ಕನ್ನಡ ಬೆಳಸಲು ಆರಂಭವಾಯ್ತು "ಡಿಂಡಿಮ"
ಟೀಮ್ ವೈ.ಎಸ್. ಕನ್ನಡ
ಕಾಲ ಕಳೆಯುತ್ತಾ ಇದ್ದಂತೆ ಯೋಚನೆಗಳು ಚಿಂತನೆಗಳು ಕೂಡ ಬದಲಾಗುತ್ತಾ ಹೋಗುತ್ತಿದೆ. ಇನ್ನೂ ಈಗಿನ ಕಾಲದಲ್ಲಿ ಪಾಸಿಟಿವ್ ಯೋಚನೆಗಳಿಗಿಂದ ಹೆಚ್ಚಾಗಿ ನೆಗೆಟಿವ್ ಯೋಚನೆಗಳೆ ಹೆಚ್ಚಾಗಿವೆ. ಆದ್ರೆ ಕನ್ನಡವನ್ನ ,ಕನ್ನಡ ಜನತೆಯನ್ನ ಕೇವಲ ಸಕರಾತ್ಮಕ ಯೋಚನೆಗಳತ್ತ ಕೊಂಡಯ್ಯಬೇಕು ಅನ್ನುವ ಉದ್ದೇಶದಿಂದ ಹೊಸದೊಂದು ತಂಡ ಹುಟ್ಟಿಕೊಂಡಿದೆ. ಅದು ಬಾರಿಸು ಕನ್ನಡ ಡಿಂಡಿಮವಾ ಅನ್ನೋ ಮಾತಿನಂತೆ ಇದೂ ಕೂಡ ಕನ್ನಡವನ್ನ ,ನಮ್ಮ ಸಂಸ್ಕೃತಿಯನ್ನ, ಪರಂಪತೆಯನ್ನ, ನಮ್ಮ ನೆಲವನ್ನ ಪರಿಚಯಿಸುವ ಉದ್ದೇಶದಿಂದ ಹುಟ್ಟಿಕೊಂಡಿರುವ ಆ್ಯಪ್.
"ಡಿಂಡಿಮ" ಆ್ಯಪ್ ಮೂಲಕ ಪಸರಿಸುತ್ತಿದೆ ಕನ್ನಡ
"ಡಿಂಡಿಮ" ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನ ಎಲ್ಲೆಡೆ ಪಸರಿಸಲು ಹುಟ್ಟಿಕೊಂಡಿರುವ ಆ್ಯಪ್. ಶಿರಸಿ ಮೂಲದ ಮಹಾಬಲೇಶ್ವರ್ ಅವರು ಈ ಭೂಮಿಯಲ್ಲಿ ಹುಟ್ಟಿ ಈ ನೆಲಕ್ಕೆ ಮತ್ತು ಭಾಷೆಗೆ ಏನಾದ್ರೂ ಕೊಡುಗೆ ನೀಡಬೇಕು ಅನ್ನುವ ಉದ್ದೇಶದಿಂದ ಪ್ರಾರಂಭ ಮಾಡಿರೋ ಹೊಚ್ಚ ಹೊಸ ಆ್ಯಪ್. ಕನ್ನಡದ ಬಗ್ಗೆ ಕೇವಲ ಪಾಸಿಟಿವ್ ವಿಚಾರಗಳನ್ನ ಮಾತ್ರ ನೀಡುವ ಆ್ಯಪ್ ಇದಾಗಿದ್ದು ಕೇವಲ ಕನ್ನಡ ಭಾಷೆ ಮಾತ್ರವಲ್ಲದೆ ಆರೋಗ್ಯ,ತಂತ್ರಜ್ಞಾನ, ಸಂಸ್ಕೃತಿ, ಉದ್ಯಮ ಹೀಗೆ ಈ ಎಲ್ಲಾ ಕ್ಷೇತ್ರಗಳಲ್ಲೂ ಸಕರಾತ್ಮಕ ವಿಚಾರಗಳು ಮತ್ತು ಸಾಧನೆ ಮಾಡಿದವರ ಬಗ್ಗೆ ಕನ್ನಡದ ಜನತೆಗೆ ತಿಳಿಸುವುದೇ ಈ ಆ್ಯಪ್ನ ಉದ್ದೇಶ.
