Brands
Discover
Events
Newsletter
More

Follow Us

twitterfacebookinstagramyoutube
Youtstory

Brands

Resources

Stories

General

In-Depth

Announcement

Reports

News

Funding

Startup Sectors

Women in tech

Sportstech

Agritech

E-Commerce

Education

Lifestyle

Entertainment

Art & Culture

Travel & Leisure

Curtain Raiser

Wine and Food

YSTV

ADVERTISEMENT
Advertise with us

3,000 ಕ್ಕೂ ಹೆಚ್ಚು ಮೃತ ದೇಹಗಳಿಗೆ ಅಂತ್ಯ ಸಂಸ್ಕಾರ ಮಾಡಿದ ಕೇರಳದ ಅಬ್ದುಲ್

ಕಳೆದ 36 ವರ್ಷಗಳಿಂದ, ಅಬ್ದುಲ್ ಅಜೀಜ್ ಮದಥಿಲ್ ಅವರು ಕೇರಳದಾದ್ಯಂತ ಅಪಘಾತದ ಸ್ಥಳಗಳು, ಆತ್ಮಹತ್ಯೆ ತಾಣಗಳು, ನದಿಗಳು ಮತ್ತು ರಸ್ತೆಗಳಿಂದ 3,000 ಕ್ಕೂ ಹೆಚ್ಚು ಮೃತ ದೇಹಗಳನ್ನು ಹೊರತೆಗೆದು ಅಂತ್ಯಸಂಸ್ಕಾರ ನಡೆಸಿದ್ದಾರೆ.

3,000 ಕ್ಕೂ ಹೆಚ್ಚು ಮೃತ ದೇಹಗಳಿಗೆ ಅಂತ್ಯ ಸಂಸ್ಕಾರ ಮಾಡಿದ ಕೇರಳದ ಅಬ್ದುಲ್

Thursday November 14, 2019 , 2 min Read

ಪ್ರೀತಿಪಾತ್ರರ ಮರಣವು ಕುಟುಂಬ ಮತ್ತು ಸ್ನೇಹಿತರ ಮೇಲೆ ಅಳಿಸಲಾಗದ ನೋವುಂಟು ಮಾಡುತ್ತದೆ. ನೈಸರ್ಗಿಕ ಸಾವು ಅಥವಾ ಅಪಘಾತದಿಂದ ಉಂಟಾದ ಸಾವು ಯಾವುದೇ ಆಗಿರಲಿ, ಇಲ್ಲಿ ದುಃಖಕ್ಕೆ ಅಂತ್ಯವಿಲ್ಲ, ಆದರೆ ತಮ್ಮವರ ಮೃತದೇಹವನ್ನು ಗುರುತಿಸುವುದು ಕಷ್ಟವಾದಾಗ, ಸತ್ತವರ ಕುಟುಂಬಗಳು ಇನ್ನಷ್ಟು ಆಘಾತಕ್ಕೆ ಒಳಗಾಗುತ್ತವೆ.


ನೈಸರ್ಗಿಕ ವಿಪತ್ತುಗಳು ಅಥವಾ ಅಪಘಾತಗಳ ಸಮಯದಲ್ಲಿ, ಮೃತದೇಹವನ್ನು ಗುರುತಿಸಲು ಅಥವಾ ದೇಹಗಳನ್ನು ಹಿಂಪಡೆಯಲು ಉಂಟಾಗುವ ತೊಂದರೆಯಿಂದಾಗಿ ಮೃತ ವ್ಯಕ್ತಿಯ ದೇಹವನ್ನು ಆ ಸ್ಥಳದಲ್ಲಿಯೇ ಬಿಡಲಾಗಿದೆ ಎಂದು ವರದಿಗಳು ಸೂಚಿಸುತ್ತವೆ.


ಆದರೆ ಕೇರಳದ ಅಬ್ದುಲ್ ಅಜೀಜ್ ಮದಥಿಲ್ ಅಂಥವರ ರಕ್ಷಣೆಗೆ ಬಂದಿದ್ದಾರೆ. ಅವರು ಕಳೆದ 36 ವರ್ಷಗಳಿಂದ ಅಪಘಾತದ ಸ್ಥಳಗಳಿಂದ ಶವಗಳನ್ನು ಪಡೆದು ಅಂತ್ಯ ಸಂಸ್ಕಾರಗಳನ್ನು ನಡೆಸುತ್ತಿದ್ದಾರೆ.


