ಬೈಂಡ್ ಬೈಂಡ್.ಕಾಂ ದೇಸಿ ರುಚಿಗೆ ಒನ್‍ಟಚ್ ಸಲ್ಯೂಷನ್
ಚೈತ್ರ ಎನ್.
ಅಲ್ಲೆಲ್ಲೋ ದೂರದಲ್ಲಿ ಬೆವರು ಸುರಿಸುತ್ತಿರೋ ರೈತ, ಆದರೆ ಅದು ಸೇರಬೇಕಾದವರ ಕೈ ಸೇರುತ್ತಿಲ್ಲ. ಇಲ್ಲೆಲ್ಲೋ ಅಮ್ಮಮತ್ತು ಅಮ್ಮನ ಸಿಹಿ ತಿಂಡಿಗಳನ್ನು ನೆನೆದು ನಿಟ್ಟುಸಿರು ಬಿಡುತ್ತಿರೋ ಮನಸ್ಸು, ಮತ್ತಿನ್ನೆಲ್ಲೋ ತನ್ನೂರಿನ ರುಚಿಯನ್ನು ನೆನೆದು ನಿಟ್ಟುಸಿರು ಬಿಡುತ್ತಿರೋಜೀವ! ಈ ಎಲ್ಲಕೊರಗಿಗೂ ಉತ್ತರವಾಗಿ ಕೈ ಜೋಡಿಸಿದ್ದೆ ಬೈಂಡ್ ಬೈಂಡ್.ಕಾಂ!
"ಬೈಂಡ್" ಅಂದರೆ ಒಂದು ಮಾಡುವುದು! ಸೇರಿಸುವುದು!ಒಗ್ಗೂಡಿಸುವುದು. ಬಾಲ್ಯದಿಂದಲೂ ಕಂಡ ಬಿಡಿಸಿಟ್ಟ ವ್ಯವಸ್ಥೆ ಮತ್ತು ಭಾವನೆಗಳ ಸಂಬಂಧವನ್ನು ಒಂದುಮಾಡುವ ನಿಟ್ಟಿನಲ್ಲಿ ಹುಟ್ಟಿಕೊಂಡ ಇ-ಕಾಮರ್ಸ್ ಪೋರ್ಟಲ್ ಬೈಂಡ್ ಬೈಂಡ್.ಕಾಂ.
ಗೋ ನೇಟಿವ್
ಕೆಲಸ ಅರಸಿ ವಲಸಿಗರ ನಗರಿ ಬೆಂಗಳೂರಿಗೆ ಬಂದವರಿಗೆ ತಮ್ಮೂರಿನ ದೇಸಿ ಸಿಹಿ ಮೈಸೂರು ಪಾಕ್, ಧಾರವಾಡ ಪೇಡಾ, ಬೆಳಗಾವಿ ಕುಂದ ತಿನ್ನಬೇಕು ಅನಿಸಿದಾಗ ದಾರಿದಾರಿಗೂ ಸ್ವೀಟ್ಸ್ ಸೆಂಟರ್‍ಗಳ ದರ್ಬಾರು. ಆದರೆ ಅಲ್ಲೆಲ್ಲೂ ನಮ್ಮೂರಿನ ರುಚಿ ನಾಲಿಗೆಗೆ ದಕ್ಕುತ್ತಲೇ ಇರಲಿಲ್ಲ. ಇನ್ನು ರೈತ ಮತ್ತು ಆರ್ಥಿಕ ವ್ಯವಸ್ಥೆ, ಸಣ್ಣ ಕೈಗಾರಿಕೆಗಳು, ಮಹಿಳಾ ಸಬಲೀಕರಣವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಅವರ ಉತ್ಪನ್ನಗಳಿಗೆ ಆನ್‍ಲೈನ್ ಮಾರಟದ ವೇದಿಕೆ ಒದಗಿಸಲು ಆಲೋಚಿಸಿ 15 ಜನ ಸಾಫ್ಟ್ವೇರ್ ಯುವಕರು ಅಮೇರಿಕಾದಲ್ಲಿ ಕೆಲಸಕ್ಕೆ ರಾಜೀನಾಮೆ ನೀಡಿ ಭಾರತದ ಅಂಗಳದಲ್ಲಿ ಬೆಂಗಳೂರಮ್ಮನ ಮಡಿಲಲ್ಲಿ ಅಕ್ಟೋಬರ್ನಲ್ಲಿ ಬೈಂಡ್ ಬೈಂಡ್.ಕಾಮ್ ಆನ್‍ಲೈನ್ ಪೋರ್ಟಲ್ ಪ್ರಾರಂಭಿಸಿಯೇ ಬಿಟ್ಟರು.
