ಕೇವಲ ಒಂದು ಲಕ್ಷಸಾಲದಿಂದ ಪ್ರಾರಂಭಿಸಿದ ಮುಂಬೈನ ಉದ್ಯಮಿ ಸುರೇಶ ವಾಜಿರಾನಿ ಅವರ ವೈದ್ಯಕೀಯ ಸಾಧನಗಳ ಮಾರಾಟ ಉದ್ಯಮದ ಇಂದಿನ ಒಟ್ಟು ವಹಿವಾಟು ಒಂದು ಸಾವಿರ ಕೋಟಿ ರೂಪಾಯಿ

ಸುರೇಶ್ ವಾಜಿರಾನಿ 1979 ರಲ್ಲಿ ಪ್ರಾರಂಭಿಸಿದ ಟ್ರಾನ್ಸೇಷಿಯಾ ಬಯೋಮೆಡಿಕಲ್ಸ್ ಜೀವರಾಸಾಯನಿಕ, ಹೆಮಟಾಲಜಿ, ಹೆಪ್ಪುಗಟ್ಟುವಿಕೆ, ರೋಗನಿರೋಧಕ ಶಾಸ್ತ್ರ ಮತ್ತು ಇನ್ನಿತರ ವಿಷಯಗಳಲ್ಲಿ ಐವಿಡಿ ಉತ್ಪನ್ನಗಳನ್ನು ಮತ್ತು ಪರಿಹಾರಗಳನ್ನು ನೀಡುತ್ತದೆ.

ಕೇವಲ ಒಂದು ಲಕ್ಷಸಾಲದಿಂದ ಪ್ರಾರಂಭಿಸಿದ ಮುಂಬೈನ ಉದ್ಯಮಿ ಸುರೇಶ ವಾಜಿರಾನಿ ಅವರ ವೈದ್ಯಕೀಯ ಸಾಧನಗಳ ಮಾರಾಟ ಉದ್ಯಮದ ಇಂದಿನ ಒಟ್ಟು ವಹಿವಾಟು ಒಂದು ಸಾವಿರ ಕೋಟಿ ರೂಪಾಯಿ

Thursday October 17, 2019,

6 min Read

ತಮ್ಮ 21 ನೇ ವಯಸ್ಸಿನಲ್ಲಿ ಗಾಂಧೀಜಿಯವರ ಸರ್ವೋದಯ ತತ್ವಗಳಿಂದ ಪ್ರಭಾವಿತರಾದ ಸುರೇಶ್ ಕಾರ್ಪೊರೇಟ್ ಉದ್ಯೋಗವನ್ನು ತ್ಯಜಿಸಿ, ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು ಮುಂದಾದರು.


ಯುವ ಸುರೇಶ್ 1974 ರಲ್ಲಿ ಗುಜರಾತ್‌ನಲ್ಲಿ ಪ್ರಾರಂಭವಾದ ನವನಿರ್ಮಾನ್ ಆಂದೋಲನದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು, ಈ ಆಂದೋಲನ ಆರ್ಥಿಕ ಬಿಕ್ಕಟ್ಟು ಮತ್ತು ಭ್ರಷ್ಟಾಚಾರದ ವಿರುದ್ಧ ಹೋರಾಡಿತ್ತು.

ಸುರೇಶ್ ಅವರನ್ನು ಬದಲಿಸಿದ ಘಟನೆ

ಒಂದು ದಿನ, ಆಸ್ಪತ್ರೆಯಲ್ಲಿ ನಡೆದ ಒಂದು ಘಟನೆಯು ಸುರೇಶ್ ಅವರನ್ನು ಆರೋಗ್ಯ ಉದ್ಯಮಿಯಾಗಲು ಪ್ರೇರೇಪಿಸಿತು. ನವನಿರ್ಮಾನ್ ಆಂದೋಲನದ ಬಿಹಾರ ಪ್ರಾಂತ್ಯದ ನಾಯಕರಾದ ಜಯಪ್ರಕಾಶ್ ನಾರಾಯಣ್ ಅವರು ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದರು ಮತ್ತು ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಸುರೇಶ್ ಹೇಳುವಂತೆ,


"ಆಸ್ಪತ್ರೆಯಲ್ಲಿ ಡಯಾಲಿಸಿಸ್ ಗಾಗಿ ಅಳವಡಿಸಿದ ಯಂತ್ರ ಮುರಿದುಹೋಯಿತು. ಅದೇ ಸಮಯಕ್ಕೆ ಅಲ್ಲಿ ಯಾವುದೇ ಸರ್ವಿಸ್ ಎಂಜಿನಿಯರ್ ಕೂಡ ಇರಲಿಲ್ಲ. ನಾನು ಎಲ್ಟ್ರಿಕಲ್ ಎಂಜಿನಿಯರಿಂಗ್ ಪದವೀಧರನಾಗಿದ್ದರಿಂದ, ಡಯಾಲಿಸಿಸ್ ಮೆಷಿನ್ ಅನ್ನು ಸರಿಪಡಿಸಿದೆ."


ಈ ಘಟನೆ ಸುರೇಶ್ ಅವರನ್ನು ತೀವ್ರವಾಗಿ ಕಾಡತೊಡಗಿತು, ಈ ರೀತಿ ಯಾವುದೇ ಸರ್ವಿಸ್ ಎಂಜಿನಿಯರ್ ಇಲ್ಲದೆ ಹದಗೆಟ್ಟ ವೈದ್ಯಕೀಯ ಉಪಕರಣದ ಕಾರಣದಿಂದ ಸಾವನ್ನಪ್ಪುವ ಬಡರೋಗಿಗಳ ಕುರಿತಾಗಿ ಏನಾದರೂ ಮಾಡಬೇಕು ಎಂಬ ನಿರ್ಧಾರಕ್ಕೆ ಬಂದರು.


