Brands
Discover
Events
Newsletter
More

Follow Us

twitterfacebookinstagramyoutube
ADVERTISEMENT
Advertise with us

ಈ ಐವರು ಐ ಎ ಎಸ್ ಅಧಿಕಾರಿಗಳು ಭಾರತದಲ್ಲಿ ಸಾಮಾಜಿಕ ಬದಲಾವಣೆಗೆ ಮುಂದಾಗಿದ್ದಾರೆ

ಹಸುಗಳ ಕಳ್ಳಸಾಗಣೆಯನ್ನು ತಡೆಗಟ್ಟುವುದರಿಂದ ತ್ಯಾಜ್ಯ ನಿರ್ವಹಣೆಯನ್ನು ನಿಭಾಯಿಸುವವರೆಗೆ, ಈ ಐದು ಐಎಎಸ್ ಅಧಿಕಾರಿಗಳು ಭಾರತದಾದ್ಯಂತ ಸಾಮಾಜಿಕ ಬದಲಾವಣೆಗೆ ಮುಂದಾಗಿದ್ದಾರೆ.

ಈ ಐವರು ಐ ಎ ಎಸ್ ಅಧಿಕಾರಿಗಳು ಭಾರತದಲ್ಲಿ ಸಾಮಾಜಿಕ ಬದಲಾವಣೆಗೆ ಮುಂದಾಗಿದ್ದಾರೆ

Tuesday November 26, 2019 , 3 min Read

ಐಎಎಸ್ ಅಧಿಕಾರಿಯ ಬಗ್ಗೆ ಯೋಚಿಸಿದಾಗ ಅವರು ಸರ್ಕಾರದ ಆಡಳಿತ ನೀತಿಗಳನ್ನು ಅರಿತುಕೊಂಡು ವಿವಿಧ ಕಾರ್ಯಕ್ರಮಗಳನ್ನು ಜನರಿಗಾಗಿ ಹಮ್ಮಿಕ್ಕೊಳ್ಳುತ್ತಾರೆಂದು ನಾವು ಸಾಮಾನ್ಯವಾಗಿ ಊಹಿಸಬಹುದು ಆದರೆ, ಕೆಲವರು ಈ ನಿಯಮಿತ ಸೇವೆಯನ್ನು ಮೀರಿ ವೈಯಕ್ತಿಕ ಸಮಯವನ್ನು ಸಾಮಾಜಿಕ ಕಾರಣಗಳಿಗಾಗಿ ಪ್ರೀತಿಯಿಂದ ಶೃದ್ಧೆಯಿಂದ ವಿನಿಯೋಗಿಸುತ್ತಾರೆ.


ಅವರಲ್ಲಿ ಕೆಲವುರು ಜಾಗತಿಕವಾಗಿ ತಮ್ಮ ವೈಯಕ್ತಿಕ ಸಾಧನೆಗಳಿಗಾಗಿ ಗುರುತಿಸಲ್ಪಟ್ಟಿದ್ದರೆ, ಇತರರು ತಮ್ಮ ಸಮುದಾಯಗಳಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಒಟ್ಟಿನಲ್ಲಿ ನಮ್ಮ ದೇಶದ ಭವಿಷ್ಯವನ್ನು ಉಜ್ವಲಗೊಳಿಸುವಲ್ಲಿ ಇವರ ಪಾತ್ರ ಮಹತ್ವದ್ದಾಗಿದೆ.


ಸಾಮಾಜಿಕ ಬದಲಾವಣೆಗೆ ಶ್ರಮಪಡುತ್ತಿರುವ 5 ಐಎಎಸ್‌ ಅಧಿಕಾರಿಗಳ ಪಟ್ಟಿ ಇಲ್ಲಿದೆ


ಪೋಮಾ ತುಡು

ಒಡಿಶಾದ 2012 ನೇ ಬ್ಯಾಚ್ ನ ಐಎಎಸ್ ಅಧಿಕಾರಿ, ಪೋಮಾ ತುಡು ಅನೇಕರಿಗೆ ಸ್ಫೂರ್ತಿ. ಅವರು ಒಡಿಶಾದ ಗ್ರಾಮಸ್ಥರಿಗೆ ನಕ್ಸಲ್ ಪೀಡಿತ ಪ್ರತಿಕೂಲ ವಲಯಗಳಿಗೆ ಭೇಟಿ ನೀಡಿ ಅವರ ಕುಂದುಕೊರತೆಗಳನ್ನು ಆಲಿಸಿ ಅವುಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳುತ್ತಾರೆ.


