ಕೊರೊನಾವೈರಸ್‌: ದ್ವಿಚಕ್ರ ವಾಹನದಲ್ಲಿ 1,200 ಕಿ ಮೀ ಪ್ರಯಾಣಿಸಿ ಮಗನನ್ನು ಮನೆಗೆ ಕರೆತಂದ ತಾಯಿ

37 ವರ್ಷದ ಸೋನು ಖಾಂಡರೆ ಅವರು ಲಾಕ್‌ಡೌನ್‌ ನಿಂದ ಸಿಲುಕಿದ್ದ ಮಗನನ್ನು ಮನೆಗೆ ಕರೆತರಲು 18 ಗಂಟೆ ಪ್ರಯಾಣ ಮಾಡಿದ್ದಾರೆ.

ಕೊರೊನಾವೈರಸ್‌: ದ್ವಿಚಕ್ರ ವಾಹನದಲ್ಲಿ 1,200 ಕಿ ಮೀ ಪ್ರಯಾಣಿಸಿ ಮಗನನ್ನು ಮನೆಗೆ ಕರೆತಂದ ತಾಯಿ

Monday May 11, 2020,

2 min Read

ಏಪ್ರಿಲ್‌ 25 ದೇಶವ್ಯಾಪಿ ಲಾಕ್‌ಡೌನ್‌ ಘೋಷನೆಯಾಗಿ ಒಂದು ತಿಂಗಳಾದ ದಿನದಂದು ಪುಣೆಯ ಅಂಗವಿಕಲ ಮಹಿಳೆಯೊಬ್ಬರು 1,200 ಕಿ ಮೀ ಪ್ರಯಾಣಿಸಿ ಅಮರಾವತಿಗೆ ಹೋಗಲು ನಿರ್ಧರಿಸುತ್ತಾರೆ, ಅದೂ ದ್ವಿಚಕ್ರ ವಾಹನದಲ್ಲಿ. ಖಾಸಗಿ ಕಂಪನಿಯೊಂದರಲ್ಲಿ ಲೆಕ್ಕಿಗರಾಗಿ ಕೆಲಸ ಮಾಡುವ 37 ವರ್ಷದ ಸೋನು ಖಾಂಡರೆಯವರಿಗೆ ಈ ಪ್ರಯಾಣ ತೀರಾ ಹೊಸದಾಗಿತ್ತು.


ಅಮರಾವತಿಯ ತನ್ನ ಅಜ್ಜ ಅಜ್ಜಿಯ ಮನೆಗೆ ಹೊರಟಿದ್ದ ಮಗನು ತನ್ನ ತಾಯಿಗೆ ಕರೆ ಮಾಡಿದಾಗ, ಅವರು ಸ್ಕೂಟರ್‌ನಲ್ಲಿ ಹೋಗಿ ಮಗನನ್ನು ಕರೆತರಲು ನಿರ್ಧರಿಸಿದರು.


"ನನ್ನ ಮಗ ಪ್ರತೀಕ್ ಮಾರ್ಚ್ 17 ರಂದು ಅಂಜಂಗಾಂವ್ ಸುರ್ಜಿ ತಹಸಿಲ್ನ ಹಳ್ಳಿಯೊಂದರಲ್ಲಿ ನನ್ನ ಅಳಿಯಂದಿರ ಮನೆಗೆ ಹೋಗಿದ್ದ ಮತ್ತು ಮಾರ್ಚ್ 22 ರಂದು ಲಾಕ್ ಡೌನ್ ಘೋಷಿಸಿದ ನಂತರ ಅಲ್ಲಿಯೇ ಸಿಲುಕಿಕೊಳ್ಳಬೇಕಾಯಿತು," ಎಂದು ಸೋನು ಎನ್‌ಡಿಟಿವಿಗೆ ತಿಳಿಸಿದರು.


ಲಾಕ್‌ಡೌನ್ ಪ್ರಾರಂಭವಾದಾಗ ಹಳ್ಳಿಯಲ್ಲಿದ್ದಿದ್ದರಿಂದ, ಮನೆಗೆ ಹಿಂದಿರುಗಲು ಪ್ರತೀಕ್‌ಗೆ ಯಾವುದೇ ಮಾರ್ಗವಿರಲಿಲ್ಲ, ಅದರಲ್ಲೂ ವಿಶೇಷವಾಗಿ ಕರೋನವೈರಸ್ ಸಾಂಕ್ರಾಮಿಕಕ್ಕೆ ಸಂಬಂಧಿಸಿದ ರಾಜ್ಯದ ಸುರಕ್ಷತಾ ಮಾರ್ಗಸೂಚಿಗಳಿಗೆ ಅನುಗುಣವಾಗಿ ಪ್ರಯಾಣಿಸುವುದು ಸುರಕ್ಷಿತವಾಗಿರಲಿಲ್ಲ.