ಈ ರೀತಿ ಲಾಭರಹಿತ ಸಂಸ್ಥೆಯನ್ನು ಕಟ್ಟುವ ಹಿಂದನ ಉದ್ದೇಶ ಜನಸಮುದಾಯಕ್ಕೆ ಒಳಿತು ಮಾಡುವುದೇ ಹೊರತು ಲಾಭಗಳಿಸುವುದಲ್ಲ. ತಮ್ಮ ನೆನಪನ್ನು ಹಂಚಿಕೊಳ್ಳುತ್ತಾ, ಸುರೇಶ್, "ನಾನು ಅದಾಗಲೇ 29 ರ ಪ್ರಾಯದಲ್ಲಿದ್ದೆ, ಮತ್ತು ನನ್ನ ಜೀವನವನ್ನು ಯಾವುದಕ್ಕಾದ್ರು ಮೂಡಿಪಾಗಿಡಲು ನಿರ್ಧರಿಸಿದ್ದೆ. ಈ ಹಿನ್ನಲೆಯಲ್ಲಿ 1979ರಲ್ಲಿ ಮುಂಬೈನಲ್ಲಿ ಟ್ರಾನ್ಸೇಷಿಯಾ ಬಯೋಮೆಡಿಕೆಲ್ ಸಂಸ್ಥೆಯನ್ನು ಆರಂಭಿಸಿದೆ.


ಟ್ರಾನ್ಸೇಷಿಯಾ ಬಯೋಮೆಡಿಕಲ್ಸ್‌ನ ಸ್ಥಾಪಕ, ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಸುರೇಶ್ ವಾಜಿರಾನಿ


ಸುರೇಶ್ ಹೇಳುವಂತೆ ಇನ್ ವಿಟ್ರೊ ಡಯಾಗ್ನೋಸ್ಟಿಕ್ಸ್ (ಐವಿಡಿ) ಕಂಪನಿಯಾದ ಟ್ರಾನ್ಸೇಷಿಯಾವನ್ನು ತಮ್ಮ ಜೇಬಿನಲ್ಲಿದ್ದ 250 ರೂಪಾಯಿ ಹಾಗೂ ಸ್ನೇಹಿತನಿಂದ ಎರವಲುಪಡೆದ ಒಂದು ಲಕ್ಷ ರೂಪಾಯಿ ಸಾಲದಿಂದ ಆರಂಭಿಸಿದರು.


ಜಪಾನಿನ ಸ್ವಯಂಚಾಲಿತ ಸೆಲ್ ಕೌಂಟರ್ ಯಂತ್ರಗಳ ವಿತರಕರಾಗಿ ಸುರೇಶ್ ಕಾರ್ಯವ್ರವೃತ್ತರಾದರು. 1990 ರ ದಶಕದ ಆರಂಭದ ವೇಳೆಗೆ, ಸ್ಥಳೀಯ ಉತ್ಪಾದನೆಯ ಅಗತ್ಯವನ್ನು ಸುರೇಶ್ ಗುರುತಿಸಿದರು ಮತ್ತು ರಕ್ತ ವಿಶ್ಲೇಷಕಗಳಂತಹ ವೈದ್ಯಕೀಯ ಉಪಕರಣಗಳನ್ನು ತಯಾರಿಸಲು ತಮ್ಮದೇ ಆದ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯನ್ನು ಸ್ಥಾಪಿಸಿದರು.


ಇತ್ತೀಚಿನ ವರ್ಷಗಳಲ್ಲಿ ಟ್ರಾನ್ಸೇಷಿಯಾ 1,000 ಕೋಟಿ ರೂ. ಗಳ ವಹಿವಾಟಿನ ಕಂಪನಿಯಾಗಿ ಬೆಳೆದಿದೆ, ಇದು ಜೀವರಾಸಾಯನಿಕ, ಹೆಮಟಾಲಜಿ, ಹೆಪ್ಪುಗಟ್ಟುವಿಕೆ, ಇಎಸ್ಆರ್, ಇಮ್ಯುನೊಲಾಜಿ, ಮೂತ್ರಶಾಸ್ತ್ರ, ವಿಮರ್ಶಾತ್ಮಕ ಆರೈಕೆ, ಮಧುಮೇಹ ನಿರ್ವಹಣೆ, ಮೈಕ್ರೋಬಯಾಲಜಿ ಮತ್ತು ಆಣ್ವಿಕ ರೋಗನಿರ್ಣಯದಲ್ಲಿ ಅಗತ್ಯ ಪರಿಕರಗಳನ್ನು ಮತ್ತು ಪರಿಹಾರಗಳನ್ನು ನೀಡುತ್ತದೆ.


"ಪ್ರತಿ ಎರಡು ಸೆಕೆಂಡಿಗೆ ಒಮ್ಮೆ ಟ್ರಾನ್ಸೇಷಿಯಾ ಸಾಧನದಲ್ಲಿ ಒಂದು ಪರೀಕ್ಷೆಯನ್ನು ನಡೆಸಲಾಗುತ್ತದೆ. ಪ್ರತಿವರ್ಷ ನಮ್ಮ ಸಾಧನಗಳಲ್ಲಿ 150 ಕೋಟಿಗೂ ಹೆಚ್ಚು ರಕ್ತ ಪರೀಕ್ಷೆಗಳನ್ನು ಮಾಡಲಾಗುತ್ತದೆ" ಎಂದು ಸುರೇಶ್ ಹೇಳುತ್ತಾರೆ.


