10 ಸಾವಿರ ರೂಪಾಯಿಯೊಂದಿಗೆ ಇ-ಕಾಮರ್ಸ್‌ ಕಂಪನಿ ಆರಂಭಿಸಿದ 26 ವರ್ಷದ ಈ ಯುವಕನ ಆದಾಯವೀಗ 50 ಲಕ್ಷ ರೂ

ಸಿಸಿಟಿವಿ ಆಪರೇಟರ್ ಆಗಿದ್ದ ತಿರುಪುರ ಮೂಲದ ಎಂಜಿನಿಯರ್ ಜುಬೈರ್ ರೆಹಮಾನ್‌ರವರು, ಆನ್‌ಲೈನ್‌ನಲ್ಲಿ ಉಡುಪುಗಳನ್ನು ಮಾರಾಟ ಮಾಡಲು ಇ-ಕಾಮರ್ಸ್ ಕಂಪನಿ ಆರಂಭಿಸಿದರು.

5th Oct 2019
  • +0
Share on
close
  • +0
Share on
close
Share on
close

2014ರಲ್ಲಿ ಜುಬೈರ್‌ ರೆಹಮಾನ್‌ರವರು ಸಿಸಿಟಿವಿ ಆಪರೇಟರ್‌ ಆಗಿ ತಮಿಳುನಾಡಿನ ತಿರುಪುರದಲ್ಲಿ ಕೆಲಸ ಮಾಡುತ್ತಿದ್ದರು. ಇಲೆಕ್ಟ್ರಿಕಲ್‌ ಎಂಡ್ ಇಲೆಕ್ಟ್ರಾನಿಕ್ಸ್‌ ಇಂಜಿನೀಯರಿಂಗ್‌ ಪದವಿ ಮುಗಿಸಿದ ಬಳಿಕ, ಅಗತ್ಯವಿರುವ ಕಚೇರಿಗಳಿಗೆ ಹೋಗಿ ಅವರ ಆವರಣದಲ್ಲಿ ಸಿಸಿಟಿವಿ ಅಳವಡಿಸುವ ಕೆಲಸ ಮಾಡುತ್ತಿದ್ದರು


ಆದರೆ ಅವರ ಮನಸ್ಸು ಬೇರೆ ಕೆಲಸದೆಡೆಗೆ ಸೆಳೆಯುತ್ತಿತ್ತು, ಅವರಿಗೆ ಒಂದು ಸ್ವಂತ ಉದ್ಯೋಗ ಮಾಡುವ ಬಯಕೆ ಇತ್ತು, ಆದರೆ ಏನು ಮಾಡಬೇಕೆಂಬ ಸ್ಪಷ್ಟ ನಿರ್ಧಾರ ಇರಲಿಲ್ಲ.


ಹೀಗೆ ಆಲೋಚಿಸುತ್ತಿರುವಾಗಲೇ, ಇವರಿಗೆ ಒಂದು ದಿನ ಇ-ಕಾಮರ್ಸ್‌ ಕಂಪನಿಯೊಂದರಲ್ಲಿ ಸಿಸಿಟಿವಿ ಅಳವಡಿಸಲು ಮನವಿ ಬರುತ್ತದೆ.


ಅದನ್ನು ನೆನಪಿಸಿಕೊಳ್ಳುತ್ತಾ ಹೀಗೆ ಹೇಳುತ್ತಾರೆ:


“ನಾನು ಸಿಸಿಟಿವಿ ಅಳವಡಿಸಲು ಕಂಪನಿಗೆ ಹೋಗಿದ್ದೆ ಮತ್ತು ಕಂಪನಿ ಹೇಗೆ ಕಾರ್ಯನಿರ್ವಹಿಸುತ್ತದೆ ಎನ್ನುವ ಬಗ್ಗೆ ಕುತೂಹಲ ಹೊಂದಿದ್ದೆ. ಅಲ್ಲಿನ ವ್ಯವಸ್ಥಾಪಕರ ಬಳಿ ಮಾತನಾಡಿದೆ, ಅವರು ವಸ್ತುಗಳನ್ನು ಸಂಗ್ರಹಿಸುವ ಮತ್ತು ಮಾರಾಟ ಮಾಡುವ ಮೂಲಕ ಕಂಪನಿ ಹೇಗೆ ಲಾಭಗಳಿಸುತ್ತದೆಂದು ನನಗೆ ತಿಳಿಸಿದರು.”