ಬೈಂಡ್ ಬೈಂಡ್.ಕಾಂ
ಪೋರ್ಟಲ್ ತೆರೆಯುತ್ತಿದ್ದಂತೆ ನಮ್ಮೂರಿನ ಸಿಹಿ ತಿಂಡಿಗಳು, ಹಲಸಿನ ಚಿಪ್ಸ್, ಸಾವಯವ ಗ್ರೀನ್‍ಟೀ ಪುಡಿ, ಚನ್ನಪಟ್ಟಣದ ಬೊಂಬೆಗಳು, ತಂಜಾವೂರಿನ ಬೊಂಬೆಗಳು, ಪರಿಸರ ಸ್ನೇಹಿ ವಸ್ತುಗಳು, ಅನುಪಯುಕ್ತ ವಸ್ತುವಿನಿಂದ ತಯಾರಿಸಲ್ಪಟ್ಟ ಸಾವಯುವ ಗೊಬ್ಬರಗಳು, ಬಿದಿರಿನ ಬೊಂಬೆಗಳು ಮತ್ತು ಕ್ರಾಫ್ಟ್ ಪೀಸ್‍ಗಳು, ಪೇಪರ್ ಬ್ಯಾಗ್ ನಿಮ್ಮನ್ನು ಬರಮಾಡಿಕೊಳ್ಳುತ್ತವೆ. ಈಗಾಗಲೇ 500 ಪ್ರಾಡಕ್ಟ್ಗಳು ಈ ಪೋರ್ಟಲ್‍ನಲ್ಲಿದ್ದು, ಮುಂದಿನ ದಿನಗಳಲ್ಲಿ ಸಂಪೂರ್ಣ ಐಟಮ್‍ಗಳ ಲಭ್ಯತೆಗಾಗಿ ಈಗಾಗಲೇ ಸಿದ್ದಮಾಡಿಕೊಂಡಿದೆ ಈ ತಂಡ. ಈ ಎಲ್ಲಾ ವಸ್ತುಗಳಲ್ಲಿ ನಿಖರತೆ ಮತ್ತು ವಿಭಿನ್ನತೆ ಇದೆ. 4 ದಿನದಲ್ಲೇ ಸಾವಿರಾರು ಕ್ಲಿಕ್‍ಗಳನ್ನ ಪಡೆದ ಹೆಗ್ಗಳಿಕೆ ಈ ಪೋರ್ಟಲ್‍ನದ್ದು. ಇದಕ್ಕಾಗಿ ಬೈಂಡ್ ಬೈಂಡ್ ತಂಡ ಎಚ್ಚರಿಕೆಯಿಂದ ವೈಜ್ಞಾನಿಕವಾಗಿ ಕೆಲಸ ನಿರ್ವಹಿಸುತ್ತಿದೆ.
ನಮ್ ಟೀಂ..!
