ಮಾತಿನ ದುರ್ಬಲತೆಯ ಹೊರತಾಗಿಯೂ, 32 ವರ್ಷದ ಪ್ರಿಯರಂಜನ್ ಅಜಾಗರೂಕತೆಯಿಂದ ಎಸೆದಿರುವ ರಾಷ್ಟ್ರ ಧ್ವಜಗಳನ್ನು ಸಂಗ್ರಹಿಸುತ್ತಿದ್ದಾರೆ

ಪಶ್ಚಿಮ ಬಂಗಾಳದ ಪ್ರಿಯರಂಜನ್ ಸರ್ಕಾರ್ ರವರು ತಮ್ಮ ಒಂಬತ್ತನೇ ವಯಸ್ಸಿನಿಂದಲೂ ಬೀದಿಗಳು, ಕಾಲುದಾರಿಗಳು, ಕಸದ ತೊಟ್ಟಿಗಳು ಮತ್ತು ಚರಂಡಿಗಳಿಂದ ದೊರೆಯುವ ರಾಷ್ಟ್ರೀಯ ಧ್ವಜಗಳನ್ನು ಸಂಗ್ರಹಿಸುತ್ತಿದ್ದಾರೆ.

ಮಾತಿನ ದುರ್ಬಲತೆಯ ಹೊರತಾಗಿಯೂ, 32 ವರ್ಷದ ಪ್ರಿಯರಂಜನ್ ಅಜಾಗರೂಕತೆಯಿಂದ ಎಸೆದಿರುವ ರಾಷ್ಟ್ರ ಧ್ವಜಗಳನ್ನು ಸಂಗ್ರಹಿಸುತ್ತಿದ್ದಾರೆ

Thursday August 22, 2019,

2 min Read

ಪ್ರತಿವರ್ಷ ನಾವು ಸ್ವಾತಂತ್ರ್ಯದಿನ ಮತ್ತು ಗಣರಾಜ್ಯೋತ್ಸವವನ್ನು ಬಹಳ ಉತ್ಸಾಹದಿಂದ ಆಚರಿಸುತ್ತೇವೆ, ಧ್ವಜವನ್ನು ಹಾರಿಸುವುದು ಅನೇಕ ಕಾನೂನುಗಳಿಂದ ನಿಯಂತ್ರಿಸಲ್ಪಡುತ್ತದೆ ಎಂಬ ಅಂಶ ನಮ್ಮಲ್ಲಿ ಅನೇಕರಿಗೆ ತಿಳಿದಿಲ್ಲ. ಈ ಕಾನೂನುಗಳನ್ನು ಉಲ್ಲಂಘಿಸುವುದು ಒಂದು ವರ್ಷದ ಜೈಲು ಶಿಕ್ಷೆಯೊಂದಿಗೆ ಶಿಕ್ಷಾರ್ಹ ಅಪರಾಧವಾಗಿದೆ.


ಇದರ ಹೊರತಾಗಿಯೂ ಆಚರಣೆಯ ನಂತರ, ಈ ಧ್ವಜಗಳನ್ನು ರಸ್ತೆಗಳ ಮೇಲೆ ಮತ್ತು ಕಸದ ತೊಟ್ಟಿಗಳಲ್ಲಿ ಅಜಾಗರೂಕತೆಯಿಂದ ಎಸೆಯುವುದನ್ನು ನಾವು ನೋಡಬಹುದು.


ಪ್ರಿಯರಂಜನ್ ಸರ್ಕಾರ್ (ಚಿತ್ರಕೃಪೆ: ನೈಸ್‌ ಪೋಲ್)

ಬಹಿರಂಗವಾಗಿ ಎಸೆದ ರಾಷ್ಟ್ರೀಯ ಧ್ವಜಗಳನ್ನು ಸಂಗ್ರಹಿಸುತ್ತಿರುವ 32 ವರ್ಷದ ಪ್ರಿಯರಂಜನ್ ಸರ್ಕಾರ್ ಮಾತಿನ ದುರ್ಬಲತೆಯನ್ನು ಹೊಂದಿದ್ದರು ಅದನ್ನೊಂದು ತೊಡಕು ಎಂದುಕೊಳ್ಳದೆ ತಮ್ಮ ಕಾರ್ಯದಲ್ಲಿ ತೊಡಗಿದ್ದು ನಿಜವಾದ ದೇಶಭಕ್ತರೆಂದೆನಿಸಿಕೊಂಡಿದ್ದಾರೆ.


ಪಶ್ಚಿಮ ಬಂಗಾಳದ ಬಲಿಯವರಾದ ಅವರು ಒಂಬತ್ತನೇ ವಯಸ್ಸಿನಿಂದಲೂ ಧ್ವಜಗಳನ್ನು ಸಂಗ್ರಹಿಸುತ್ತಿದ್ದಾರೆ ಮತ್ತು ಅವುಗಳನ್ನು ತಮ್ಮ ಮನೆಯಲ್ಲಿನ ದೊಡ್ಡ ಪೆಟ್ಟಿಗೆಯಲ್ಲಿ ಶೇಖರಿಸಿದ್ದಾರೆ.