ಈ ಯೋಚನೆ ಜುಬೈರ್ ಅವರಿಗೆ ಹಿಡಿಸಿತು. ಇ-ಕಾಮರ್ಸ್‌ ಮಾರುಕಟ್ಟೆ ಸ್ಥಾಪಿಸಲು ಅವರು ಹೆಚ್ಚಿನ ಪ್ರಮಾಣದಲ್ಲಿ ಹಣ ಹೂಡಿಕೆ ಮಾಡಬೇಕಾಗಿರಲಿಲ್ಲ.


ದಿ ಫ್ಯಾಶನ್‌ ಫ್ಯಾಕ್ಟರಿಯ ಸಂಸ್ಥಾಪಕರಾದ ಜುಬೈರ್ ರೆಹಮಾನ್‌ರವರು.


ಮಾರುಕಟ್ಟೆಗೆ ಧುಮುಕಿದರು

ತಿರುಪುರದಿಂದ ನಾನು ಪಡೆಯಬಹುದಾದ ಅತ್ಯುತ್ತಮ ಉತ್ಪನ್ನವೆಂದರೆ ಜವಳಿ ಎಂದು ಜುಬೈರ್‌ರವರು ಅರಿತುಕೊಂಡರು. ಈ ನಗರವನ್ನು ಭಾರತದ ಜವಳಿ ರಾಜಧಾನಿ ಎಂದು ಕರೆಯಲಾಗುತ್ತದೆ. ಇದು ಅತ್ಯುತ್ತಮವಾದ ಜವಳಿ ಉತ್ಪನ್ನ ಪರಿಸರ ವ್ಯವಸ್ಥೆಯನ್ನು ಹೊಂದಿದೆ, ಭಾರತದಿಂದ ರಪ್ತಾಗುವ ಹತ್ತಿ ಬಟ್ಟೆಗಳಲ್ಲಿ ಶೇಕಡಾ 90ರಷ್ಟು ಈ ನಗರದಿಂದಲೇ ರಪ್ತಾಗುತ್ತವೆ.


"ನಾನು ಇದನ್ನು ಪ್ರಾರಂಭಿಸಲು ಎರಡು ತಿಂಗಳು ಕಳೆದಿದ್ದೇನೆ ಮತ್ತು ತಿರುಪುರದ ವಿವಿಧ ಜವಳಿ ತಯಾರಕರನ್ನು ಭೇಟಿಯಾಗಿದ್ದೇನೆ. ಜವಳಿಗಳ ಮೂಲಕ್ಕಾಗಿ ಮತ್ತು ಆನ್‌ಲೈನ್‌ನಲ್ಲಿ ಯಾವ ರೀತಿಯ ಬಟ್ಟೆಗಳನ್ನು ಉತ್ತಮವಾಗಿ ಮಾರಾಟವಾಗುತ್ತವೆ ಎನ್ನುವುದನ್ನು ತಿಳಿದುಕೊಳ್ಳಲು ಸ್ನೇಹಿತರೊಂದಿಗೆ ಚರ್ಚಿಸಿದ್ದೇನೆ" ಎನ್ನುತ್ತಾರೆ ಜುಬೈರ್‌ರವರು.


ಈಗ ಅವರು ತಮ್ಮ ಕೆಲಸವನ್ನು ತ್ಯಜಿಸಿ ಉದ್ಯಮಿಯಾಗುವ ನಿರ್ಧಾರಕ್ಕೆ ಬಂದಿದ್ದಾರೆ.