ಅಬ್ದುಲ್ ಅಜೀಜ್ ಮದಥಿಲ್ (ಚಿತ್ರಕೃಪೆ: ದಿ ಹಿಂದೂ)




ಒಂದು ಸರಕಾರೇತರ ಸಂಘದ ಸ್ವಯಂಸೇವಕರು ಮತ್ತು ಒಲವಣ್ಣ ಗ್ರಾಮ ಪಂಚಾಯತ್ ಸದಸ್ಯರಾಗಿದ್ದ ಅವರು ಅಪಘಾತದ ಸ್ಥಳಗಳು, ಆತ್ಮಹತ್ಯೆ ತಾಣಗಳು, ನದಿಗಳು ಮತ್ತು ರಸ್ತೆಗಳಿಂದ ಮೃತ ದೇಹಗಳನ್ನು ಹೊರತೆಗೆದು ಮೃತ ವ್ಯಕ್ತಿಯ ಅಂತ್ಯ ಸಂಸ್ಕಾರವನ್ನು ನಡೆಸುತ್ತಾರೆ. ಇದಲ್ಲದೆ, ಹೆಚ್ಚಿನ ಜನರು ನಿರ್ಲಕ್ಷಿಸಿದಾಗ ಮೃತ ದೇಹಗಳನ್ನು ಸ್ವಚ್ಛಗೊಳಿಸುತ್ತಾರೆ. ಇಂದು ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವಲ್ಲಿ ಅಬ್ದುಲ್ ಅಜೀಜ್ ಮದಥಿಲ್ ಅವರು ಕೈಗೊಂಡ ವಿನೂತನ ಕ್ರಮವಾಗಿದೆ.


ಇಲ್ಲಿಯವರೆಗೆ, ಅಬ್ದುಲ್ ಶವಪರೀಕ್ಷೆಗಾಗಿ ಕೇರಳದಾದ್ಯಂತ 3,000 ಮೃತ ದೇಹಗಳನ್ನು ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಅಬ್ದುಲ್ ತಮ್ಮ 17 ನೇ ವಯಸ್ಸಿನಿಂದಲೂ ಈ ಉದಾತ್ತ ಕ್ರಿಯೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇವರ ಈ ಕೆಲಸವೇ ರಜಾಕ್ ಕಲ್ಲೇರಿ ಅವರು ಬರೆದ ದೈವಂ ಪರಂಜಿತ್ತನು (ಇದರರ್ಥ ದೇವರು ನನ್ನನ್ನು ಕೇಳಿದ ಕಾರಣ) ಎಂಬ ಹೆಸರಿನ ಪುಸ್ತಕದ ಮೂಲಕ ಇನಷ್ಟು ಜನರಿಗೆ ತಲುಪಲು ಕಾರಣವಾಯಿತು.


1983 ರಲ್ಲಿ ಅಬ್ದುಲ್ ಕೇವಲ 17 ವರ್ಷ ವಯಸ್ಸಿನವನಾಗಿದ್ದರು. ನದಿಗೆ ಬಿದ್ದ ಮೂರು ವರ್ಷದ ಮಗುವನ್ನು ಅಬ್ದುಲ್ ರಕ್ಷಿಸಿದರು. ದುರದೃಷ್ಟವಶಾತ್, ಮಗು ಅವರ ತೋಳುಗಳಲ್ಲಿಯೇ ಕೊನೆಯುಸಿರೆಳೆಯಿತು, ಆದರೆ ಮಗುವನ್ನು ಉಳಿಸಲು ಪ್ರಯತ್ನಿಸಿದ ಅಬ್ದುಲ್ ಮತ್ತು ಅವರ ಸ್ನೇಹಿತರ ಪ್ರಯತ್ನವನ್ನು ಗ್ರಾಮಸ್ಥರು ಶ್ಲಾಘಿಸಿದರು.


ದಿ ನ್ಯೂಸ್ ಮಿನಿಟ್ ಜೊತೆ ಮಾತನಾಡಿದ ಅಬ್ದುಲ್, “ನಾನು ಹಲವಾರು ಮೃತ ದೇಹಗಳಿಗೆ ಅಂತ್ಯಸಂಸ್ಕಾರ ಮಾಡಿದ್ದೇನೆ, ಕೆಲವೊಮ್ಮೆ ಕೊಳೆತುಹೋದ ಸ್ಥಿತಿಯಲ್ಲಿ ಇನ್ನು ಕೆಲವೊಮ್ಮೆ ಅವು ತುಂಬಾ ದಿನಗಳಿಂದಲೂ ಅಲ್ಲೇ ಇದ್ದು ಹುಳ ಹತ್ತಿದಾಗಲೂ ನನ್ನ ಕೈಗಳಿಂದಲೇ ಅಂತ್ಯಕ್ರೀಯೆ ಮಾಡಿದ್ದೇನೆ. ಆರಂಭದಲ್ಲಿ ನಾನು ನನ್ನ ಬರಿಯ ಕೈಗಳಿಂದ ಅವುಗಳನ್ನು ಮುಟ್ಟುವಾಗ ಹಿಂಜರಿಯುತ್ತಿದ್ದೆ, ಆದರೆ ನಂತರ, ಯಾರಾದರೂ ಇದನ್ನು ಮಾಡಬೇಕು ಎಂದು ನಾನು ಅರಿತುಕೊಂಡೆ”.


