55 ವರ್ಷದ ಈ ‘ಬೀಜ ಮಾತೆ’ ಸ್ಥಳೀಯ ಬೀಜಗಳನ್ನು ಸಂರಕ್ಷಿಸುವ ಮೂಲಕ ಅಪೌಷ್ಟಿಕತೆಯನ್ನು ನಿಭಾಯಿಸುತ್ತಿದ್ದಾರೆ

ಮಹಾರಾಷ್ಟ್ರದ ರಾಹಿಬಾಯಿ ಸೋಮಾ ಪೋಪೆರೆಯವರು 60 ಕ್ಕೂ ಹೆಚ್ಚು ಸ್ಥಳೀಯ ತರಕಾರಿಗಳು, 12 ಬಗೆಯ ಬತ್ತಗಳು ಮತ್ತು ಒಂಬತ್ತು ಬಗೆಯ ಬಟಾಣಿ ಮತ್ತು ಎಣ್ಣೆ ಕಾಳುಗಳನ್ನು ಉಳಿಸಿ ಕಾಪಾಡಿದ್ದಾರೆ.

55 ವರ್ಷದ ಈ ‘ಬೀಜ ಮಾತೆ’ ಸ್ಥಳೀಯ ಬೀಜಗಳನ್ನು ಸಂರಕ್ಷಿಸುವ ಮೂಲಕ ಅಪೌಷ್ಟಿಕತೆಯನ್ನು ನಿಭಾಯಿಸುತ್ತಿದ್ದಾರೆ

Friday August 02, 2019,

3 min Read

ಇಂದು ನಮ್ಮ ದೇಶದಲ್ಲಿ ಪೌಷ್ಟಿಕಾಂಶದ ಸುರಕ್ಷತೆ ಕುರಿತು ಹೆಚ್ಚಿನ ಕಾಳಜಿ ವಹಿಸಲಾಗುತ್ತಿದೆ. ಸಾಂಪ್ರದಾಯಿಕ ತಳಿಗಳ ಆಹಾರ ಧಾನ್ಯಗಳ ಬದಲಾಗಿ ಇಂದು ಹೈಬ್ರಿಡ್‌ ಬೆಳೆಗಳನ್ನು ಮತ್ತು ಆಮದು ಮಾಡಿಕೊಂಡ ಆಹಾರ ಪದಾರ್ಥಗಳನ್ನು ಬಳಸಲಾಗುತ್ತಿದೆ, ಅವುಗಳಲ್ಲಿ ಪೌಷ್ಟಿಕಾಂಶದ ಕೊರತೆ ಇರುವುದರಿಂದ ಅಪೌಷ್ಟಿಕತೆ ಹೆಚ್ಚಳವಾಗುತ್ತಿದೆ.


ವಿಶ್ವ ಸಂಸ್ಥೆಯ ವರದಿಯ ಪ್ರಕಾರ ಭಾರತ ವಿಶ್ವದಲ್ಲೇ ಅತಿ ಹೆಚ್ಚು ಮಕ್ಕಳ ಅಪೌಷ್ಟಿಕ ದರವನ್ನು ಹೊಂದಿದೆ, ಇದು ಮಗುವಿನ ಆರೋಗ್ಯ ಮತ್ತು ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ.


ಕ

ರಾಹಿಬಾಯಿ ಸೋಮಾ ಪೋಪೆರೆಯವರು (ಚಿತ್ರ: ವಿಲೇಜ್‌ ಸ್ಕ್ವೇರ್)


ಸರ್ಕಾರ ಮತ್ತು ಹಲವಾರು ಸಂಸ್ಥೆಗಳು ಈ ಸಮಸ್ಯೆಗೆ ಪರಿಹಾರ ಕಲ್ಪಿಸಲು ಕ್ರಮಗಳನ್ನು ಕೈಗೊಳ್ಳುತ್ತಿವೆ. 55 ವರ್ಷದ ರಾಹಿಬಾಯಿ ಸೋಮಾ ಪೋಪೆರೆಯವರು ಸ್ಥಳೀಯ ಬೆಳೆಗಳನ್ನು ರಕ್ಷಿಸುವ ಕಾರ್ಯವನ್ನು ಕೈಗೆತ್ತಿಕೊಂಡಿದ್ದಾರೆ, ಅಪೌಷ್ಟಿಕತೆಯ ಸಮಸ್ಯೆಗೆ ಇದೇ ಸೂಕ್ತ ಪರಿಹಾರವೆನ್ನುವುದು ಅವರ ಭಾವನೆ.


