ಹಳ್ಳಿಯ ಚಿಪ್ಸ್- ಸಿಟಿ ಜನರಿಗೆ ಸಖತ್ ಟೇಸ್ಟ್

ಟೀಮ್​ ವೈ.ಎಸ್.ಕನ್ನಡ

14th Aug 2016
  • +0
Share on
close
  • +0
Share on
close
Share on
close

‘ ಚಿಪ್ಸ್’.. ಈ ಹೆಸರೇ ಒಂದು ಮ್ಯಾಜಿಕ್.. ಹೈಟೆಕ್ ಸಿಟಿ ಮಂದಿಯ ಫಟಾಫಟ್ ಫುಡ್ ನಿಂದ ಹಿಡಿದು ಹಳ್ಳಿ ಜನ್ರ ದೇಸೀ ಸ್ಟೈಲ್ ನ ವೆರೈಟಿ ಊಟದ ಮೆನುವಿನವರೆಗೂ ಚಿಪ್ಸ್ ತನ್ನ ಸ್ಥಾನವನ್ನ ಭದ್ರಪಡಿಸಿಕೊಂಡಿದೆ. ಅದ್ರಲ್ಲೂ ಕೆಲಸದ ನಡುವಿನ ಬ್ರೇಕ್ ಟೈಂನಲ್ಲಿ, ಇವ್ನಿಂಗ್ ಸ್ನ್ಯಾಕ್ಸ್ ಟೈಂನಲ್ಲಿ ಚಿಪ್ಸ್ ಮೆಲ್ಲುವುದು ಮಾಮೂಲು. ಇನ್ನು ಪಾರ್ಟಿ ಅಂತೇನಾದ್ರೂ ಯೋಚಿಸಿದ್ರೆ ಅಲ್ಲೂ ಮೊದಲು ನೆನಪಾಗೋ ಮೊದಲ ಸ್ನ್ಯಾಕ್ಸ್ ಅಂದ್ರೆ ಅದು ಚಿಪ್ಸ್.. ಹೀಗಿದೆ ನಮ್ಮ ನಿಮ್ಮ ನಡುವೆ ಚಿಪ್ಸ್ ಬೆಸೆದು ಬೆಳೆದುಕೊಂಡಿರುವ ಸಂಬಂಧ.. ಇನ್ನು ಜನರ ಜಿಹ್ವಾ ಚಪಲವನ್ನ, ಚಿಪ್ಸ್ ಮೇಲಿನ ವ್ಯಾಮೋಹವನ್ನ ಬಂಡವಾಳವನ್ನಾಗಿಸಿಕೊಂಡಿರೋ ಅದೆಷ್ಟೋ ಕಂಪನಿಗಳು ಹಾಗೂ ಉದ್ಯಮಿಗಳು ವಿವಿಧ ಚಿಪ್ಸ್ ಗಳ ತಯಾರಿಕೆಯಲ್ಲೇ ಪ್ರಯೋಗಗಳಿಗೆ ಇಳಿದಿದ್ದಾರೆ. ಅದ್ರಲ್ಲಿ ಸಾಕಷ್ಟು ಲಾಭ ಗಳಿಸುತ್ತಾ, ಚಿಪ್ಸ್ ಉದ್ಯಮದಲ್ಲಿ ಯಶಸ್ಸು ಸಾಧಿಸಿರುವ ಕೆಲವರು ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಇಂತಹ ಗ್ರಾಹಕರ ಅಚ್ಚುಮೆಚ್ಚಿನ ಬ್ರಾಂಡ್ ಗಳ ಸಾಲಿಗೆ ಹೊಸದಾಗಿ ಸೇರ್ಪಡೆಯಾಗಿರೋದು ಮೆಟ್ರೋಫುಡ್ ಪ್ರಾಡಕ್ಟ್ ಕಂಪನಿಯ ಚಿಪ್ಸ್..