ಅದಾಗ್ಯೂ, ಬೀದಿಗಳು, ಕಾಲುದಾರಿಗಳು, ಕಸದ ತೊಟ್ಟಿಗಳು ಮತ್ತು ಚರಂಡಿಗಳಿಂದಲೂ ಧ್ವಜಗಳನ್ನು ಸಂಗ್ರಹಿಸುವುದು ಪ್ರಿಯರಂಜನ್‌ಗೆ ಹೊಸತಲ್ಲ. ಅವರ ಪ್ರಯತ್ನಗಳ ಹೊರತಾಗಿಯೂ, ಜನರು ರಾಷ್ಟ್ರದ ಮೇಲಿನ ಅವರ ಪ್ರೀತಿಯನ್ನು ಇಂದಿಗೂ ಗಮನಿಸಿಲ್ಲ, ಅದಲ್ಲದೇ ಅನೇಕರು ಅವರನ್ನು ಹುಚ್ಚ ಮತ್ತು ಚಿಂದಿ ಆಯುವವನು ಎಂದು ಕೂಡ ಕರೆಯುತ್ತಾರೆ.


ಈಗ ವಿಷಯಗಳು ಬದಲಾಗಿವೆ, ಮತ್ತು ಕೆಲವು ಸಮಾನ ಮನಸ್ಸಿನ ಜನರು ಪ್ರಿಯರಂಜನ್ ಅವರೊಂದಿಗೆ ಶ್ರೇಷ್ಠ ಕಾರ್ಯಕ್ಕಾಗಿ ಕೈಜೋಡಿಸಿದ್ದಾರೆ.


ಬಣ್ಣದ ಕಲೆಗಳಿಂದ ಕುಡಿದ ಧ್ವಜಗಳಿಂದ ಹಿಡಿದು ಶೂ ಅಂಚೆಚೀಟಿಗಳೊಂದಿಗಿನ ಧ್ವಜಗಳವರೆಗೆ - ಈ ಸ್ವಯಂಸೇವಕರು ಧ್ವಜಗಳನ್ನು ಸಂಗ್ರಹಿಸುತ್ತಾರೆ ಎಂದು ಎಫರ್ಟ್ಸ್ ಫಾರ್ ಗುಡ್ ವರದಿ ಮಾಡಿದೆ.


ಬಾಲ್ಯದಿಂದಲೂ ದೇಶಭಕ್ತಿಯ ಭಾವನೆ


ಪ್ರಿಯರಂಜನ್ ರವರ ಬಾಲ್ಯ ಕಷ್ಟಕರವಾಗಿತ್ತು ಮತ್ತು ಅವರ ಮಾತಿನ ದುರ್ಬಲತೆಯ ಸಮಸ್ಯೆಯಿಂದಾಗಿ ಶಾಲೆಗೆ ಸೇರಲು ಕಷ್ಟಪಡಬೇಕಾಯಿತು.


ಪ್ರಿಯರಂಜನ್ ರವರು ಮೂರು ವರ್ಷದವರಿದ್ದಾಗ, ತನ್ನ ತಾಯಿ ರಸ್ತೆಯಲ್ಲಿ ಬಿದ್ದಿದ್ದ ರಾಷ್ಟ್ರೀಯ ಧ್ವಜವನ್ನು ಎತ್ತಿಕೊಳ್ಳುವುದನ್ನು ನೋಡಿದರು ಎಂದು ಲೋಕಸತ್ತಾ ವರದಿ ಮಾಡಿದೆ. ಅವರು ತನ್ನ ತಾಯಿಯನ್ನು ಇದರ ಬಗ್ಗೆ ಕೇಳಿದಾಗ, ಅವರ ತಾಯಿ ಹೇಳಿದ್ದು,


“ಧ್ವಜವು ಭಾರತ ತಾಯಿಯ ಸೀರೆ. ಅದಕ್ಕಾಗಿಯೇ ನೀನು ಎಂದಾದರೂ ಬಿದ್ದಿರುವ ಧ್ವಜವನ್ನು ನೋಡಿದರೆ ಅದನ್ನು ಎತ್ತಿಕೋ.”


ಇದು ಚಿಕ್ಕ ವಯಸ್ಸಿನಲ್ಲಿಯೇ ಧ್ವಜಗಳ ಬಗ್ಗೆ ಅವರ ಮೋಹಕ್ಕೆ ಕಾರಣವಾಯಿತು. ಇದಲ್ಲದೆ, ಅವರು ಭಾರತೀಯ ಸೇನೆಯ ಬಗ್ಗೆ ತಿಳಿದ ನಂತರ ದೇಶದ ಬಗ್ಗೆ ಅವರ ಪ್ರೀತಿ ಹೆಚ್ಚಾಯಿತು.


ಪ್ರಿಯರಂಜನ್ ರವರ ಪ್ರಕಾರ, ಭಾರತೀಯ ಧ್ವಜದ ಗೌರವಕ್ಕಾಗಿ ಭಾರತೀಯ ಸೈನಿಕರು ಸಾಯಲು ಸಿದ್ಧರಿದ್ದರೆ, ಒಬ್ಬ ಸಾಮಾನ್ಯ ಪ್ರಜೆಯಾಗಿ, ನಾನು ಕನಿಷ್ಠ ರಸ್ತೆಯಲ್ಲಿ ಬಿದ್ದಿರುವ ಧ್ವಜವನ್ನು ಎತ್ತುವುದರಲ್ಲೇನಿದೆ.

ಪ್ರಿಯರಂಜನ್ ಲೋಕಸತ್ತಾಗೆ ಹೇಳಿದ್ದು: "ನಮ್ಮ ದೇಶದ ಬಗ್ಗೆ ನನ್ನ ಪ್ರೀತಿ ಮತ್ತು ಆಲೋಚನೆಯಿಂದಾಗಿ ನಾನು ಯಾವುದೇ ರಾಜಕೀಯ ಪಕ್ಷದೊಂದಿಗೆ ಸಂಬಂಧ ಹೊಂದಿಲ್ಲ."