Brands
Discover
Events
Newsletter
More

Follow Us

twitterfacebookinstagramyoutube
ADVERTISEMENT
Advertise with us

434 ಮಕ್ಕಳನ್ನು ರಕ್ಷಿಸಿದ ರೇಖಾ ಮಿಶ್ರಾ ಕಥೆ ಕೇಳಿ..!

ಟೀಮ್​ ವೈ.ಎಸ್​. ಕನ್ನಡ

434 ಮಕ್ಕಳನ್ನು ರಕ್ಷಿಸಿದ ರೇಖಾ ಮಿಶ್ರಾ ಕಥೆ ಕೇಳಿ..!

Tuesday April 18, 2017 , 2 min Read

ಭಾರತದಲ್ಲಿ ಬಸ್ ನಿಲ್ದಾಣಗಳಲ್ಲಿ, ರೈಲ್ವೇ ನಿಲ್ದಾಣಗಳಲ್ಲಿ ಯಾವುದೇ ಗೊತ್ತು ಗುರಿಯಿಲ್ಲದೆ ಅದೆಷ್ಟೋ ಮಕ್ಕಳು ಅಡ್ಡಾಡುತ್ತಿರುತ್ತಾರೆ. ಎಲ್ಲಿಂದಲೋ ಮಿಸ್ ಆಗಿ ಬಂದವರು ಹೆತ್ತವರಿಗಾಗಿ, ರಕ್ಷಣೆಗಾಗಿ ಹುಡುಕಾಡುತ್ತಿರುತ್ತಾರೆ. ಆದ್ರೆ ಇವರನ್ನು ರಕ್ಷಣೆ ಮಾಡುವ ಕೆಲಸಕ್ಕೆ ಕೈ ಹಾಕುವವರು ತುಂಬಾ ಕಡಿಮೆ. ಆದ್ರೆ ರೇಖಾ ಮಿಶ್ರಾ ಉಳಿದವರಿಗಿಂತ ವಿಭಿನ್ನ, ರೇಖಾ ಮಿಶ್ರಾ 2014ರಲ್ಲಿ ರೈಲ್ವೇ ಪ್ರೊಟೆಕ್ಷನ್ ಫೋರ್ಸ್​ನಲ್ಲಿ ಕೆಲಸಕ್ಕೆ ಸೇರಿಕೊಂಡ್ರು. ಕೆಲಸದಲ್ಲಿ ಆಕೆಯದ್ದು ಅಪರಿಮಿತ ಶ್ರದ್ಧೆ. ಹೀಗಾಗಿ ಆಕೆ ಕಳೆದ ಒಂದೇ ವರ್ಷದಲ್ಲಿ ಬರೋಬ್ಬರಿ 434 ಮಕ್ಕಳನ್ನು ರೈಲ್ವೇ ನಿಲ್ದಾಣಗಳಿಂದ ಕಾಪಾಡಿದ್ದಾರೆ. ಅದೂ ಕೂಡ ಮುಂಬೈನ ಛತ್ರಪತಿ ಶಿವಾಜಿ ಟರ್ಮಿನಲ್ ನಲ್ಲೇ ಅನ್ನುವುದು ಮತ್ತೊಂದು ಅಚ್ಚರಿ. ಅಂದಹಾಗೇ, ರೈಲ್ವೇ ಪೊಲೀಸರು ಒಟ್ಟಾಗಿ ರಕ್ಷಿಸಿದ ಮಕ್ಕಳಿಗಿಂತ ದುಪ್ಪಟ್ಟು ಮಕ್ಕಳನ್ನು ರೇಖಾ ಮಿಶ್ರಾ ರಕ್ಷಿಸಿದ್ದಾರೆ ಅನ್ನುವುದು ಮತ್ತೊಂದು ವಿಚಾರ.