image


“ ಮಾರ್ಕೆಟ್ ನಲ್ಲಿ ಸಿಗೋ ವೆರೈಟಿ ಚಿಪ್ಸ್ ಗಳಿಗೇನೂ ಕಮ್ಮಿ ಇಲ್ಲ. ಆದ್ರೆ ಹೋಂ ಮೇಡ್ ಚಿಪ್ಸ್ ಗಳ ಬ್ರಾಂಡ್ ಗಳು ತೀರಾ ಅಪರೂಪ. ಅಲ್ಲದೆ ಜನರು ಕ್ವಾಲಿಟಿ ಚಿಪ್ಸ್ ಇರುವ ವೆರೈಟಿ ಚಿಪ್ಸ್ ಗಳಿಗಾಗಿ ಹುಡುಕಾಡುತ್ತಿರುತ್ತಾರೆ. ಹೀಗಾಗಿ ಮೆಟ್ರೋಫುಡ್ ಪ್ರಾಡಕ್ಟ್ ವಿಶೇಷವಾಗಿ ಚಿಪ್ಸ್ ಗಳ ಸ್ಪೆಷಲ್ ಟೇಸ್ಟನ್ನ ಗ್ರಾಹಕರಿಗೆ ತಲುಪಿಸುತ್ತಿದೆ ” 
- ಬಿಜು ವರ್ಗೀಸ್, ಮೆಟ್ರೋಫುಡ್ ಪ್ರಾಡಕ್ಟ್ ಸಹ ಮಾಲೀಕ

ಉತ್ತಮ ಗುಣಮಟ್ಟದೊಂದಿಗೆ ರುಚಿಕರವಾದ ಚಿಪ್ಸ್ ಗಳನ್ನ ಗ್ರಾಹಕರಿಗೆ ತಲುಪಿಸುವ ಮೂಲಕ ತೀರಾ ಕಡಿಮೆ ಅವಧಿಯಲ್ಲಿ ಮೆಟ್ರೋಫುಡ್ ಪ್ರಾಡಕ್ಟ್ ಬೆಂಗಳೂರಿನಲ್ಲಿ ಸದ್ದು ಮಾಡ್ತಿದೆ. ಬಿಗ್ ಬಜಾರ್ ನಂತಹ ಮಾಲ್ ಗಳಿಂದ ಹಿಡಿದು, ಬಿಗ್ ಬಾಸ್ಕೆಟ್ ನಂತಹ ಇ ಕಾಮರ್ಸ್ ಮಾರ್ಕೆಟ್ ನವರೆಗೂ ಮೆಟ್ರೋಫುಡ್ ಪ್ರಾಡಕ್ಟ್ ಬೆಳೆದಿದೆ. ಈ ಕಂಪನಿಯ ಮುಖ್ಯ ಬೇರು ಇರೋದು ದಕ್ಷಿಣಕನ್ನಡ ಜಿಲ್ಲೆ, ಬೆಳ್ತಂಗಡಿ ತಾಲೂಕಿನ ಕಕ್ಕಿಂಜೆ ಎಂಬ ಪುಟ್ಟ ಗ್ರಾಮದಲ್ಲಿ.. ಇಲ್ಲಿ ತಯಾರಿಸಲ್ಪಡುವ ಸ್ವಾದ ಭರಿತ ಚಿಪ್ಸ್, ಇದೀಗ ಮೂವರು ಸಹೋದರರ ಪರಿಶ್ರಮದ ಬಲದಿಂದ ಬೆಂಗಳೂರಿನಂತಹ ಮಹಾನಗರದಲ್ಲಿ ತನ್ನ ಘಮವನ್ನ ಬೀರುತ್ತಿದೆ. ಸುಮಾರು 20 ವರ್ಷಗಳ ಹಿಂದೆ ಸಣ್ಣ ಪ್ರಮಾಣದಲ್ಲಿ ಶುರುವಾದ ಈ ಕುಟುಂಬದ ಚಿಪ್ಸ್ ಉದ್ಯಮ ಕರಾವಳಿಯಲ್ಲಿ ಭಾರೀ ಹೆಸರು ಮಾಡಿದೆ. ಇದೀಗ ಕರಾವಳಿ ಗಡಿ ದಾಟಿ ರಾಜಧಾನಿಯಲ್ಲೂ ಬೆಳೆಯುತ್ತಿರೋದು ವಿಶೇಷ.