ಮಹಾರಾಷ್ಟ್ರದ ಕೊಂಭಾಲ್ನೆಯಿಂದ ಬಂದ ರಾಹಿಬಾಯಿಯವರು, ಸ್ಥಳೀಯ ಸಸ್ಯ ಪ್ರಭೇದಗಳ ರಕ್ಷಣೆಯಿಂದಾಗಿ ‘ಬೀಜ ಮಾತೆ’ ಎಂದೇ ಗುರುತಿಸಿಕೊಂಡಿದ್ದಾರೆ.


20 ವರ್ಷದ ಪರಿಶ್ರಮದಿಂದಾಗಿ ಇಂದು ರಾಹಿಬಾಯಿಯವರು 60ಕ್ಕೂ ಹೆಚ್ಚು ಸ್ಥಳೀಯ ತರಕಾರಿಗಳು, 12 ಬಗೆಯ ಬತ್ತಗಳು ಮತ್ತು ಒಂಬತ್ತು ಬಗೆಯ ಬಟಾಣಿ ಮತ್ತು ಎಣ್ಣೆ ಕಾಳುಗಳನ್ನು ಉಳಿಸಿದ್ದಾರೆ. ಇದಲ್ಲದೇ 55 ವಯಸ್ಸಿನ ಇವರ ಹಿತ್ತಲಲ್ಲಿ 32 ವಿಧದ ಬೆಳೆಗಳ 122 ತಳಿಯ ಬೀಜಗಳಿವೆ ಎಂದು ಹೋಮ್ ಗ್ರೋವ್ನ್ ವರದಿ ಮಾಡಿದೆ.


ಸಾಂಪ್ರದಾಯಿಕ ಬೀಜಗಳ ತಳಿಯನ್ನು ಉಳಿಸುವ ಜತೆ ಇನ್ನೂ ಹಲವಾರು ಸಾಧನೆಯಿಂದಾಗಿ ಇವರು ಮನ್ನಣೆ ಗಳಿಸಿದ್ದಾರೆ. ಉದಾಹರಣೆಗೆ, ಮಹಿಳೆಯರ ಸ್ವ ಸಹಾಯ ಸಂಘವಾಗಿರುವ ಕಸುಬಾಯಿ ಪರಿಸರ ಬಿಯಾನೀ ಸಂವರ್ಧನ ಸಮಿತಿಯನ್ನು ಸ್ಥಾಪಿಸಿದ್ದಾರೆ, ಈ ಮೂಲಕ ಅವರಿಗೆ ಸಾಂಪ್ರದಾಯಿಕ ಬೀಜಗಳನ್ನು ಸಂರಕ್ಷಿಸಲು ಮತ್ತು ಹೈಬ್ರಿಡ್‌ ತಳಿಯ ಬೀಜಗಳಿಂದ ದೂರ ಉಳಿಯಲು ಪ್ರೋತ್ಸಾಹ ನೀಡುತ್ತಿದ್ದಾರೆ.


ರಾಸಾಯನಿಕ ಮುಕ್ತ ಕೃಷಿ ಕುರಿತು ವಿಲೇಜ್‌ ಸ್ಕ್ವೇರ್ನೊಂದಿಗೆ ಮಾತನಾಡುತ್ತಾ ಅವರು ಹೀಗೆ ಹೇಳುತ್ತಾರೆ,


“ಸ್ಥಳೀಯ ಪ್ರಭೇದಗಳು ಕೇವಲ ಬರ ಮತ್ತು ರೋಗ ನಿರೋಧಕವಷ್ಟೇ ಅಲ್ಲ, ಬದಲಾಗಿ ಪೌಷ್ಟಿಕಾಂಶವನ್ನೂ ಹೊಂದಿದ್ದು ರಾಸಾಯನಿಕ ಗೊಬ್ಬರವನ್ನು ಬಳಸಿಕೊಳ್ಳದ ಕಾರಣ ಮಣ್ಣಿನ ಫಲವತ್ತತೆಯನ್ನು ಹಾಗೇಯೇ ಉಳಿಸಿಕೊಳ್ಳುತ್ತದೆ”


ಇದಲ್ಲದೇ, ರಾಸಾಯನಿಕ ಕೃಷಿ ವಿಧಾನವು ಉತ್ತಮ ಫಲಿತಾಂಶವನ್ನು ಕೊಡಲಿಲ್ಲ, ಅಲ್ಲದೇ ಅವರ ಹಳ್ಳಿಯಲ್ಲಿರುವ ಮಕ್ಕಳು ಪೌಷ್ಟಿಕಾಂಶದ ಕೊರತೆಯಿಂದ ದುರ್ಬಲರಾಗಿದ್ದರು.


