ಜೇಬಲ್ಲಿ ದುಡ್ಡಿಲ್ಲ...ಮೊಬೈಲ್ನಲ್ಲಿ ಕರೆನ್ಸಿ ಇಲ್ಲ.. ಡೋಂಟ್ವರಿ ಉಚಿತವಾಗಿ ವೈ-ಫೈ ಬಳಸಿಕೊಳ್ಳಿ
ಟೀಮ್ ವೈ.ಎಸ್. ಕನ್ನಡ
ನಗರದಲ್ಲಿರುವ ಬಹುತೇಕ ಜನರು ಸ್ಮಾರ್ಟ್ ಆಗಿದ್ದಾರೆ. ಹಾಗಾಗಿಯೇ ಎಲ್ಲರ ಕೈಯಲ್ಲಿ ಸ್ಮಾರ್ಟ್ ಫೋನ್ಗಳನ್ನು ನಾವು ಸಾಮಾನ್ಯವಾಗಿ ಕಾಣಬಹುದು. ಸ್ಮಾರ್ಟ್ ಫೋನ್ ಇದ್ದರು ಅನೇಕ ಸಲ ನಾವು ಸಂಕಷ್ಟಕ್ಕೆ ಸಿಲುಕಿಕೊಳ್ಳುತ್ತೇವೆ. ಎಷ್ಟೋ ಸಲ ನಮಗೆ ತಿಳಿದೋ ತಿಳಿಯದೆಯೋ, ಮೊಬೈಲ್ನ ಲ್ಲಿ ಕರೆನ್ಸಿ ಇರುವುದಿಲ್ಲ. ಜೇಬಲ್ಲಿ ದುಡ್ಡಿರುವುದಿಲ್ಲ. ಇಂಟರ್ನೆಟ್ ಬಳಸಿಕೊಳ್ಳಬೇಕೆಂದರೆ ಡಾಟಾ ಕೂಡ ಖಾಲಿಯಾಗಿರುತ್ತೆ. ಅಂತಹ ಸಮಯದಲ್ಲಿ ನಿಮ್ಮ ಸಹಾಯಕ್ಕೆ ಬರುವಂತಹ ಅನೇಕ ಕೆಫೆಗಳಿವೆ. ಅವುಗಳ ಹತ್ತಿರ ಹಾಗೇ ಒಂದು ವಾಕ್ ಹೋದರೆ ಸಾಕೂ ಉಚಿತ ವೈಫೈ ಬಳಸಬಹುದು.
ಬೆಂಗಳೂರಿನಲ್ಲಿರುವ ನಿಮ್ಮ ಹತ್ತಿರದ ಕೆಫೆಗಳಿಗೆ ಭೇಟಿ ನೀಡಿದ್ರೆ ಸಾಕು. ಉಚಿತ ವೈಫೈ ಸಿಗುತ್ತೆ. ಎಷ್ಟೋತ್ತಾದ್ರು ಅಲ್ಲೇ ಅಕ್ಕಪಕ್ಕ ನಿಂತು ನೀವು ಬ್ರೌಸ್ ಮಾಡಬಹುದು.ಅಂದಹಾಗೆ ಬೆಂಗಳೂರಿನಲ್ಲಿ ಟಾಪ್ ವೈಫೈ ಸಿಗ್ನಲ್ ಸಿಗುವ ಕೆಫೆಗಳು ಯಾವುವು ಅನ್ನೋ ಮಾಹಿತಿ ಇಲ್ಲಿದೆ. ದುಡ್ಡಿದ್ರೆ ಹೋಗಿ ಕಾಫಿ ಕುಡಿದು ವೈಫೈ ಬಳಸಿಕೊಳ್ಳಬಹುದು. ದುಡ್ಡಿಲ್ಲ ಎಂದರೆ ಕೆಫೆಗಳ ಅಕ್ಕಪಕ್ಕ ನಿಂತುಕೊಂಡು ಹಾಗೇ ಸುತ್ತಾಡಿಕೊಂಡು ಭರ್ಜರಿ ಸ್ಪೀಡ್ ಆಗಿರುವ ವೈಫೈ ಬಳಸಿಕೊಳ್ಳಬಹುದು..
ಬೆಂಗಳೂರಿನಲ್ಲಿರುವ ಸ್ಮಾರ್ಟ್ಫೋನ್ ಬಳಕೆದಾರರು ನೀವು ಆಗಾಗ ವೈಫೈ ಆನ್ ಮಾಡಿ ಉಚಿತ ಸಿಗ್ನಲ್ಗಳಿದ್ದರೆ ಕನೆಕ್ಟ್ ಮಾಡಿಕೊಂಡು ಸಹ ಇಂಟರ್ನೆಟ್ ಬಳಸಬಹುದಾಗಿದೆ. ಬೆಂಗಳೂರಿನಲ್ಲಿರುವ ಬಹುತೇಕ ಮಾಲ್ಗಳಲ್ಲಿ ಉಚಿತ ವೈಫೈ ಸಿಗುತ್ತದೆ. ಜೊತೆಗೆ ನಗರದ ಹೃದಯ ಭಾಗದಲ್ಲಿ ಸಾಗಿರುವ ಮೆಟ್ರೊ ಮಾರ್ಗದಲ್ಲಿ ಉಚಿತ ವೈಫೈ ಸಿಗುತ್ತದೆ. ಅವುಗಳ ಲಾಭವನ್ನು ನೀವು ಪಡೆಯಬಹುದು.
ಇದನ್ನು ಓದಿ: ಟ್ರೇಲರ್ನಲ್ಲೇ ಅಡಗಿದೆ ಎಲ್ಲಾ ರಹಸ್ಯಗಳು..
ಎಂತಹದೆ ನೆಟ್ವರ್ಕ್ ಸಮಸ್ಯೆಯಿರಲಿ ಈ ಕೆಫೆ ಕೇಂದ್ರಗಳಲ್ಲಿ ಉಚಿತವಾಗಿ ವೈಫೈ ಬಳಸಿಕೊಳ್ಳಬಹುದು. ಜೇಬಲ್ಲಿ ದುಡ್ಡಿಲ್ಲ, ಮೊಬೈಲ್ನಲ್ಲಿ ಕರೆನ್ಸಿ ,ಡಾಟಾ ಇಲ್ಲದೆ ಸಂಕಷ್ಟದಲ್ಲಿ ಸಿಲುಕಿಕೊಂಡಿದ್ರೆ, ಇಂತಹ ಕೆಫೆಗಳಿಗೆ ಹೋಗಿ ಉಚಿತವಾಗಿ ವೈಫೈ ಬಳಸಿಕೊಂಡು, ನಿಮ್ಮ ಆಪ್ತರಿಗೆ ಕರೆ ಮಾಡಬಹುದು, ಸಂದೇಶ ಕೂಡ ರವಾನಿಸಬಹುದು. ಸಂಕಷ್ಟದಲ್ಲಿರುವವರಿಗೆ ಈ ಕೆಫೆಗಳು ಸಹಾಯಕಾರಿಯಾಗಿವೆ.
1. ಅಂದು 150 ರೂಪಾಯಿ ಸಂಬಳ, ಇಂದು 150 ಕೋಟಿ ರೂಪಾಯಿ ವಹಿವಾಟು ನಡೆಸುವ ಚಾಣಕ್ಯ..!