Brands
Discover
Events
Newsletter
More

Follow Us

twitterfacebookinstagramyoutube
ADVERTISEMENT
Advertise with us

ಮಾದಕ ವಸ್ತುಗಳಿಗೆ ಬಲಿಯಾದ ಮಗನ ನೆನಪಲ್ಲಿ ಜಾಗೃತಿ ಮೂಡಿಸುತ್ತಿರುವ ಪಂಜಾಬ್‌ನ ದಂಪತಿಗಳು

ಮಾದಕ ವಸ್ತುಗಳ ವ್ಯಸನದಿಂದ ತಮ್ಮ ಮಗನನ್ನು ಕಳೆದುಕೊಂಡು ದಂಪತಿಗಳು ಮನೆ ಮನೆಗೂ ತೆರಳಿ ಅದರ ವಿರುದ್ಧ ಜಾಗೃತಿ ಮೂಡಿಸುತ್ತಿದ್ದಾರೆ.

ಮಾದಕ ವಸ್ತುಗಳಿಗೆ ಬಲಿಯಾದ ಮಗನ ನೆನಪಲ್ಲಿ ಜಾಗೃತಿ ಮೂಡಿಸುತ್ತಿರುವ ಪಂಜಾಬ್‌ನ ದಂಪತಿಗಳು

Thursday September 03, 2020 , 2 min Read

ಮಾದಕ ವಸ್ತುಗಳ ಸೇವನೆಯು ಪಂಜಾಬ್‌ ರಾಜ್ಯದಲ್ಲಿ ಹಲವು ದಿನಗಳಿಂದಲೂ ಇರುವ ಸಮಸ್ಯೆ. ನ್ಯಾಷನಲ್ ಸೆಂಟರ್ ಫಾರ್ ಬಯೋಟೆಕ್ನಾಲಜಿ ಇಂಫಾರ್ಮೆಷನ್‌ ನಡೆಸಿದ ಸಮೀಕ್ಷೆಯ ಪ್ರಕಾರ, ಈ ಪ್ರದೇಶದ ಮೂರು ಜನರಲ್ಲಿ ಒಬ್ಬರು ಮಾದಕ ವಸ್ತುಗಳ ವ್ಯಸನಿಯಾಗಿರುತ್ತಾರೆ.


ಈ ಗುಂಪಿಗೆ ಮಂಜೀತ್‌ ಸಿಂಗ್‌ ಕೂಡಾ ಸೇರುತ್ತಾರೆ. ಮಾರ್ಚ್‌ 26, 2016 ರಂದು ಮಾದಕ ವಸ್ತುಗಳ ವ್ಯಸನದಿಂದ ಅವರು ತಮ್ಮ ಜೀವವನ್ನೆ ಕಳೆದುಕೊಳ್ಳಬೇಕಾಯಿತು. ಅಂದಿನಿಂದ ಇವರ ತಂದೆ ಮುಖ್ತಿಯಾರ್‌ ಸಿಂಗ್‌ ಮತ್ತು ತಾಯಿ ಭುಪಿಂದರ್‌ ಕೌರ್‌ ಮಾದಕ ವಸ್ತುಗಳ ಸೇವನೆಯ ವಿರುದ್ಧ ಹೋರಾಡುತ್ತಿದ್ದಾರೆ. ವ್ಯಸನದ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸರ್ಕಾರಕ್ಕೆ ತಮ್ಮ ಮಗನ ಶವವನ್ನು ನೀಡಿದ್ದ ದಂಪತಿಗಳೀಗ ಮನೆ ಮನೆಗೂ ತೆರಳಿ ಜಾಗೃತಿ ಮೂಡಿಸುತ್ತಿದ್ದಾರೆ.

ಮನೆ ಮನೆಗೂ ಹೋಗಿ ಮಾದಕ ವಸ್ತುಗಳ ವ್ಯಸನದ ಕುರಿತು ಜಾಗೃತಿ ಮೂಡಿಸುತ್ತಿರುವ ದಂಪತಿಗಳು (ಚಿತ್ರಕೃಪೆ: ಹಿಂದೂಸ್ತಾನ್‌ ಟೈಮ್ಸ್‌)


ಮುಖ್ತಿಯಾರ್ ಮತ್ತು ಭೂಪಿಂದರ್ ಅವರು ಟಾರ್ನ್ ತರಣ್ ಜಿಲ್ಲೆಯ ಪ್ಯಾಟಿ ಪಟ್ಟಣದ ನಿವಾಸಿಗಳ ಬಳಿ ಹೋಗಿ ತಮ್ಮ ಮಕ್ಕಳನ್ನು ವಿನಾಶಕಾರಿ ಅಭ್ಯಾಸದಿಂದ ರಕ್ಷಿಸುವಂತೆ ಜಾಗೃತಿ ಮೂಡಿಸುತ್ತಿದ್ದಾರೆ. ಜತೆಗೆ ವ್ಯಸನದಿಂದ ಮುಕ್ತರಾಗಲು ಅದಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಂದ ಸಹಾಯ ಪಡೆಯುವಂತೆಯೂ ದಂಪತಿಗಳು ಸಲಹೆ ನೀಡುತ್ತಾರೆ.



