88 ವರ್ಷದ ಮಹಿಳೆಗೆ ವಿಮಾನದಲ್ಲಿ ತಮ್ಮ ಬ್ಯುಸಿನೆಸ್ ಕ್ಲಾಸ್ ಸೀಟ್ ಅನ್ನು ಬಿಟ್ಟುಕೊಟ್ಟ ಜಾಕ್

88 ವರ್ಷದ ವೈಲೆಟ್ ಅವರ ಮೇಲ್ದರ್ಜೆಯ ವಿಮಾನಯಾನದ ಕನಸನ್ನು ನನಸು ಮಾಡಲು ಜಾಕ್ ಅವರೊಂದಿಗೆ ತಮ್ಮ ಸೀಟ್ ಅನ್ನು ವಿನಿಮಯ ಮಾಡಿಕೊಂಡಿದ್ದಾರೆ. ಜಾಕ್ ಅವರ ಈ ನಿಸ್ವಾರ್ಥ ಸೇವೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.

88 ವರ್ಷದ ಮಹಿಳೆಗೆ ವಿಮಾನದಲ್ಲಿ ತಮ್ಮ ಬ್ಯುಸಿನೆಸ್ ಕ್ಲಾಸ್ ಸೀಟ್ ಅನ್ನು ಬಿಟ್ಟುಕೊಟ್ಟ ಜಾಕ್

Wednesday December 25, 2019,

2 min Read

ಒಂದು ಸೂಕ್ಷ್ಮ ಸಂವೇದನೆ ಹೊಂದಿರುವ ಮನಸ್ಸು ಎಲ್ಲರೊಂದಿಗೆ ಬೆರೆಯಲು ಸಾಧ್ಯ, ಎಲ್ಲರೊಳಗೆ ಒಂದಾಗಲು ಸಾಧ್ಯ. ಕೆಲವೊಂದು ನಿಸ್ವಾರ್ಥ ಸೇವೆ, ಅದು ಚಿಕ್ಕದಾಗಿರಲಿ ದೊಡ್ಡದಾಗಿರಲಿ, ಸಮಾಜದ ಮೇಲೆ ಉತ್ತಮ ಪರಿಣಾಮ ಬೀರುವುದರಲ್ಲಿ ಸಂಶಯವಿಲ್ಲ.


ಈ ರೀತಿಯ ಮನಮಿಡಿಯುವ ಘಟನೆಗೆ ಸಾಕ್ಷಿಯಾಗಿದ್ದು, ವರ್ಜಿನ್ ಅಥ್ಲೆಟಿಕ್ ನ ವಿಮಾನಯಾನ. ಕೆಲವು ದಿನಗಳ ಹಿಂದೆ ಎಂದಿನಂತೆ ವರ್ಜಿನ್ ಅಥ್ಲೆಟಿಕ್ ವಿಮಾನ ಬ್ರಿಟನ್ ನಿಂದ ನ್ಯೂಯಾರ್ಕ್ ಗೆ ಪ್ರಯಾಣ ಬೆಳೆಸಿತ್ತು.


ವಿಮಾನದಲ್ಲಿ 88 ವರ್ಷದ ವೈಲೆಟ್ ಅಮೇರಿಕ ಹಾಗೂ ಬ್ರಿಟನ್ ಅಲ್ಲಿ ದಾದಿ ಆಗಿ ಸೇವೆಸಲ್ಲಿಸುತ್ತಿದ್ದರು. ನ್ಯೂ ಯಾರ್ಕ್ ನಲ್ಲಿರುವ ತಮ್ಮ ಮಗಳನ್ನು ಆಗಾಗ ಭೇಟಿಮಾಡಲು ವಿಮಾನದಲ್ಲಿ ಪ್ರಯಾಣ ಬೆಳೆಸುತ್ತಿದ್ದರು. ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಅವರಿಗೆ ಒಂದಲ್ಲಾ ಒಂದು ದಿನ ತಾನು ಮೇಲ್ದರ್ಜೆಯ ಬ್ಯುಸಿನೆಸ್ ಕ್ಲಾಸ್ ನಲ್ಲಿ ಕುಳಿತು ಪ್ರಯಾಣಮಾಡಬೇಕೆನ್ನುವ ಆಸೆ ಇತ್ತು.


ವೈಲೆಟ್ ರ ಈ ಆಸೆ ಧೀಡಿರ್ ಆಗಿ ಪೂರೈಸಲ್ಪಡುತ್ತದೆ ಎಂಬ ಕನಿಷ್ಠ ಊಹೆಯು ಅವರಲ್ಲಿರಲಿಲ್ಲ. ಅದೇ ವಿಮಾನದಲ್ಲಿ ನ್ಯೂ ಯಾರ್ಕ್ ಗೆ ಪ್ರಯಾಣ ಬೆಳೆಸುತ್ತಿದ್ದ, ಮೇಲ್ದರ್ಜೆಯ ಬ್ಯುಸಿನೆಸ್ ಕ್ಲಾಸ್ ನಲ್ಲಿ ಜುಳಿತಿದ್ದ ಜಾಕ್ ಎಕನಾಮಿ ದರ್ಜೆಯಲ್ಲಿ ಕುಳಿತಿದ್ದ, ವೈಲೆಟ್ ಅವರನ್ನು ಗಮನಿಸಿ ಅವರೊಂದಿಗೆ ತಮ್ಮ ಆಸನವನ್ನು ವಿನಿಮಯ ಮಾಡಿಕೊಳ್ಳಲು ಮುಂದಾದರು.