ರಾಹಿಬಾಯಿಯವರು ಹೇಳುವ ಪ್ರಕಾರ, ಹಲವು ವರ್ಷಗಳಿಂದ ಹೈಬ್ರಿಡ್‌ ಬೀಜಗಳು, ರಾಸಾಯನಿಕ ಮತ್ತು ರಸಗೊಬ್ಬರಗಳನ್ನು ಬಳಸಿ ಬೆಳೆದ ತರಕಾರಿ ಮತ್ತಿತರ ಆಹಾರ ಧಾನ್ಯಗಳನ್ನು ಸೇವಿಸಿದ ಅವರ ಹಳ್ಳಿಯ ಜನರು ತಮ್ಮ ರೋಗ ನಿರೋಧಕ ಶಕ್ತಿಯನ್ನು ಕಳೆದುಕೊಂಡರು.


ಕ

ರಾಹಿಬಾಯಿಯವರು ಕೃಷಿ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಗಮನಿಸಿ ಎಂಐಟಿಟಿಆರ್‌ ಸಂಸ್ಥೆ ಇವರನ್ನು ಗೌರವಿಸಿದೆ. (ಚಿತ್ರ: ವಿಲೇಜ್‌ ಸ್ಟ್ವೇರ್)

ಆದಾಗ್ಯೂ, ಈ ಉಪಕ್ರಮಕ್ಕೆ ಕಾಲಿಡುವ ಮುನ್ನ ಅವರು ಜೀತ ಮಾಡುತ್ತಿದ್ದರು, ತೀವ್ರ ಬರಗಾಲವಿರುವ ಹಳ್ಳಿಯಿಂದ ಬಂದಿರುವ ರಾಹಿಬಾಯಿಯವರ ಕುಟುಂಬವು ಕೇವಲ ಮುಂಗಾರು ಸಮಯದಲ್ಲಿ ಮಾತ್ರ ಕೃಷಿ ಮಾಡಲು ಸಾಧ್ಯವಿತ್ತು ಮತ್ತು ಕಾಲ ಕಳೆದಂತೆ ಅವರ ಕುಟುಂಬದ ಸದಸ್ಯರು ಕೆಲಸವನ್ನು ಹುಡುಕುಕೊಂಡು ಹತ್ತಿರವಿರುವ ಉಪನಗರಗಳಿಗೆ ವಲಸೆ ಹೋದರು.


ಇದನ್ನು ರಾಹಿಬಾಯಿಯವರಿಗೆ ಸಹಿಸಲು ಸಾಧ್ಯವಾಗಲಿಲ್ಲ, ಅವರು ತಮ್ಮ ಸಮಯ ಮತ್ತು ಶ್ರಮವನ್ನು ವಿನಿಯೋಗಿಸಿ ಎರಡು ಎಕರೆ ಭೂಮಿಯನ್ನು ಫಲವತ್ತಾದ ಕೃಷಿ ಭೂಮಿಯನ್ನಾಗಿಸಲು ನಿರ್ಧಾರ ಮಾಡಿದರು. 55 ವರ್ಷದ ಇವರು ಸ್ವಂತವಾಗಿ ನೀರಾವರಿ ವ್ಯವಸ್ಥೆಯಾದ ಕೃಷಿ ಹೊಂಡ ಮತ್ತು ಸಾಂಪ್ರದಾಯಿಕ ಜಲ ಕುಂಡಗಳನ್ನು ಮಾಡಿಕೊಂಡಿದ್ದಾರೆ ಎಂದು, ಎಫರ್ಟ್ಸ್‌ ಫಾರ್ ಗುಡ್‌ ವರದಿ ಮಾಡಿದೆ.


ಮಹಾರಾಷ್ಟ್ರ ಟೆಕ್ನಾಲಜಿ ಟ್ರಾನ್ಸ್‌ಫರ್ ಫಾರ್ ರೂರಲ್ ಏರಿಯಾಸ್‌ (ಎಂಐಟಿಟಿಆರ್‌) ಗೆ ದನ್ಯವಾದಗಳು, ತಮ್ಮಿಂದಾಗಿ ರಾಹಿಬಾಯಿಯವರು ತಮ್ಮ ಹಿತ್ತಲಲ್ಲಿರುವ ನರ್ಸರಿಯನ್ನು ಬೆಳೆಸುವ ತಂತ್ರಗಳನ್ನು ಕಲಿತುಕೊಂಡಿದ್ದಾರೆ.