image


ರೇಖಾ ಹುಟ್ಟಿ ಬೆಳೆದಿದ್ದು, ಸೈನಿಕರ ಕುಟುಂಬದಿಂದ. ಹೀಗಾಗಿ ಮಕ್ಕಳ ರಕ್ಷಣೆ ಬಗ್ಗೆ ರೇಖಾಗೆ ಹೆಚ್ಚು ಆಸಕ್ತಿ ಇತ್ತು. ರೇಖಾ ಇಲ್ಲಿ ತನಕ ರಕ್ಷಿಸಿರುವ ಮಕ್ಕಳ ಪೈಕಿ ಹೆಚ್ಚಿನವರು ಉತ್ತರ ಪ್ರದೇಶ ಮತ್ತು ಬಿಹಾರ ರಾಜ್ಯದವರು. ಅಷ್ಟೇ ಅಲ್ಲ ಈ ಅಪ್ರಾಪ್ತ ಮಕ್ಕಳು ಹೆಚ್ಚಿನವರು 13 ರಿಂದ 16 ವರ್ಷ ವಯಸ್ಸಿನವರು. ಎಲ್ಲಿಂದಲೋ, ಯಾವುದೋ ಕಾರಣಕ್ಕೆ ಓಡಿ ಬಂದ ಮಕ್ಕಳು ರೈಲಿನ ಕೊನೆಯ ಸ್ಟಾಪ್​ನಲ್ಲಿ ಇಳಿದು ತಬ್ಬಿಬ್ಬಾಗುತ್ತಾರೆ. ಎಲ್ಲಿಗೆ ಹೋಗಬೇಕು ಅನ್ನುವುದನ್ನು ಅರಿಯದೆ ಕಂಗಾಲಾಗುತ್ತಾರೆ. ಅಷ್ಟೇ ಅಲ್ಲ ನೆರವಿಗಾಗಿ ಇನ್ನೊಬ್ಬರ ಮೊರೆ ಹೋಗುತ್ತಾರೆ. ಕೆಲಸದ ಹೊತ್ತಿನಲ್ಲಿ ಬರುವ ಕರೆಗಳನ್ನು ಕೂಡ ಹೆಚ್ಚು ಸಿರಿಯಸ್ ಆಗಿ ಪರಿಗಣಿಸುವ ರೇಖಾ ಆ ಮಕ್ಕಳನ್ನು ರಕ್ಷಿಸುವುದು ಮಾತ್ರವಲ್ಲದೆ ಅವರು ಸೂಕ್ತ ಆಶ್ರಮ ಅಥವಾ ಸ್ಥಳಗಳನ್ನು ಸೇರುವ ತನಕ ಮುಂಜಾಗೃತೆ ವಹಿಸುತ್ತಾರೆ.

“ ಓಡಿ ಬಂದ ಮಕ್ಕಳನ್ನನು ಮೊದಲು ಆತ್ಮವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಕೆಲವರು ಕಾರಣವಿಲ್ಲದೆ ಮನೆಯಿಂದ ಓಡಿ ಬರುತ್ತಾರೆ. ಇನ್ನು ಕೆಲವರು ಲೈಂಗಿಕ ಕಿರುಕುಳಕ್ಕೆಒಳಗಾಗಿರುತ್ತಾರೆ. ಮತ್ತೆ ಕೆಲವರು ವಾಪಾಸ್ ಮನೆಗೆ ಹೋಗುವ ಆಸಕ್ತಿಯನ್ನೇ ಕಳೆದುಕೊಂಡಿರುತ್ತಾರೆ. ಹೀಗಾಗಿ ಎಚ್ಚರಿಕೆಯ ಹೆಜ್ಜೆ ಇಡಬೇಕಾಗುತ್ತದೆ. ”
- ರೇಖಾ ಮಿಶ್ರಾ, ಆರ್​ಪಿಎಫ್ ಉದ್ಯೋಗಿ

ಅಂದಹಾಗೇ, ರೇಖಾ ರಕ್ಷಿಸಿರುವ 434 ಮಕ್ಕಳ ಪೈಕಿ ಕೇವಲ 28 ಮಕ್ಕಳ ಪೋಷಕರನ್ನು ಮಾತ್ರ ಪತ್ತೆ ಹಚ್ಚಲು ಸಾಧ್ಯವಾಗಿದೆ. ಉಳಿದ ಮಕ್ಕಳನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಸೇರಿಸಲಾಗಿದೆ. ರೇಖಾ ಮಕ್ಕಳನ್ನು ರಕ್ಷಿಸುವ ತಂಡದ ಜೊತೆ ಕೆಲಸ ಮಾಡುತ್ತಿದ್ದರೂ ಇದು ಒಂದು ರೀತಿಯಲ್ಲಿ ಕೌಶಲ್ಯ ಇರಬೇಕಾದ ಕೆಲಸವಾಗಿದೆ.