ಎಸ್ ಎಮ್ ಬಿ ಸ್ಟೋರಿಯೊಂದಿಗಿನ ವಿಶೇಷ ಸಂವಾದದಲ್ಲಿ, ಟ್ರಾನ್ಸಾಸಿಯಾ ಬಯೋಮೆಡಿಕಲ್ಸ್‌ನ ಸ್ಥಾಪಕ, ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿರುವ ಸುರೇಶ್, ಐವಿಡಿ ಮಾರುಕಟ್ಟೆಯಲ್ಲಿ ತಮ್ಮ ಸಂಸ್ಥೆ ಯಶಸ್ವಿಯಾಗಿ 2025 ರ ವೇಳೆಗೆ 1.8 ಬಿಲಿಯನ್ $ ಮೀರುವ ಸಾಧ್ಯತೆ ಇರುವುದನ್ನು ಹಂಚಿಕೊಂಡಿದ್ದಾರೆ.

ಎಸ್ ಎಮ್ ಬಿ ಸ್ಟೋರಿಯೊಂದಿಗಿನ ವಿಶೇಷ ಸಂವಾದ

ಎಸ್ ಎಮ್ ಬಿ ಸ್ಟೋರಿ: ಟ್ರಾನ್ಸೇಷಿಯಾ ವ್ಯವಹಾರ ಸೂತ್ರಗಳು ಯಾವುವು? ಮತ್ತು ಮಾರುಕಟ್ಟೆಯಲ್ಲಿ ವ್ಯವಹರಿಸಲು ಬಳಸುವ ತಂತ್ರಗಳು ಏನು?


ಸುರೇಶ್ ವಾಜಿರಾನಿ: ರೋಗಶಾಸ್ತ್ರಜ್ಞರು, ವೈದ್ಯರು, ಲ್ಯಾಬ್ ತಂತ್ರಜ್ಞರಿಗೆ ಸಹಕಾರಿಯಾಗುವಂತಹ ಉಪಕರಣಗಳನ್ನು ನಾವು ಉತ್ಪಾದಿಸುತ್ತೇವೆ. ಮಾರುಕಟ್ಟೆಯಲ್ಲಿ ಟ್ರಾನ್ಸೇಷಿಯಾ ಸರಳ ತಂತ್ರವನ್ನು ಅನುಸರಿಸುತ್ತದೆ, ಎಲ್ಲಾ ಸಾಧನಗಳನ್ನು ಕೈಗೆಟಕುವ ದರದಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತೇವೆ. ನಮ್ಮಲ್ಲಿನ ಎಲ್ಲಾ ಸಾಧನಗಳು ಭಾರತದಲ್ಲೇ ತಯಾರಿಸಲ್ಪಟ್ಟವು. ಕಡಿಮೆ ವೆಚ್ಚದಲ್ಲಿ ತಯಾರಿಸಿ ಭಾರತದ ವೈದ್ಯಕೀಯ ರಂಗದ ವಿವಿಧ ಬೇಡಿಕೆಗಗಳನ್ನು ಪೂರೈಸುತ್ತೇವೆ.


ನಮ್ಮ ಉತ್ಪನ್ನಗಳಿಗೆ ಗ್ರಾಹಕರ ಬೇಡಿಕೆಯನ್ನು ಹೆಚ್ಚಿಸಲು, ಮಾರಾಟದ ನಂತರ ವಸ್ತುಗಳಿಗೆ ಭದ್ರತೆ ಒದಗಿಸುವುದು ಹಾಗೂ ಉತ್ತಮ ಗುಣಮಟ್ಟವನ್ನ ನಿಗದಿ ಪಡಿಸುವುದು, ಮೊದಲಾದ ಕ್ರಮಗಳನ್ನು ಕೈಗೊಳ್ಳುತ್ತಿದ್ದೇವೆ. ತಂತ್ರಜ್ಞಾನದ ಪ್ರಗತಿಯಿಂದಾಗಿ ಉತ್ಪನ್ನಗಳು ನವೀಕರಣಗೊಳ್ಳುತ್ತಿರುವುದರಿಂದ ಅದರ ಬಳಕೆ ಬಗ್ಗೆ ಗ್ರಾಹಕರಿಗೆ ಪೂರಕ ಮಾಹಿತಿಯನ್ನು ನೀಡುತ್ತೇವೆ. ನಮ್ಮ ತಂತ್ರಜ್ಞಾನಗಳನ್ನು ಮತ್ತಷ್ಟು ಹರಿತಗೊಳಿಸಲು ನಮ್ಮ ಸಾಪ್ತಾಹಿಕ ವೈಜ್ಞಾನಿಕ ಮತ್ತು ರೋಗನಿರ್ಣಯದ ನವೀಕರಣಗಳ ಮೂಲಕ ನಿಯಮಿತವಾಗಿ ಗ್ರಾಹಕರಿಗೆ ಕ್ಲಿನಿಕಲ್ ಡೇಟಾವನ್ನು ಒದಗಿಸುತ್ತೇವೆ.