ಮೇಲ್ದರ್ಜೆಯ ಕ್ಯಾಬಿನ್ ಕಡೆಗೆ ವೈಲೆಟ್ ತೆರಳುತ್ತಿದ್ದಂತೆ, ಜಾಕ್ ಆಕೆಯ ಏಕಾನಮಿ ಕ್ಲಾಸ್ ನ ಶೌಚಾಲಯ ದ ಬಳಿ ಇರುವ ಸೀಟ್ ನಲ್ಲಿ ಕುಳಿತುಕೊಂಡರು. ಮತ್ತೆ ಜಾಕ್ ಒಮ್ಮೆಯೂ ಮೇಲ್ದರ್ಜೆಯ ಕ್ಯಾಬಿನ್ ಕಡೆಗೆ ಗಮನ ಹರಿಸಲಿಲ್ಲ, ಏರ್ ಹೊಸ್ಟರ್ಸ್ ಬಳಿ ವಿವಿಧ ಸೇವೆಗಳನ್ನು ಅಪೇಕ್ಷಿಸಲಿಲ್ಲ. ಅವರ ಈ ನಿಸ್ವಾರ್ಥ ಸೇವೆಯನ್ನು ಕಂಡ ವಿಮಾನದ ಸಿಬ್ಬಂದಿ ಈ ಕಥೆಯನ್ನು ಫೇಸ್‌ ಬುಕ್ ನಲ್ಲಿ ಹಂಚಿಕೊಂಡಿದ್ದಾರೆ.



ಹಿರಿಯರಾದ ವೈಲೆಟ್ ಅವರ ಈ ಕನಸನ್ನ ನನಸು ಮಾಡಿದ ಜಾಕ್ ಅವರ ನಿಸ್ವಾರ್ಥ ಸೇವೆಗೆ ವಿಮಾನಯಾನ ಸಿಬ್ಬಂದಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


ತಮ್ಮ ಮಗಳಿಗೆ ತಾವು ಮೇಲ್ದರ್ಜೆಯ ಕ್ಯಾಬಿನ್ ಅಲ್ಲಿ ಪ್ರಯಾಣ ಮಾಡಿರುವುದನ್ನು ಸಾಕ್ಷಿಸಮೇತ ತೋರಿಸಲು, ವೈಲೆಟ್ ವಿಮಾನದ ಸಿಬ್ಬಂದಿಗಳೊಂದಿಗೆ ತೆಗಿಸಿಕೊಂಡ ಸೆಲ್ಫಿ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.


ಜಾಕ್ ಹಾಗೂ ವೈಲೆಟ್ (ಚಿತ್ರ ಕೃಪೆ: ಫೇಸ್‌ ಬುಕ್‌)


ವರ್ಜಿನ್ ಅಟ್ಲಾಂಟಿಕ್ ಗುಡ್ ಮಾರ್ನಿಂಗ್ ಸಂಸ್ಥೆ ಗ್ರಾಹಕರ ಗೌಪ್ಯತೆಯಿಂದಾಗಿ ಹೆಚ್ಚಿನ ವಿವರಗಳನ್ನು ಸಾರ್ವಜನಿಕರಿಗೆ ನೀಡಲು ನೀರಾಕರಿಸಿದೆ, ಆದರೆ ವಿಮಾನಯಾನ ಸಿಬ್ಬಂದಿಗಳ ಫೇಸ್‌ ಬುಕ್ ಪೋಸ್ಟ್ ಈ ಘಟನೆಯನ್ನ ಸಾರ್ವಜನಿಕರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದೆ.


ದಿನವೂ ಮೇಲ್ದರ್ಜೆಯ ಕ್ಯಾಬಿನ್ ನಲ್ಲಿ ಪ್ರಯಾಣ ಮಾಡುವವರಿಗೆ ಜಾಕ್ ಅವರ ಈ ಸೇವೆ ನಗಣ್ಯ ಇರಬಹುದು. ಆದರೆ ಇನ್ನೊಬ್ಬರ ಸಣ್ಣಪುಟ್ಟ ಕನಸುಗಳಿಗೆ ಬೆನ್ನೆಲುಬಾಗಿ ಅದನ್ನು ಸಾಕಾರಗೊಳಿಸುವುದರಲ್ಲಿ ಇರುವ ಮಾನವೀಯ ಸ್ಪರ್ಶ ಇಂದು ಎಲ್ಲೆಡೆ ಅತ್ಯಗತ್ಯವಾಗಿದೆ. ಜಾಕ್ ನಂತವರ ಸಂಖ್ಯೆ ಸಾಸಿರವಾಗಲಿ, ವೈಲೆಟ್ ನಂತವರ ಕಣ್ಣುಗಳಲ್ಲಿ ಕನಸು, ಭರವಸೆ, ಜಗತ್ತಿನ ಕುರಿತ ಪ್ರೀತಿ ಸದಾ ಜಿನುಗುತ್ತಿರಲಿ. ಜಗತ್ತಿಗೆ ಬೆಳಕಾಗಲು ಸಾಧ್ಯವಾಗದಿದ್ದರೂ, ಕತ್ತಲೆ ಕಳೆವ ಸಣ್ಣ ಹಣತೆಯಾದರೂ ಆಗೋಣ.


ನಿಮ್ಮ ಬಳಿಯೂ ಆಸಕ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೇಸ್‌ಬುಕ್‌ ಹಾಗೂ ಟ್ವಿಟರ್‌ ನಲ್ಲಿ ಫಾಲೊ ಮಾಡಿ.



Share on
close