ಸುಧಾಮೂರ್ತಿಯವರ ಈ ಸ್ಪೂರ್ತಿದಾಯಕ ನುಡಿಮುತ್ತುಗಳು ಜೀವನದೆಡೆಗಿನ ನಿಮ್ಮ ದೃಷ್ಟಿಕೋನವನ್ನು ಬದಲಾಯಿಸುತ್ತವೆ

ಪ್ರಶಸ್ತಿ ವಿಜೇತ ಬರಹಗಾರ್ತಿ, ಪದ್ಮಶ್ರೀ ಪುರಸ್ಕೃತ, ಲೋಕೋಪಕಾರಿ ಸುಧಾ ಮೂರ್ತಿ ಅವರು ಜನರ ಸೇವೆಯನ್ನು ತಮ್ಮ ಜೀವನದ ಗುರಿಯಾಗಿಸಿಕೊಂಡಿದ್ದಾರೆ. ನಿಮ್ಮ ಜೀವನಕ್ಕೆ ಹೊಸ ದೃಷ್ಟಿಕೋನ ನೀಡುವ ಅವರ ಹತ್ತು ನುಡಿಮುತ್ತುಗಳು ಇಲ್ಲಿವೆ.

ಸುಧಾಮೂರ್ತಿಯವರ ಈ ಸ್ಪೂರ್ತಿದಾಯಕ ನುಡಿಮುತ್ತುಗಳು ಜೀವನದೆಡೆಗಿನ ನಿಮ್ಮ ದೃಷ್ಟಿಕೋನವನ್ನು ಬದಲಾಯಿಸುತ್ತವೆ

Saturday August 24, 2019,

2 min Read

ಸುಧಾ ಮೂರ್ತಿ ದೀನದಲಿತರ, ಕಷ್ಟದಲ್ಲಿರುವವರ, ಅಳಿವಿನಂಚಿನಲ್ಲಿರುವ ಸಮುದಾಯಗಳಿಗೆ ಆಶಾಕಿರಣವಾಗಿರುವ ಇನ್ಫೋಸಿಸ್ ಸಂಸ್ಥೆಯ ಅಧ್ಯಕ್ಷರು. ಲೋಕೋಪಕಾರಿ, ಪ್ರಶಸ್ತಿ ವಿಜೇತ ಬರಹಗಾರ್ತಿ ಹಾಗೂ ಪದ್ಮಶ್ರೀ ಪುರಸ್ಕೃತ ಸುಧಾ ಮೂರ್ತಿ ಈ ಸಮುದಾಯಗಳಿಗೆ ಗ್ರಾಮೀಣ ಅಭಿವೃದ್ಧಿ, ಶಿಕ್ಷಣ, ಆರೋಗ್ಯ, ಸಾರ್ವಜನಿಕಕ ನೈರ್ಮಲ್ಯ, ಕಲೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಶಕ್ತಿ ತುಂಬುತ್ತಿದ್ದಾರೆ.


ಸುಧಾ ಮೂರ್ತಿ, ತಮ್ಮ 'ಹೌ ಐ ಥಾಟ್ ಮೈ ಗ್ರ್ಯಾಂಡ್ ಮದರ್ ಟು ರೀಡ್' (ನನ್ನ ಅಜ್ಜಿಗೆ ನಾ ಹೇಗೆ ಓದಲು ಕಲಿಸಿದೆ) ಎಂಬ ಕೃತಿಯಿಂದ ಸುಪ್ರಸಿದ್ಧರಾಗಿದ್ದಾರೆ. ಅವರ ಈ ಕೃತಿ ಹಲವರಿಗೆ ಸ್ಪೂರ್ತಿಯಾಗಿದ್ದು ಇದನ್ನು ಭಾರತದಾದ್ಯಂತ ಹಲವು ಶೈಕ್ಷಣಿಕ ಪಠ್ಯಕ್ರಮದಲ್ಲಿ ಅಳವಡಿಸಲಾಗಿದೆ. ಅಂದಿನಿಂದ ಅವರು ಹಲವು ಪುಸ್ತಕಗಳನ್ನು ಬರೆದಿದ್ದಾರೆ. ಸಾಮಾನ್ಯರಲ್ಲಿ ಅಸಮಾನ್ಯರು, ಏರಿಳಿತದ ದಾರಿಯಲ್ಲಿ, ಥ್ರೀ ಥೌಸಂಡ್ ಸ್ಟಿಚಸ್ ಹಾಗೂ ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಹಲವು ಕೃತಿಗಳನ್ನು ರಚಿಸಿದ್ದಾರೆ.


ವಿವಿಧ ರೀತಿಯ ಜನರೊಂದಿಗೆ ಕೆಲಸ ಮಾಡಿದ ಸುಧಾ ಮೂರ್ತಿ, ತಮ್ಮ ಜೀವನದ ನಿಜವಾದ ಧ್ಯೇಯ ಇತರರಿಗೆ ಸೇವೆ ಮಾಡುವುದು ಎಂದು ನಂಬಿದ್ದಾರೆ. ಎರಡು ದಶಕಗಳ ಹಿಂದೆ ತಮ್ಮ ಮಗಳು ತಮ್ಮ ಜೀವನದ ಉದ್ದೇಶವನ್ನು ಪ್ರತಿಬಿಂಬಿಸುವಂತೆ ಒತ್ತಾಯಿಸಿದಾಗ ಹೊಸ ದೃಷ್ಟಿಕೋನಕ್ಕೆ ತೆರೆದುಕೊಂಡೆ ಎಂದು ಹೇಳುತ್ತಾರೆ ಸುಧಾ ಮೂರ್ತಿ.


