53 ವರ್ಷದ ಕೇರಳದ ಈ ಸಾಮಾಜಿಕ ಉದ್ಯಮಿ ಅನಾರೋಗ್ಯದಿಂದ ಬಳಲುವ ಜನರಿಗೆ ಗಿಡಗಳನ್ನು ಬಳಸಿ ಪರಿಹಾರ ನೀಡುತ್ತಿದ್ದಾರೆ

ತಮ್ಮ ಯೋಜನೆ ಆರಂಭಿಸಿದ ಐದು ತಿಂಗಳಲ್ಲಿ ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದ ಹಲವು ಜನರಿಗೆ ಸಹಾಯ ಮಾಡಿದ್ದಾರೆ‌. ಉಸಿರಾಟದ ತೊಂದರೆಗಳನ್ನು ಎದುರಿಸುವ ಸಲುವಾಗಿ ಒಳಾಂಗಣ ಉದ್ಯಾನವನ್ನು ಬೆಳೆಸಿದ್ದಾರೆ.

53 ವರ್ಷದ ಕೇರಳದ ಈ ಸಾಮಾಜಿಕ ಉದ್ಯಮಿ ಅನಾರೋಗ್ಯದಿಂದ ಬಳಲುವ ಜನರಿಗೆ ಗಿಡಗಳನ್ನು ಬಳಸಿ ಪರಿಹಾರ ನೀಡುತ್ತಿದ್ದಾರೆ

Tuesday July 30, 2019,

2 min Read

ಕಣ್ಣುಗಳನ್ನು ಮುಚ್ಚಿಕೊಳ್ಳಿ. ಹಚ್ಚ ಹಸುರಿನ ಕಾಡನ್ನ ಕಲ್ಪಿಸಿಕೊಳ್ಳಿ. ಸಸ್ಯಗಳ ಸುತ್ತಲೂ ಇರುವುದು ನಮ್ಮ ಮಾನಸಿಕ ಆರೋಗ್ಯ ಮತ್ತು ಯೋಗಕ್ಷೇಮದಲ್ಲಿ ಭಾರಿ ಬದಲಾವಣೆಯನ್ನು ತರಬಹುದು ಎಂದು ಅಧ್ಯಯನಗಳು ಹೇಳುತ್ತವೆ. ಅಷ್ಟೇ ಅಲ್ಲ, ಸಸ್ಯಗಳು ದೈಹಿಕ ಗಾಯಗಳನ್ನು ಮತ್ತು ರೋಗಗಳನ್ನು ಗುಣಪಡಿಸುತ್ತವೆ.


ಕ

ಸುಮಾ ಮಂಜಿಲ್, ಮೂಲ: ದಿ ನ್ಯೂಸ್ ಮಿನಿಟ್


ಉಸಿರಾಟದ ತೊಂದರೆಗಳನ್ನು ಎದುರಿಸುವ ಸಲುವಾಗಿ 53 ವರ್ಷದ ಈ ಸಾಮಾಜಿಕ ಉದ್ಯಮಿ ಜನಗಳಿಗೆ ತಮ್ಮ ಮನೆಯೊಳಗೆ ಹಾಗೂ ಹೊರಗೆ ಉದ್ಯಾನವನ್ನು ಬೆಳೆಸಲು, ಹಸಿರಿನ ಪದರವನ್ನು ನಿರ್ಮಿಸಲು ಸಹಾಯ ಮಾಡುತ್ತಿದ್ದಾರೆ. ಒಳಾಂಗಣ ಉದ್ಯಾನವನ್ನು ಬೆಳೆಸಲು ಇವರು ಮಾಲಿನ್ಯಕಾರಕಗಳಿಗೆ ಬಲೆ ಹಾಕಬಲ್ಲ ಗಿಡಗಳನ್ನೆ ಅಯ್ದುಕೊಳ್ಳುತ್ತಾರೆ.


ದಿ ನ್ಯೂಸ್ ಮಿನಿಟ್ ನೊಂದಿಗೆ ಮಾತನಾಡುತ್ತಾ ಅವರು,


"ನಗರದಲ್ಲಿನ ಮಾಲಿನ್ಯದ ಬಗ್ಗೆ ನಾನು ಯಾವಾಗಲೂ ಕಾಳಜಿ ವಹಿಸುತ್ತೇನೆ. ಕೊಚ್ಚಿಯಲ್ಲಿ ಮೆಟ್ರೋ ಪ್ರಾರಂಭವಾದಾಗ ನನ್ನನ್ನು ಸೇರಿಸಿ ಹಲವಾರು ಜನ ಉಸಿರಾಟದ ತೊಂದರೆಗೆ ಒಳಗಾದರು. ನನ್ನ ಪೋಷಕರ ಸಾವಿನ ನಂತರ ನಾನು ಅವರ ಮನೆಯನ್ನು ಒಳಾಂಗಣ ಉದ್ಯಾನವಾಗಿ ಬದಲಾಯಿಸಿದೆ."