ಪ್ರಸ್ತುತ ಇವರು ಗ್ರಾಮಸ್ಥರಿಗೆ ತ್ವರಿತಗತಿಯ ಸಂಪರ್ಕ ಮತ್ತು ವೈದ್ಯಕೀಯ ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ, ವರದಿ ದಿ ಬೆಟರ್‌ ಇಂಡಿಯಾ.


ಪೋಮಾ ತುಡು (ಚಿತ್ರ ಕೃಪೆ: ಔಟ್ ಲುಕ್ ಇಂಡಿಯಾ)


ಜಿಲ್ಲಾ ಮತ್ತು ರಾಜ್ಯ ಸರ್ಕಾರಿ ಕೇಂದ್ರ ಕಚೇರಿ ಈ ಗ್ರಾಮಸ್ಥರಿಂದ 90 ಕಿ. ಮೀ ದೂರದಲ್ಲಿರುವುದರಿಂದ ಈ ಗ್ರಾಮಸ್ಥರನ್ನು ತಲುಪಲು ಮತ್ತು ಸಹಾಯ ಮಾಡಲು ಪೋಮಾ ತುಡು ಎರಡು ಗಂಟೆಗಳ ಕಾಲ ಚಾರಣ ಮಾಡಿ, ತಾವೇ ನಿಂತು ಕೆಲಸಗಳನ್ನು ಪರಿಶೀಲಿಸುತ್ತಾರೆ.


ಬುಡಕಟ್ಟು ಜನಾಂಗದವರು ತಮ್ಮ ಸಮಸ್ಯೆಗಳನ್ನು ಬಗೆಹರಿಸುವುದು ಕಷ್ಟವಾದರೆ ಅವರು ನೇರವಾಗಿ ಪೋಮಾ ಅವರಬಳಿ ಹೋಗಿ ಸಲಹೆ ಕೇಳುತ್ತಾರೆ. ಮಾನವತವಾದವನ್ನು ನಂಬಿರುವ ಪೋಮಾ ಅವರ ಕಲ್ಯಾಣ ಕಾರ್ಯಗಳು ಹೀಗೆ ಸಾಗಲಿ ಎಂದು ಆಶಿಸೋಣ.


ಪ್ರಶಾಂತ್ ನಾಯರ್

2006 ರ ಕೇರಳ ಕೇಡರ್‌ನ ಐಎಎಸ್ ಅಧಿಕಾರಿ ಪ್ರಶಾಂತ್ ನಾಯರ್ ಅವರು ರಸ್ತೆ ಸುರಕ್ಷತೆ ಮತ್ತು ನಿರ್ಮಾಣ, ತೆರಿಗೆ ಮತ್ತು ಪ್ರವಾಸೋದ್ಯಮ ಸೇರಿದಂತೆ ಕೋಜಿಕೋಡ್‌ನಾದ್ಯಂತ ನೀರು ಸರಬರಾಜು ಮುಂತಾದ ವಿವಿಧ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದಾರೆ, ವರದಿ ಬೆಟರ್ ಇಂಡಿಯಾ ವರದಿ .


ಅವರು ಕೇರಳದ ಕೋಜಿಕೋಡ್‌ನ ಸಂಗ್ರಾಹಕರಾಗಿ ನೇಮಕಗೊಂಡರು ಮತ್ತು ಕೋಜಿಕೋಡ್‌ನಲ್ಲಿ ಬಡತನವನ್ನು ನಿರ್ಮೂಲನೆ ಮಾಡಲು ಸಹಾಯ ಮಾಡಿದ್ದಕ್ಕಾಗಿ ಪ್ರಶಂಸೆ ಹಾಗೂ ಮೆಚ್ಚುಗೆಯನ್ನೂ ಪಡೆದಿದ್ದಾರೆ, ಇವರ ಅಭಿವೃದ್ಧಿ ಕೆಲಸಗಳಿಂದ ಆ ಪ್ರದೇಶದಲ್ಲಿ ಬಡತನದ ಮಟ್ಟವು ಗಮನಾರ್ಹವಾಗಿ ಕುಸಿಯಿತು.