ನಾವು ಪ್ರಚಾರಗಳಿಗಾಗಿ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳನ್ನು ಸಹ ಬಳಸುತ್ತೇವೆ ಮತ್ತು ಗ್ರಾಹಕರ ಪ್ರತಿಕ್ರಿಯೆಯನ್ನು ಸಂಗ್ರಹಿಸಲು ಪರಿಣಾಮಕಾರಿ ಕಾರ್ಯವಿಧಾನವಾಗಿಯೂ ಬಳಸುತ್ತೇವೆ. ನಮ್ಮ ಗ್ರಾಹಕರು ನಮ್ಮ ಆನ್‌ಲೈನ್ ಪೋರ್ಟಲ್‌ನಲ್ಲಿ ಅವರ ಪ್ರತಿಕ್ರಿಯೆಯನ್ನು ಲಾಗ್ ಇನ್ ಮಾಡಬಹುದು, ಅಗತ್ಯವಿದ್ದರೆ ಅಲ್ಲಿಗೆ ನಮ್ಮ ಮಾರಾಟ ತಂಡವು ಸಾಧ್ಯವಾದಷ್ಟು ಕಡಿಮೆ ಸಮಯದಲ್ಲಿ ಹಾಜರಾಗಿ ಗ್ರಾಹಕರಿಗೆ ಸ್ಪಂದಿಸುತ್ತದೆ.


ಟ್ರಾನ್ಸಾಸಿಯಾ ವೈದ್ಯಕೀಯ ರೋಗನಿರ್ಣಯ ಸಾಧನಗಳು

ಎಸ್‌ಎಂಬಿಎಸ್: ಕಂಪನಿಯು ಐವಿಡಿಗೆ ಹೇಗೆ ಬದ್ಧವಾಗಿದೆ?


ಎಸ್‌ವಿ: ನಾವು ಜಪಾನಿನ ಹೆಮಟಾಲಜಿ ಅನಲೈಸೆರ್ ನ ಮಾರಾಟದ ನಂತರ, ಇದೀಗ ನಮ್ಮ ದೇಶಕ್ಕೆ ಸೇವೆಸಲ್ಲಿಸಲು ಪ್ರಾರಂಭಿಸಿದ್ದೇವೆ ಮತ್ತು ಶೀಘ್ರದಲ್ಲೇ ಕ್ಲಿನಿಕಲ್ ಕೆಮಿಸ್ಟ್ರಿ ಅನಲೈಸೆರ್ ಗಳ ಸ್ಥಳೀಯ ಉತ್ಪಾದನೆಗೆ ಸಹ ಮುಂದಾಗಿದ್ದೇವೆ. ಭಾರತವು ವೈವಿಧ್ಯಮಯ ಜನಸಮುದಾಯವನ್ನು ಹೊಂದಿರುವ ವಿಶಾಲ ದೇಶವಾಗಿದೆ, ಆದ್ದರಿಂದ ನಮಿಗೆ ವೈವಿಧ್ಯಮಯ ಆರೋಗ್ಯ ಸೇವೆಗಳ ಪರಿಕರಗಳ ಅಗತ್ಯವಿದೆ. ನಮ್ಮ ಸಂಸ್ಥೆ ಇದನ್ನು ಅರಿತುಕೊಂಡಿದೆ ಮತ್ತು ಜಾಗತಿಕವಾಗಿ ವಿವಿಧ ವಿಭಾಗಗಳಲ್ಲಿ ಪರಿಣತಿ ಹೊಂದಿರುವ ಕಂಪನಿಗಳನ್ನು ಸ್ವಾಧೀನಪಡಿಸಿಕೊಳ್ಳಲು ಪ್ರಾರಂಭಿಸಿದೆ. ಈ ರೀತಿಯಾಗಿ, ನಮ್ಮ ಜಾಗತಿಕ ಅಂಗಸಂಸ್ಥೆಗಳಿಂದ ಇತ್ತೀಚಿನ ತಂತ್ರಜ್ಞಾನ ಮತ್ತು ಪರಿಣತಿಯನ್ನು ಬಳಸಿಕೊಂಡು ಭಾರತದಲ್ಲೇ ಅತ್ಯಾಧುನಿಕ ಉತ್ಪನ್ನಗಳನ್ನು ತಯಾರಿಸಲು ನಾವು ಸಮರ್ಥರಾಗಿದ್ದೇವೆ.


ಇದಲ್ಲದೆ, ನಮ್ಮ ಒಟ್ಟು ಜನಸಂಖ್ಯೆಯ 70 ಪ್ರತಿಶತದಷ್ಟು ಜನರು ಎಂದಿಗೂ ತಮ್ಮ ರಕ್ತವನ್ನು ಪರೀಕ್ಷಿಸಿಲ್ಲ. ಆದ್ದರಿಂದ ನಾವು ನಮ್ಮ ಉತ್ಪನ್ನಗಳು ಮತ್ತು ಪರಿಹಾರಗಳ ಮೂಲಕ ಈ 70 ಪ್ರತಿಶತ ಜನಸಂಖ್ಯೆಯನ್ನು ತಲುಪಲು ಪ್ರಯತ್ನಿಸುತ್ತಿದ್ದೇವೆ. ಭಾರತದ ಬಹುಪಾಲು ಲ್ಯಾಬ್‌ಗಳಲ್ಲಿ ಸುಧಾರಿತ ಉಪಕರಣಗಳನ್ನು ಪಡೆಯಲು ಸಾಧ್ಯವಿಲ್ಲ. ಅತ್ಯುನ್ನತ ತಂತ್ರಜ್ಞಾನದ ಉತ್ಪನ್ನಗಳನ್ನು ಅಥವಾ ಅತ್ಯಾಧುನಿಕ ಯಾಂತ್ರೀಕೃತಗೊಂಡ ಉತ್ಪನ್ನಗಳನ್ನು ಪೂರೈಸುವುದರೊಂದಿಗೆ, ನಮ್ಮ ಬಂಡವಾಳದ ಗುರಿ ಮಾರುಕಟ್ಟೆಗಳಿಗೆ ಅನುಗುಣವಾಗಿರುವಂತೆ ನಾವು ನೋಡಿಕೊಳ್ಳುತ್ತೇವೆ.