ಭಾರತದಲ್ಲಿ ಎಂಜಿನೀಯರ್‌ಗಳಿಗೆ ಎದುರಾಗಿರುವ ನಿರುದ್ಯೋಗದ ಸಮಸ್ಯೆಯ ನಡುವೆ ಇದೊಂದು ದಿಟ್ಟ ನಿರ್ಧಾರವಾಗಿತ್ತು. 2010 ರಿಂದ ಈಚೆಗೆ ಭಾರತೀಯ ಎಂಜಿನಿಯರಿಂಗ್ ಪದವೀಧರರಿಗೆ ಉದ್ಯೋಗಾವಕಾಶದಲ್ಲಿ ಯಾವುದೇ ಸುಧಾರಣೆ ಕಂಡುಬಂದಿಲ್ಲ ಎಂದು ಪ್ರತಿಭಾ ಮೌಲ್ಯ ಮಾಪನ ಕಂಪನಿ ಆಸ್ಪೈರಿಂಗ್ ಮೈಂಡ್ಸ್‌ ತನ್ನ 2019 ರ ಉದ್ಯೋಗ ವರದಿಯಲ್ಲಿ ತಿಳಿಸಿದೆ.


ಪರಿಸ್ಥಿತಿ ಎಷ್ಟು ಆತಂಕಕಾರಿಯಾಗಿದೆ ಎಂದರೆ, ಪ್ರಸ್ತುತ 80 ಪ್ರತಿಶತ ಎಂಜಿನಿಯರ್‌ಗಳು ತಮ್ಮ ಜ್ಞಾನಕ್ಕನುಗುಣವಾದ ಮತ್ತು ಯೋಗ್ಯ ಸಂಬಳದ ಉದ್ಯೋಗ ಹೊಂದಿಲ್ಲ ಎಂದು ವರದಿ ಹೇಳುತ್ತದೆ.


ಆದ್ದರಿಂದ ಜುಬೈರ್‌ರವರು ಕೆಲಸವನ್ನು ತ್ಯಜಿಸುವ ನಿರ್ಧಾರ ಮತ್ತೆ ಮರಳುವ ಹಂತದ್ದೇನಾಗಿರಲಿಲ್ಲ. ಅದಲ್ಲದೇ ಅವರಿಗೆ ಅಷ್ಟೇನು ಆದಾಯವೂ ಬರುತ್ತಿರಲಿಲ್ಲ.


ಕೇವಲ 10,000 ಹೂಡಿಕೆಯೊಂದಿಗೆ ಜುಬೈರ್‌ರವರು 2015 ರಲ್ಲಿ ದಿ ಫ್ಯಾಶನ್‌ ಫ್ಯಾಕ್ಟರಿಯನ್ನು ತಮ್ಮ ಮನೆಯಲ್ಲಿ ಪ್ರಾರಂಭಿಸುತ್ತಾರೆ.


"ನನ್ನ ವ್ಯವಹಾರಕ್ಕಾಗಿ ರಿಜಿಸ್ಟ್ರೇಶನ್‌ ಮಾಡಿಸಲು ಮತ್ತು ಜಿಎಸ್‌ಟಿ ಸಂಖ್ಯೆ ಪಡೆಯಲು ನನಗೆ ಹೆಚ್ಚಿನ ಹಣ ಬೇಕಾಯಿತು. ಆದ್ದರಿಂದ ನಾನು ಸಣ್ಣ ಪ್ರಮಾಣದಲ್ಲಿ ಪ್ರಾರಂಭಿಸಬೇಕಾಯಿತು: ಬಟ್ಟೆಗಳನ್ನು ಸಣ್ಣ ಪ್ರಮಾಣದಲ್ಲಿ ಸಂಗ್ರಹಿಸಲು ಮತ್ತು ಅವುಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡಲು ಪ್ರಾರಂಭಿಸಿದೆ," ಎಂದು ಅವರು ಹೇಳುತ್ತಾರೆ.

ಮೇಲ್ದರ್ಜೆಗೇರಿಸಿದರು

ಆರಂಭಿಕ ದಿನಗಳಲ್ಲಿ, ಜುಬೇರ್‌ರವರು ಫ್ಲಿಪ್‌ಕಾರ್ಟ್‌ ಮತ್ತು ನಂತರ ಅಮೆಜಾನ್‌ನಲ್ಲಿ ಬಟ್ಟೆಗಳನ್ನು ಪಟ್ಟಿ ಮಾಡಲು ಪ್ರಾರಂಭಿಸಿದರು. ಅವರು ದಿನಕ್ಕೆ ಕೇವಲ ಒಂದು ಅಥವಾ ಎರಡು ಆರ್ಡರ್‌ಗಳನ್ನು ಪಡೆಯುತ್ತಿದ್ದರು, ಆದರೆ ನಂತರದಲ್ಲಿ ಏರಿಕೆಯಾಯಿತು.


