ತನ್ನ ಸಾಮಾಜಿಕ ನೇತೃತ್ವದಿಂದ ಉತ್ತರಾಖಂಡವನ್ನು ಸ್ವಚ್ಛ ರಾಜ್ಯವನ್ನಾಗಿ ಪರಿವರ್ತಿಸುತ್ತಿರುವ ಅಭಿಯಂತರ ಮತ್ತು ಸಾಮಾಜಿಕ ಕಾರ್ಯಕರ್ತರಾಗಿರುವ ಭುವನ ರಾವತ್.

ಉತ್ತರಾಖಂಡದಲ್ಲಿ ಭುವನ್ ರಾವತ್ ಅವರು 2017 ರಲ್ಲಿ ಪ್ರಾರಂಭಿಸಿದ 'ನನ್ನ ಊರು ಸ್ವಚ್ಛ ಊರು' ಅಭಿಯಾನವು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಭಾರಿ ಪ್ರಭಾವ ಬೀರಿದ್ದು. ಇದುವರೆಗೆ 8,300 ಕ್ಕೂ ಹೆಚ್ಚು ಜನರು ಚಳವಳಿಗೆ ಸೇರಿದ್ದಾರೆ.

ತನ್ನ ಸಾಮಾಜಿಕ ನೇತೃತ್ವದಿಂದ ಉತ್ತರಾಖಂಡವನ್ನು ಸ್ವಚ್ಛ ರಾಜ್ಯವನ್ನಾಗಿ ಪರಿವರ್ತಿಸುತ್ತಿರುವ ಅಭಿಯಂತರ ಮತ್ತು ಸಾಮಾಜಿಕ ಕಾರ್ಯಕರ್ತರಾಗಿರುವ ಭುವನ ರಾವತ್.

Thursday October 03, 2019,

2 min Read

1.2 ಶತಕೋಟಿಗು ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತದಲ್ಲಿ ಕಸ ನಿರ್ವಹಣೆ ಒಂದು ಪ್ರಮುಖ ವಿಷಯವಾಗಿದೆ. ಮುಖ್ಯವಾಗಿ ತ್ಯಾಜ್ಯವನ್ನು ಬೇರ್ಪಡಿಸುವುದು ಮತ್ತು ಕಳಪೆ ಚರಂಡಿ ವ್ಯವಸ್ಥೆ ತಕ್ಷಣ ಗಮನಹರಿಸಬೇಕಾದ ಸಮಸ್ಯೆಗಳು.


ಸರ್ಕಾರವು 2014 ರಲ್ಲಿ ಪ್ರಾರಂಭಿಸಿದ ಸ್ವಚ್ಚ ಭಾರತ ಅಭಿಯಾನದಂತಹ ನೇತೃತ್ವಗಳು ಈ ಸಮಸ್ಯೆಯನ್ನು ಸ್ವಲ್ಪ ಸಮಯದವರೆಗೆ ಪರಿಹರಿಸುತ್ತಿವೆ. ಅನೇಕ ಎನ್‌ಜಿಒಗಳು ಮತ್ತು ವ್ಯಕ್ತಿಗಳು ಕಸ ನಿರ್ವಹಣೆಗೆ ತಮ್ಮದೇ ಆದ ಪರಿಹಾರಗಳನ್ನು ರೂಪಿಸುವ ನಿಟ್ಟಿನಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಉದಾಹರಣೆಗೆ, ಉತ್ತರಾಖಂಡದ ಚಮೋಲಿ ಜಿಲ್ಲೆಯ ದೇವ್ಲಿ ಬಾಗಾದ್ ಗ್ರಾಮದ 32 ವರ್ಷದ ಅಭಿಯಂತರ ಮತ್ತು ಸಾಮಾಜಿಕ ಕಾರ್ಯಕರ್ತರಾಗಿರುವ ಭುವನ್ ರಾವತ್ ಅವರು ರಾಜ್ಯದ ಪೌರಿ ಜಿಲ್ಲೆಯಲ್ಲಿನ ಕಸದ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ.