ದೇಶದ ಮೂಲೆ ಮೂಲೆಯಲ್ಲೂ "ಡಿಂಡಿಮ"ದ ಸದ್ದು
ತಂತ್ರಜ್ಞಾನ ಈಗ ಮುಂಚೂಣಿಯಲ್ಲಿ ಇರುವುದರಿಂದ "ಡಿಂಡಿಮ"ಆ್ಯಪ್ ಕೂಡ ದೇಶದ ಮೂಲೆ ಮೂಲೆಗೂ ತಲುಪಿದೆ. ಸ್ಮಾರ್ಟ್ ಫೋನ್ಗಳು ಮತ್ತು ಕಾಮನ್ ಫೋನ್ಗಳಲ್ಲೂ ಈ "ಡಿಂಡಿಮ" ಆ್ಯಪ್ ಲಭ್ಯವಿದ್ದು ಪಾಸಿಟಿವ್ ವಿಚಾರಗಳು ಮತ್ತು ಯೋಚನೆಗಳು ಸದಾ ಜೊತೆಯಲ್ಲಿರಬೇಕು ಅನ್ನುವ ಆಸೆ ಇರುವವರು ಈ ಆ್ಯಪ್ ಅನ್ನ ಬಳಕೆ ಮಾಡಬಹುದು. ಈ ಆ್ಯಪ್ ನಲ್ಲಿ ಕೇವಲ ಸುದ್ದಿ ಮಾತ್ರವಲ್ಲದೆ ಕನ್ನಡದಲ್ಲಿ ಅಂಕಣಗಳು ಕೂಡ ಪ್ರಕಟವಾಗುತ್ತದೆ. ವಿದೇಶದಲ್ಲಿರುವ ಕನ್ನಡಿಗರಿಗಾಗಿ ಒಂದು ಬ್ಲಾಗ್ ಅನ್ನ ಬಿಟ್ಟುಕೊಟ್ಟಿದ್ದು ಅಲ್ಲಿಂದಲೇ ಬರಹಗಾರರು ಅಂಕಣಕ್ಕೆ ಹಾಟ್‍ಟಾಪಿಕ್ ಬಗ್ಗೆ ಲೇಖನಗಳನ್ನ ಬರೆಯುತ್ತಾರೆ. ಇದರಿಂದ ಕನ್ನಡಿಗರಿಗೂ ತಮ್ಮ ಭಾಷೆಯ ಮೇಲಿನ ಪ್ರೀತಿ ಮತ್ತು ಭಾಷೆಯನ್ನಎಲ್ಲೆಡೆ ಪಸರಿಸುವುದಕ್ಕಲೆ ಉಪಯೋಗ ಆಗ್ತಿದೆ. ವಿದೇಶಗಳಲ್ಲಿ ಕನ್ನಡ ಪತ್ರಿಕೆಗಳಿಗೆ ಮತ್ತು ತಮ್ಮ ಅನಿಸಿಕೆಗಳನ್ನ ವ್ಯಕ್ತಪಡಿಸಲು ಇಚ್ಛೆ ಹೊಂದಿರುವ ಗುಂಪು "ಡಿಂಡಿಮ" ಆ್ಯಪ್ ಮೂಲಕ ತಮ್ಮ ಅಭಿಪ್ರಾಯಗಳನ್ನ ಬರೆಯುತ್ತಿದ್ದಾರೆ. ಅದಷ್ಟೆ ಅಲ್ಲದೆ ವಿದೇಶದಲ್ಲಿ ನಡೆಯುವ ಕನ್ನಡ ಕಾರ್ಯಕ್ರಮಗಳ ಬಗ್ಗೆಯೂ ಇಲ್ಲಿ ಸುದ್ದಿಯನ್ನ ಪ್ರಕಟಣೆ ಮಾಡಲಾಗುತ್ತದೆ.