ಐದು ಅಥವಾ ಆರು ಘಟಕಗಳ ಕಾಂಬೊ ಪ್ಯಾಕ್‌ಗಳಲ್ಲಿ ಮಕ್ಕಳ ಉಡುಪುಗಳನ್ನು ಮಾರಾಟ ಮಾಡುವಲ್ಲಿ ಜುಬೈರ್‌ರವರು ಗರಿಷ್ಠ ಆಕರ್ಷಣೆ ಕಂಡುಕೊಂಡರು. ಇದರರ್ಥ ಅವರು ಪ್ರತಿ ಪ್ಯಾಕ್ ಅನ್ನು 550 ರಿಂದ 880 ರೂಗಳ ವರೆಗೆ ಮಾರಾಟ ಮಾಡಿದರು ಮತ್ತು ಪ್ರತಿ ಮಾರಾಟದಲ್ಲಿ ಅವರ ಮಾರ್ಜಿನ್‌ಗಳು ತುಲನಾತ್ಮಕವಾಗಿ ಚಿಕ್ಕದಾಗಿವೆ.


“ಕಾಂಬೊ ಪ್ಯಾಕ್‌ಗಳಲ್ಲಿ ಮಾರಾಟ ಮಾಡುವುದರಿಂದ ಪ್ರತ್ಯೇಕ ಬಟ್ಟೆಳನ್ನು ಪ್ರತ್ಯೇಕವಾಗಿ ಮಾರಾಟ ಮಾಡುವುದಕ್ಕಿಂತ ಅಗ್ಗವಾಗಿಸುತ್ತದೆ. ನಾನು ಪ್ರತಿ ಮಾರಾಟಕ್ಕೆ ಕಡಿಮೆ ಲಾಭವನ್ನು ನೋಡುತ್ತಿದ್ದೆ, ಆದರೆ ನನ್ನ ಕಡಿಮೆ ಪ್ರತಿ ಯೂನಿಟ್ ಬೆಲೆಗಳು ಹೆಚ್ಚಿನ ಗಮನವನ್ನು ಸೆಳೆದವು ಮತ್ತು ನನ್ನ ಆರ್ಡರ್‌ಗಳ ಸಂಖ್ಯೆಯು ವೇಗವಾಗಿ ಹೆಚ್ಚಾಯಿತು,” ಎಂದು ಅವರು ಹೇಳುತ್ತಾರೆ


ಹೆಚ್ಚುತ್ತಿರುವ ಆರ್ಡರ್‌ಗಳ ಸಂಖ್ಯೆಯು ಹೆಚ್ಚಿನ ಲಾಭವನ್ನು ತರಲು ದೊಡ್ಡ ಮೊತ್ತದ ಮೇಲೆ ಕೇಂದ್ರೀಕರಿಸುತ್ತವೆ ಎಂದು ನಿರ್ಧರಿಸಲು ನೆರವಾಯಿತು.


ಜುಬೈರ್‌ರವರು ತಮ್ಮ ತಯಾರಕ ಪಾಲುದಾರರ ಬಳಿ ಹೋಗಿ ತಮ್ಮ ದಾಸ್ತಾನಿಗೆ ಇನ್ನೂ ಹೆಚ್ಚಿನ ಉತ್ಪನ್ನಗಳನ್ನು ಸೇರಿಸುವಂತೆ ಮನವಿ ಮಾಡಿಕೊಂಡರು.


ಆರ್ಡರ್‌ಗಳ ಸಂಖ್ಯೆಯು ಹೆಚ್ಚಾಗುತ್ತಿದ್ದಂತೆ, ಅವರು ಮನೆಯ ಸೆಟಪ್‌ನಿಂದ ಹೊರಬಂದರು ಮತ್ತು 30,000 ರೂ. ಹೂಡಿಕೆ ಮಾಡಿ ಉತ್ಪಾದನಾ ಘಟಕ ಸ್ಥಾಪಿಸಿದರು. ಈ ಸೌಲಭ್ಯವು ಮಕ್ಕಳ ಬಟ್ಟೆಗಳನ್ನು ಮಾತ್ರವಲ್ಲದೆ ಹುಡುಗರ ಟಿ ಶರ್ಟ್, ಪೈಜಾಮಾ, ಟ್ರ್ಯಾಕ್ ಪ್ಯಾಂಟ್, ಸ್ವೆಟ್‌ಶರ್ಟ್ ಮತ್ತು ಹೆಚ್ಚಿನದನ್ನು ತಯಾರಿಸಲು ಸ್ಥಳೀಯ ಬಟ್ಟೆಯನ್ನು ಬಳಸಲು ಸಾಧ್ಯವಾಯಿತು.