ಯುರೋಪಿಯನ ಮತ್ತು ಭಾರತೀಯ ಸಂಶೋಧನಾ ಹಾಗೂ ಅಭಿವೃದ್ಧಿ ಕೇಂದ್ರಗಳಿಂದ ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಅದನ್ನು ಕಸ್ಟಮೈಸ್ ಮಾಡುವ ಮೂಲಕ ಟ್ರಾನ್ಸೇಷಿಯಾ ಉತ್ತಮ ಗುಣಮಟ್ಟದ, ಪರಿಕರಗಳನ್ನು ನೀಡುತ್ತದೆ. ವೆಚ್ಚವನ್ನು ಕಡಿಮೆಗೊಳಿಸಿ ಕೈಗೆಟಕುವ ದರದಲ್ಲಿ ಗ್ರಾಹಕರಿಗೆ ತನ್ನ ಉತ್ಪನ್ನಗಳನ್ನು ಮಾರಾಟಮಾಡುತ್ತಿದೆ.


ಟ್ರಾನ್ಸಾಸಿಯಾ ಆರ್ ಮತ್ತು ಡಿ ಕೇಂದ್ರ

ಎಸ್‌ಎಂಬಿಎಸ್: ನಿಮ್ಮ ವೈದ್ಯಕೀಯ ಸಾಧನಗಳ ವಿಶೇಷತೆ ಏನು?


ಎಸ್‌ವಿ: ದೇಶಾದ್ಯಂತದ ಪ್ರಯೋಗಾಲಯದ ವಿವಿಧ ವಿಭಾಗಗಳಲ್ಲಿ ನಮ್ಮ ಉತ್ಪನ್ನಗಳಿಗೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ.


ನಮ್ಮ ಸಂಪೂರ್ಣ ಶ್ರೇಣಿಯ ಕ್ಲಿನಿಕಲ್ ಕೆಮಿಸ್ಟ್ರಿ ಉಪಕರಣಗಳು ಮತ್ತು ರಿಎಜೆಂಟ್ಸ್ ಗಳನ್ನು ಭಾರತದಲ್ಲಿ ವಿನ್ಯಾಸಗೊಳಿಸಿದ್ದೇವೆ ಮತ್ತು ಅದನ್ನು ಅಭಿವೃದ್ಧಿಪಡಿಸುತ್ತಿದ್ದೇವೆ. ನಮ್ಮ ಪ್ರಮುಖ ಸಾಧನವಾದ ಇಎಂ 200 ಅನ್ನು ಯಾವಾಗಲೂ ಅತ್ಯಂತ ವಿಶ್ವಾಸಾರ್ಹ ಉತ್ಪನ್ನವೆಂದು ಎಲ್ಲಾ ಪ್ರಯೋಗಾಲಯದಲ್ಲಿ ಸ್ವೀಕರಿಸಲಾಗಿದೆ. ನಮ್ಮ ರೋಗಶಾಸ್ತ್ರಜ್ಞರು ಮತ್ತು ವೈದ್ಯರು ನಿಗದಿಪಡಿಸಿದ ನಿರೀಕ್ಷೆಗಳ ಆಧಾರದ ಮೇಲೆ, ಹೆಚ್ಚಿನ ಕಾರ್ಯಾಚರಣೆಯೊಂದಿಗೆ ದಕ್ಷ ಹಾಗೂ ಕಡಿಮೆ ವೆಚ್ಚದ ಪರಿಣಾಮಕಾರಿ ವ್ಯವಸ್ಥೆಯನ್ನು ನಾವು ಸುಧಾರಿಸುತ್ತಿದ್ದೇವೆ.


ನಮ್ಮ ಇತ್ತೀಚಿನ ಹೆಪ್ಪುಗಟ್ಟುವಿಕೆ ವಿಶ್ಲೇಷಕ ಇಸಿಎಲ್ 760 ಜೆಕ್ ಗಣರಾಜ್ಯದ ಅಂಗಸಂಸ್ಥೆಯ ತಂತ್ರಜ್ಞಾನದಿಂದ ಬಳಸಿಕೊಂಡಿದ್ದೇವೆ. ಪ್ರಮುಖ ಜಾಗತಿಕ ಕಂಪನಿಗಳಿಂದ ಆಮದು ಮಾಡಿದ ವಿಶ್ಲೇಷಕಗಳಿಗೆ ಹೋಲಿಸಿದರೆ ಇದು ಮೂರು ಪಟ್ಟು ವೇಗವಾಗಿದೆ ಮತ್ತು ವೆಚ್ಚದಲ್ಲಿ 30 ಪ್ರತಿಶತ ಕಡಿಮೆ.


ಇದಲ್ಲದೆ, ಹಲವು ವರ್ಷಗಳ ಸಂಶೋಧನೆಯ ಪರಿಣಾಮವಾಗಿ ಟ್ರಾನ್ಸೇಷಿಯಾ ಎಚ್‌ಸಿವಿ ಎಜಿ+ಎಬಿ ಕಿಟ್ ಅನ್ನು ಪತ್ತೆಹಚ್ಚುವ ಭಾರತದ ಮೊಟ್ಟಮೊದಲ ಕಂಪನಿ ಆಗಿದ್ದು ಮತ್ತು ಇದನ್ನು ಅಭಿವೃದ್ಧಿಪಡಿಸುತ್ತಿರುವ ಜಗತ್ತಿನ ಕೆಲವೇ ಕೆಲವು ಕಂಪನಿಗಳಲ್ಲಿ ಒಂದಾಗಿದೆ. ಈ ಕಿಟ್ ಎಚ್‌ಸಿವಿ (ಹೆಪಟೈಟಿಸ್ ಸಿ ವೈರಸ್) ಅನ್ನು ಮೊದಲೇ ಪತ್ತೆಹಚ್ಚಲು ಸಹಾಯ ಮಾಡುತ್ತದೆ, ಇದರಿಂದಾಗಿ ಹರಡುವ ಅಪಾಯವನ್ನು ಶೇಕಡಾ 41 ರಷ್ಟು ಕಡಿಮೆ ಮಾಡುತ್ತದೆ.


