Brands
Discover
Events
Newsletter
More

Follow Us

twitterfacebookinstagramyoutube
Youtstory

Brands

Resources

Stories

General

In-Depth

Announcement

Reports

News

Funding

Startup Sectors

Women in tech

Sportstech

Agritech

E-Commerce

Education

Lifestyle

Entertainment

Art & Culture

Travel & Leisure

Curtain Raiser

Wine and Food

YSTV

ADVERTISEMENT
Advertise with us

ಭಾರತಕ್ಕೆ ಬಂತು ಗೂಗಲ್‌ನ ಟಾಸ್ಕ್‌ಮೇಟ್‌: ಚಿಕ್ಕ ಪುಟ್ಟ ಟಾಸ್ಕ್‌ ಪೂರ್ಣಗೊಳಿಸಿ ಹಣಗಳಿಸಿ

ತಮ್ಮ ಮೊಬೈಲ್‌ ಫೋನ್‌ನಿಂದಲೆ ಕೊಟ್ಟಿರುವ ಸುಲಭವಾದ ಟಾಸ್ಕ್‌ಗಳನ್ನು ಪೂರ್ಣಗೊಳಿಸಿ ಹಣ ಗಳಿಸುವ ಟಾಸ್ಕ್‌ಮೇಟ್‌ ಎಂಬ ಆ್ಯಪ್ಅನ್ನು ಗೂಗಲ್‌ ಭಾರತದಲ್ಲಿ ಬಿಡುಗಡೆ ಮಾಡಿದೆ.

ಭಾರತಕ್ಕೆ ಬಂತು ಗೂಗಲ್‌ನ ಟಾಸ್ಕ್‌ಮೇಟ್‌: ಚಿಕ್ಕ ಪುಟ್ಟ ಟಾಸ್ಕ್‌ ಪೂರ್ಣಗೊಳಿಸಿ ಹಣಗಳಿಸಿ

Tuesday November 24, 2020 , 1 min Read

ತಮ್ಮ ಮೊಬೈಲ್‌ ಫೋನ್‌ನಿಂದಲೆ ಕೊಟ್ಟಿರುವ ಸುಲಭವಾದ ಟಾಸ್ಕ್‌ಗಳನ್ನು ಪೂರ್ಣಗೊಳಿಸಿ ಹಣ ಗಳಿಸುವ ಟಾಸ್ಕ್‌ಮೇಟ್‌ ಎಂಬ ಆ್ಯಪ್ಅನ್ನು ಗೂಗಲ್‌ ಭಾರತದಲ್ಲಿ ಬಿಡುಗಡೆ ಮಾಡಿದೆ. ಯಾರೂ ಬೇಕಾದರು ಎಲ್ಲಿಂದಲಾದರೂ ಈ ಟಾಸ್ಕ್‌ಗಳನ್ನು ಪೂರ್ಣಗೊಳಿಸಿ ಹಣಗಳಿಸಬಹುದು. ಅಂಗಡಿಯ ಫೋಟೊ ತೆಗೆಯುವುದು ಅಥವಾ ಇಂಗ್ಲೀಷ್‌ ವಾಕ್ಯವನ್ನು ಭಾಷಾಂತರಿಸುವಂತಹ ಸುಲಭವಾದ ಟಾಸ್ಕ್‌ಗಳನ್ನು ಅಲ್ಲಿ ನೀಡಲಾಗುತ್ತದೆ.


ಪ್ಲೇ ಸ್ಟೋರ್‌ ಮಾಹಿತಿಯ ಪ್ರಕಾರ ಮೂರು ಹಂತಗಳಲ್ಲಿ ಈ ಆ್ಯಪ್ ಕೆಲಸಮಾಡುತ್ತದೆ. ಮೊದಲನೆಯದು ನಿಮ್ಮ ಸಮೀಪದಲ್ಲಿರುವ ಟಾಸ್ಕ್‌ ಹುಡುಕುವುದು. ಎರಡನೆಯದು ಹಣ ಗಳಿಸಲು ಟಾಸ್ಕ್‌ ಪೂರ್ಣಗೊಳಿಸುವುದು ಮತ್ತು ಮೂರನೇಯದು ನೀವು ಗಳಿಸಿದ ಹಣವನ್ನು ಹೊರತೆಗೆಯುವುದು. ನೀವು ಇಷ್ಟಪಡುವ ಟಾಸ್ಕ್‌ಗಳನ್ನು ನೀವು ತೆಗೆದುಕೊಳ್ಳಬಹುದು ಮತ್ತು ಉಳಿದದ್ದನ್ನು ಸ್ಕಿಪ್‌ ಮಾಡಬಹುದು. ಈ ಟಾಸ್ಕ್‌ಗಳನ್ನು ಯಾವಾಗ ಬೇಕಾದರೂ ಎಲ್ಲಿಂದಲಾದರೂ ನಿಮ್ಮ ಮೊಬೈಲ್‌ ಫೋನ್‌ನಿಂದಲೇ ಪೂರ್ಣಗೊಳಿಸಬಹುದು.

