Brands
Discover
Events
Newsletter
More

Follow Us

twitterfacebookinstagramyoutube
ADVERTISEMENT
Advertise with us

500 ವಿದ್ಯುತ್ ಚಾಲಿತ ಕ್ಯಾಬ್ ಗಳನ್ನು ದೆಹಲಿಗೆ ಪರಿಚಯಿಸಿದ ಪ್ರಕೃತಿ ಇ-ಮೊಬಿಲಿಟಿ ಪ್ರೈವೇಟ್ ಲಿಮಿಟೆಡ್

‘ಪ್ರಕೃತಿ ಇ-ಮೊಬಿಲಿಟಿ ಪ್ರೈವೇಟ್ ಲಿಮಿಟೆಡ್' ದೆಹಲಿಯಲ್ಲಿ 500 ಎಲೆಕ್ಟ್ರಿಕ್ ವಾಹನಗಳನ್ನು ವಾಯುಮಾಲಿನ್ಯವನ್ನು ಕಡಿಮೆಗೊಳಿಸುವ ಉದ್ದೇಶದಿಂದ ಪರಿಚಯಿಸಿದೆ ಮತ್ತು ಮುಂದಿನ ಎರಡು ವರ್ಷಗಲ್ಲಿ 5000 ವಾಹನಗಳನ್ನು ನಿಯೋಜಿಸುವ ಗುರಿಯನ್ನು ಹೊಂದಿದೆ.

500 ವಿದ್ಯುತ್ ಚಾಲಿತ ಕ್ಯಾಬ್ ಗಳನ್ನು ದೆಹಲಿಗೆ ಪರಿಚಯಿಸಿದ ಪ್ರಕೃತಿ ಇ-ಮೊಬಿಲಿಟಿ ಪ್ರೈವೇಟ್ ಲಿಮಿಟೆಡ್

Wednesday December 11, 2019 , 2 min Read

ಇತ್ತೀಚೆಗಷ್ಟೇ ತೀವ್ರ ವಾಯುಮಾಲಿನ್ಯದ ಕಾರಣದಿಂದ ಬಹಳ ಸುದ್ದಿಯಲ್ಲಿದ್ದ ದೆಹಲಿ ಇದೀಗ ಉತ್ತಮ ಪರಿಹಾರ ಕ್ರಮದೊಂದಿಗೆ ಜನರ ಮುಂದೆ ಬಂದಿದೆ.


ಪ್ರಕೃತಿ ಇ-ಮೊಬಿಲಿಟಿ ಪ್ರೈವೇಟ್ ಲಿಮಿಟೆಡ್ ವಾಯುಮಾಲಿನ್ಯವನ್ನು ಎದುರಿಸಲು ಈ ತಿಂಗಳು ರಾಷ್ಟ್ರೀಯ ರಾಜಧಾನಿ ದೆಹಲಿಯಲ್ಲಿ ಎಲೆಕ್ಟ್ರಿಕ್ ವೆಹಿಕಲ್ ಕ್ಯಾಬ್‌ಗಳನ್ನು ತರಲು ಯೋಜಿಸಿದೆ. ಈ ಸ್ಟಾರ್ಟ್ಅಪ್ ಮೊದಲ ಹಂತದಲ್ಲಿ 500 ಎಲೆಕ್ಟ್ರಿಕ್ ವಾಹನಗಳನ್ನು ಪರಿಚಯಿಸಲಿದ್ದು, ಮುಂದಿನ ಎರಡು ವರ್ಷಗಳಲ್ಲಿ ಆ ಸಂಖ್ಯೆ 5,000 ಕ್ಕೆ ಮುಟ್ಟಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ. ಅಪ್ಲಿಕೇಶನ್ ಆಧಾರಿತ ಎಲೆಕ್ಟ್ರಿಕ್ ವೆಹಿಕಲ್ ಕ್ಯಾಬ್ ಸೇವೆಗಳನ್ನು "ಎವೇರಾ" ಎಂದು ಕರೆಯಲಾಗುತ್ತದೆ.