ಸುಮಾರು 2 ವರ್ಷಗಳಿಂದ ಈ 15 ಯುವಕರ ತಂಡ ಹಗಲಿರುಳು ಶ್ರಮಿಸಿದೆ. ಮೊದಲು ಮಾರ್ಕೆಟ್ ರಿಸರ್ಚ್ ಪ್ರಾರಂಭಿಸಿದೆ. ಅದರಲ್ಲಿ ಪ್ರತಿಯೊಬ್ಬರು ತಮ್ಮೂರಿನ ತಿನಿಸುಗಳು ಲಭ್ಯವಿದೆ. ಆದರೆ ಅದರ ದೇಸಿ ರುಚಿಯಲ್ಲಿ ವ್ಯತ್ಯಾಸವಿರುತ್ತದೆ ಎನ್ನುವುನ್ನು ಸ್ಪಷ್ಟಪಡಿಸಿದರು. ಈ ಮೂಲಕ ಗ್ರಾಹಕರ ಅಗತ್ಯತೆಗಳನ್ನು ತಿಳಿದುಕೊಂಡಿದೆ. ನಂತರ ಎಲ್ಲಾ ಸಿಹಿ ತಿಂಡಿಗಳನ್ನ ಆಯಾ ಪ್ರದೇಶದ ಸ್ಥಳೀಯರಿಗೆ ರುಚಿ ನೋಡಲು ಸ್ಯಾಂಪಲ್ ನೀಡಲಾಯಿತು. ಇಲ್ಲಿ ಧಾರಾವಾಡದ ಪೇಡ, ಕೇರಳದಿಂದಲೇ ತರಿಸಿದ್ದ ಚಿಪ್ಸ್ ಯಾವುದರಲ್ಲೂ ದೇಸಿ ರುಚಿಇರಲಿಲ್ಲ. ಇದನ್ನೆಲ್ಲಾ ಮನಗಂಡು ಬೈಂಡ್ ಬೈಂಡ್. ಕಾಂ ತನ್ನ ನಿರ್ಧಾರವನ್ನು ಗಟ್ಟಿ ಮಾಡಿಕೊಂಡಿತು. ಈಗ ಈ ಪೋರ್ಟಲ್‍ನಲ್ಲಿ ಮೂರು ತಂಡಗಳಾಗಿ ಕೆಲಸ ನಿರ್ವಹಿಸುತ್ತಿದೆ. ಮಾರ್ಕೆಟಿಂಗ್ ಮತ್ತು ಪ್ರಾಡಕ್ಟಿಂಗ್ ವಿಭಾಗ ಇಲ್ಲಿ ಕರ್ನಾಟಕದಾದ್ಯಂತಇರುವ ಹಳ್ಳಿಗಳನ್ನು ಗುರುತಿಸಿ, ರೈತರನ್ನು ಭೇಟಿ ಮಾಡಲಾಗುತ್ತದೆ. ಆ ಊರಿನ ವಿಶೇಷತೆಗಳನ್ನು ತಿಳಿದುಕೊಂಡು ಅಲ್ಲಿನ ವಿಶೇಷ ಪ್ರಾಡಕ್ಟ್ಗಳನ್ನು ಆಯ್ಕೆ ಮಾಡಲಾಗುತ್ತದೆ. ಹೀಗೆ ಅನುಪಯುಕ್ತ ವಸ್ತುಗಳಿಂದ ಉತ್ಪತ್ತಿಯಾದ ಒಂದು ಅಂಶವನ್ನು ತಯಾರಿಸಿದ ಸಾವಯವಗೊಬ್ಬರವನ್ನು ಬೈಂಡ್ ಪೋರ್ಟಲ್‍ನಲ್ಲಿ ಕಾಣಬಹುದು. ಅಷ್ಟೇ ಅಲ್ಲದೆ ತಂಜಾವೂರಿನ ದೇಸಿ ಕಲೆಗಳಾದ ಬೊಂಬೆಗಳೂ ಅದರಲ್ಲೂ ಅಜ್ಜ-ಅಜ್ಜಿ ಬೊಂಬೆಗಳು, ಬ್ರಾಹ್ಮಣ ದಂಪತಿ ಬೊಂಬೆಗಳನ್ನು ಇಲ್ಲಿಕಾಣಬಹುದು. ಅಳಿವಿನ ಅಂಚಿನಲ್ಲಿರುವ ಈ ಕಲೆಯನ್ನು ಉಳಿಸೋ ಪ್ರಯತ್ನ ಇದಾಗಿದೆ. ಇನ್ನು ನಮ್ಮಚನ್ನಪಟ್ಟಣದ ಬೊಂಬೆಗಳನ್ನು ಇಡೀ ಕರ್ನಾಟಕ್ಕೆತಲುಪಿಸುವ ಕೆಲಸಕ್ಕೂ ಮುಂದಾಗಿದೆ. ಈ ದಸರೆಯಲ್ಲಂತೂ ಈ ಬೊಂಬೆಗಳು ಹೆಚ್ಚು ಮಾರಟವಾಗಿದ್ದು, ಗ್ರಾಹಕರಿಗೆ ಅಚ್ಚ ಚನ್ನಪಟ್ಟಣದ ಬೊಂಬೆಗಳನ್ನು ಮನೆಯಲ್ಲೇ ಆಯ್ಕೆ ಮಾಡಿ, ತಮ್ಮ ಮನೆಗೆ ತರಿಸಿಕೊಳ್ಳುವ ಸಂತಸ ನೀಡಿದ ಹೆಗ್ಗಳಿಕೆ ಬೈಂಡ್ ಬೈಂಡ್. ಕಾಂನದ್ದು. ಇನ್ನುಇಲ್ಲಿ ಮಾರಟವಾಗುವ ಪ್ರತಿಯೊಂದು ವಸ್ತುವು, ಅದು ಪರಿಸರ ಸ್ನೇಹಿಯಾಗಿರಬೇಕು, ವಿಭಿನ್ನವಾಗಿರಬೇಕು. ನಂತರ ಆಪರೇಷನ್ ವಿಭಾಗದ ತಂಡ ಆ ಹಳ್ಳಿಗೆ ಭೇಟಿ ನೀಡಿ ಕ್ವಾಲಿಟಿಚೆಕ್ ಮಾಡುತ್ತದೆ. ಕ್ವಾಲಿಟಿಯಲ್ಲಿ ಯೌವುದೇ ರೀತಿಯ ಕಾಂಪ್ರಮೈಸ್ ಮಾಡಿಕೊಳ್ಳುವುದಿಲ್ಲ. ಸ್ವಲ್ಪ ಹೆಚ್ಚು ಕಡಿಮೆಯಾದರೂ ಪ್ರಾಡಕ್ಟ್ ರಿಜೆಕ್ಟ್ ಮಾಡಲಾಗುತ್ತದೆ. ಆ ಮೂಲಕ ಗ್ರಾಹಕರ ನಂಬುಗೆಗೆ ಪಾತ್ರವಾಗಿದೆ. ಟೆಕ್ನಾಲಜಿ ವಿಭಾಗ ಈ ಎಲ್ಲಾ ಉತ್ಪನ್ನಗಳು ಮತ್ತು ಮಾಹಿತಿಯನ್ನುಆನ್‍ಲೈನ್‍ನಲ್ಲಿ ಅಪ್‍ಲೋಡ್ ಮಾಡುತ್ತಿದೆ. ಜೊತೆಗೆಡೆಲಿವರಿ ಬಾಯ್ಸ್ ಕೂಡ ಇದ್ದಾರೆ.
