140 ದಿನಗಳಲ್ಲಿ ಜೈವಿಕವಾಗಿ ಕೊಳೆಯುವ ಬಾಳೆಯ ಕಾಂಡಗಳಿಂದ ತಯಾರಿಸಿದ ಸ್ಯಾನಿಟರಿ ಪ್ಯಾಡ್

2017 ರಲ್ಲಿ ಪ್ರಾರಂಭವಾದ ಈ ನವೋದ್ಯಮವನ್ನು ದಂಪತಿಗಳು ಸ್ಪಾರ್ಕಲ್ ಎಂಬ ಹೆಸರಿನಲ್ಲಿ ಈ ಪರಿಸರ ಸ್ನೇಹಿ ನೈರ್ಮಲ್ಯ ಪ್ಯಾಡ್‌ಗಳನ್ನು ತಯಾರಿಸಲು ಪ್ರಾರಂಭಿಸಿದರು.

140 ದಿನಗಳಲ್ಲಿ ಜೈವಿಕವಾಗಿ ಕೊಳೆಯುವ ಬಾಳೆಯ ಕಾಂಡಗಳಿಂದ ತಯಾರಿಸಿದ ಸ್ಯಾನಿಟರಿ ಪ್ಯಾಡ್

Wednesday January 22, 2020,

2 min Read

ಮುಟ್ಟಿನ ಆರೋಗ್ಯ ಮತ್ತು ನೈರ್ಮಲ್ಯವು ಭಾರತದಲ್ಲಿ, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಪ್ರಮುಖ ಕಾಳಜಿಯ ವಿಷಯವಾಗಿ ಉಳಿದಿದೆ. ಪರಿಸರಕ್ಕೆ ಹಾನಿಯಾಗದಂತೆ ಸ್ಯಾನಿಟರಿ ಪ್ಯಾಡ್‌ಗಳನ್ನು ವಿಲೇವಾರಿ ಮಾಡುವ ಕ್ರಮದ ಬಗ್ಗೆಯೂ ಚಿಂತೆ ಇದ್ದು, ಗುಜರಾತ್‌ನ ಚಿರಾಗ್ ಮತ್ತು ಹೆಟಾಲ್ ವಿರಾನಿ ದಂಪತಿಗಳು ಒಂದೇ ಸಮಯದಲ್ಲಿ ಎರಡೂ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ತಿರಸ್ಕರಿಸಿದ ಬಾಳೆ ಕಾಂಡಗಳನ್ನು ಬಳಸಿಕೊಂಡು ಅವರು ಜೈವಿಕ ವಿಘಟನೀಯ ನೈರ್ಮಲ್ಯ ಪ್ಯಾಡ್‌ಗಳನ್ನು ಉತ್ಪಾದಿಸುತ್ತಿದ್ದಾರೆ.


2017 ರಲ್ಲಿ ಪ್ರಾರಂಭವಾದ ಈ ನವೋದ್ಯಮವನ್ನು ದಂಪತಿಗಳು ಸ್ಪಾರ್ಕಲ್ ಎಂಬ ಹೆಸರಿನಲ್ಲಿ ಈ ಪರಿಸರ ಸ್ನೇಹಿ ನೈರ್ಮಲ್ಯ ಪ್ಯಾಡ್‌ಗಳನ್ನು ತಯಾರಿಸಲು ಪ್ರಾರಂಭಿಸಿದರು. ಈ ಪ್ಯಾಡ್‌ಗಳನ್ನು ಹೆಚ್ಚು ಜನರಿಗೆ ತಲುಪಿಸಲು, ಸ್ಟಾರ್ಟಪ್ ತನ್ನ ಉಪಕ್ರಮವಾದ ‘ಒಂದು ಖರೀದಿಸಿ, ಒಂದನ್ನು ಪಡೆಯಿರಿ’ ಅಡಿಯಲ್ಲಿ ಖರೀದಿಸಿದ ಪ್ರತಿ ಸ್ಯಾನಿಟರಿ ಪ್ಯಾಡ್‌ಗೆ ಒಂದು ಪ್ಯಾಡ್ ಉಚಿತವಾಗಿ ನೀಡುತ್ತದೆ, ವರದಿ ದಿ ಬರ್ನಿನ್.