ಪ್ಲಾಸ್ಟಿಕ್ ಮಡಿಕೆಗಳ ಬದಲು ಬಳಸಿದ ಬಿಯರ್ ಬಾಟಲಿ ಹಾಗೂ ಸೆರಾಮಿಕ್ ಪಾತ್ರೆಗಳನ್ನು ಉಪಯೋಸುತ್ತಾರೆ ಸುಮ.


ಕ

ಬಳಸಿದ ಬಟಲ್ ಗಳನ್ನು ಉಪಯೋಗಿಸಿರುವುದು (ಚಿತ್ರ:ದಿ ನ್ಯೂಸ್ ಮಿನಿಟ್)


ಜನವರಿಯಲ್ಲಿ ಪ್ರಾರಂಭವಾದ ಇವರ ಯೋಜನೆ ಈಗ ಪ್ರಸಿದ್ಧವಾಗಿದೆ. ಈವರೆಗೆ ವಿವಿಧ ರೀತಿಯ ಹಲವು ರೋಗಿಗಳಿಗೆ ಅವರು ಸಹಾಯ ಮಾಡಿದ್ದಾರೆ. ಅವರು ಚಿಕಿತ್ಸೆ ಕೊಡಿಸುವ ವೆಚ್ಚವನ್ನು ಗಿಡಗಳನ್ನು ಮಾರಿ ಭರಿಸುತ್ತಾರೆ ಎಂದು ಇಂಡಿಯನ್ ವುಮೆನ್ ಬ್ಲಾಗ್ ವರದಿ ಮಾಡಿದೆ.


ಈ ಯೋಜನೆಯನ್ನು ಏಕೆ ಆರಂಭಿಸಿದಿರಿ ಎಂದು ಕೇಳಿದಾಗ, ಸುಮಾ ಹೀಗೆ ಹೇಳಿದರು,

"ಕಳೆದ ಒಂದೂವರೆ ವರ್ಷಗಳಿಂದ ನನ್ನ ತಂದೆ ಬುದ್ಧಿಮಾಂದ್ಯತೆಯಿಂದ ಬಳಲುತ್ತಿದ್ದರು. ಸೆಪ್ಟೆಂಬರ್ ತಿಂಗಳಿನಲ್ಲಿ ಅವರು ತೀರಿಹೋದರು. ನನ್ನ ತಾಯಿ ಕೆಲ ತಿಂಗಳ ಹಿಂದೆ ಪಾರ್ಶ್ವವಾಯುವಿನಿಂದ ತೀರಿಕೊಂಡಿದ್ದರು. ನನ್ನ ಜೀವನದ ಕಷ್ಟದ ಸಮಯವೆಂದರೆ ಅದು ನನ್ನ ತಂದೆ ಬುದ್ಧಿಮಾಂದ್ಯತೆಯಿಂದ ಕುಗ್ಗಿದ ಸಂದರ್ಭ‌. ನಾವು ಚಿಕಿತ್ಸೆಯ ವೆಚ್ಚವನ್ನು ಭರಿಸಬಲ್ಲವರಾಗಿದ್ದರೂ, ಅವರಿಗೆ ಬೇಕಾದ ಸಹಾಯ ಮಾಡುವ ಶಕ್ತಿಯಿದ್ದರೂ ಆ ದಿನಗಳು ಕಷ್ಟದಿಂದಿದ್ದವು. ಆಗ ನನಗೆ ಚಿಕಿತ್ಸೆ ಪಡೆಯಲು ಆಗದ ಜನರ ಬಗ್ಗೆ ಚಿಂತೆ ಬಂತು ಅವರಿಗೆ ಔಷದಿ ಕೊಳ್ಳಲೂ ಶಕ್ತಿಯಿರುವುದಿಲ್ಲ ಹಾಗೂ ಅವರು ಅವುಗಳ ವಿರುದ್ಧ ಸಾಧ್ಯವಾದಷ್ಟು ಮಟ್ಟಿಗೆ ಹೋರಾಡುತ್ತಿದ್ದರು‌‌." ವರದಿ ದಿ ನ್ಯೂಸ್ ಮಿನಿಟ್.