ನಿಮ್ಮ ಜೀವನಕ್ಕೆ ಹೊಸ ದೃಷ್ಟಿಕೋನವನ್ನು ನೀಡಬಲ್ಲ ಅವರ ಹತ್ತು ನುಡಿಮುತ್ತುಗಳು ಇಲ್ಲಿವೆ.




"ಪ್ರಕೃತಿ ತುಂಬಾನೆ ಬುದ್ಧಿವಂತವಾದದ್ದು. ನೀವು ನೋಡಲಿಕ್ಕೆ ಚಂದವಿದ್ದೀರೋ ಇಲ್ಲವೋ, ನೀವು ಶ್ರೀಮಂತರೋ ಅಲ್ಲವೋ, ನೀವು ಬುದ್ಧಿವಂತರೋ ಅಲ್ಲವೋ ನಿಮಗೆ ದಿನಕ್ಕೆ ಇರುವುದು ಕೇವಲ 24 ಗಂಟೆಗಳು. ನಿಮ್ಮ ತೊಂದರೆಗಳು, ಕಷ್ಟಗಳು ಅಥವಾ ಪರಿಹಾರಗಳು ಏನೇ ಇದ್ದರು ಅವುಗಳನ್ನು ಈ 24 ಗಂಟೆಗಳಲ್ಲೇ ಮುಗಿಸಿಕೊಳ್ಳಬೇಕು."


"ನೀವು ಎಷ್ಟು ಬುದ್ಧಿವಂತರಿದ್ದೀರಿ, ಎಷ್ಟು ಚೆನ್ನಾಗಿದ್ದೀರಿ ಅಥವಾ ಎಷ್ಟು ಚೆನ್ನಾಗಿ ಸಂಪರ್ಕಗಳನ್ನು ಹೊಂದಿದ್ದೀರಿ ಎಂಬುದು ಲೆಕ್ಕಕ್ಕೆ ಬರುವುದಿಲ್ಲ. ಪರಿಶ್ರಮ ಹಾಗೂ ಧೈರ್ಯವಿದ್ದರು ಮಾತ್ರ ಯಶಸ್ವಿ ವ್ಯಕ್ತಿಗಳಾಗಬಹುದು."


"ಜೀವನ ಪಠ್ಯಕ್ರಮ ತಿಳಿಯದ, ಪ್ರಶ್ನೆ ಪತ್ರಿಕೆ ಇರದ ಒಂದು ಪರೀಕ್ಷೆ. ಇಲ್ಲಿ ಮಾದರಿ ಪ್ರಶ್ನೆ ಪತ್ರಿಕೆಗಳೂ ಇರುವುದಿಲ್ಲ."


"ಬೆಂಕಿಯನ್ನು ಬೆಂಕಿಯಿಂದ ನಂದಿಸಲಾಗದು. ನೀರು ಮಾತ್ರ ಏನಾದ್ರು ಬದಲಾವಣೆ ತರಬಲ್ಲದು."




"ಕ್ರಿಯೆ ಇಲ್ಲದ ದೃಷ್ಟಿ, ಕೇವಲ ಕನಸಾಗಿ ಉಳಿಯುತ್ತದೆ. ಕನಸಿಲ್ಲದ ಕ್ರಿಯೆಯಿಂದ ಕೇವಲ ಕಾಲಹರಣವಾಗುತ್ತದೆ. ಆದರೆ ಕ್ರಿಯೆ-ಕನಸು ಒಟ್ಟಾದರೆ ಪ್ರಪಂಚವನ್ನೇ ಬದಲಾಯಿಸಬಹುದು."


"ಒಂಟಿತನಕ್ಕೂ ಏಕಾಂತಕ್ಕೂ ವ್ಯತ್ಯಾಸವಿದೆ. ಒಂಟಿತನ ಬೇಸರ ತರಿಸುತ್ತದೆ‌. ಆದರೆ ಏಕಾಂತವು ನಿಮ್ಮ ಕಾರ್ಯಗಳನ್ನು ಹಾಗೂ ಆಲೋಚನೆಗಳನ್ನು ಪರಿಶೀಲಿಸಿಕೊಳ್ಳಲು ಸಹಾಯ ಮಾಡುತ್ತದೆ."


"ಸಾಧನೆ, ಹಣ, ಪ್ರಶಸ್ತಿ ಅಥವ ಪದವಿಗಳನ್ನು ಹೊಂದಿರುವುದಕ್ಕಿಂತ ಮುಖ್ಯವಾಗಿ ಒಳ್ಳೆಯ ಸಂಬಂಧಗಳನ್ನು, ಸಹಾನುಭೂತಿಯನ್ನು ಹಾಗೂ ಮನಶಾಂತಿಯನ್ನು ಹೊಂದಿರಬೇಕು."