ಪ್ರಶಾಂತ್ ನಾಯರ್ (ಚಿತಕೃಪೆ: ಬೆಟರ್ ಇಂಡಿಯಾ)


ಪ್ರಶಾಂತ್ ಅವರ ಉಪಕ್ರಮಗಳಲ್ಲಿ ಒಂದಾದ ಆಪರೇಷನ್ ಸುಲೈಮಾನಿ ಕೋಜಿಕೋಡ್‌ನಲ್ಲಿ ಪ್ರಾರಂಭಿಸಲಾದ ಯೋಜನೆ ಆಗಿದ್ದು ಇದು ಅಲ್ಲಿನ ಬಡಜನರ ಹಸಿವನ್ನು ಹೋಗಲಾಡಿಸಲು ಉಚಿತ ಆಹಾರವನ್ನು ನೀಡುವ ಗುರಿ ಹೊಂದಿದೆ. ಅವರು ಜಿಲ್ಲಾಡಳಿತ ಮತ್ತು ಕೇರಳ ಹೋಟೆಲ್ ಮತ್ತು ರೆಸ್ಟೋರೆಂಟ್ ಸಂಘದೊಂದಿಗೆ ಸಹಭಾಗಿತ್ವವನ್ನು ಹೊಂದಿದ್ದಾರೆ.


ಇದಲ್ಲದೆ, ಪ್ರಶಾಂತ್ ತೇರೆ ಮೇರೆ ಬೀಚ್ ಮೇ ಅನ್ನು ಸಹ ಪ್ರಾರಂಭಿಸಿದ್ದಾರೆ, ಇದು ಕೋಜಿಕೋಡ್‌ನ ಕಡಲತೀರಗಳಲ್ಲಿನ ತ್ಯಾಜ್ಯ ನಿರ್ವಹಣೆಯ ಸಮಸ್ಯೆಯನ್ನು ನಿಭಾಯಿಸುವ ಗುರಿಯನ್ನು ಹೊಂದಿದೆ. ಪ್ರಶಾಂತ್ ಪ್ರಾರಂಭಿಸಿದ ‘ಯೋ ಅಪ್ಪೂಪ್ಪಾ’ ಮತ್ತೊಂದು ಅಭಿಯಾನವು ಕೇರಳದ ವೃದ್ಧರನ್ನು ಬೆಂಬಲಿಸಲು ಸಹಾಯ ಮಾಡುತ್ತದೆ.


ರಾಜೀವ್ ಗುಪ್ತಾ

2016 ರಿಂದ, 1979 ರ ಬ್ಯಾಚ್‌ನ ಐಎಎಸ್ ಅಧಿಕಾರಿ ರಾಜೀವ್ ಗುಪ್ತಾ ಅವರು ಹಸುಗಳ ಹತ್ಯೆಯನ್ನು ತಡೆಯುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಪ್ರಜ್ಞಾಶೂನ್ಯವಾಗಿ ಹಸುಗಳನ್ನು ಕೊಲ್ಲುವುದನ್ನು ತಡೆಯಲು ಭಾರತ ಸರ್ಕಾರಕ್ಕೆ ಹಸು ಆಶ್ರಯ ಒದಗಿಸಬೇಕು ಎಂದು ಅವರು ಆಗ್ರಹಿಸಿದರು.


ಯುವ ವ್ಯವಹಾರಗಳ ಇಲಾಖೆಯ ಮಾಜಿ ಕಾರ್ಯದರ್ಶಿ ಅವರು ಕಚೇರಿಯಲ್ಲಿದ್ದಾಗ ಸರ್ಕಾರಕ್ಕೆ ಬ್ಲಾಗ್‌ನಲ್ಲಿ ಹೀಗೆ ಬರೆದಿದ್ದಾರೆ, "ಗೋಶಾಲೆ ಮತ್ತು ಗೋಸಾದನ್‌ಗಳಂತಹ ಜಾನುವಾರುಗಳನ್ನು ಸಾಕುವ ಸಂಸ್ಥೆಗಳಿಗೆ ಅವುಗಳ ಆಹಾರಕ್ಕಾಗಿ ಅಗತ್ಯವಾದ ಬೆಂಬಲವನ್ನು ಸರಕಾರ ಒದಗಿಸ ಬೇಕಾಗುತ್ತದೆ". ಅಷ್ಟೇ ಅಲ್ಲದೆ “'ಅನುಪಯುಕ್ತ' ಆಕಳನ್ನು ಸಗಣಿ, ಮೂತ್ರಗಳ ಸರಿಯಾದ ಬಳಕೆಯಿಂದ ಉತ್ಪನ್ನಗಳನ್ನು ತಯಾರಿಸಿ 'ಉಪಯುಕ್ತ' ಆಕಳಾಗಿಸಬಹುದು" ಎಂದು ಬರೆದಿದ್ದಾರೆ, ವರದಿ ಎನ್‌ಡಿಟಿವಿ.