ಗ್ರಾಹಕರಿಗೆ ಸಂತೋಷಕರ ಸೇವೆಯನ್ನು ಒದಗಿಸಲು ನಾವು ಬಯಸಿದ್ದೇವೆ ಮತ್ತು ಸ್ವಚ್ಚವಾದ ವಾತಾವರಣದ ನಿರ್ಮಾಣಕ್ಕೂ ಸಹಕಾರಿಯಾಗಲು ಅವರಿಗೆ ಅವಕಾಶ ನೀಡುತ್ತೇವೆ. ‘ಎವೆರಾ' ಸೇವೆಯು ಪಾಯಿಂಟ್ ಎ ಯಿಂದ ಪಾಯಿಂಟ್ ಬಿ ಗೆ ಗ್ರಾಹಕರನ್ನು ತಲುಪಿಸುದರ ಮೇಲೆ ಕೇಂದ್ರೀಕರಿಸಿದೆ ಮಾತ್ರವಲ್ಲದೆ ನಮ್ಮ ಜಾಗತಿಕ ತಾಪಮಾನ ತಗ್ಗಿಸುವಲ್ಲಿ ಇದು ಸಹಕಾರಿಯಾಗುತ್ತದೆ"

ಎಂದು ಪ್ರಕೃತಿ ಇ-ಮೊಬಿಲಿಟಿ ಪ್ರೈವೇಟ್ ಲಿಮಿಟೆಡ್‌ನ ಸಹ ಸಂಸ್ಥಾಪಕ ಮತ್ತು ಸಿಇಒ ನಿಮಿಶ್ ತ್ರಿವೇದಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.


ಮಾಲಿನ್ಯ ನಿಯಂತ್ರಣದ ಅಂಶಗಳು ಗ್ರಾಹಕರ ಮೇಲೆ ಪರಿಣಾಮ ಬೀರುತ್ತದೆ ಆದ್ದರಿಂದ ನಮ್ಮ ಕ್ಯಾಬ್ ನಲ್ಲಿ "ಗ್ರಾಹಕರು ಬೆಲೆ ಏರಿಕೆಯ ಬಗ್ಗೆ ಚಿಂತಿಸದೆ ಕ್ಯಾಬ್‌ಗಳನ್ನು ಕಾಯ್ದಿರಿಸಬಹುದು ಮತ್ತು ಸವಾರಿಯನ್ನು ಪಾವತಿಸದೆ ರದ್ದುಗೊಳಿಸುವ ಸಾಮರ್ಥ್ಯವನ್ನು ಹೊಂದಿರುತ್ತಾರೆ" ಎಂದು ಅವರು ಹೇಳಿದ್ದಾರೆ.


ಅಲ್ಲದೆ, ದೇಶದಲ್ಲಿ ಸೌಂಡ್ ಚಾರ್ಜಿಂಗ್ ಮೂಲಸೌಕರ್ಯಗಳ ಕೊರತೆಯು ಎಲೆಕ್ಟ್ರಿಕ್ ವಾಹನಗಳಿಗೆ ರಸ್ತೆ ತಡೆಗಳಲ್ಲಿ ಒಂದಾಗಬಹುದು ಎಂದು ಅರಿತುಕೊಂಡ ಈ ಸ್ಟಾರ್ಟ್ಅಪ್, ಅಸ್ತಿತ್ವದಲ್ಲಿರುವ ಚಾರ್ಜಿಂಗ್ ಮೂಲಸೌಕರ್ಯಗಳನ್ನು ಸ್ಥಾಪಿಸಲು ಈಗಾಗಲೇ ಮಾತುಕತೆ ನಡೆಸುತ್ತಿದೆ.


ನವೆಂಬರ್‌ನಲ್ಲಿ, ದೆಹಲಿ, ಪಂಜಾಬ್ ಮತ್ತು ಹರಿಯಾಣದ ಉನ್ನತ ಅಧಿಕಾರಿಗಳು ವಾಯುಮಾಲಿನ್ಯವನ್ನು ಪರೀಕ್ಷಿಸಲು ತಮ್ಮ ರಾಜ್ಯಗಳು ಕೈಗೊಂಡಿರುವ ಪ್ರಧಾನ ಮಂತ್ರಿಗಳ ಕಚೇರಿ (ಪಿಎಂಒ) ಕ್ರಮಗಳ ಮುಂದೆ ಮಿಶ್ರಾ ತಮ್ಮ ಯೋಜನೆಯನ್ನು ವಿವರಿಸಿದ್ದಾರೆ,


ಪ್ರಧಾನ ಮಂತ್ರಿಗಳ ಕಚೇರಿ (ಪಿಎಂಒ) ತನ್ನ ನಿರ್ಣಯದಲ್ಲಿ ಈ ಯೋಜನೆಗೆ ಬೆಂಬಲ ಸೂಚಿಸಿದೆ, ಮತ್ತು ಕೃಷಿ ತ್ಯಾಜ್ಯ ಸುಡುವವರ ಮೇಲೆ ದಂಡ ವಿಧಿಸುವುದು, ಹಾಟ್ ಸ್ಪಾಟ್ ಎಂದು ಗುರುತಿಸಿದ ಸ್ಥಳಗಳ ಮೇಲೆ ನೀರನ್ನು ಸಿಂಪಡಿಸುವ ಯೋಜನೆಗಳು ಒಳಗೊಂಡಿವೆ.