ರಕ್ತದಾನ ಮಾಡಲು 500 ಕಿ.ಮೀ ಪ್ರಯಾಣಿಸಿದ ದಿಲೀಪ್ ಬಾರಿಕ್

ಅಪರೂಪದವಾದ ಬಾಂಬೆ ಎ + ರಕ್ತದ ಅವಶ್ಯಕತೆ ಇದ್ದ ಆಗಷ್ಟೇ ಹರಿಗೆಯಾಗಿದ್ದ ತಾಯಿಯ ಜೀವ ಉಳಿಸಲು ದಿಲೀಪ್ ಬಾರಿಕ್ ರೂರ್ಕೆಲಾದಿಂದ ಒಡಿಶಾದ ಬೆರ್ಹಾಂಪುರಕ್ಕೆ ಪ್ರಯಾಣ ಬೆಳೆಸಿದ್ದಾರೆ.

ರಕ್ತದಾನ ಮಾಡಲು 500 ಕಿ.ಮೀ ಪ್ರಯಾಣಿಸಿದ ದಿಲೀಪ್ ಬಾರಿಕ್

Friday October 25, 2019,

2 min Read

ರಕ್ತದಾನವನ್ನು ಸಾಮಾನ್ಯವಾಗಿ ದಯೆಯ ಉದಾತ್ತ ಕಾರ್ಯವೆಂದು ಪರಿಗಣಿಸಲಾಗುತ್ತದೆ ಮತ್ತು ಭಾರತದಲ್ಲಿ ಜೀವ ಉಳಿಸಲು ಪ್ರತಿದಿನ ಸಾವಿರಾರು ಜನರು ಮುಂದೆ ಬರುತ್ತಾರೆ. ಅಲ್ಲದೆ, ಕೆಲವೊಮ್ಮೆ, ಈ ಮೂಲಭೂತ ಆರೋಗ್ಯ ರಕ್ಷಣೆಯ ಅಗತ್ಯಕ್ಕಾಗಿ ಕೆಲವರು ಒಂದು ಹೆಜ್ಜೆ ಮುಂದೆ ಹೋಗುತ್ತಾರೆ. ಒಂದು ಉದಾಹರಣೆಗೆ - ರೂರ್ಕೆಲಾ ಮೂಲದ ದಿಲೀಪ್ ಬಾರಿಕ್ ಇತ್ತೀಚೆಗೆ ಒಡಿಶಾದ ಬೆರ್ಹಾಂಪುರ ನಗರಕ್ಕೆ 500 ಕಿಲೋಮೀಟರ್ ಪ್ರಯಾಣಿಸಿ ತಮ್ಮ ರಕ್ತವನ್ನು ದಾನ ಮಾಡಿ, ಒಂದು ತಾಯಿಯ ಜೀವವನ್ನು ಉಳಿಸಿದ್ದಾರೆ.


ರಕ್ತದಾನದ ಅಸಾಮಾನ್ಯ ಸಂದರ್ಭ ಬಂದಿದ್ದು ಸಬಿತಾ ರೈತಾ ಎಂಬ ಮಹಿಳೆಗೆ. ಅವರು ಅಪರೂಪದ ರಕ್ತ ಗುಂಪು ‘ಬಾಂಬೆ ಎ +ʼ ಅನ್ನು ಹೊಂದಿದ್ದರು. ಒಡಿಶಾದ ಗಂಜಾಂ ಜಿಲ್ಲೆಯ ಮಂದಸಿಂಗಿ ಗ್ರಾಮದ ಬುಡಕಟ್ಟು ನಿವಾಸಿ ಸಬಿತಾ ಅವರು ಇತ್ತೀಚೆಗೆ ಸಿಸೇರಿಯನ್ ಮೂಲಕ ಎಂಕೆಸಿಜಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.


ಡಾ. ರಶ್ಮಿತಾ ಪಾನಿಗ್ರಾಹಿ ಅವರೊಂದಿಗೆ ದಿಲೀಪ್ ಬಾರಿಕ್ (ಚಿತ್ರ ಕೃಪೆ: ಒರಿಸ್ಸಾ ಪೋಸ್ಟ್)




ದಿ ಹಿಂದೂ ವರದಿಯ ಪ್ರಕಾರ, ಹೆರಿಗೆಯ ನಂತರ ಸಬಿತಾ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು, ಅಧಿಕ ರಕ್ತದ ನಷ್ಟ ಮತ್ತು ಕಡಿಮೆ ಹಿಮೋಗ್ಲೋಬಿನ್ ಮಟ್ಟದಿಂದಾಗಿ ಅವರ ಸ್ಥಿತಿ ಹದಗೆಟ್ಟಿದೆ ಎಂದು ವೈದ್ಯರು ಹೇಳಿದ್ದರು. ಏತನ್ಮಧ್ಯೆ, ನವಜಾತ ಶಿಶುವನ್ನು ಹತ್ತಿರದ ವಿಶೇಷ ಆರೈಕೆ ಘಟಕಕ್ಕೆ ದಾಖಲಿಸಲಾಯಿತು, ಅಲ್ಲಿ ಆ ಮಗುವಿನ ತೂಕವು ಸಾಮಾನ್ಯ ಮಗುವಿನ ತೂಕಕ್ಕಿಂತ ಕಡಿಮೆ ಇದೆ ಎಂದು ತಿಳಿದುಬಂದಿದೆ.


