ಐರನ್ ಡಿಫಿಶಿಯನ್ಸಿಗೆ ಗುಡ್ ಬೈ- ಕೆನಾಡದ "ಲಕ್ಕಿ ಐರನ್ ಫಿಶ್" ಅನ್ವೇಷಕನಿಗೆ ಹಾಯ್ ಹಾಯ್..!
ಟೀಮ್ ವೈ.ಎಸ್. ಕನ್ನಡ
ವಿಶ್ವದಲ್ಲಿ ಇವತ್ತು ಎಲ್ಲರೂ ಒಂದಲ್ಲ ಒಂದು ಕಾಯಿಲೆಯಿಂದ ಬಳಲುತ್ತಿದ್ದಾರೆ. ಮಾಲಿನ್ಯದಿಂದ ಅಸ್ತಮಾ ಹೆಚ್ಚಾಗಿ ಕಂಡು ಬಂದ್ರೆ, ಡೆಂಗ್ಯೂ, ಚಿಕುನ್ ಗುನ್ಯಾಗಳು ಭಾರತದ ಎಲ್ಲಾ ಕಡೆ ಸಾಮಾನ್ಯ ಅನ್ನುವ ಹಾಗಾಗಿಬಿಟ್ಟಿದೆ. ವಿಟಮಿನ್ಗಳ ಕೊರತೆ ಕೂಡ ವಿಶ್ವದಲ್ಲೇ ದೊಡ್ಡ ಸುದ್ದಿ ಮಾಡುತ್ತಿದೆ. ದೇಹದಲ್ಲಿ ಕಬ್ಬಿಣದ ಅಂಶದ (ಐರನ್ ಡಿಫಿಶಿಯನ್ಸಿ) ಕೊರತೆ ಎಲ್ಲಾ ಕಡೆಯೂ ಸಾಮಾನ್ಯವಾಗಿದೆ. ವಿಶ್ವದಲ್ಲಿ ಸುಮಾರು 2.5 ಬಿಲಿಯನ್ ಜನರು ದೇಹದಲ್ಲಿ ಕಬ್ಬಿಣದ ಅಂಶದ ಕೊರತೆಯಿಂದ ಕಂಗೆಟ್ಟಿದ್ದಾರೆ. ಈ ಪೈಕಿ ಮಹಿಳೆಯರ ಸಂಖ್ಯೆಯೇ ಅತೀ ಹೆಚ್ಚಿದೆ. ದೇಹದಲ್ಲಿ ಐರನ್ ಡಿಫೀಶಿಯನ್ಸಿಯಿಂದ ಸುಸ್ತು, ಪರಿಣಾಮಕಾರಿ ಕೆಲಸ ಮಾಡಲು ಹಿನ್ನಡೆ ಜೊತೆಗೆ ದೇಹದಲ್ಲಿ ಇತರೆ ಸಮಸ್ಯೆಗಳು ಕೂಡ ಹೆಚ್ಚಾಗುತ್ತದೆ. ಈ ಸಂಬಂಧ ಸಾವು ಕೂಡ ಆಗಿರುವ ಉದಾಹರಣೆಯೂ ಇದೆ.
ಮನುಕುಲಕ್ಕೆ ಸವಾಲಾಗಿರುವ ಈ ಸಮಸ್ಯೆಗೆ ಪರಿಹಾರ ಕಂಡು ಹಿಡಿಯುವ ಪ್ರಯತ್ನ ನಡೆಯುತ್ತಿದೆ. ಈ ಮಧ್ಯೆ ಕೆನಡಾದ 29 ವರ್ಷದ ಉದ್ಯಮಿ ಡಾ. ಗವಿನ್ ಆರ್ಮ್ಸ್ಟ್ರಾಂಗ್ ಐರನ್ ಡಿಫೀಶಿಯನ್ಸಿ ಸಮಸ್ಯೆಗೆ ಪರಿಹಾರ ಕಂಡು ಹಿಡಿದಿದ್ದಾರೆ. "ಲಕ್ಕಿ ಐರನ್ ಫಿಶ್" ಅನ್ನೋ ಮೀನಿನ ಆಹಾರವನ್ನು ಸೇವಿಸುವ ಮೂಲಕ ದೇಹದಲ್ಲಿ ಕಬ್ಬಿಣದ ಅಂಶದ ಕೊರತೆಯನ್ನು ನೀಗಿಸಿಕೊಳ್ಳಬಹುದು. ಡಾ. ಗವಿನ್ರ "ಲಕ್ಕಿ ಐರನ್ ಫಿಶ್"ನಲ್ಲಿ ಶೇಕಡಾ 90ರಷ್ಟು ಕಬ್ಬಿಣದ ಸತ್ವವಿದೆ. ಇದನ್ನು ಸೇವಿಸಿದರೆ ದೇಹಕ್ಕೆ ಬೇಕಾಗುವಷ್ಟು ಕಬ್ಬಿಣದ ಅಂಶ ಸಿಗುತ್ತದೆ. "ಲಕ್ಕಿ ಐರನ್ ಫಿಶ್"ನ್ನು 5 ವರ್ಷದ ಮಗುವಿನಿಂದ ಹಿಡಿದು ಎಲ್ಲರೂ ಕೂಡ ಸೇವಿಸಬಹುದು. ಕೆನಡಾ ಉದ್ಯಮಿಯ ಈ ಇನ್ನೋವೇಶನ್ ಹೆಲ್ತ್ ಕೇರ್ ಸೆಕ್ಟರ್ನಲ್ಲಿ ಹೊಸ ಸಂಚಲನವನ್ನು ಸೃಷ್ಟಿಸಿದೆ.
