ಲೇಡಿರಾಕ್ ಸ್ಟಾರ್ ಶಚಿನಾ -ಸೌಂಡ್ ಮಾಡ್ತಿದೆ ದಿಬ್ಬರದಿಂಡಿ

ಟೀಮ್​​ ವೈ.ಎಸ್​. ಕನ್ನಡ

ಲೇಡಿರಾಕ್ ಸ್ಟಾರ್ ಶಚಿನಾ -ಸೌಂಡ್ ಮಾಡ್ತಿದೆ ದಿಬ್ಬರದಿಂಡಿ

Friday August 26, 2016,

2 min Read

ಕನ್ನಡ ಸಿನಿಮಾರಂಗದಲ್ಲಿ ಸ್ಟಾರ್ ನಾಯಕನಟರನ್ನ ಅಂದವಾಗಿ ಕಾಣಿಸುವಂತೆ ಮಾಡುವವರ ಸಾಲಿನಲ್ಲಿ ಶಚಿನಾ ಕೂಡ ನಿಲ್ತಾರೆ. ಸ್ಯಾಂಡಲ್​ವುಡ್​ನಲ್ಲಿ ನಂಬರ್‍ಒನ್ ಸ್ಟಾರ್​ಗಳಿಗೆ ಶಚಿನಾ ಕಾಸ್ಟ್ಯೂಮ್‍ ಡಿಸೈನರ್. ಆದ್ರೆ ಹೊಸ ವಿಷ್ಯ ಅಂದ್ರೆ ಈಗ ಶಚಿನಾ ಸ್ಟಾರ್‍ ಅದೂ ರಾಕ್ ಸ್ಟಾರ್ ಆಗಿ ಎಂಟ್ರಿಕೊಟ್ಟಿದ್ದಾರೆ.

ಜಾನಪದ ಸಾಂಗ್ ಗೆ ಸಿಕ್ತು ramp ಟಚ್

ದಿಬ್ಬರದಿಂಡಿ ದಿಬ್ಬರದಿಂಡಿ ದೀಪಾ ಎಲ್ಲಿಟ್ಟೆ. ಈ ಜಾನಪದದ ಸಾಲನ್ನ ಅದೆಷ್ಟೋ ವರ್ಷದ ಹಿಂದೆ ಕೇಳಿರೋ ನೆನಪು ನಿಮಗಿರಬಹುದು. ಅಜ್ಜಿ ಹೇಳಿಕೊಟ್ಟ ಈ ಹಾಡಿನ ಸಾಲನ್ನೇ ಆಧಾರವಾಗಿಟ್ಟುಕೊಂಡು ಡಿಸೈನರ್ ಶಚಿನಾ ಹೊಸ ಆಲ್ಬಂ ಸಾಂಗ್‍ ಅನ್ನ ಹಾಡಿದ್ದಾರೆ. ಅಷ್ಟೇ ಅಲ್ಲದೆ ವಿಡಿಯೋ ಆಲ್ಬಂನಲ್ಲಿ ತಾವೇ ನಟನೆ ಮಾಡಿದ್ದಾರೆ. ಶಚಿನಾ ಹಾಡುತ್ತಿರೋದು ಇದೇ ಮೊದಲೇನಲ್ಲ. ಈ ಹಿಂದೆ ಕನ್ನಡ ಚಿತ್ರರಂಗದಲ್ಲಿ ರಿಲೀಸ್‍ ಆಗಿದ್ದ ಕಡ್ಡಿಪುಡಿ ಸಿನಿಮಾದಲ್ಲೂ ಇಂತದ್ದೇ ಹಾಡನ್ನ ಹಾಡಿ ರಾಜ್ಯ ಪ್ರಶಸ್ತಿ ಗಿಟ್ಟಿಸಿಕೊಂಡಿದ್ರು. ಶಚಿನಾ ಒಂಥರ ಆಲ್‍ರೌಂಡರ್‍ ಅಂದ್ರೆ ತಪ್ಪಿಲ್ಲ ಸೂಪರ್ ಆಗಿ ಕಾಸ್ಟ್ಯೂಮ್‍ ಡಿಸೈನ್ ಮಾಡೋದ್ರ ಜೊತೆ ಜೊತೆಯಲ್ಲೇ ಒಳ್ಳೆ ಸಿಂಗರ್, ಡ್ಯಾನ್ಸರ್‍ ಅದ್ರ ಜೊತೆಯಲ್ಲಿ ಸಿನಿಮಾಗಳಲ್ಲಿ ಅಸಿಸ್ಟೆಂಟ್ ಆಗಿಯೂ ಶಚಿನಾ ಕೆಲಸ ಮಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ rampಸಾಂಗ್​ಗಳು ಹಿಟ್‍ ಆಗ್ತಿರೋದ್ರಿಂದ ನಾವು ಯಾಕೆ ಒಂದು ವಿಡಿಯೋ ಆಲ್ಬಂ ಅನ್ನ ಟ್ರೈ ಮಾಡಬಾರದು ಅಂತ ಶಚಿನಾ ಅಂಡ್‍ ಟೀಂ ಇಂತಹದೊಂದು ಪ್ರಯತ್ನ ಮಾಡಿದೆ.