ಭುವನ್ 2017 ರಲ್ಲಿ 'ನನ್ನ ಊರು ಸ್ವಚ್ಛ ಊರು' ಎಂಬ ಅಭಿಯಾನವನ್ನು ಪ್ರಾರಂಭಿಸಿದರು. ಈ ಅಭಿಯಾನವು ರಾಜ್ಯದ ವಿವಿಧ ಜಿಲ್ಲೆಗಳಾದ ಚಮೋಲಿಯ ದೇವಲಿ ಬಾಗಾದ್, ಪೌರಿಯ ಖಲು ಗ್ರಾಮ, ಮತ್ತು ಚಮೋಲಿಯ ಗ್ರಾಮವಾದ ಟೋಲ್ಮಾಗಳಲ್ಲಿ 8,300 ಜನರು ಚಳುವಳಿಗೆ ಸೇರಿಕೊಂಡಿದ್ದಾರೆ.


ಭುವನ್ ರಾವತ್ ಜೊತೆಗೆ ಗ್ರಾಮಸ್ಥರು (ಎಡ) ಮತ್ತು ಅವರ ಮರುಬಳಕೆಯ ಕಸದಡಬ್ಬಿಗಳು (ಬಲ) (ಚಿತ್ರ: ದಿ ಲಾಜಿಕಲ್ ಇಂಡಿಯನ್ )

ಅಭಿಯಾನದ ಭಾಗವಾಗಿ, ತಿಂಗಳಿನಲ್ಲಿ ಎರಡು ದಿನ ಗ್ರಾಮಸ್ಥರು ಸುತ್ತಮುತ್ತಲಿನ ಪ್ರದೇಶಗಳನ್ನು ಮತ್ತು ಬೀದಿಗಳನ್ನು ಎರಡು ಗಂಟೆಗಳ ಕಾಲ ಸ್ವಚ್ಚಗೊಳಿಸುತ್ತಾರೆ. ಇದಲ್ಲದೆ ಗ್ರಾಮದಾದ್ಯಂತ ಪರಿಸರ ಸ್ನೇಹಿ ಕಸದಡಬ್ಬಿಗಳನ್ನು ಇರಿಸಲಾಗಿದ್ದು ಇದರಿಂದ ಜನರು ಕಸವನ್ನು ಸುಲಭವಾಗಿ ವಿಲೇವಾರಿ ಮಾಡಬಹುದು.


ನ್ಯೂ ಪೋಸ್ಟ್‌ನೊಂದಿಗೆ ಮಾತನಾಡಿದ ಭುವನ್,


"ನಾವು ಎಲ್ಲ ಸಮಸ್ಯೆಗಳಿಗೂ ರಾಜ್ಯ ಸರ್ಕಾರವನ್ನು ದೋಷಿಸುವುದನ್ನು ಬಿಡಬೇಕು, ನಮ್ಮ ಗ್ರಾಮ, ನಮ್ಮ ರಾಜ್ಯ ಮತ್ತು ನಮ್ಮ ದೇಶಕ್ಕೆ ಸೇವೆ ಸಲ್ಲಿಸಬೇಕು" ಎಂದಿದ್ದಾರೆ.