ಮಾರ್ಕೆಂಗ್ ಮ್ಯಾಟರ್
ಸದ್ಯ ಇ-ಕಾಮರ್ಸ್ ಹೆಚ್ಚು ಪ್ರಚಲಿತದಲ್ಲಿದೆ. ಜಾಹೀರಾತು ಮತ್ತು ಸಾಮಾಜಿಕ ಜಾಲತಾಣದ ಮೂಲಕ ನೆಟ್‍ವರ್ಕ್ ಮಾಡಬಹುದು. ಸದ್ಯ ನಮಗೆ ಯಾರು ಇನ್‍ವೆಸ್ಟರ್ಸ್ ಇಲ್ಲ. ನಾವು 15 ಜನ ಲಕ್ಷಾಂತರ ರೂಪಾಯಿನ್ನು ಫಂಡಿಂಗ್ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಇದರಿಂದ ಹೆಚ್ಚಿನ ಲಾಭ ನಿರಿಕ್ಷೆ ಮಾಡಬಹುದು. ಕಾಂಪಿಟೇಷನ್ ಕೂಡ ಕಡಿಮೆ ಇದೆ. "ಅಸಾಧ್ಯವಾದುದು ಯಾವುದು ಇಲ್ಲ, ಕಷ್ಟ ಪಟ್ಟರೆ ಛಲವುಂಟು, ಸ್ವಲ್ಪಧೈರ್ಯ, ಸಾಗರದಷ್ಟುಆತ್ಮವಿಶ್ವಾಸ ಇದ್ದರೇ ನಮ್ಮ ಕೆಲಸದಲ್ಲಿ ಯಶಸ್ವಿಯಾಗುತ್ತೇವೆ " ಅಂತ ಬೈಂಡ್ .ಕಾಂನ ನಿರ್ದೇಶಕರಲ್ಲೋಬ್ಬರಾದ ಭರತ್ ವಿಶ್ವಾಸದಿಂದ ಹೇಳುತ್ತಾರೆ.
ನಮ್ಮ ನೆಲ ನಮ್ಮಜನ ನಮ್ಮಧ್ಯೇಯ
ಐಯುಐ, ಐಓಟಿ, ಬಿಗ್‍ಡೇಟಾ, ಕ್ಲೌಡ್ ಮಾದರಿಯಲ್ಲಿ ನಮ್ಮ ಸಂಸ್ಥೆ ಕೆಲಸ ಮಾಡುತ್ತಿದೆ. ಆ ಮೂಲಕ ರೈತರನ್ನುತಮ್ಮ ಸಂಸ್ಥೆಯಲ್ಲಿ ಭಾಗವಹಿಸುವಂತೆ ಮಾಡಲಾಗುತ್ತಿದೆ. "ನಮ್ಮತಂಡ ರೈತರಿಗೆ ಪ್ರಾಡಕ್ಟ್ ಅಪಲೋಡ್ ಮಾಡುವುದರ ಬಗ್ಗೆ, ಹ್ಯಾಂಡಲ್ ಮಾಡೋದು ಹೇಗೆ?, ಅನ್ನೊದನ್ನು ಕಲಿಸುತ್ತಿದೆ. ರೈತರಿಗೆ ಆನ್‍ಲೈನ್ ಮಾರಾಟವನ್ನು ಕಲಿಸಲಾಗುತ್ತಿದೆ. " ದಿ ಮೋರ್‍ಎಥ್ನಿಕ್ ಯೂ ಡು, ದಿ ಮೋರ್ ಯುನಿವರ್ಸಲ್ ಯೂ ಬಿ ಕಮ್". ನಿಮ್ಮ ಸಾಂಪ್ರಾದಾಯಿಕತೆಯನ್ನು ನೀವು ಗೌರವಿಸಿದರೇ ಅದು ನಿಮಗೆ ವಿಶ್ವ ಮಾನ್ಯತೆ ಕೊಡುತ್ತದೆ. ಬೈಂಡ್ ವಿಥ್ ನೇಚರ್ ಅಂಡ್ ಬೈಂಡ್ ವಿಥ್ ಯುವರ್ ನೇಟಿವ್ ಇದೇ ನಮ್ಮ ಸಕ್ಸಸ್ ಮಂತ್ರ ಅನ್ನೋದು ಬೈಂಡ್‍ಟೀಂನ ಸ್ಟ್ರಾಂಗ್ ಬೈಂಡಿಂಗ್ ತಂತ್ರ. ಹಾಗಾದ್ರೆ ಬನ್ನಿ ಇನ್ನೇಕೆ ತಡ ಮೆಟ್ರೋ ಸಿಟಿಯಲ್ಲಿ ನಮ್ಮೂರಿನ ದೀಪಾವಳಿಯನ್ನ ನಮ್ಮಅಡುಗೆ ರುಚಿ ಸವಿಯುತ್ತಲೇ ಆಚರಿಸೋಣ.