ಪರಿಸರ ರಕ್ಷಣೆಗೆ ನಿಂತ ಭಾರತದ ಯುವ ಪರಿಸರ ವಾದಿಗಳು

ನೈಸರ್ಗಿಕ ಸಂಪತ್ತು ದಿನೇ ದಿನೇ ನಾಶವಾಗುತ್ತಿರುವ ಹಿನ್ನೆಲೆಯಲ್ಲಿ ಭಾರತದ ಹಲವು ಯುವ ಪರಿಸರವಾದಿಗಳು ಅದರ ರಕ್ಷಣೆಗೆ ಹಲವು ಬಗೆಯಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ.

ಪರಿಸರ ರಕ್ಷಣೆಗೆ ನಿಂತ ಭಾರತದ ಯುವ ಪರಿಸರ ವಾದಿಗಳು

Wednesday September 30, 2020,

2 min Read

2018 ರಲ್ಲಿ ಹವಾಮಾನ ಬದಲಾವಣೆಯ ವಿರುದ್ಧ ಗ್ರೇಟಾ ಥನ್‌ಬರ್ಗ್‌ ತನ್ನ ಧ್ವನಿ ಎತ್ತಿದ್ದು ಜಗತ್ತಿನಾದ್ಯಂತ ಹಲವು ಯುವ ಪರಿಸರವಾದಿಗಳನ್ನು ಎಚ್ಚೆತ್ತುಕೊಳ್ಳುವಂತೆ ಮಾಡಿ ಜಾಗತಿಕ ತಾಪಮಾನದ ವಿರುದ್ಧದ ಹೋರಾಟದಲ್ಲಿ ಭಾಗಿಯಾಗುವಂತೆ ಮಾಡಿತು.


ಪ್ರಸ್ತುತ ಏಕಬಳಕೆಯ ಪ್ಲಾಸ್ಟಿಕ್‌ ವಿರೋಧಿಸುವುದರಿಂದ ಹಿಡಿದು ಕೆರೆ, ನದಿಗಳನ್ನು ಸ್ವಚ್ಛಗೊಳಿಸುವುದು, ಮರುಬಳಕೆ ಮಾಡಬಹುದಾದಂತಹ ವಸ್ತುಗಳ ಬಳಕೆಗೆ ಒತ್ತು ನೀಡುವಂತಹ ಹಲವು ಹವ್ಯಾಸಗಳಿಂದ ಭಾರತದ ಹಲವು ಮಕ್ಕಳು ಪರಿಸರ ರಕ್ಷಣೆಗೆ ಮುಂದಾಗಿದ್ದಾರೆ.


ನೈಸರ್ಗಿಕ ಸಂಪತ್ತು ದಿನೇ ದಿನೇ ನಾಶವಾಗುತ್ತಿರುವ ಹಿನ್ನೆಲೆಯಲ್ಲಿ ಪರಿಸರ ರಕ್ಷಣೆಯಲ್ಲಿ ತೊಡಗಿರುವ ಭಾರತದ ಹಲವು ಯುವ ಪರಿಸರವಾದಿಗಳು ಪಟ್ಟಿ ಇಲ್ಲಿದೆ.


ಲಿಸಿಪ್ರಿಯಾ ಕಂಗುಜಮ್

ಎಂಟು ವರ್ಷದ ಲಿಸಿಪ್ರಿಯಾ ಕಂಗುಜಮ್ ತನ್ನ ವಿಶೇಷ ಪರಿಸರ ಪ್ರೇಮದ ಮೂಲಕ ಗಮನ ಸೆಳೆಯುತ್ತಾಳೆ. ಮನಿಪುರದ ಭಾಸಿಕೊಂಗ್‌ನಲ್ ಹುಟ್ಟಿದ ಈಕೆ ಭಾರತದ ಕಿರಿಯ ಪರಿಸರವಾದಿಗಳಲ್ಲಿ ಒಬ್ಬಳು.

ಕಳೆದ 2 ವರ್ಷದಿಂದ ಪರಿಸರದ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಲಿಸಿಪ್ರಿಯಾ ಜೂನ್‌ 21, 2019 ರಂದು ಹವಾಮಾನ ಬದಲಾವಣೆಯ ವಿರುದ್ಧ ಕಾನೂನನ್ನು ಜಾರಿಗೊಳಿಸುವಂತೆ ಪ್ರಧಾನ ಮಂತ್ರಿಗಳ ಕಚೇರಿಯ ಹೊರಗೆ ಒಂದು ವಾರ ಧರಣಿ ಮಾಡಿದ್ದರು. ಅದೇ ವರ್ಷದ ಅಗಸ್ಟ್‌ನಲ್ಲಿ ಅವಳಿಗೆ “ವರ್ಲ್ಡ್‌ ಚಿಲ್ಡ್ರನ್‌ ಪೀಸ್‌ ಫ್ರೈಜ್‌ 2019” ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.