" ಬೆಂಗಳೂರಿನಲ್ಲಿ ಮೆಟ್ರೋಫುಡ್ ಪ್ರಾಡಕ್ಟ್ ಮೊದಲು ಕಾಲಿಟ್ಟಿದ್ದು ಬಿಗ್ ಬಜಾರ್ ಗೆ. ವಿಶೇಷವಾಗಿ ಬಾಳೆಕಾಯಿ ಚಿಪ್ಸ್ ಗಳನ್ನ ಉತ್ಪಾದಿಸುತ್ತಿದ್ದ ಈ ಕಂಪನಿ ಕ್ರಮೇಣ ಅದರಲ್ಲೇ ವಿವಿಧ ವೆರೈಟಿ ಟೇಸ್ಟ್ ಗಳನ್ನ ಪರಿಚಯಿಸಿತು. ಸಾಲ್ಟೆಡ್ ಚಿಪ್ಸ್, ಪೆಪ್ಪರ್, ಚಿಲ್ಲಿ ಹಾಗೂ ಟೊಮ್ಯಾಟೋದ ಎಕ್ಟ್ರಾ ಸ್ವಾದಗಳನ್ನ ಬಾಳೆಕಾಯಿ ಚಿಪ್ಸ್ ಗಳಲ್ಲಿ ಬೆರೆಸುವ ಮೂಲಕ ಹೊಸ ರುಚಿ ನೀಡಿತು. ಈ ಮೂಲಕ ಗ್ರಾಹಕರ ಮೆಚ್ಚುಗೆ ಹಾಗೂ ರಿಟೇಲ್ ವ್ಯಾಪಾರಿಗಳ ಬೆಂಬಲ ಪಡೆದಿರುವ ಮೆಟ್ರೋಫುಡ್ ಪ್ರಾಡೆಕ್ಟ್ ಇದೀಗ ಇತರೆ ಮಾಲ್ ಗಳಿಗೂ ಕಾಲಿಟ್ಟಿದೆ. ಈ ಯಶಸ್ಸಿಗೆಲ್ಲಾ ಕಾರಣ ಮೆಟ್ರೋಫುಡ್ ಪ್ರಾಡಕ್ಟ್ ಹೊಂದಿರುವ ಗುಣಮಟ್ಟ ಹಾಗೂ ವಿಶೇಷ ರುಚಿ ಪ್ರಮುಖ ಕಾರಣ"
- ಬಿಜು ವರ್ಗೀಸ್, ಮಾಲೀಕ

ಬೆಂಗಳೂರಿನ ಕಾಂಡಿಮೆಂಟ್ಸ್ ಗಳಲ್ಲಿ ಈಗಾಗಲೇ ಹೊಸ ಹೊಸ ಅವತಾರಗಳು ಸೃಷ್ಠಿಯಾಗಿವೆ. ವಿವಿಧ ಕಂಪನಿಗಳ ನಡುವೆ ಇರುವ ಪೈಪೋಟಿಗಳೂ ಜೋರಾಗಿವೆ. ಇಂತಹ ಪರಿಸ್ಥಿತಿಯಲ್ಲಿ ಹೊಸ ಉತ್ಪನ್ನವನ್ನ ಮಾರುಕಟ್ಟೆಯಲ್ಲಿ ಬೆಳೆಸುವುದು ಸುಲಭವಲ್ಲ. ಹಾಗೇ ಮೆಟ್ರೋಫುಡ್ ಪ್ರಾಡಕ್ಟ್ ಕೂಡ ಹಲವು ಸಮಸ್ಯೆ ಹಾಗೂ ಸವಾಲುಗಳನ್ನ ಆರಂಭದಲ್ಲಿ ಎದುರಿಸಿತ್ತು. ಆದ್ರೆ ಗುಣಮಟ್ಟ ಪರೀಕ್ಷೆಯಲ್ಲಿ ಸರ್ಟಿಫಿಕೇಟ್ ಪಡೆದಿರುವ ಮೆಟ್ರೋಫುಡ್ ಪ್ರಾಡಕ್ಟ್ ಯಾವುದೇ ಜಾಹೀರಾತು ಹಾಗೂ ಪ್ರಚಾರದ ಹಂಗಿಲ್ಲದೆ ಎಲ್ಲವನ್ನೂ ಮೀರಿ ನಿಂತಿರೋದು ವಿಶೇಷ.