ಸಂಖ್ಯೆಯ ಆಟ

ಜುಬೈರ್‌ರವರ ತಂತ್ರವು ತುಂಬಾ ಚೆನ್ನಾಗಿ ಕೆಲಸ ಮಾಡಿದೆ, ಫ್ಯಾಶನ್ ಫ್ಯಾಕ್ಟರಿ ಈಗ ದಿನಕ್ಕೆ 200 ರಿಂದ 300 ಆರ್ಡರ್‌ಗಳನ್ನು ಪಡೆಯುತ್ತದೆ.


ಈ ಆರ್ಡರ್‌ಗಳನ್ನು ಪೂರೈಸುವ ಮೂಲಕ, ಜುಬೈರ್‌ರವರ ಕಂಪನಿಯು ಪ್ರತಿ ತಿಂಗಳು ಸುಮಾರು 50 ಲಕ್ಷ ರೂಪಾಯಿಗಳ ಆದಾಯವನ್ನು ಗಳಿಸುತ್ತದೆ ಎಂದು ಅವರು ಹೇಳುತ್ತಾರೆ.


“ನಾವು ಅಮೆಜಾನ್‌ಗೆ ಮಾರಾಟ ಮಾಡಲು ವಿಶೇಷ ಒಪ್ಪಂದಕ್ಕೆ ಸಹಿ ಹಾಕಿದ್ದೇವೆ. ಪ್ರತಿ ತಿಂಗಳು ಒಟ್ಟು 20 ಲಕ್ಷದಿಂದ 30 ಲಕ್ಷ ಯುನಿಟ್‌ಗಳ ಮಾರಾಟ ಸಾಧ್ಯವಾಗುತ್ತಿದೆ,” ಎಂದು ಅವರು ಹೇಳುತ್ತಾರೆ.


ಫ್ಯಾಶನ್‌ ಫ್ಯಾಕ್ಟರಿ ವಾರ್ಷಿಕ 6.5 ಕೋಟಿ ಆದಾಯ ಗಳಿಸುತ್ತಿದೆ ಮತ್ತು ಮುಂದಿನ ವರ್ಷದಲ್ಲಿ 12 ಕೋಟಿ ಆದಯದ ಗುರಿ ಹೊಂದಿದೆ ಎಂದು, ಜುಬೈರ್‌ರವರು ಹೇಳುತ್ತಾರೆ.


ಹೆಚ್ಚಿನ ಯಶಸ್ಸನ್ನುಗಳಿಸುತ್ತಿರುವ ಹೊರತಾಗಿಯೂ, ಈ ಉದ್ಯಮಿ ನಿಯಮಿತವಾಗಿ ತಮ್ಮ ಬೆಳವಣಿಗೆಯನ್ನು ಎದುರು ನೋಡುತ್ತಿದ್ದಾರೆ. "ಆನ್‌ಲೈನ್‌ ಮಾರಾಟವು ಈಗ ಟ್ರೆಂಡಿಂಗ್‌ನಲ್ಲಿದೆ. ಜವಳಿ ತಯಾರಕರಿಗೆ ಆನ್‌ಲೈನ್‌ ಮಾರಾಟದ ಕುರಿತು ತಿಳಿದಿಲ್ಲಿದ ಕಾರಣ ಬಹಳಷ್ಟು ಜನ ಇದೇ ಮಾದರಿ ಅನುಸರಿಸುತ್ತಿದ್ದಾರೆ."