ಲಾಕ್‌ಡೌನ್‌ ವಿಸ್ತರಣೆಯಾದಾಗ ಜಿಲ್ಲಾ ಅಧಿಕಾರಿಗಳನ್ನು ಸಂಪರ್ಕಿಸಿ ಆನ್‌ಲೈನ್‌ ಪಾಸ್‌ಗೆ ಅರ್ಜಿ ಸಲ್ಲಿಸಿದರು. ಆದರೆ ಕಾರ್‌ನಿಂದ ಪ್ರಯಾಣಿಸುವುದಕ್ಕೆ 8 ಸಾವಿರದಷ್ಟು ಖರ್ಚಾಗುತ್ತಿತ್ತು.


ಮಹಾರಾಷ್ಟ್ರದ ಚೆಕ್‌ ಪಾಯಿಂಟ್‌ (ಚಿತ್ರಕೃಪೆ: ಪಿಟಿಐ)




ಸ್ವಲ್ಪ ಸಮಯದ ನಂತರ, ಸೋನು ಪೋಲಿಸ್‌ ಕಮಿಷನರ್ ಕಚೇರಿಯನ್ನು ಸಂಪರ್ಕಿಸಿ ಏಪ್ರಿಲ್ 24 ರಂದು 48 ಗಂಟೆಗಳ ಕಾಲ ಪ್ರಯಾಣಿಸಲು ವಿಶೇಷ ಪರವಾನಗಿ ಪಡೆದರು.


“ಏಪ್ರಿಲ್‌ 24 ರಂದು 48 ಗಂಟೆಗಳ ಪ್ರಯಾಣದ ಪಾಸ್‌ ದೊರೆತ ನಂತರ ನಾನು ಮನೆಗೆ ಹೋಗಿ ಸ್ವಲ್ಪ ಆಹಾರ ಮತ್ತು ನೀರನ್ನು ತೆಗೆದುಕೊಂಡು ನನ್ನ ದ್ವಿಚಕ್ರ ವಾಹನ ಹತ್ತಿ ಮರು ಯೋಚಿಸದೆ ಹೊರಟುಬಿಟ್ಟೆ,” ಎಂದರು, ವರದಿ ದಿ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್.


ಬೀದಿ ದೀಪಗಳಿಲ್ಲದೆ, ವಾಹನದ ಹೆಡ್‌ ಲೈಟ್‌ನಿಂದ ಮಾತ್ರ ದಾರಿಯಲ್ಲಿ ಸಾಗುತ್ತಿರುವಾಗ ಪ್ರತಿಯೊಂದು ಚೆಕ್‌ ಪೋಸ್ಟ್‌ನಲ್ಲಿ ನಿಲ್ಲಿಸಿ ಇವರನ್ನು ಪ್ರಶ್ನಿಸಲಾಯಿತು. ಇದು ಅವರ ಸಂಯಮವನ್ನು ಪ್ರಶ್ನಿಸುತ್ತಿತ್ತು ಎನ್ನುತ್ತಾರೆ ಸೋನು. ಅದರಲ್ಲೂ ಮರಾಥಾವಾಡಾ ಮತ್ತು ವಿದರ್ಭಾ ಪ್ರದೇಶಗಳ ದುರ್ಗಮವಾದ ಹಾದಿ ಮತ್ತು ಕಠಿಣ ಹವಾಮಾನದಿಂದಾಗಿ ಪ್ರಯಾಣ ತುಂಬಾ ಕಷ್ಟವಾಗಿತ್ತು


ಏಪ್ರಿಲ್‌ 25 ರ ಮುಂಜಾನೆ ಪುಣೆಯಿಂದ ಶುರುವಾಗಿದ್ದ ಪ್ರಯಾಣ ಮಧ್ಯಾಹ್ನ ಅಳಿಯಂದಿರ ಮನೆ ತಲುಪಿ, ಬರೋಬ್ಬರಿ ಒಂದು ತಿಂಗಳ ನಂತರ ತಮ್ಮ ಮಗನನ್ನು ಕೂಡುವ ಮೂಲಕ ಕೊನೆಯಾಯಿತು.