ಆರಂಭದಲ್ಲಿ ಬಾಳೆಕಾಯಿ ಚಿಪ್ಸ್ ಗಳನ್ನ ಗ್ರಾಹಕರಿಗೆ ನೀಡಿದ್ದ ಮೆಟ್ರೋಫುಡ್ ಪ್ರಾಡಕ್ಟ್ ಇದೀಗ ಆಲೂ ಚಿಪ್ಸ್ ಗಳನ್ನ ಪರಿಚಯಿಸುತ್ತಿದೆ. ಭವಿಷ್ಯದಲ್ಲಿ ಒಂದೇ ಕಡೆ ಒಂದು ಕುಟುಂಬಕ್ಕೆ ಬೇಕಾಗಿರುವ ಎಲ್ಲಾ ಉತ್ಪನ್ನಗಳನ್ನ ಒದಗಿಸುವುದು ಮೆಟ್ರೋಫುಡ್ ಪ್ರಾಡಕ್ಟ್ ನ ಯೋಜನೆ. ಈಗಾಗಲೇ 30 ಮಂದಿಗೆ ಉದ್ಯೋಗ ನೀಡಿರುವ ಮೆಟ್ರೋಫುಡ್ ಪ್ರಾಡಕ್ಟ್ ಕಂಪನಿ ಇನ್ನಷ್ಟು ಹೊಸ ಪ್ರಯೋಗಗಳನ್ನ ಮಾಡುವ ಮೂಲಕ ಮತ್ತಷ್ಟು ಮಂದಿಗೆ ಉದ್ಯೋಗವಕಾಶವನ್ನ ಒದಗಿಸುವ ಗುರಿಯನ್ನೂ ಹೊಂದಿದೆ. ಹೀಗೆ ಪುಟ್ಟ ಗ್ರಾಮವೊಂದರಲ್ಲಿ ಹುಟ್ಟಿಕೊಂಡ ಪುಟ್ಟ ಉದ್ಯಮ ಇದೀಗ ಬೆಂಗಳೂರಿನಂತಹ ಮೆಟ್ರೋ ನಗರದಲ್ಲಿ ಸದ್ದು ಮಾಡ್ತಿರೋದು ವಿಶೇಷ. 

ಇದನ್ನು ಓದಿ:

1. ಇಳಿ ವಯಸ್ಸಿನಲ್ಲಿ ಉದ್ಯಮ ಆರಂಭಿಸಿ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆದ ಸಹೋದರಿಯರು

2. ಪೂಜೆ ಮಾಡೋದು ಮಾತ್ರ ನಿಮ್ಮ ಕೆಲಸ- ವಸ್ತು ತಂದುಕೊಡುವುದು ನಮ್ಮ ಕೆಲಸ..!

3. ಬೆಂಗಳೂರನ್ನು ಕೈ ಬಿಟ್ಟು ಉದ್ಯಮ ಆರಂಭಿಸಿ- ಸ್ಟಾರ್ಟ್​ಅಪ್​ ಲೋಕದಲ್ಲಿ ಯಶಸ್ಸು ಪಡೆಯಿರಿ

  • +0
Share on
close
  • +0
Share on
close
Share on
close
Report an issue
Authors

Related Tags

ಸೈನ್ ಅಪ್ ನಮ್ಮ ದೈನಂದಿನ ಸುದ್ದಿಪತ್ರಕ್ಕಾಗಿ

Our Partner Events

Hustle across India