2019ರ ಅಕ್ಟೋಬರ್‌ 21 ರಿಂದ 27ರ ವರೆಗೆ ಸಾವಿರಾರು ಬೆಂಬಲಿಗರೊಂದಿಗೆ ಹವಾಮಾನ ಬದಲಾವಣೆಯ ಕಾನೂನು ಜಾರಿಗೊಳಿಸಲು ಲಿಸಿಪ್ರಿಯಾ “ಗ್ರೇಟ್‌ ಅಕ್ಷೋಬರ್‌ ಮಾರ್ಚ್‌ 2019” ಅಭಿಯಾನವನ್ನು ಆರಂಭಿಸಿದಳು. ಅಷ್ಟೆ ಅಲ್ಲದೆ 2019ರ ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಸಮ್ಮೇಳನವನ್ನು (ಸಿಒಪಿ 25) ಉದ್ದೇಶಿಸಿ ಮಾತನಾಡಿದ್ದಾಳೆ ಮತ್ತು ಯುಎನ್ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರೆಸ್ ಅವರನ್ನು ಭೇಟಿಯಾಗಿ ವಿಶ್ವದ ಮಕ್ಕಳ ಪರವಾಗಿ ಒಂದು ನಿವೇದನ ಪತ್ರವನ್ನು ಸಲ್ಲಿಸಿದ್ದಾಳೆ.


ಹಾಜಿಕ್‌ ಕಾಜಿ

ಹಾಜಿಕ್‌ ಕಾಜಿ (ಚಿತ್ರಕೃಪೆ: ಟ್ವಿಟ್ಟರ್‌)


14ರ ಹರೆಯದ ಹಾಜಿಕ್‌ ಕಾಜಿ ಸಮುದ್ರ ಸ್ವಚ್ಛಗೊಳಿಸುವ ವಿಶೇಷವಾಗಿ ಪ್ಲಾಸ್ಟಿಕ್‌ ತ್ಯಾಜ್ಯ ತೆಗೆಯುವ ಎರ್ವಿಸ್‌ ಯೋಜನೆಯಿಂದ ಖ್ಯಾತಿ ಗಳಿಸಿದ್ದಾನೆ. ಪುಣೆಯ ಈ ಬಾಲಪ್ರತಿಭೆ ಯೋಜನೆಯನ್ನು ತಯಾರಿಸಿ 2017 ರಲ್ಲಿ ನ್ಯೂಯಾರ್ಕ್‌ನಲ್ಲಿ ಟೆಡ್‌-ಎಡ್‌ ವೀಕೆಂಡ್‌ನಲ್ಲಿ ಪ್ರಸ್ತುತಪಡಿಸಿದ್ದಾನೆ. ಹಾಜಿಕ್‌ ಟೆಡ್‌-ಎಕ್ಸ್‌ಗೇಟ್‌ವೇ ಮುಂಬೈ ನಲ್ಲಿ ತನ್ನ ಎರ್ವಿಸ್‌ ಯೋಜನೆಯ ಬಗ್ಗೆ ಮಾತನಾಡಿದ್ದಾನೆ.


ಯುವ ಪರಿವಾದಿಯ ಪ್ರಕಾರ, ಎರ್ವಿಸ್‌ ಜಲಜನಕ ಮತ್ತು ನವೀಕರಿಸಬಹುದಾದ ನೈಸರ್ಗಿಕ ಅನಿಲದಿಂದ ಚಾಲನೆಗೊಳ್ಳುವ ಒಂದು ದೊಡ್ಡ ಹಡಗು. ಈ ಹಡಗು ಮೂರು ಕೆಲಸ ಮಾಡುತ್ತದೆ, ಒಂದು ಸಮುದ್ರದಲ್ಲಿರುವ ತ್ಯಾಜ್ಯವನ್ನು ಗುರುತಿಸುವುದು, ಎರಡು ಪ್ರಮುಖ ಮಾಲಿನ್ಯಕಾರಕಗನ್ನು ಗುರುತಿಸುವುದು ಮತ್ತು ಮೂರು ಅವುಗಳನ್ನು ಅದರ ಮೂಲದಲ್ಲೆ ವಿಲೇವಾರಿ ಮಾಡುವುದು.


ಬಾಥ್‌ಟಬ್‌ನಲ್ಲಿ ಮೊದಲು ಶುರುವಾದ ಈ ಯೋಜನೆ ಮುಂದೆ ಸರೋವರಗಳು ಎದುರಿಸುತ್ತಿರುವ ದೊಡ್ಡ ಸವಾಲನ್ನು ಬಗೆಹರಿಸುತ್ತಿದೆ.


ಜನ್ನತ್‌

ತನ್ನ ವಯುಸ್ಸಿನ ಇತರ ಮಕ್ಕಳು ಆಟದಲ್ಲಿ ಮಗ್ನರಾಗಿರುವ ಸಮಯದಲ್ಲಿ ಜನ್ನತ್‌ ಕಾಶ್ಮೀರದ ದಾಲ್‌ ಕೆರೆಯನ್ನು ಸ್ವಚ್ಛಗೊಳಿಸುವ ಕೆಲಸದಲ್ಲಿ ನಿರತಳಾಗಿದ್ದಳು.


