ಭಾರತದ ಕಿರಿಯ ನ್ಯಾಯಾಧೀಶರಾಗಿ ನೇಮಕಗೊಳ್ಳಲು ಸಜ್ಜಾದ 21 ವರ್ಷದ ಯುವಕ

ಜೈಪುರದ ಯುವಕನಾದ ಮಾಯಾಂಕ್ ಪ್ರತಾಪ ಸಿಂಗ್ 21ನೇ ವಯಸ್ಸಿನಲ್ಲಿ ರಾಜಸ್ಥಾನ ನ್ಯಾಯಾಂಗ ಸೇವೆಯ 2018 ರ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ದೇಶದ ಅತ್ಯಂತ ಕಿರಿಯ ನ್ಯಾಯಾಧೀಶರಾಗಿ ಇತಿಹಾಸ ನಿರ್ಮಿಸಿದ್ದಾರೆ.

ಭಾರತದ ಕಿರಿಯ ನ್ಯಾಯಾಧೀಶರಾಗಿ ನೇಮಕಗೊಳ್ಳಲು ಸಜ್ಜಾದ 21 ವರ್ಷದ ಯುವಕ

Friday November 22, 2019,

1 min Read

ಮಯಾಂಕ್ ಪ್ರತಾಪ ಸಿಂಗ (ಚಿತ್ರ ಕೃಪೆ: ಎ ಎನ್‌ ಐ)



ಜೈಪುರ ನಿವಾಸಿಯಾದ ಮಾಯಾಂಕ್ ಪ್ರತಾಪ ಸಿಂಗ ಅವರು ಕೇವಲ 21 ವರ್ಷ ವಯಸ್ಸಿನಲ್ಲೇ ರಾಜಸ್ಥಾನ ನ್ಯಾಯಾಂಗ ಸೇವೆಗಳ 2018 ರ ಪರೀಕ್ಷೆಯಲ್ಲಿ ಉತ್ತಿರ್ಣವಾಗಿ ಇತಿಹಾಸ ನಿರ್ಮಿಸಿದ್ದಾರೆ.


"ಸಮಾಜದಲ್ಲಿ ನ್ಯಾಯಾಧೀಶರಿಗೆ ನೀಡುವ ಗೌರವ ಮತ್ತು ಪ್ರಾಮುಖ್ಯತೆಯಿಂದ ನಾನು ಯಾವಾಗಲೂ ನ್ಯಾಯಾಂಗದತ್ತ ಆಕರ್ಷಿತನಾಗಿದ್ದೆ, ಮತ್ತು 2014 ರಲ್ಲಿ ರಾಜಸ್ಥಾನದ ವಿಶ್ವವಿದ್ಯಾಲಯದ ಐದು ವರ್ಷಗಳ ಎಲ್ ಎಲ್ ಬಿ ಪದವಿಗೆ ಪ್ರವೇಶ ಪಡೆದು, 2019ರಲ್ಲಿ ಪದವಿಯನ್ನು ಪೂರ್ಣಗೊಳಿಸಿದೆ" ಎಂದು ಸಿಂಗ್ ಎಎನ್‌ಐ ಗೆ ತಿಳಿಸಿದರು.

ನ್ಯಾಯಾಂಗದಲ್ಲಿ ಸೇವೆ ಸಲ್ಲಿಸುವುದಕ್ಕೆ ಮೊದಲಿದ್ದ 23 ವರ್ಷದ ವಯೋಮಿತಿಯನ್ನು ರಾಜಸ್ತಾನ ಸರ್ಕಾರವು 2019 ರಲ್ಲಿ 21ಕ್ಕೆ ಇಳಿಸಿತು. ಬಿಸಿನೆಸ್ ಇನ್ಸೈಡರ್ ನ ವರದಿಯ ಪ್ರಕಾರ ಭಾರತದ 27 ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ 28 ಮಿಲಿಯನ್ ಪ್ರಕರಣಗಳು ಬಾಕಿ ಉಳಿದಿವೆ ಇದಕ್ಕೆ ಕಾರಣ ಶೇಕಡಾ 25% ರಷ್ಟು ಹುದ್ದೆಗಳು ನ್ಯಾಯಾಂಗದಲ್ಲಿ ಖಾಲಿ ಇರುವುದು.


ಮುಂದುವರೆದು ಮಾತನಾಡುತ್ತಾ ಮಯಾಂಕ್‌,

"ಸರಕಾರದ ಈ ನಡೆಯು ನ್ಯಾಯಾಂಗದಲ್ಲಿನ ಖಾಲಿ ಇರುವ ಹುದ್ದೆಗಳನ್ನು ತುಂಬಲು ಸಹಾಯವಾಗುತ್ತದೆ ಮತ್ತು ನನ್ನ ವೃತ್ತಿಜೀವನದಲ್ಲಿ ತುಂಬಾ ಜನರಿಗೆ ಸಹಾಯ ಮಾಡುವ ಅವಕಾಶ ಸಿಗುತ್ತದೆ," ಎಂದು ಹೇಳಿದರು.


ಅಷ್ಟೇ ಅಲ್ಲದೆ, "ನನ್ನ ಯಶಸ್ಸಿನಿಂದ ನಾನು ಉತ್ಸುಕನಾಗಿದ್ದೇನೆ. ನನ್ನ ಕುಟುಂಬ, ಶಿಕ್ಷಕರು ಮತ್ತು ಎಲ್ಲಾ ಹಿತೈಷಿಗಳ ಕೊಡುಗೆಗಾಗಿ ನಾನು ಧನ್ಯವಾದ ಸಲ್ಲಿಸುತ್ತೇನೆ. ಇವರ ಸಹಕಾರವೇ ಮೊದಲ ಪ್ರಯತ್ನದಲ್ಲಿ ಪರೀಕ್ಷೆ ಪಾಸಾಗಲು ನನಗೆ ಸಹಾಯ ಮಾಡಿದೆ" ಎಂದು ಅವರು ಹೇಳಿದರು.


"ಕನಿಷ್ಠ ವಯೋಮಿತಿಯನ್ನು ಕಡಿತಗೊಳಿಸಿದ್ದರಿಂದ ನನಗೆ ಪರೀಕ್ಷೆಗೆ ಹಾಜರಾಗಲು ಸಾಧ್ಯವಾಯಿತು. ಹಾಗಾಗದೆ ಇದ್ದಲ್ಲಿ ನಾನು ಅರ್ಹನಾಗಿರುತ್ತಿರಲಿಲ್ಲ. ಇದು ನನಗೆ ಉಪಯುಕ್ತವಾಗಿದೆ ಎಂದು ನಾನು ಭಾವಿಸುತ್ತೇನೆ ಏಕೆಂದರೆ ಈಗ ನಾನು ಕಲಿಯಲು, ಹೆಚ್ಚಿನ ಕೆಲಸ ಮಾಡಲು ಮತ್ತು ಹೆಚ್ಚು ಜನರ ಸೇವೆ ಮಾಡಲು ದೀರ್ಘ ಸಮಯ ಸಿಗುತ್ತದೆ," ಎಂದು ಎಎನ್‌ಐ ಜೊತೆ ಹಂಚಿಕೊಂಡರು.

ನಿಮ್ಮ ಬಳಿಯೂ ಆಸಕ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೆಸ್‌ಬುಕ್‌ ಹಾಗೂ ಟ್ವಿಟರ್‌ ನಲ್ಲಿ ಫಾಲೊ ಮಾಡಿ.