ಚಿರಾಗ್ ಮತ್ತು ಹೆಟಲ್ ವಿರಾಣಿ (ಚಿತ್ರಕೃಪೆ: ಎನ್‌ಡಿಟಿವಿ)


ಸ್ಯಾನಿಟರಿ ನ್ಯಾಪ್ಕಿನ್‌ ತಯಾರಿಸಲು 23.50 ರೂ ವೆಚ್ಚ ತಗಲುತ್ತದೆ. ಆದರೆ ಹೆಚ್ಚು ಜನರಿಗೆ ತಲುಪಿಸಲು ದಂಪತಿಗಳು 2020ರ ಮಾರ್ಚ ವೇಳೆಗೆ ಅವನ್ನು 9.99 ರೂಪಾಯಿಗೆ ಮಾರಾಟಮಾಡಲು ನಿರ್ಧರಿಸಿದ್ದಾರೆ. ಈವರೆಗೆ ಇವರು 50,000 ಪ್ಯಾಡ್‌ಗಳನ್ನು ಮಾರಾಟ ಮಾಡಿದ್ದು, ಅವುಗಳನ್ನು ಬಾಳೆಯ ಕಾಂಡಗಳಿಂದ ತಯಾರಿ ಮಾಡಿದ್ದರಿಂದ ಕೇವಲ ೧೪೦ ದಿನಗಳಲ್ಲಿ ಅವುಗಳು ಕೊಳೆಯುತ್ತವೆ.


ಚಿರಾಗ್ ಎನ್‌ಡಿಟಿವಿಯೊಂದಿಗೆ ಮಾತನಾಡುತ್ತಾ,


"ನಮ್ಮ ಆವಿಷ್ಕಾರವು" ಮೇಕ್ ಇನ್ ಇಂಡಿಯಾ" ಮತ್ತು "ಸ್ವಚ್ ಭಾರತ್ ಮಿಷನ್" ನಿಂದ ಪ್ರೇರಿತವಾಗಿದೆ. 64 ಮಿಲಿಯನ್ ಟನ್ ಬಾಳೆಹಣ್ಣಿನ ಕಾಂಡದ ಕೃಷಿ ತ್ಯಾಜ್ಯವನ್ನು ಸ್ಯಾನಿಟರಿ ಪ್ಯಾಡ್, ಬೇಬಿ ಡೈಪರ್, ಅಲಂಕಾರಿಕ ತೆಂಗಿನಕಾಯಿ, ಕರೆನ್ಸಿ ಪೇಪರ್, ಮತ್ತು ಸಾವಯವ ಗೊಬ್ಬರವಾಗಿ ಪರಿವರ್ತಿಸಬಹುದಾಗಿದೆ. ಈ ಆವಿಷ್ಕಾರದಿಂದ ನಾವು ಭಾರತದಲ್ಲಿ ವರ್ಷಕ್ಕೆ ಸುಮಾರು ಒಂದು ಮಿಲಿಯನ್ ಟನ್ ಸ್ಯಾನಿಟರಿ ಪ್ಯಾಡ್ ತ್ಯಾಜ್ಯವನ್ನು ತೆಗೆದುಹಾಕಬಹುದು. ಬಾಳೆ ನಾರು ಶೀಘ್ರದಲ್ಲೇ ಪ್ಲಾಸ್ಟಿಕ್ ಅನ್ನು ಸ್ಯಾನಿಟರಿ ಪ್ಯಾಡ್‌ಗಳ ಜಾಗದಲ್ಲಿ ಜಾಗತಿಕವಾಗಿ ಬದಲಿಸುತ್ತದೆ ಎಂದು ನಾವು ಭಾವಿಸುತ್ತೇವೆ.” ಎಂದರು.


ಅವರ ಶೈಕ್ಷಣಿಕ ಹಿನ್ನೆಲೆಯು ಉತ್ಪನ್ನವನ್ನು ಅಭಿವೃದ್ಧಿಪಡಿಸುವಲ್ಲಿ ಸಾಕಷ್ಟು ಸಹಾಯ ಮಾಡಿತು. ಮೆಕ್ಯಾನಿಕಲ್ ಎಂಜಿನಿಯರಿಂಗ್ ಹಿನ್ನೆಲೆ ಹೊಂದಿರುವ ಚಿರಾಗ್ ತಯಾರಿಕಾ ಯಂತ್ರವನ್ನು ಅಭಿವೃದ್ಧಿಪಡಿಸಿದರು. ಅಕೌಂಟನ್ಸಿಯಲ್ಲಿನ ತಮ್ಮ ಹಿನ್ನೆಲೆಯೊಂದಿಗೆ ಹೆಟಲ್ ಪ್ಯಾಡ್‌ಗಳನ್ನು ಕೈಗೆಟುಕುವಂತೆ ಮಾಡಲು ಮತ್ತು ಉತ್ಪನ್ನವನ್ನು ಮಾರುಕಟ್ಟೆಗೆ ತರಲು ಕೆಲಸ ಮಾಡಿದರು.


ಆರಂಭದಲ್ಲಿ ಎನ್‌ಜಿಒಗಳು ಮತ್ತು ಶಾಲೆಗಳಲ್ಲಿ ಮುಟ್ಟಿನ ಆರೋಗ್ಯ ಮತ್ತು ನೈರ್ಮಲ್ಯದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ ನವೋದ್ಯಮ.


ನಿಮ್ಮ ಬಳಿಯೂ ಆಸಕ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೇಸ್‌ಬುಕ್‌ ಹಾಗೂ ಟ್ವಿಟರ್‌ ನಲ್ಲಿ ಫಾಲೊ ಮಾಡಿ.