“ ರಕ್ಷಣೆಯ ವೇಳೆ ಸಿಕ್ಕಿದ ಮಕ್ಕಳನ್ನು ಮೊದಲಿಗೆ ಮೆಡಿಕಲ್ ಟೆಸ್ಟ್ ಮಾಡಿಸಲಾಗುತ್ತದೆ. ಇದಾದ ಮೇಲೆ ಸ್ಟೇಷನ್ ಮ್ಯಾನೇಜರ್ ಕಚೇರಿಯಲ್ಲಿ ಡಾಕ್ಯುಮೆಂಟ್​​ಗಳನ್ನು ಫಿಲ್ ಮಾಡಲಾಗುತ್ತದೆ. ಮಕ್ಕಳ ಪೋಷಕರ ಪತ್ತೆಗೆ ಕಠಿಣ ಶ್ರಮವಹಿಸಲಾಗುತ್ತದೆ. ಪೋಷಕರು ಸಿಗದೇ ಇದ್ದಾಗ ಅನಾಥಶ್ರಮಕ್ಕೆ ಕಳುಹಿಸಿಕೊಡಲಾಗುತ್ತದೆ.”

ಈ ವರ್ಷದ ಆರಂಭದಿಂದ ಇಲ್ಲಿ ತನಕ ರೇಖಾ ಸುಮಾರು 100ಕ್ಕೂ ಅಧಿಕ ಮಕ್ಕಳ ರಕ್ಷಣೆ ಮಾಡಿದ್ದಾರೆ. ರಜಾ ದಿನಗಳು ಹೆಚ್ಚು ಇರುವುದರಿಂದ ಮುಂದಿನ ದಿನಗಳಲ್ಲಿ ಇದರ ಸಂಖ್ಯೆ ಹೆಚ್ಚಾಗುತ್ತದೆ. ಮಕ್ಕಳನ್ನು ಸುರಕ್ಷಿತ ತಾಣಗಳಿಗೆ ತಲುಪಿಸುವ ತನಕ ರೇಖಾ ಸ್ಟೇಷನ್​ನಲ್ಲೇ ಕಾಲ ಕಳೆಯುತ್ತಾರೆ ಅನ್ನುವುದು ಅವರ ಬದ್ಧತೆಗೆ ಹಿಡಿದ ಕೈಗನ್ನಡಿ.

ಅಥ್ಲೀಟ್ ಕೂಡ ಆಗಿದ್ದ ರೇಖಾ ಇಲಾಖೆಯ ರಾಜ್ಯ ಮಟ್ಟದ ಕೂಟಗಳಲ್ಲಿ ಭಾಗವಹಿಸಿದ್ದರು. ಇಲಾಖೆಯ ಹಿರಿಯ ಅಧಿಕಾರಿಗಳು ರೇಖಾ ಸಾಧನೆಯನ್ನು ಮೆಚ್ಚಿ ಆಕೆಗೆ ಪ್ರಶಸ್ತಿ ನೀಡಬೇಕು ಅಂತ ಶಿಫಾರಸು ಮಾಡಿದ್ದಾರೆ. ಒಟ್ಟಿನಲ್ಲಿ ರೇಖಾ ಮಿಶ್ರಾ ಸಾಧನೆ ಎಲ್ಲರಿಗೂ ಸ್ಪೂರ್ತಿದಾಯಕ ಅನ್ನುವುದರಲ್ಲಿ ಎರಡು ಮಾತಿಲ್ಲ.

ಇದನ್ನು ಓದಿ:

1. ಕ್ಯಾನ್ಸರ್​ ಪತ್ತೆ ಹಚ್ಚಲು ಹೊಸ ಉಪಕರಣ- ಮಹಾಮಾರಿಯನ್ನು ಓಡಿಸಲು ವೈದ್ಯಲೋಕದ ಪಣ

2. ಅಂಕಿಅಂಶದ ಕಡೆಗೆ ಗಮನ- ಪಕ್ಕಾ ಲೆಕ್ಕ ಕೊಡ್ತಾರೆ ರೇಣುಕಾ ಮತ್ತು ಅರ್ಚನಾ..! 

3. ನಿರಾಶ್ರಿತರ ಪಾಲಿಗೆ ಸಂಜೀವಿನಿ- 5 ಲಕ್ಷಕ್ಕೂ ಅಧಿಕ ಜನರ ಹಸಿವು ತಣಿಸಿದ "ಯಂಗೀಸ್ತಾನ್"