ನಮ್ಮಲ್ಲಿ ಡೆಂಗ್ಯೂ ಮತ್ತು ಮಲೇರಿಯಾಕ್ಕೆ ಆಧುನಿಕ ಪತ್ತೆ ಕಿಟ್‌ಗಳು ಮತ್ತು ಮಧುಮೇಹ ಪತ್ತೆ ಮತ್ತು ಮೇಲ್ವಿಚಾರಣೆಗಾಗಿ ಸ್ವಯಂಚಾಲಿತ ಸಾಧನಗಳಿವೆ.


ದಮನ್‌ನಲ್ಲಿರುವ ಟ್ರಾನ್ಸಾಸಿಯಾ ಬಯೋಮೆಡಿಕಲ್ಸ್ ಕಾರ್ಖಾನೆ


ಎಸ್‌ಎಂಬಿಎಸ್: ನಿಮ್ಮ ವ್ಯವಹಾರ ಪ್ರಯಾಣದ ಪ್ರಮುಖ ಮೈಲಿಗಲ್ಲುಗಳು ಯಾವುವು?


ಎಸ್‌ವಿ: ಮೊದಲು ನಾವು ವಿತರಕರಾಗಿ ಪ್ರಾರಂಭಿಸಿ ನಂತರ ಉತ್ಪಾದನೆಯಲ್ಲಿ ತೊಡಗಿದ ನಂತರ, ಸಿಇ ಪ್ರಮಾಣೀಕರಣವನ್ನು ಪಡೆದು ನಮ್ಮ ಉತ್ಪನ್ನಗಳನ್ನು ಯುರೋಪಿಯನ್ ಮಾರುಕಟ್ಟೆಗೆ ರಫ್ತು ಮಾಡಲು ಪ್ರಾರಂಭಿಸಿದೆವು. 2002 ರ ಆರಂಭದಲ್ಲಿ, ನಮ್ಮ ಮೊದಲ ಜಾಗತಿಕ ಅಂಗಸಂಸ್ಥೆಯಾದ ಎರ್ಬಾ ಮ್ಯಾನ್‌ಹೈಮ್ ಅನ್ನು ಸ್ವಾಧೀನಪಡಿಸಿಕೊಂಡಿದ್ದೇವೆ, ಪ್ರಸ್ತುತ ಇದು ಟ್ರಾನ್ಸೇಷಿಯಾ -ಎರ್ಬಾ ಗುಂಪಾಗಿ ಬೆಳೆದಿದೆ. 2006 ರ ಹೊತ್ತಿಗೆ, ಟ್ರಾನ್ಸೇಷಿಯಾ ಭಾರತದ ಅತಿದೊಡ್ಡ ಐವಿಡಿ ಕಂಪನಿ ಎಂದು ಗುರುತಿಸಲಾಯಿತು, ಮತ್ತು ಇಲ್ಲಿಯವರೆಗೆ ಆ ಪ್ರಶಸ್ತಿಯನ್ನು ನಾವು ಉಳಿಸಿಕೊಂಡಿದ್ದೆವೆ.


ತರುವಾಯ, ಪ್ರತಿವರ್ಷ, ಟ್ರಾನ್ಸೇಷಿಯಾ -ಎರ್ಬಾ ಸಮೂಹವು ಯುರೋಪ್ ಮತ್ತು ಯುಎಸ್ಎಗಳಲ್ಲಿ ವಿವಿಧ ಸ್ವಾಧೀನಗಳ ಮೂಲಕ ತನ್ನ ಜಾಗತಿಕ ಹೆಜ್ಜೆಗುರುತುಗಳನ್ನು ವಿಸ್ತರಿಸುತ್ತಿದೆ. ಕಳೆದ ಎಂಟು ವರ್ಷಗಳಲ್ಲಿ, ಈ ಗುಂಪು 14 ಅಂಗಸಂಸ್ಥೆಗಳನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡಿದ್ದು ಇದೀಗ ಪ್ರತಿಯೊಂದು ವಿಭಾಗಕ್ಕೂ ಪ್ರವೇಶಿಸಿದೆ.


ಅದರ ಇತ್ತೀಚಿನ ಸ್ವಾಧೀನಗಳ ಪೈಕಿ, ಕ್ಷಯ, ಎಚ್‌ಐವಿ, ಉಸಿರಾಟದ ಕಾಯಿಲೆಗಳು, ಡೆಂಗ್ಯೂ, ಮಲೇರಿಯಾ ಮುಂತಾದ ಕಾಯಿಲೆಗಳನ್ನು ನಿಖರವಾಗಿ ಪತ್ತೆಹಚ್ಚಲು ಎರ್ಬಾ ಯುಕೆ ಅತ್ಯಾಧುನಿಕ ಪೇಟೆಂಟ್ ಪಡೆದ ಆಣ್ವಿಕ ರೋಗನಿರ್ಣಯ ಉತ್ಪನ್ನಗಳನ್ನು ಒದಗಿಸುತ್ತದೆ. ಇದಲ್ಲದೆ, ಕ್ಯಾಲ್ಬಿಯೋಟೆಕ್ ಯುಎಸ್ಎ ಉದಯೋನ್ಮುಖ ಮಾರುಕಟ್ಟೆಗಳಿಗೆ ನವೀನ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಿ ಮರಾಟಕ್ಕಿಟ್ಟಿದೆ.