ರಾಜೀವ್ ಗುಪ್ತಾ (ಚಿತಕೃಪೆ: ಟ್ವಿಟ್ಟರ್)

ರಾಜೀವ್ ಗುಪ್ತಾ 2017 ರಲ್ಲಿ ಉತ್ತರ ಪ್ರದೇಶದಲ್ಲಿ ‘ಹಸು ಸೇವಾ ಆಯೋಗ್’ ರಚಿಸಿದ್ದು, ಪ್ರಸ್ತುತ ಅದರ ಅಧ್ಯಕ್ಷರಾಗಿದ್ದಾರೆ. ಈ ಯೋಜನೆಯ ಮೂಲಕ, ಅವರು ದನಗಳನ್ನು ರಕ್ಷಿಸುವುದು ಮತ್ತು ಅಕ್ರಮ ವಧೆ ಮತ್ತು ಹಸುಗಳ ಕಳ್ಳಸಾಗಣೆ ತಡೆಯುವ ಗುರಿ ಹೊಂದಿದ್ದಾರೆ, ವರದಿ ಬಿಸಿನೆಸ್ ಸ್ಟ್ಯಾಂಡರ್ಡ್.


"ಅಕ್ರಮ ಗೋಹತ್ಯೆ ಮತ್ತು ಕಳ್ಳಸಾಗಣೆ ತಡೆಗಟ್ಟಿದಾಗಲೆಲ್ಲಾ, ಹಸುವಿನ ಆಶ್ರಯದಲ್ಲಿರುವ ಪ್ರಾಣಿಗಳ ಸಂಖ್ಯೆ ಹೆಚ್ಚಾಗುತ್ತದೆ. ಆದ್ದರಿಂದ, ಈ ಆಶ್ರಯಗಳಲ್ಲಿ ದನಗಳ ಉತ್ತಮ ಪಾಲನೆ ಮತ್ತು ಅವುಗಳ ಉಪ ಉತ್ಪನ್ನಗಳನ್ನು ಮಾರಾಟ ಮಾಡುವ ಮೂಲಕ ಅವುಗಳನ್ನು ಸ್ವಾವಲಂಬಿಗಳನ್ನಾಗಿ ಮಾಡಲು ನಾವು ಬಯಸುತ್ತೇವೆ" ಎಂದು ರಾಜೀವ್ ಎಎನ್‌ಐಗೆ ಹೇಳುತ್ತಾರೆ.


ಮಿರ್ ಮೊಹಮ್ಮದ್ ಅಲಿ

ಮಿರ್ ಮೊಹಮ್ಮದ್ ಅಲಿ ಅವರು ಕೇರಳದ 2011 ರ ಐಎಎಸ್ ಕೇಡರ್ ಅಧಿಕಾರಿಯಾಗಿದ್ದು, ಅವರು ತಮ್ಮ ಪ್ಲಾಸ್ಟಿಕ್ ನಿಷೇಧ ಉಪಕ್ರಮಗಳ ಮೂಲಕ ಸಮಾಜದಲ್ಲಿ ಬದಲಾವಣೆ ತರುತ್ತಿದ್ದಾರೆ.


ಮೀರ್ ಮೊಹಮ್ಮದ್ ಅಲಿ (ಚಿತ್ರ ಕೃಪೆ: ಲೈವ್‌ ಮಿಂಟ್)


ಕೇರಳದ ಕಣ್ಣೂರು ಜಿಲ್ಲೆಯನ್ನು ಪ್ಲಾಸ್ಟಿಕ್ ಮುಕ್ತವಾಗಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಜಿಲ್ಲೆಗಳಲ್ಲಿ ಯಾವುದೇ ರೆಸ್ಟೋರೆಂಟ್‌ಗಳು ಪ್ಲಾಸ್ಟಿಕ್ ಕಪ್ ಅಥವಾ ಪ್ಲೇಟ್‌ಗಳನ್ನು ಬಳಸದಂತೆ ನೋಡಿಕೊಳ್ಳುತ್ತಾರೆ.