2018 ರಲ್ಲಿ 5 ವರ್ಷದವಳಿದ್ದಾಗಲೆ ಜನ್ನತ್‌ ತನ್ನ ತಂದೆಯ ಜತೆಗೆ ಪ್ರತಿದಿನ ಬೆಳಿಗ್ಗೆ ದೋಣಿಯಲ್ಲಿ ಕೆರೆಗೆ ಹೋಗಿ, ಪ್ಲಾಸ್ಟಿಕ್‌, ಮಧ್ಯದ ಬಾಟಲಿಗಳು ಮತ್ತು ತ್ಯಾಜ್ಯವನ್ನು ಸಂಗ್ರಹಿಸಿ ಅದನ್ನು ವಿಲೇವಾರಿ ಮಾಡುತ್ತಿದ್ದಳು.


ಇವಳ ಕಾರ್ಯವನ್ನು ಗುರುತಿಸಿ ಪ್ರಧಾನಿ ನರೇಂದ್ರ ಮೋದಿಯವರು ಟ್ವೀಟ್‌ ಮಾಡಿ, ”ಈ ಹುಡುಗಿಯ ಬಗ್ಗೆ ಕೇಳಲು ಖುಷಿಯಾಗುತ್ತದೆ! ಸ್ವಚ್ಛತೆಯೆಡೆಗಿನ ಅವಳ ಉತ್ಸಾಹ ಅದ್ಭುತ,” ಎಂದಿದ್ದರು.

ಸಾಯಿನಾಥ್‌ ಮನಿಕಂದನ್‌

ಅರಬ್‌ ದೇಶದಲ್ಲಿ ವಾಸವಾಗಿರುವ ಸಾಯಿನಾಥ್‌ ಮನಿಕಂದನ್‌ ಒಬ್ಬ ಮಹಾತ್ವಾಕಾಂಕ್ಷಿ ಪರಿವಾದಿಯಾಗಿದ್ದು, ವಿಶ್ವ ಸಂಸ್ಥೆಯ ಸುಸ್ಥಿರ ಗುರಿಗಳನ್ನು(ಎಸ್‌ಡಿಜಿ) ಭಾರತದಲ್ಲಿ ಸಾಧಿಸಲು ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತಿದ್ದಾನೆ. ದೇಶದಲ್ಲಿ ಗೋಲ್‌ 2(ಶೂನ್ಯ ಹಸಿವು) ಮತ್ತು ಗೋಲ್‌ 14(ನೀರಿನ ಕೆಳಗಿನ ಬದುಕು) ಅನ್ನು ಸಾಧಿಸಲು ಇವನು ಎರಡು ರೊಬೊಟ್‌ಗಳ ಮೂಲಮಾದರಿಗಳನ್ನು ತಯಾರಿಸಿದ್ದಾನೆ.

ಮೊದಲನೇಯದು ಮರಿನ್‌ ರೊಬೊಟ್‌ ಕ್ಲೀನರ್‌ ಆಗಿದ್ದು, ಇದು ನೀರಿನ ಮೇಲ್ಮೈಯಲ್ಲಿ ತೇಲುವ ತ್ಯಾಜ್ಯವನ್ನು ಕರಾವಳಿಯಲ್ಲಿ ಚಲಿಸುತ್ತಾ ಆ್ಯಪ್ ಬಳಸಿ ತೆಗೆಯುತ್ತದೆ. ಎರಡನೇಯದು ಅಗ್ರಿಬೋಟ್‌- ಇದು ಶೂನ್ಯ ಹಸಿವನ್ನು ಕಾಪಾಡುವ ಗುರಿ ಹೊಂದಿದೆ. ಇದು ರೈತರಿಗೆ ನೆಲ ಹದಗೊಳಿಸಲು, ಬೀಜ ಬಿತ್ತಲು ಮತ್ತು ಬೀಜಗಳನ್ನು ಮಣ್ಣಿನಿಂದ ಮುಚ್ಚಲು ಸಹಾಯ ಮಾಡುತ್ತದೆ.


ಸಾಯಿನಾಥ್‌ ತನ್ನ ಶಾಲೆಯಲ್ಲಿಯೆ ಮರುಬಳಕೆ ಮಾಡುವ ತ್ಯಾಜ್ಯವನ್ನು ಸಂಗ್ರಹಿಸುವ ಅಭಿಯಾನ ಶುರುಮಾಡಿದ್ದ. ದೈಯಾನಾ ಪ್ರಶಸ್ತಿ 2018, ಇಂಟರ್‌ನ್ಯಾಷನಲ್‌ ಎಕೋ-ಹಿರೋ ಅವಾರ್ಡ್‌ 2019 ಸೇರಿದಂತೆ ಸಾಯಿನಾಥ್‌ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾನೆ. ಎಮಿರೆಟ್ಸ್‌ ಎನ್ವಿರೊನಮೆಂಟಲ್‌ ಗ್ರೂಪ್‌, ತುಂಜಾ ಎಕೊ ಜನರೆಷನ್‌ ಮತ್ತು ಸ್ಟುಡೆಂಟ್ಸ್‌ ಫಾರ್‌ ದಿ ಅರ್ಥ್‌ ನ ಸಕ್ರಿಯ ಸದಸ್ಯನಾಗಿದ್ದಾನೆ.