ಇದನ್ನ ಓದಿ: ಎಲ್ಲಾ ಕೆಲಸಗಳನ್ನು ಮುಗಿಸುತ್ತೆ ಒಂದೇ ಕರೆ- ಅಧಿಕಾರಿಗಳ ಜೊತೆ ಸಂವಹನಕ್ಕೆ ಆ್ಯಪ್ ಮೊರೆ

ಹೈ ಕ್ವಾಲಿಟಿ ಸೂಪರ್‍ಔಟ್ ಪುಟ್

ಯೂಟ್ಯೂಬ್​ನಲ್ಲಿ ಆಲ್ಬಂ ಸಾಂಗ್​ಗಳು ವಾರಕ್ಕೆರಡರಂತೆ ಬರ್ತಾನೆ ಇರುತ್ತವೆ. ಆದ್ರೆ ಶಚಿನಾ ಮಾಡಿರೋ ದಿಬ್ಬರದಿಂಡಿ ವಿಡಿಯೋ ಆಲ್ಬಂ ಎಲ್ಲವನ್ನೂ ಮೀರಿ ಮೊದಲ ಸ್ಥಾನದಲ್ಲಿ ನಿಲ್ಲೋದಿಕ್ಕೆಕಾರಣ ಕ್ವಾಲಿಟಿ. ಸುಮಾರು ಏಳೆಂಟು ದಿನ ಈ ವಿಡಿಯೋ ಆಲ್ಬಂಗಾಗಿ ಚಿತ್ರೀಕರಣ ಮಾಡಿದ್ದು ಆಲ್ಬಂನಲ್ಲಿ ಶಚಿನಾ ಮತ್ತು ಚಿತ್ರ ನಟ ಸ್ಕಂದ ಕೂಡ ಅಭಿನಯಿಸಿದ್ದಾರೆ. ಇನ್ನೂ ಔಟ್ ಪುಟ್‍ಕೂಡ ಸಖತ್‍ ಕ್ವಾಲಿಟಿ ಇದ್ದು ಸ್ಯಾಂಡಲ್​ವುಡ್​ನ ಸ್ಟಾರ್ ಡಿಒಪಿ ಭುವನ್‍ಗೌಡ ಕ್ಯಾಮೆರ ವರ್ಕ್ ಈ ಆಲ್ಬಂಗಿದೆ. ಜೂಡಾ ಸ್ಯಾಂಡಿ ಮ್ಯೂಸಿಕ್ ಸಖತ್ತಾಗಿ ವರ್ಕ್​ಔಟ್​ ಕೂಡ ಆಗಿದೆ. ಈಗಾಗಲೇ ಹಾಡು ಹಾಡಿ ಅಭ್ಯಾಸ ಇರೋ ಶಚಿನಾ ಈ ಆಲ್ಬಂ ನಲ್ಲಿ ಹಾಡುತ್ತಾ ಸಖತ್ತಾಗಿಯೇ ಡ್ಯಾನ್ಸ್​ ಕೂಡ ಮಾಡಿದ್ದಾರೆ. ಇನ್ನೂ ಸ್ಪೆಷಲ್‍ ಅಂದ್ರೆ ಶಚಿನಾ ವಿಡಿಯೋ ಸಾಂಗ್​ನಲ್ಲಿ ಅಭಿನಯಿಸೋದಕ್ಕೆ ಯಾವುದೇ ಟೈಂ ತೆಗೆದುಕೊಂಡಿಲ್ಲ. ಎರಡು ವರ್ಷದಿಂದ ಪ್ಲಾನ್ ಮಾಡಿಟ್ಟುಕೊಂಡ್ರು ಕೂಡ ಎರಡೇ ದಿನದಲ್ಲಿ ಫೈನಲ್ ಮಾಡಿ ಆ ವಿಡಿಯೋ ಸಾಂಗ್‍ ಅನ್ನ ಶೂಟ್ ಮಾಡಲಾಗಿದೆ. ಇನ್ನೂ ಕಾಸ್ಯೂಮ್‍ ಡಿಸೈನ್‍ ಆಗಿರೋ ಶಚಿನಾ ತಮಗೆ ತಾವೇ ಡಿಸೈನ್ ಮಾಡಿಕೊಂಡಿದ್ದಾರೆ .ವಿಡಿಯೋ ಸಾಂಗ್‍ ಕಲರ್​ಫುಲ್ ಆಗಿ ಕಾಣಿಸಿಕೊಳ್ಳೋದಕ್ಕೆ ಇದೂ ಕೂಡ ಒಂದು ಪ್ಲಸ್ ಪಾಯಿಂಟ್.

