಅವರಿಗೆ ಸೋಂಕು ಕಾಣಿಸಿಕೊಂಡಿತು.


ಎಎನ್‌ಐ ಜತೆ ಮಾತನಾಡುತ್ತಾ ತಬ್ರೆಜ್‌, “ನನಗೆ ಸೋಂಕು ದೃಢವಾದಾಗ ಇಡೀ ಸಮಾಜ ನನ್ನನ್ನು ಅಪರಾಧಿಯಂತೆ ನೋಡತೊಡಗಿತು. ನಾನೊಂದು ಬಾಂಬ್‌, ಯಾವಾಗಬೇಕಾದರೂ ಸಿಡಿಯಬಹುದು ಎನ್ನುವಂತೆ ನನ್ನನ್ನು ಎಲ್ಲರೂ ಕಾಣುತ್ತಿದ್ದರು. ನನ್ನ ಕುಟುಂಬದಿಂದ ಎಲ್ಲರು ದೂರವಿರತೊಡಗಿದರು.”


“ನಾನು ಆಸ್ಪತ್ರೆಯಿಂದ ಗುಣಮುಖನಾಗಿ ಮನೆಗ ಬಂದ ಮೇಲೂ ಅವರು ನನ್ನನ್ನೂ ಸರಿಯಾಗಿ ಕಾಣಲಿಲ್ಲ. ಆ ನೋವು ಯಾವತ್ತೂ ನನ್ನಲ್ಲಿರಲಿದೆ. ಔಷಧಿ ಮಾರುವವರು, ಅಂಗಡಿಯವರು ನನ್ನನ್ನು ಬಹಿಷ್ಕರಿಸಿದರು. ನಾನು ಅಥವಾ ನನ್ನ ಕುಟುಂಬದವರು ಹೊರಗೆ ಬಂದರೆ ಕೆಲವರು ಪೊಲೀಸರಿಗೆ ಫೋನ್‌ ಮಾಡಿ ಹೇಳಿದರು,” ಎಂದರು.


ಇದ್ಯಾವುದು ಅವರನ್ನು ಜನರಿಗೆ ಸಹಾಯ ಮಾಡದಿರುವಂತೆ ತಡೆದಿಲ್ಲ. ಇಲ್ಲಿಯವರೆಗೂ ಅವರು 9 ಬಾರಿ ಪ್ಲಾಸ್ಮಾ ದಾನ ಮಾಡಿದ್ದಾರೆ ಮತ್ತು ಮುಂದೆಯು ಅಗತ್ಯವಿದ್ದರೆ ಮಾಡುತ್ತೇನೆ ಎಂದಿದ್ದಾರೆ.

ಚಿತ್ರಕೃಪೆ: ಎಎನ್‌ಐ


ಕೋವಿಡ್‌-19 ಸೋಂಕಿತರಲ್ಲಿ ಹೆಚ್ಚಿನ ಅಪಾಯವಿರುವವರಿಗೆ ಪ್ಲಾಸ್ಮಾ ಚಿಕಿತ್ಸೆ ಫಲಕಾರಿಯೆಂದು ವೈದ್ಯರು ಹೇಳಿದ್ದಾರೆ. ಹಲವು ರಾಜ್ಯಗಳು ಕೋವಿಡ್‌-19 ನಿಂದ ಗುಣಮುಖರಾದವರಿಗೆ ಪರಿಣಾಮಕಾರಿಯಾದ ಚಿಕಿತ್ಸೆ ನೀಡುವುದಕ್ಕಾಗಿ ಮುಂದೆ ಬಂದು ಪ್ಲಾಸ್ಮಾ ದಾನ ಮಾಡುವಂತೆ ಕೋರುತ್ತಿವೆ.


ಭಾರತದ ಮೊದಲ ಪ್ಲಾಸ್ಮಾ ಬ್ಯಾಂಕ್ - ದೆಹಲಿ ಪ್ಲಾಸ್ಮಾ ಬ್ಯಾಂಕ್ ಅನ್ನು ಜುಲೈ 5 ರಂದು ಇನ್ಸ್ಟಿಟ್ಯೂಟ್ ಆಫ್ ಲಿವರ್ ಅಂಡ್ ಬಿಲಿಯರಿ ಸೈನ್ಸಸ್ (ಐಎಲ್ಬಿಎಸ್) ನಲ್ಲಿ ಸ್ಥಾಪಿಸಲಾಯಿತು. ಸಂಸ್ಥೆಯಿಂದ ಕರೆ ಸ್ವೀಕರಿಸಿದ ನಂತರ ತಬ್ರೆಜ್ ತಮ್ಮ ಪ್ಲಾಸ್ಮಾವನ್ನು ಈ ಬ್ಯಾಂಕ್‌ಗೆ ಎರಡು ಬಾರಿ ದಾನ ಮಾಡಿದ್ದಾರೆ.


ಅವರ ಈ ಕಾರ್ಯದ ಬಗ್ಗೆ ಸಕಾರಾತ್ಮಕವಾಗಿರುವ ತಬ್ರೆಜ್‌ ತಮ್ಮ ಕುಟುಂಬ ಸೇರಿದಂತೆ ಈ ಕಾರ್ಯವನ್ನು ಮುಂದುವರೆಸುತ್ತೇನೆ ಎನ್ನುತ್ತಾರೆ, ಆದರೆ ಅವರಿಗೆ ಅದರಿಂದಾಗುವ ಆರೋಗ್ಯದ ಪರಿಣಾಮಗಳ ಬಗೆಗೆ ತುಸು ಗೊಂದಲವಿದೆ.


ಇತರರು ಸ್ವತಃ ತಾವೇ ಮುಂದೆ ಬಂದು ಪ್ಲಾಸ್ಮಾ ದಾನ ಮಾಡುವಂತೆ ಅವರು ಕರೆ ನೀಡುತ್ತಿದ್ದಾರೆ.