ಯುಎಸ್ಎದಲ್ಲಿ ಟ್ರಾನ್ಸಾಸಿಯಾದ ಕ್ಯಾಲ್ಬಿಯೋಟೆಕ್ ತಂಡ


ಎಸ್‌ಎಂಬಿಎಸ್: ನೀವು ಮತ್ತು ಕಂಪನಿಯು ಎದುರಿಸಿದ ಕಠಿಣ ಕ್ಷಣ ಯಾವುದು?


ಎಸ್‌ವಿ: ನಾನು ಹೊಸದಾಗಿ ಕೆಲಸ ಪ್ರಾರಂಭಿಸಿದಾಗ, ನನಗೆ ಈ ಕೆಲಸದ ಅನುಭವವಿರಲಿಲ್ಲ. ಈ ಸಂಸ್ಥೆ ಜನಿಸಿದಾಗ, ಎಂಆರ್‌ಎ ಗುಂಪಿನ ಕೆಲವು ಜಪಾನಿನ ಸ್ನೇಹಿತರು ಜಪಾನ್‌ನಲ್ಲಿ ತಯಾರಿಸಿದ ಸ್ವಯಂಚಾಲಿತ ರಕ್ತ ಕಣಗಳ ಪರೀಕ್ಷಾ ಸಾಧನವನ್ನು ಗುತ್ತಿಗೆ ಆಧಾರಿತ-ಮಾರ್ಕೆಟಿಂಗ್ ಗೆ ನನ್ನನು ಆಯ್ಕೆ ಮಾಡಿದರು. ಆ ಯಂತ್ರದ ತೂಕ ಸುಮಾರು 17 ಕೆ.ಜಿ. ನಾನು ಅದನ್ನು ಒಂದು ಆಸ್ಪತ್ರೆಯಿಂದ ಇನ್ನೊಂದಕ್ಕೆ ಕೊಂಡೊಯ್ಯುತ್ತಿದ್ದೆ. ಅದು ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ತೋರಿಸುತ್ತಿದ್ದೆ.


ಆ ಸಮಯದಲ್ಲಿ ಹೆಚ್ಚಿನ ವೈದ್ಯಕೀಯ ಕೇಂದ್ರಗಳಲ್ಲಿ, ಪ್ರಮಾಣಿತ ಉಪಕರಣಗಳು ಹಸ್ತಚಾಲಿತ ಸೆಲ್ ಕೌಂಟರ್ ಆಗಿದ್ದು, ಆಗಾಗ್ಗೆ ದೋಷಗಳಿಗೆ ಗುರಿಯಾಗುತ್ತಿದ್ದವು. ಹೆಚ್ಚಿನ ವೈದ್ಯರಿಗೆ ರಕ್ತ ಪರೀಕ್ಷೆಯೇ ರೋಗಪತ್ತೆಹಚ್ಚಲು ಸಹಕಾರಿಯಾಗುತ್ತಿತ್ತು. ಗಾಳಿಯಲ್ಲಿನ ಧೂಳಿನಕಣದಿಂದ ಈ ರಕ್ತಪರೀಕ್ಷೆಯ ಕೌಂಟರ್ ಹದಗೆಡಬಹುದು ಎಂದು ಎಲ್ಲರೂ ಭಾವಿಸಿದ್ದರು.


ಈ ಉತ್ಪನ್ನಗಳಿಗೆ ಉತ್ತಮ ಪ್ರತಿಕ್ರಿಯೆಯನ್ನು ಉಂಟುಮಾಡಲು ಸುಮಾರು ಮೂರು ವರ್ಷಗಳ ನಿರಂತರ ಪ್ರಯತ್ನಗಳನ್ನು ತೆಗೆದುಕೊಂಡಿತು. ಮುಂದಿನ ದಶಕದಲ್ಲಿ, ಟ್ರಾನ್ಸೇಷಿಯಾ ಯುರೋಪಿಯನ್ ಮತ್ತು ಅಮೇರಿಕನ್ ಕಂಪನಿಗಳಿಂದ ತಯಾರಿಸಲ್ಪಟ್ಟ ಹೆಚ್ಚಿನ ಸಂಖ್ಯೆಯ ವಿವಿಧ ಸಾಧನಗಳಿಗೆ ಮಾರ್ಕೆಟಿಂಗ್ ಮತ್ತು ಮಾರಾಟದ ನಂತರದ ಸೇವೆಗಳನ್ನು ಒದಗಿಸಲು ಪ್ರಾರಂಭಿಸಿತು.


1980 ಮತ್ತು 90 ರ ದಶಕದ ಆರಂಭದಲ್ಲಿ, ಯಂತ್ರಗಳು ತುಲನಾತ್ಮಕವಾಗಿ ದುಬಾರಿಯಾಗಿದ್ದವು ಮತ್ತು ದೊಡ್ಡ ಆಸ್ಪತ್ರೆಗಳು ಮಾತ್ರ ಅದನ್ನು ಭರಿಸಬಲ್ಲವು. ಸ್ಥಳೀಯವಾಗಿ ಅವುಗಳನ್ನು ತಯಾರಿಸುವುದೇ ಅವುಗಳ ವೆಚ್ಚ ಕಡಿಮೆಮಾಡಲು ಒಂದೇ ಪರಿಹಾರ ಎಂದು ಭಾವಿಸಿ, 1991 ಸ್ಥಳೀಯವಾಗಿ ಉತ್ಪಾದನೆ ಮಾಡಲು ಪ್ರಾರಂಭಿಸಿದ್ದೇವೆ.