ಇದನ್ನು ಓದಿ: ಆಟ, ನಟನೆ ಎಲ್ಲದಕ್ಕೂ ಸೈ- ನಿವೃತ್ತಿ ನಂತರ ಬ್ಯುಸಿನೆಸ್ಗೂ ಜೈ
"ಲಕ್ಕಿ ಐರನ್ ಫಿಶ್" ಬಗ್ಗೆ ಸಾಕಷ್ಟು ಪರೀಕ್ಷೆಗಳು ನಡೆದಿವೆ. 2012ರಲ್ಲಿ ಕಾಂಬೋಡಿಯಾದಲ್ಲಿ ಇದ್ರ ಪರೀಕ್ಷೆ ನಡೆದಿತ್ತು. ಅಲ್ಲಿ ಈ "ಲಕ್ಕಿ ಐರನ್ ಫಿಶ್" ಶೇಕಡಾ 50 ರಷ್ಟು ಐರನ್ ಡಿಫಿಶಿಯನ್ಸಿ ಸಮಸ್ಯೆಯನ್ನು ಕಡಿಮೆ ಮಾಡಿತ್ತು. "ಲಕ್ಕಿ ಐರನ್ ಫಿಶ್" 2014ರಲ್ಲಿ ಮಾರುಕಟ್ಟೆಗೆ ಪರಿಚಯವಾದ್ರೂ ಅದು ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿರಲಿಲ್ಲ. ಆರಂಭದಲ್ಲಿ ಗ್ರಾಹಕರನ್ನು ಆಕರ್ಷಿಸದೇ ಇದ್ದ ಈ ಐರನ್ ಫಿಶ್ ಇವತ್ತು ಮಾರುಕಟ್ಟೆಯನ್ನು ತನ್ನತ್ತ ಸೆಳೆಯುತ್ತಿದೆ. ಇವತ್ತು ಪ್ರತೀ ಗಂಟೆಗೆ ಸುಮಾರು 100 "ಲಕ್ಕಿ ಐರನ್ ಫಿಶ್"ಗಳು ವಿಶ್ವದಾದ್ಯಂತ ಮಾರಾಟವಾಗುತ್ತಿದೆ. ಇಲ್ಲಿ ತನಕ ಸುಮಾರು 70,000 ಐರನ್ ಫಿಶ್ಗಳ ಮಾರಾಟವಾಗಿದ್ದರೆ, ಸುಮಾರು 70,000 ಮೀನುಗಳಿಗೆ ಆರ್ಡರ್ ಇದೆ. ಹೀಗಾಗಿ "ಲಕ್ಕಿ ಐರನ್ ಫಿಶ್" ಗ್ರಾಹಕರ ನೆಚ್ಚಿನ ಆಯ್ಕೆ ಆಗಿ ಬಿಟ್ಟಿದೆ.
ಡಾ. ಗವಿನ್ಉತ್ಕೃಷ್ಟ ಸಂಶೋಧನೆಗಳನ್ನು ನಡೆಸುತ್ತಿದ್ದಾರೆ. ಸಾಮಾಜಿನ ಅನ್ವೇಷಣೆಗಳ ಮೂಲಕ ಗವಿನ್ ಜನಪರ ಕಾರ್ಯಗಳನ್ನು ಕೂಡ ಮಾಡುತ್ತಿದ್ದಾರೆ. 2016ರಲ್ಲಿ ಫೋರ್ಬ್ಸ್ ಅಂಡರ್ 30 ಪಟ್ಟಿಯ 30 ಸಾಮಾಜಿಕ ಉದ್ಯಮಿಗಳ ಪಟ್ಟಿಯಲ್ಲಿ ಸ್ಥಾನ ಸಂಪಾದಿಸಿದ್ದರು. ಕೆನಾಡಾ ಈ ಉದ್ಯಮಿ ತನ್ನ ಐರನ್ ಫಿಶ್ ಕಾನ್ಸೆಪ್ಟ್ನ್ನು ಇಡೀ ವಿಶ್ವಕ್ಕೆ ಪರಿಚಯಿಸುವ ಲೆಕ್ಕಾಚಾರದಲ್ಲಿದ್ದಾರೆ. ಈ ಮೂಲಕ ಮನುಕುಲದ ಯಾವುದೇ ವ್ಯಕ್ತಿ ಕೂಡ ಐರನ್ ಡಿಫೀಶಿಯನ್ಸಿ ಕಾಯಿಲೆಯಿಂದ ಬಳಲದಂತೆ ನೋಡಿಕೊಳ್ಳುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಗವಿನ ಈ ಸಾಧನೆ ನಿಜಕ್ಕೂ ಶ್ರೇಷ್ಠ ಅನ್ವೇಷಣೆಯ ಪಟ್ಟಿಯಲ್ಲಿ ಸ್ಥಾನ ಪಡೆದುಕೊಳ್ಳುತ್ತದೆ.
1. ಮೂವರು ಟೆಕ್ಕಿಗಳ ಕನ್ನಡ ಟಿ ಶರ್ಟ್ ಉದ್ಯಮ..!
2. ಮಾಂಸಹಾರಕ್ಕಿಲ್ಲ ಡಿಮ್ಯಾಂಡ್- ಸಸ್ಯಹಾರಕ್ಕೆ ಕುಸಿದಿಲ್ಲ ಬೇಡಿಕೆ
3. ಬೆಂಗಳೂರಿನ ಅಭಿವೃದ್ಧಿ ಬಗ್ಗೆ ಹೊಸ ಕನಸು- ಬಜೆಟ್ನಲ್ಲಿ ನಿಮ್ಮ ಐಡಿಯಾಗಳಿಗೂ ಇದೆ ಬೆಲೆ