ಗ್ರಾಮಸ್ಥರ ಬೆಂಬಲದ ಜೊತೆಗೆ, ಉತ್ತರಾಖಂಡದ ಪೌರಿಯ ಕಂದಾರದಲ್ಲಿರುವ ಮಹಿಳಾ ಮಂಗಲ್ ದಳವೂ ಸಹ ಬೆಂಬಲ ನೀಡಿದೆ. ಸ್ವಸಹಾಯ ಗುಂಪಿನ ಅಧ್ಯಕ್ಷ ಭುವನಾ ದೇವಿ ಅವರ ಪ್ರಕಾರ, ಅದರ ಸದಸ್ಯರು ಪ್ರತಿ ಮೊದಲ ಮತ್ತು ಮೂರನೇ ಭಾನುವಾರದಂದು ಅಭಿಯಾನಕ್ಕಾಗಿ ಕೆಲಸ ಮಾಡುತ್ತಾರೆ, ಇದರಲ್ಲಿ ಗ್ರಾಮಸ್ಥರು ಸಹ ಸೇರುತ್ತಾರೆ, ಮತ್ತು ಕೆಲಸವನ್ನು ಜನರ ನಡುವೆ ಹಂಚಲಾಗುತ್ತದೆ.”


ದಿ ಲಾಜಿಕಲ್ ಇಂಡಿಯನ್‌ಗೆ ಅಭಿಯಾನದ ಕಾರ್ಯವನ್ನು ವಿವರಿಸುತ್ತಾ ಭುವನಾ ದೇವಿಯವರು ಹೇಳಿದ್ದು, “ಒಂದು ತಂಡ ಹೊಂಡಗಳನ್ನು ನೋಡಿಕೊಳ್ಳುತ್ತದೆ ಮತ್ತು ಇತರರು ಗ್ರಾಮವನ್ನು ಸುಂದರಗೊಳಿಸಲು ಕೆಲಸ ಮಾಡುತ್ತಾರೆ. ಸುಮಾರು ಎರಡು ಗಂಟೆಗಳ ಕಾಲ ಸ್ವಚ್ಛಗೊಳಿಸುವ ಕೆಲಸ ಮಾಡಿದ ನಂತರ, ನಾವು ಮತ್ತೆ ಒಟ್ಟುಗೂಡುತ್ತೇವೆ ಮತ್ತು ಕೆಲಸದ ಸಾಧನೆಯನ್ನು ಆಚರಿಸಲು ಗರ್ವಾಲ್ ಅವರ ಜಾನಪದ ಗೀತೆಗಳನ್ನು ಹಾಡುತ್ತೇವೆ.


ಪೌರಿಯ ಒಂದು ಗ್ರಾಮವಾದ ಕಂದಾರದಿಂದ ತಮ್ಮ ಜನರ ಸಹಾಯದಿಂದ ರಾಜ್ಯವನ್ನು ಸ್ವಚ್ಛಗೊಳಿಸುವ ಹಾದಿ ಪ್ರಾರಂಭಿಸಿದರು. ಹಳ್ಳಿಯ ಧಾರಿ ದೇವಿ ದೇವಾಲಯದ ಸುತ್ತಮುತ್ತಲಿನ ಪ್ರದೇಶದಲ್ಲಿ ಭಕ್ತರು ಎಸೆದ ಕಸವನ್ನು ನೋಡಿದ ನಂತರ ಭುವನ್ ಈ ಒಂದು ಕೆಲಸವನ್ನು ತಮ್ಮ ಕೈಗೆತ್ತಿಕೊಂಡರು.


ನಂತರ ಅವರು ಸ್ಕ್ರ್ಯಾಪ್ಡ್ ಆಯಿಲ್ ಡಬ್ಬಿಗಳನ್ನು ಖರೀದಿಸಿ, ಅದನ್ನು ಮರುಬಳಕೆ ಮಾಡಿ ಹಸಿರು ಮತ್ತು ಕೆಂಪು ಬಣ್ಣದಿಂದ ಚಿತ್ರಿಸಿದರು. ತೈಲ ಡಬ್ಬಿಗಳನ್ನು ಕಸದ ಡಬ್ಬಿಗಳನ್ನಾಗಿ ತಯಾರಿಸಲಾಗುತ್ತಿತ್ತು, ನಂತರ ಅವುಗಳನ್ನು ದೇವಾಲಯಗಳ ಸುತ್ತಲೂ ಭಕ್ತರು ತಮ್ಮ ಕಸವನ್ನು ಎಸೆಯಲು ಇರಿಸಲಾಗಿದೆ, ಶೀಘ್ರದಲ್ಲೇ ಜನರು ಕಸದ ಡಬ್ಬಿಗಳನ್ನು ಶ್ರದ್ಧೆಯಿಂದ ಬಳಸಲು ಪ್ರಾರಂಭಿಸಿದ್ದರಿಂದ ಹಳ್ಳಿಯ ಈ ಪ್ರದೇಶವು ಸ್ವಚ್ಛವಾಯಿತು.