ಆದಾಗ್ಯೂ, ಜುಬೈರ್‌ರವರು ತಮ್ಮ ಸ್ಪರ್ಧೆಯ ಮೇಲೆ ಒಂದು ಹಿಡಿತವನ್ನು ಹೊಂದಿದ್ದಾರೆಂದು ನಂಬುತ್ತಾರೆ. ಅವರ ಪ್ರಕಾರ, ಈ ರೀತಿಯ ವ್ಯವಹಾರ ಪ್ರಾರಂಭಿಸುವುದು ಸುಲಭ, ಆದರೆ ಅವರ ಹಾಗೆ ಅನುಭವವಿಲ್ಲದೆ ನಡೆಸುವುದು ಕಷ್ಟ.


"ಫ್ಯಾಶನ್ ಫ್ಯಾಕ್ಟರಿ ನಡೆಸುತ್ತಿರುವ ನನ್ನ ಅನುಭವದ ಹೊರತಾಗಿ, ನನ್ನ ತಂದೆ ಉಡುಪುಗಳ ಉತ್ಪಾದನಾ ಹಿನ್ನೆಲೆಯಿಂದ ಬಂದವರು. ಅವರು ಸಾಕಷ್ಟು ಹಣಕಾಸಿನ ಸವಾಲುಗಳನ್ನು ಎದುರಿಸಿದರು, ಅನಾರೋಗ್ಯಕ್ಕೆ ಒಳಗಾಗಿ ಅದನ್ನು ಮುಚ್ಚುವವರೆಗೂ ಅವರು ಜವಳಿ ವ್ಯವಹಾರವನ್ನು ನಡೆಸುತ್ತಿದ್ದರು,” ಎಂದು ಅವರು ಹೇಳುತ್ತಾರೆ.


ಜುಬೈರ್‌ರವರ ಯಶಸ್ಸು ತೊಂದರೆಗಳಿಲ್ಲದೆ ಬಂದಿಲ್ಲ. ತಿರುಪುರ ಮೂಲದ ಉದ್ಯಮಿ ಹೇಳುವಂತೆ ಹಣದ ಹೂಡಿಕೆ ಅವರ ದೊಡ್ಡ ಸಮಸ್ಯೆಯಾಗಿತ್ತು.


"ಆರ್ಡರ್‌ಗಳನ್ನು ಪೂರೈಸಲು ನನ್ನ ಉತ್ಪಾದನೆಯನ್ನು ಹೆಚ್ಚಿಸಲು ನನಗೆ ಎಲ್ಲ ಸಮಯದಲ್ಲಿಯೂ ಸಾಧ್ಯವಾಗುವುದಿಲ್ಲ. ನನಗೆ ಒಮ್ಮೆ ಆಂಧ್ರ ಬ್ಯಾಂಕ್‌ನಿಂದ ಓವರ್‌ಡ್ರಾಫ್ಟ್ ಸೌಲಭ್ಯದ ಮೂಲಕ ಬೆಂಬಲ ದೊರಕಿತು, ಆದರೆ ನಾನು ಇನ್ನೂ ಹೆಚ್ಚಿನ ಬಂಡವಾಳವನ್ನು ಹುಡುಕುತ್ತಿದ್ದೇನೆ” ಎಂದು ಅವರು ಹೇಳುತ್ತಾರೆ.


ಈ ಎಂಜಿನಿಯರ್, ಹೆಚ್ಚು ಬಂಡವಾಳದೊಂದಿಗೆ, ಹೆಚ್ಚಿನ ವಿನ್ಯಾಸಗಳನ್ನು ಪರಿಚಯಿಸಲು ಮತ್ತು ದೊಡ್ಡ ಉತ್ಪಾದನಾ ಘಟಕಕ್ಕೆ ಆರಂಭಿಸಲು ಯೋಜಿಸುತ್ತಿದ್ದಾರೆ. ಅವರು ದುಬೈನ ಚಿಲ್ಲರೆ ವ್ಯಾಪಾರಿಗಳಿಗೆ ಮಾರಾಟ ಮಾಡಲು ಮತ್ತು ತಮ್ಮ ಬ್ರಾಂಡ್ ಅನ್ನು ಜಾಗತಿಕವಾಗಿ ಪರಿವರ್ತಿಸಲು ಯೋಜಿಸುತ್ತಿದ್ದಾರೆ.

  • +0
Share on
close
  • +0
Share on
close
Share on
close
Report an issue
Authors

Related Tags

Latest

Updates from around the world

Our Partner Events

Hustle across India