ಟಾಸ್ಕ್‌ಗಳಲ್ಲಿ ಎರಡು ವಿಧಗಳಿವೆ. ಒಂದು ಸಿಟ್ಟಿಂಗ್‌ ಟಾಸ್ಕ್‌ ಅಂದರೆ ಕೂತು ಮಾಡುವ ಟಾಸ್ಕ್‌ಗಳು. ಇಲ್ಲಿ ವಾಕ್ಯಗಳನ್ನು ರೆಕಾರ್ಡ್‌ ಮಾಡುವುದು ಅಥವಾ ವಾಕ್ಯಗಳನ್ನು ಭಾಷಾಂತರಿಸುವಂತಹ ಟಾಸ್ಕ್‌ಗಳಿರುತ್ತವೆ.


ಇನ್ನೊಂದು ಫೀಲ್ಡ್‌ ಟಾಸ್ಕ್‌ ಅಂದರೆ ಹೊರ ಹೋಗಿ ಮಾಡಬೇಕಾಗುವ ಟಾಸ್ಕ್‌ಗಳು. ಉದಾಹರಣೆಗೆ ಯಾವುದಾದರೂ ಅಂಗಡಿಯ ಫೋಟೊ ತೆಗೆಯುವುದು.


ಟಾಸ್ಕ್‌ಗಳು ಪೂರ್ಣಗೊಂಡ ಬಳಿಕ ನಿಮ್ಮ ಇ-ವ್ಯಾಲೆಟ್‌ ಅಥವಾ ಖಾತೆಯ ವಿವರಗಳನ್ನು ನೀಡಿ ಕ್ಯಾಶ್‌ ಔಟ್‌ ಆಯ್ಕೆಯ ಮೇಲೆ ಒತ್ತುವ ಮೂಲಕ ನಿಮ್ಮ ಹಣವನ್ನು ಸ್ಥಳೀಯ ಕರೆನ್ಸಿಯಲ್ಲಿ ಪಡೆಯಬಹುದು.


ಪ್ರಸ್ತುತ ಭಾರತದಲ್ಲಿ ಗೂಗಲ್‌ ಟಾಸ್ಕ್‌ಮೇಟ್‌ ಅನ್ನು ಪರೀಕ್ಷಿಸುತ್ತಿದ್ದು, ಕೇವಲ ಸೀಮಿತ ಜನರ ಬಳಕೆಗೆ ಮಾತ್ರ ಅದು ಲಭ್ಯವಿದೆ. ರೆಫರಲ್‌ ಕೋಡ್‌ ಮುಖಾಂತರ ನೀವು ಟಾಸ್ಕ್‌ಮೇಟ್‌ ಅನ್ನು ಬಳಸಬಹುದಾಗಿದೆ. ಯಾವಾಗ ಆ್ಯಪ್ ಎಲ್ಲರ ಬಳಕೆಗೆ ಮುಕ್ತವಾಗಿ ಸಿಗಲಿದೆ ಎಂಬುದರ ಬಗ್ಗೆ ಗೂಗಲ್‌ ಖಚಿತ ಮಾಹಿತಿ ನೀಡಿಲ್ಲ. ನಿಮ್ಮ ಬಳಿ ರೆಫರಲ್‌ ಕೋಡ್‌ ಇದ್ದರೆ ಮಾತ್ರ ನೀವು ಈ ಆ್ಯಪ್ ಬಳಸಬಹುದು.