ಭುವನ್ ರವರು ಅಷ್ಟಕ್ಕೆ ನಿಲ್ಲದೆ. ಪೋರಕೆಯನ್ನು ಎತ್ತಿಕೊಂಡು ರಸ್ತೆಗಳ ಕಸವನ್ನು ಸ್ವಚ್ಚಗೊಳಿಸಲು ಪ್ರಾರಂಭಿಸಿದರು. ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಛಗೊಳಿಸುವ ಭುವನ್ ಅವರ ಇಚ್ಛೆಯನ್ನು ನೋಡಿ, ಗ್ರಾಮದ ಜನರು ಶೀಘ್ರದಲ್ಲೇ ಅವರೊಂದಿಗೆ ಸೇರಿಕೊಂಡು ತಮ್ಮ ಬೆಂಬಲವನ್ನು ನೀಡಿದರು.


ದಿ ಲಾಜಿಕಲ್ ಇಂಡಿಯನ್ ಜೊತೆ ಮಾತನಾಡಿದ ಚಮೋಲಿಯ ದಿವಾಲಿ ಬಾಗಾದ್ ಗ್ರಾಮದ ನಿವಾಸಿ ಸುರೇಂದರ್ ಸಿಂಗ್ ರಾಣಾ,


“ನಾವು “ನಮ್ಮ ಊರು ಸ್ವಚ್ಛ ಊರು” ನೊಂದಿಗೆ ಒಂದು ವರ್ಷಕ್ಕಿಂತ ಹೆಚ್ಚು ಸಂಪರ್ಕ ಹೊಂದಿದ್ದೇವೆ ಮತ್ತು ಹಳ್ಳಿಯಲ್ಲಿನ ಆಕರ್ಷಕ ಬದಲಾವಣೆಯನ್ನು ಗಮನಿಸಿದ್ದೇವೆ. ಭುವನ್ ರಾವತ್ ನಮ್ಮ ಗ್ರಾಮಕ್ಕೆ ಬರುವವರೆಗೂ ಸ್ವಚ್ಛತೆಯ ಪರಿಣಾಮದ ಬಗ್ಗೆ ನಮಗೆ ತಿಳಿದಿರಲಿಲ್ಲ.”

ಭುವನ್ ಸ್ವಯಂಸೇವಕ ವೇದಿಕೆಯನ್ನು ಸಹ ಪ್ರಾರಂಭಿಸಿದ್ದು ಶಿಕ್ಷಕರ ಕೊರತೆಯಿರುವ ಪೌರಿಯಲ್ಲಿನ 14 ಶಾಲೆಗಳನ್ನು ಗುರುತಿಸಿದ್ದಾರೆ, ಅಲ್ಲಿ ಈ ವೇದಿಕೆಯ ಮೂಲಕ, ಜನರು ಶಾಲೆಯಲ್ಲಿ ಸ್ವಯಂಸೇವಕರಾಗಿ ಕೆಲಸ ಮಾಡಬಹುದು ಮತ್ತು ವಿದ್ಯಾರ್ಥಿಗಳ ಅಗತ್ಯಕ್ಕೆ ಅನುಗುಣವಾಗಿ ಪುಸ್ತಕಗಳು ಮತ್ತು ಬ್ಯಾಗಗಳನ್ನು (ಪಾಠಿ ಚೀಲ) ವಿತರಿಸಬಹುದು.