“ಸರ್ಕಾರ ಕೆಲವು ಕ್ರಮಗಳನ್ನು ಕೈಗೊಂಡರು, ವಸ್ತುಸ್ಥಿತಿ ಎಂದಿನಂತೆ ತುಂಬಾ ಕೆಟ್ಟದಾಗಿದೆ,” ಎಂದು ಮುಖ್ತಿಯಾರ್‌ ದಿ ನ್ಯೂ ಇಂಡಿಯನ್‌ ಎಕ್ಸ್ಪ್ರೆಸ್‌ ಗೆ ಹೇಳಿದರು.


ಪಂಜಾಬ್ ಸ್ಟೇಟ್ ಪವರ್ ಕಾರ್ಪೊರೇಶನ್ ಲಿಮಿಟೆಡ್‌ನಲ್ಲಿ ಸಹಾಯಕ ಲೈನ್ಮ್ಯಾನ್‌ ಆಗಿರುವ ಮುಖ್ತಿಯಾರ್‌ ಪ್ರತಿ ವಾರಾಂತ್ಯದಲ್ಲಿ ಕನಿಷ್ಟ 5 ಮನೆಗಳಿಗೆ ಭೇಟಿ ನೀಡುತ್ತಾರೆ.


ಅವರ ಅನುಭವಗಳನ್ನು ಹಂಚಿಕೊಳ್ಳುತ್ತಾ ಅವರು, “ಎರಡು ಕುಟುಂಬಗಳು ಸತ್ತ ಇಬ್ಬರು ಮಕ್ಕಳ ದೇಹವನ್ನು ಅಂತ್ಯಕ್ರಿಯೆ ಮಾಡಲು ನನಗೆ ನೀಡಿದ್ದಾರೆ ಮತ್ತು ಅವರು ಮಾದಕ ವಸ್ತುಗಳ ವ್ಯಸನದಿಂದ ಸತ್ತಿದ್ದಾರೆಂದು ಸಾರ್ವಜಿನಿಕವಾಗಿ ಒಪ್ಪಿಕೊಂಡಿದ್ದಾರೆ. ಕೆಲವೊಮ್ಮೆ ತಮ್ಮ ಮಕ್ಕಳು ಮಾದಕ ವಸ್ತುಗಳ ವ್ಯಸನದಿಂದ ಸತ್ತು ಹೋಗಿದ್ದಾರೆ ಎಂದು ಗೊತ್ತಾದರೂ ಸಮಾಜಕ್ಕೆ, ಪೊಲೀಸರಿಗೆ ಹೆದರಿ ಅದನ್ನು ಮುಚ್ಚಿಡುತ್ತಾರೆ,” ಎಂದರು.


ಈ ಹಿಂದೆ ಮುಖ್ತಿಯಾರ್‌ ಅವರು ತಮ್ಮ ಮಗನ ಶವವನ್ನು ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್‌ ಕಚೇರಿಗೆ ತೆಗೆದುಕೊಂಡು ಹೋಗಿದ್ದರು ಜತೆಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೂ ಅದರ ಬಗ್ಗೆ ತಿಳಿಸಿ, ಪಂಜಾಬ್‌ನ ಯುವಕರನ್ನು ವ್ಯಸನದಿಂದ ರಕ್ಷಿಸುವಂತೆ ಕೋರಿದ್ದರು.

“ನಾನು ಪ್ರಧಾನ ಮಂತ್ರಿಯ ಕಚೇರಿಗೆ ಅಂದಿನ ಎಸ್‌ಡಿಎಂನೊಂದಿಗೆ ಶವ ಕಳಿಸಿದ್ದೇನೆ. ನನ್ನ ಪ್ರಕಾರ ಅದು ಎಂದಿಗೂ ಅವರನ್ನು ತಲುಪಲಿಲ್ಲ. ಸರ್ಕಾರಿ ಅಧಿಕಾರಿಗಳೊಂದಿಗೆ ವಾದ ಮಾಡುವ ಬದಲು, ಸಮಾಜದಲ್ಲಿ ಜಾಗೃತಿ ಮೂಡಿಸುತ್ತ ನನ್ನ ನೋವನ್ನು ಹೊರಹಾಕಿದೆ. ನನ್ನ ಮಗನ ಮರಣವನ್ನೆ ಒಂದು ವಿಷಯವಾಗಿ ತೆಗೆದುಕೊಂಡು, ನಾನು ‘ಕಾಫನ್ ಬೋಲ್ ಪೆಯಾ’ ಎಂಬ ಮಾದಕ ವಸ್ತುಗಳ ವಿರುದ್ಧ ಅಭಿಯಾನವನ್ನು ಪ್ರಾರಂಭಿಸಿದೆ,” ಎಂದು ಅವರು ದಿ ಟ್ರಿಬ್ಯೂನ್‌ಗೆ ತಿಳಿಸಿದರು.