ಹೊಸ ಕೃಷಿ ತಂತ್ರಗಳನ್ನು ಅಳವಡಿಸಿಕೊಳ್ಳುವ ಪ್ರಯತ್ನದಿಂದ ಕೃಷಿ ಉತ್ಪನ್ನದಲ್ಲಿ ಶೇಕಡಾ 30 ರಷ್ಟು ಹೆಚ್ಚಳವನ್ನು ಕಾಣಲು ಸಾಧ್ಯವಾಯಿತೆಂದು ಅವರು ಹೇಳುತ್ತಾರೆ.


ಇಂದು ರಾಹಿಬಾಯಿಯವರು ಬೀಜಗಳ ಆಯ್ಕೆಯ ಕುರಿತು ರೈತರಿಗೆ ಮತ್ತು ವಿದ್ಯಾರ್ಥಿಗಳಿಗೆ ತರಬೇತಿ ನೀಡುತ್ತಿದ್ದಾರೆ ಮತ್ತು ಮಣ್ಣಿನ ಫಲವತ್ತತೆ ಹೆಚ್ಚಿಸುವ ಹಾಗೂ ಕೀಟಗಳ ನಿರ್ವಹಣೆಯ ಕುರಿತಾಗಿ ಕಾರ್ಯಾಗಾರವನ್ನು ನಡೆಸುತ್ತಿದ್ದಾರೆ. ರೈತರನ್ನು ಸಾಂಪ್ರದಾಯಿಕ ಕೃಷಿಗೆ ಬದಲಾಯಿಸಲು ತಮ್ಮ ಹಿತ್ತಲ ನರ್ಸರಿಯಲ್ಲಿರುವ ಬೀಜಗಳನ್ನು ಸಹ ಅವರು ವಿತರಿಸುತ್ತಿದ್ದಾರೆ.


ಇದರಲ್ಲಿ ಯಶಸ್ಸು ಕಂಡ ನಂತರ, ರಾಹಿಬಾಯಿಯವರು 25,000 ಕುಟುಂಬಗಳಿಗೆ ಕೈ ತೋಟ ನಿರ್ಮಿಸಲು ಸಹಾಯ ಮಾಡುವ ಮೂಲಕ ಪೌಷ್ಟಿಕಾಂಶದ ಮೌಲ್ಯವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದ್ದಾರೆ. ಅಷ್ಟೇ ಅಲ್ಲದೇ 250 ತಳಿಯ ಬೆಳೆಗಳನ್ನು ಸುಸ್ಥಿರವಾಗಿ ಬೆಳೆಯಲು ಮತ್ತು ಸಂರಕ್ಷಿಸಲು ಉತ್ತೇಜಿಸುವ ಬಯಕೆಯನ್ನು ಹೊಂದಿದ್ದಾರೆ.


ಅವರ ಪರಿಶ್ರಮದ ಕುರಿತಾಗಿ ಬಿಬಿಸಿಯು ಸಾಕ್ಷ್ಯ ಚಿತ್ರವೊಂದನ್ನು ಚಿತ್ರೀಕರಿಸಿದೆ. ಇದಲ್ಲದೇ ಈ ವರ್ಷದ ಆರಂಭದಲ್ಲಿ ಖ್ಯಾತ ಚಲನಚಿತ್ರ ನಿರ್ಮಾಪಕರಾದ ಅಚ್ಯುತಾನಂದ ದ್ವಿವೇದಿಯವರು ಚಿತ್ರೀಕರಿಸಿದ ಕಿರು ಚಿತ್ರ ‘ಸೀಡ್ ಮದರ್‌’ ಕೆನಡಾದ ಚಲನ ಚಿತ್ರೋತ್ಸವ ಪ್ರಶಸ್ತಿಯನ್ನು ಗಳಿಸಿದೆ. ಅಷ್ಟೇ ಅಲ್ಲದೇ ನೆಸ್‌ಪ್ರೆಸೋ ಟ್ಯಾಲೆಂಟ್ಸ್‌ 2019ರ ವಿಭಾಗದಲ್ಲಿ ಮೂರನೇ ಸ್ಥಾನ ಪಡೆದಿದ್ದು, ರಾಹಿಬಾಯಿಯವರ ಖ್ಯಾತಿಯನ್ನು ಇನ್ನಷ್ಟು ಹೆಚ್ಚಿಸಿದೆ.