ಜನಪದಕ್ಕೆ ramp ಟಚ್

ದಿಬ್ಬರದಿಂಡಿ ಸಾಲುಗಳು ಜಾನಪದವಾಗಿದ್ರು ಕೂಡ ನಾಲ್ಕು ಸಾಲಿನ ನಂತ್ರ ಇಂದಿನ ಸ್ಟೈಲ್​ಗೆ ತಕ್ಕಂತಹ ಲಿರಿಕ್ಸ್ ಈ ಆಲ್ಬಂ ನಲ್ಲಿದೆ. ಮನೋರಂಜನಾ ಲಿರಿಕ್ಸ್ ಕೇಳಿದವ್ರಿಗೆ ಸಲೀಸಾಗಿ ಅರ್ಥ ಆಗೋದ್ರ ಜೊತೆಯಲ್ಲಿ ಬೇಗ ಹಾಡೋದಕ್ಕೆ ಅಭ್ಯಾಸವಾಗುತ್ತದೆ. ಈ ಹಾಡಿಗೆ ದೀಪಂಜನ್ ನಿರ್ದೇಶನ ಮಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ramp ವಿಡಿಯೋ ಸಾಂಗ್ ಗಳು ಸಖತ್ ಹಿಟ್‍ ಆಗ್ತಿದೆ. ಆದ್ರೆ ಇನ್ನೂ ವಿಶೇಷ ಅಂದ್ರೆ ಲೇಡಿ rampaರ್‍ಗಳು ಕನ್ನಡದಲ್ಲಿ ಕಡಿಮೆ ಸಂಖ್ಯೆ. ಹೀಗಿರೋ ಟೈಂ ನಲ್ಲಿ ತಮ್ಮದೇ ಸ್ಟೈಲ್​ನಲ್ಲಿ ಪಕ್ಕಾ ನನ್ನದೇ ಸ್ಟೈಲ್​ನಲ್ಲಿ ದೇಸಿತನದಲ್ಲಿ ದಿಬ್ಬರದಿಂಡಿ ಕನ್ನಡಿಗರ ಮನಸ್ಸನ್ನ ಗೆಲ್ಲೋದ್ರಲ್ಲಿ ಮೊದಲ ಸ್ಥಾನದಲ್ಲಿ ನಿಂತಿದೆ.

ಇದನ್ನ ಓದಿ:

1. Video ಕಾಲ್ ಬಗ್ಗೆ ನೋ ಟೆನ್ಶನ್​- 'ಡುಯೋ'ದಿಂದ ಸಿಕ್ತು ಸೊಲ್ಯುಷನ್​​ 

2. ಮೆಡಿಕಲ್​ಗೆ ಹೋಗೋ ಚಿಂತೆ ಬಿಟ್ಟುಬಿಡಿ- ಆನ್​ಲೈನ್​ನಲ್ಲೇ ಆರ್ಡರ್​ ಮಾಡಿ

3. ಮಾರುಕಟ್ಟೆಯಲ್ಲಿ ನಿಮ್ಮ ಚಿತ್ರಣ ಸೃಷ್ಟಿಸಿ ಉದ್ಯಮದ ಕಹಳೆ ಮೊಳಗಿಸಿ