ರಕ್ಷಣಾ ಕಾರ್ಯದಲ್ಲಿ ತೊಡಗಿರುವ ಅಬ್ದುಲ್ ಅವರ ಸುತ್ತ ನಿಂತು ಕೇವಲ ವೀಕ್ಷಿಸುತ್ತಿರುವ ಜನರು (ಚಿತ್ರ ಕೃಪೆ: ದಿ ನ್ಯೂಸ್ ಮಿನಿಟ್)


ಅಬ್ದುಲ್ ಪ್ರಕಾರ, ನದಿಗಳು ಅಥವಾ ಕೊಳಗಳಲ್ಲಿ ಕಂಡುಬರುವ ಹಳೆಯ ಶವಗಳು ಭಾಗಶಃ ಕೊಳೆಯುತ್ತವೆ. ಕೆಲವೊಮ್ಮೆ ಇದು ಪುರುಷ ಅಥವಾ ಮಹಿಳೆ ಎಂದು ಗುರುತಿಸುವುದು ಸಹ ಕಷ್ಟ ಆದರೆ ಅಬ್ದುಲ್ ತಮ್ಮ ಕೆಲಸವನ್ನು ಮಾಡಲು ಮುಂದಾಗುತ್ತಿದ್ದಂತೆ, ಈ ಕಾರ್ಯಾಚರಣೆಯನ್ನು ವೀಕ್ಷಿಸಲು ಸುತ್ತಲೂ ಜನರು ಸೇರುತ್ತಿದ್ದರು. ದುರಂತವೆಂದರೆ ಅವರಿಗೆ ಸಹಾಯ ಮಾಡಲು ಯಾರು ಮುಂದಾಗುತ್ತಿರಲಿಲ್ಲ.


ಅಬ್ದುಲ್ ಹೇಳುವಂತೆ “ನಾವು ಅವರನ್ನು ದೂಷಿಸಲು ಸಾಧ್ಯವಿಲ್ಲ, ಜನರು ಅಂತಹ ದೇಹಗಳನ್ನು ನೋಡಿ ಅಸಹ್ಯಪಡುತ್ತಾರೆ. ಆದರೆ ಆ ಸ್ಥಳದಲ್ಲಿ ನಾನು ಮೃತ ದೇಹಗಳಿಗೆ ಅಗೌರವ ತೋರಿಸಲು ಸಾಧ್ಯವಿಲ್ಲ” ಎನ್ನುತ್ತಾರೆ ಅಬ್ದುಲ್, ವರದಿ ದಿ ನ್ಯೂಸ್ ಮಿನಿಟ್.


ಈಗ, ಅಬ್ದುಲ್ ಅವರ ಸಂಪರ್ಕ ಸಂಖ್ಯೆ ಕೇರಳದಾದ್ಯಂತ ಪೊಲೀಸ್, ಆಂಬ್ಯುಲೆನ್ಸ್, ಸ್ಥಳೀಯರು ಮತ್ತು ಎನ್‌ಜಿಒಗಳ ಸ್ಪೀಡ್ ಡಯಲ್‌ನಲ್ಲಿದೆ. ಗುತ್ತಿಗೆದಾರನಾಗಿ ಕೆಲಸ ಮಾಡುವ ಅಬ್ದುಲ್, ತಮ್ಮ ರಕ್ಷಣಾ ಕಾರ್ಯಾಚರಣೆಗೆ ಯಾವುದೇ ಹಣವನ್ನು ತೆಗೆದುಕೊಳ್ಳುವುದಿಲ್ಲ, ಮತ್ತು ಎಲ್ಲಾ ವೆಚ್ಚವನ್ನು ಸ್ವತಃ ತಾವೇ ಭರಿಸುತ್ತಾರೆ.


ಅಬ್ದುಲ್ ಹೇಳಿದಂತೆ,


“ಇದು ನನ್ನ ಜೀವನದ ಒಂದು ಮಿಷನ್. ಮಾರಣಾಂತಿಕ ಸಂದರ್ಭಗಳಲ್ಲಿ ಜನರಿಗೆ ಸಹಾಯ ಮಾಡುವುದಕ್ಕಿಂತ ಯಾವುದೇ ಕೆಲಸ ಅಥವಾ ಕುಟುಂಬದ ಕಾರ್ಯವು ಮುಖ್ಯವಲ್ಲ” ವರದಿ ದಿ ಹಿಂದೂ.

ನಿಮ್ಮ ಬಳಿಯೂ ಆಸಕ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೆಸ್‌ಬುಕ್‌ ಹಾಗೂ ಟ್ವಿಟರ್‌ ನಲ್ಲಿ ಫಾಲೊ ಮಾಡಿ.