ಕಿರಾಣಿ ಅಂಗಡಿಗೆ ಹೋಗುವಾಗ ಜಿಲ್ಲೆಯ ಆಡಳಿತವು ನಾಗರಿಕರಿಗೆ ಪ್ಲಾಸ್ಟಿಕ್ ಚೀಲಗಳನ್ನು ಬಳಸುವುದನ್ನು ನಿಲ್ಲಿಸುವಂತೆ ಮಾಡಿತು ಮತ್ತು ಬದಲಿಗೆ ಬಟ್ಟೆಯ ಚೀಲಗಳನ್ನು ಆರಿಸಿಕೊಳ್ಳುವಂತೆ ಸೂಚಿಸಿತು.


ಆರ್ಮ್‌ಸ್ಟ್ರಾಂಗ್ ಪಮೆ

ಮಣಿಪುರ ಮೂಲದ ಆರ್ಮ್‌ಸ್ಟ್ರಾಂಗ್ ಪಮೆ 2007 ರಿಂದ ಐಎಎಸ್ ಅಧಿಕಾರಿಯಾಗಿದ್ದಾರೆ. 100 ಕಿ.ಮೀ ರಸ್ತೆ ನಿರ್ಮಿಸಲು ಶ್ರಮಿಸಿದ ಅವರನ್ನು 'ಮಣಿಪುರದ ಮಿರಾಕಲ್ ಮ್ಯಾನ್' ಎಂದು ಕರೆಯಲಾಗುತ್ತದೆ, ಇದನ್ನು 'ಪೀಪಲ್ಸ್ ರೋಡ್' ಎಂದು ಕರೆಯಲಾಗುತ್ತದೆ. ಮಣಿಪುರ, ನಾಗಾಲ್ಯಾಂಡ್ ಮತ್ತು ಅಸ್ಸಾಂ ರಾಜ್ಯಗಳನ್ನು ಈ ರಸ್ತೆ ಸಂಪರ್ಕಿಸುತ್ತದೆ.


ಆರ್ಮ್‌ಸ್ಟ್ರಾಂಗ್ ಪಮೆ (ಚಿತ್ರ ಕೃಪೆ; ಇಂಡಿಯಾ ಟುಡೇ)


ಈ ನಗರಗಳಿಗೆ ಸರಿಯಾಗಿ ಪಕ್ಕಾ ರಸ್ತೆಗಳಿಲ್ಲದ ಕಾರಣ, ಜನರು ಕೆಸರು ಕಲ್ಲುಮಣ್ಣುಗಳ ಮೇಲೆ ಗಂಟೆಗಟ್ಟಲೆ ನಡೆಯಬೇಕಾಗಿತ್ತು ಅಥವಾ ನದಿಯ ಪಕ್ಕದಲ್ಲಿ ಹೋಗಬೇಕಾಗಿತ್ತು. ಈ ಸಮಸ್ಯೆಯನ್ನು ಪರಿಹರಿಸಲು, ಆರ್ಮ್‌ಸ್ಟ್ರಾಂಗ್ ಪಮೆ ಈ ಯೋಜನೆಯನ್ನು ತಮ್ಮ ಕೈಗೆ ತೆಗೆದುಕೊಳ್ಳಲು ನಿರ್ಧರಿಸಿದರು.


ರಸ್ತೆ ನಿರ್ಮಾಣದ ಪ್ರಯತ್ನಗಳಿಗಾಗಿ ಅವರನ್ನು ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆ ಕಾರ್ಯಕ್ರಮಕ್ಕೆ ಇವರನ್ನು ಆಹ್ವಾನಿಸಲಾಯಿತು ಎಂದು ಈಸ್ಟ್‌ಮೊಜೊ ವರದಿ ಮಾಡಿದೆ. 2012 ರಲ್ಲಿ, ಸಾರ್ವಜನಿಕ ಸೇವಾ ವಿಭಾಗದಲ್ಲಿ ಸಿಎನ್‌ಎನ್-ಐಬಿಎನ್‌ನ ‘ವರ್ಷದ ಭಾರತೀಯ’ ಪ್ರಶಸ್ತಿಗೆ ಆರ್ಮ್‌ಸ್ಟ್ರಾಂಗ್ ನಾಮನಿರ್ದೇಶನಗೊಂಡರು. ಅವರಿಗೆ 2015 ರಲ್ಲಿ ಭಾರತದ ಅತ್ಯಂತ ಶ್ರೇಷ್ಠ ಐಎಎಸ್ ಅಧಿಕಾರಿ ಪ್ರಶಸ್ತಿಯನ್ನೂ ನೀಡಲಾಯಿತು.