ಸಬಿತಾ ಚಿಕಿತ್ಸೆಯನ್ನು ಪ್ರಾರಂಭಿಸುವಾಗ ವೈದ್ಯರಿಗೆ ಆಕೆಯು ಅಪರೂಪದ ರಕ್ತದ ಗುಂಪನ್ನು ಹೊಂದಿದ್ದಾರೆಂದು ತಿಳಿಯಿತು (ಇದನ್ನು ಮೊದಲು ಮುಂಬೈನಲ್ಲಿ ಕಂಡುಹಿಡಿಯಲಾಯಿತು, ಆದ್ದರಿಂದ ಈ ಹೆಸರು ಬಂದಿದೆ). ರಕ್ತದ ಗುಂಪಿನ ವಿಪರೀತ ವಿರಳತೆಯಿಂದಾಗಿ ಸುತ್ತಮುತ್ತಲಿನ ದಾನಿಗಳು ರಕ್ತ ನೀಡಲು ನಿರಾಕರಿಸಿದರು. ಆದ್ದರಿಂದ ಆಸ್ಪತ್ರೆಯ ಬ್ಲಡ್ ಬ್ಯಾಂಕ್‌ನ ಉಸ್ತುವಾರಿ ಡಾ.ರಶ್ಮಿತಾ ಪಾನಿಗ್ರಾಹಿ ಅವರು ದಾನಿಗಳನ್ನು ಹುಡುಕಾಡಲು ನಿರ್ಧರಿಸಿದರು.


ಹಲವಾರು ಬ್ಲಡ್ ಬ್ಯಾಂಕ್ ಗಳನ್ನು ವಿಚಾರಿಸಿದರು ರಶ್ಮಿತಾಗೆ ಎಲ್ಲಿಯೂ ರಕ್ತ ಲಭಿಸಲಿಲ್ಲ. ಆದರೂ ಎದೆಗುಂದದೆ ಸಾಮಾಜಿಕ ಜಾಲತಾಣಗಳಾದ ವ್ಯಾಟ್ಸಪ್, ಫೇಸ್ ಬುಕ್ ಮುಂತಾದೆಡೆ ಸಾಬೀತಾಗೆ ಮತ್ತು ತನಗೆ ಸಹಾಯ ಕೋರಿ ಮೆಸೇಜ್ಗಳನ್ನ ಹರಿದುಬಿಟ್ಟರು.


ಅಂತಿಮವಾಗಿ, ಭುವನೇಶ್ವರ ಮೂಲದ ಬ್ಲಡ್ ಬ್ಯಾಂಕ್ ಸದಸ್ಯ ದಿಲೀಪ್ ಪ್ರತಿಕ್ರಿಯಿಸಿ ಬೆರ್ಹಾಂಪುರಕ್ಕೆ ಧಾವಿಸಿದರು. ಶನಿವಾರ ಆಸ್ಪತ್ರೆಗೆ ತಲುಪಿದ ಅವರು ತಮ್ಮ ರಕ್ತವನ್ನು ದಾನ ಮಾಡಿದರು, ಅದನ್ನು ತಕ್ಷಣ ಸಬಿತಾಗೆ ಚಿಕಿತ್ಸೆ ನೀಡಲು ಬಳಸಲಾಯಿತು. ಆಸ್ಪತ್ರೆಯ ಅಧಿಕಾರಿಗಳ ಪ್ರಕಾರ, ತಾಯಿ ಮತ್ತು ಮಗುವಿನ ಆರೋಗ್ಯವು ಸ್ಥಿರವಾಗಿದೆ.


ಅವರ ಗೆಸ್ಚರ್ ಬಗ್ಗೆ ಒಡಿಶಾ ಪೋಸ್ಟ್ ಜೊತೆ ಮಾತನಾಡಿದ ದಿಲೀಪ್-ಭಾರತದಲ್ಲಿ ಈ ವಿಶೇಷವಾದ ರಕ್ತ ಗುಂಪು ಹೊಂದಿರುವ 2,50,000 ಜನರಲ್ಲಿ ನಾನು ಒಬ್ಬ ಅಪರೂಪದವನು, ಎಂದರು.


“ರಕ್ತದಾನ ಮಾಡುವ ಮೂಲಕ ಇನ್ನೊಬ್ಬರ ಜೀವವನ್ನು ಉಳಿಸಿದ್ದು ನನಗೆ ನಿಜವಾಗಿಯೂ ಸಂತೋಷವಾಗಿದೆ” ಎಂದರು.


ನಿಮ್ಮ ಬಳಿಯೂ ಸ್ಪೂರ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೆಸ್‌ಬುಕ್‌ ಹಾಗೂ ಟ್ವಿಟರ್‌ ನಲ್ಲಿ ಫಾಲೊ ಮಾಡಿ.