ಟ್ರಾನ್ಸಾಸಿಯಾದ ಸಿಕ್ಕಿಂ ಕಾರ್ಖಾನೆ


ಎಸ್‌ಎಂಬಿಎಸ್: ನಿಮಗೆ ಸ್ಪರ್ಧಿಗಳು ಯಾರು ಮತ್ತು ಕಾರ್ಯವ್ಯಾಪ್ತಿಯನ್ನು ಇನ್ನಷ್ಟು ಹೆಚ್ಚಿಸಲು ನಿಮ್ಮ ಯೋಜನೆಗಳೇನು?


ಎಸ್‌ವಿ: ಸ್ಪರ್ಧೆಯ ಪದವನ್ನು ಬಳಸದಿರಲು ನಾನು ಬಯಸುತ್ತೇನೆ ಏಕೆಂದರೆ ನನ್ನ ಸಹವರ್ತಿಗಳ ಮತ್ತು ನಮ್ಮ ಸಂಸ್ಥೆಯ ಉದ್ದೇಶ ಒಂದು ಆರೋಗ್ಯಕರ ಭಾರತದ ನಿರ್ಮಾಣಮಾಡುವುದು. ಭಾರತದಲ್ಲಿ 70 ಪ್ರತಿಶತ ವೈದ್ಯಕೀಯ ಉಪಕರಣಗಳನ್ನು ಆಮದು ಮಾಡಿಕೊಳ್ಳಲಾಗುತ್ತದೆ. ಆದ್ದರಿಂದ ಭಾರತದಲ್ಲೇ ಉತ್ಪಾದನೆಯನ್ನು ಉತ್ತೇಜಿಸಲು ಕೆಲವು ನೀತಿಗಳನ್ನು ಸಡಿಲಿಸುವುದು ಅಗತ್ಯವಾಗಿದೆ.


ಮುಂದಿನ ಮೂರು ವರ್ಷಗಳಲ್ಲಿ ನಮ್ಮ ಸಂಸ್ಥೆಯ ಬೆಳವಣಿಗೆಯು ದೇಶೀಯ ಮತ್ತು ಅಂತರರಾಷ್ಟ್ರೀಯ ಅವಕಾಶಗಳ ಮಿಶ್ರಣವನ್ನು ಆಧರಿಸಿದೆ. ಭಾರತೀಯ ಆರೋಗ್ಯ ಉದ್ಯಮವು ಕಳೆದ 5-10 ವರ್ಷಗಳಲ್ಲಿ ಮೇಲ್ಮುಖವಾಗಿ ಬೆಳವಣಿಗೆಯ ಪ್ರವೃತ್ತಿಯನ್ನು ಕಂಡಿದೆ ಮತ್ತು ರೋಗನಿರ್ಣಯವು ಬೆಳವಣಿಗೆಗೆ ಒಂದು ಅವಿಭಾಜ್ಯ ವಲಯವಾಗಿದೆ. ನಾವು ಇದೀಗ ಅಸ್ತಿತ್ವದಲ್ಲಿ ಇರುವ ತಂತ್ರಜ್ಞಾನವನ್ನು ವಿಸ್ತರಿಸಲು ಹಾಗೂ ಈ ವಿಷಯದಲ್ಲಿ ಆಳವಾಗಿ ಅಧ್ಯಯನ ನಡೆಸಲು ಯೋಚಿಸುತ್ತಿದ್ದೇವೆ.


ಟ್ರಾನ್ಸೇಷಿಯಾ ಕಡಿಮೆ-ವೆಚ್ಚದ ಪರೀಕ್ಷೆಗಳನ್ನು ಸಹ ಅಭಿವೃದ್ಧಿಪಡಿಸುತ್ತಿದೆ, ಅದು ರಕ್ತದ ಸಮಸ್ಯೆಗಳನ್ನು 100 ಪ್ರತಿಶತ ನಿಖರತೆಯೊಂದಿಗೆ ಪತ್ತೆ ಮಾಡುತ್ತದೆ.


ಪ್ರಸ್ತುತ ನಾವು ಕೆಮಿಲುಮಿನೆನ್ಸಿನ್ಸ್ ಇಮ್ಯುನೊಸೇ ಉತ್ಪನ್ನಗಳು, ಕ್ಷಯ, ಎಚ್‌ಐವಿ, ಉಸಿರಾಟದ ಕಾಯಿಲೆಗಳು, ಡೆಂಗ್ಯೂ, ಮಲೇರಿಯಾ ಮುಂತಾದ ಕಾಯಿಲೆಗಳನ್ನು ಪತ್ತೆಹಚ್ಚಲು ಆಣ್ವಿಕ ರೋಗನಿರ್ಣಯ ಉತ್ಪನ್ನಗಳು ಮತ್ತು ಪಾಯಿಂಟ್-ಆಫ್-ಕೇರ್ ಟೆಸ್ಟಿಂಗ್ ಮತ್ತು ಕ್ಯಾನ್ಸರ್ ಮತ್ತು ಹಿಮೋಗ್ಲೋಬಿನೋಪತಿ ಗುರುತುಗಳಂತಹ ಕೆಲವು ಹೊಸ ತಂತ್ರಜ್ಞಾನಗಳಲ್ಲೂ ತೊಡಗಿದ್ದೇವೆ.