" ಕನ್ನಡವರಾಗಿ ಕನ್ನಡಕ್ಕೆ ಏನಾದರೂ ಮಾಡಬೇಕು ಅನ್ನುವ ಹಂಬಲ ಇತ್ತು. ಆಗ ಸ್ನೇಹಿತರೆಲ್ಲಾ ಸೇರಿ ಜನರಿಗೆ ಮಾತೃಭಾಷೆಯನ್ನು ತಲುಪಿಸುವ ಜೊತೆಗೆ ಉತ್ತಮ ಮತ್ತು ಸಕಾರಾತ್ಮಕ ವಿಚಾರಗಳನ್ನು ಹೇಳೋಣ ಅಂತ ನಿರ್ಧಾರ ಮಾಡಿದ್ದೆವು. ಅದರ ಫಲವೇ ಡಿಂಡಿಮ "
- ಮಹಾಬಲೇಶ್ವರ್, ಡಿಂಡಿಮ ಆ್ಯಪ್ ತಯಾರಕರು
ಕನ್ನಡದ ಮೇಲಿನ ಪ್ರೀತಿ,ಸ್ನೇಹಿತರ ಸಹಯೋಗ
"ಡಿಂಡಿಮ"ಆ್ಯಪ್ ಅನ್ನು ಕೇವಲ ಮೂರೇ ತಿಂಗಳಲ್ಲಿ 7ಸಾವಿರ ಜನರು ಡೌನ್‍ಲೋಡ್ ಮಾಡಿದ್ದು ಮಹಾಬಲೇಶ್ ಅವರ ಜೊತೆಯಾಗಿ 8 ಜನರು ಇದಕ್ಕಾಗಿ ಶ್ರಮಿಸಿದ್ದಾರೆ. ಸಾಕಷ್ಟು ಜನರು ಈ ಆ್ಯಪ್ ಅನ್ನ ಮೆಚ್ಚಿ ಕೊಂಡಾಡಿದ್ದಾರೆ. ಸ್ನೇಹಿತರೆಲ್ಲಾ ಸೇರಿ ಕನ್ನಡಕ್ಕಾಗಿ ಏನಾದ್ರು ಕೊಡುಗೆ ನೀಡೋಣ ಎಂದು ನಿರ್ಧಾರ ಮಾಡಿದಾಗ ಹುಟ್ಟಿಕೊಂಡಿರೋದೆ ಈ ಡಿಂಡಿಮ ಆ್ಯಪ್. ಇದರ ಜೊತೆಯಾಗಿ ಕನ್ನಡದ ಮುಂಚೂಣಿಯಲ್ಲಿರುವ ದಿನಪತ್ರಿಕೆಗಳಲ್ಲಿ ಬರುವ ಸಕಾರಾತ್ಮಕ ವಿಚಾರಗಳು ಕೂಡ ಇಲ್ಲಿ ಓದಲು ಸಿಗುತ್ತದೆ. ಇದೇ ರೀತಿಯಲ್ಲಿ ಕನ್ನಡ ನಾಡು ನುಡಿಯನ್ನ ಉತ್ತಮ ಹಾದಿಯಲ್ಲಿ ಬೆಳೆಸಲು ಈ "ಡಿಂಡಿಮ" ತಂಡ ಪ್ರತಿನಿತ್ಯ ಕಾರ್ಯ ನಿರ್ವಹಿಸುತ್ತಿದೆ.
1. ಅಡುಗೆ ಬರಲ್ಲ ಅನ್ನುವ ಟೆನ್ಷನ್ ಬಿಟ್ಟುಬಿಡಿ- ಆ್ಯಪ್ ಡೌನ್ಲೋಡಿ ಮಾಡಿ ಅಡುಗೆ ಕಲಿಯಿರಿ..!
2. 10,000 ಸಾಲದಿಂದ ಕೋಟ್ಯಾಧಿಪತಿಯಾದ ದಿಲೀಪ್ ಶಾಂಘ್ವಿ ಕಥೆ..!
3. ಕೆಲಸದ ಟೆನ್ಷನ್ ಬಿಟ್ಟು ಬಿಡಿ- ಒಂದು ದಿನ ಕೃಷಿಕರಾಗಿ ಎಂಜಾಯ್ ಮಾಡಿ..!