ತಂದೆಯ ಕಿರಾಣಿ ಅಂಗಡಿಯನ್ನು 40 ಕೋಟಿ ವಹಿವಾಟಿನ ‘ಕ್ವಾಲಿಟಿ ಫುಡ್ಸ್' ಬ್ರ್ಯಾಂಡ್ ಆಗಿ ಪರಿವರ್ತಿಸಿದ ಬೆಂಗಳೂರಿನ ಉದ್ಯಮಿ

ಕ್ವಾಲಿಟಿ ಫುಡ್ಸ್ ಪ್ರಧಾನ ಕಛೇರಿ ಬೆಂಗಳೂರಿನ ಚಾಮರಾಜ್‌ಪೇಟೆಯಲ್ಲಿದೆ ಮತ್ತು ಇದನ್ನು 1998 ರಲ್ಲಿ ನರೇಶ್ ಪಗರಿಯಾ ಅವರು ಪ್ರಾರಂಭಿಸಿದರು.

12th Feb 2020
  • +0
Share on
close
  • +0
Share on
close
Share on
close

ಭಾರತೀಯ ಅಡುಗೆಯ ಪದ್ಧತಿಯು ಅದರ ಶ್ರೀಮಂತ ರುಚಿಗೆ ಹೆಸರುವಾಸಿಯಾಗಿದೆ, ಇದು ವಿವಿಧ ರೀತಿಯ ಮಸಾಲೆಗಳಿಂದ ರುಚಿಯನ್ನು ಪಡೆಯುತ್ತದೆ. ಆದರೆ ಮಸಾಲೆಗಳನ್ನು ಬಳಸುವ ಮತ್ತು ಮಾಡುವ ಸಾಂಪ್ರದಾಯಿಕ ವಿಧಾನವು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ.


ವಿಭಿನ್ನ ಮಸಾಲೆಗಳನ್ನು ತಯಾರಿಸಲು ಮಸಾಲೆಗಳನ್ನು ಸರಿಯಾದ ಪ್ರಮಾಣದಲ್ಲಿ ರುಬ್ಬಿ ಬೆರೆಸಬೇಕಾಗುತ್ತದೆ. ಅಲ್ಲದೇ ಮುಂದಿನ ಹಂತವು ಅಡುಗೆಯ ವಿವಿಧ ಹಂತಗಳಲ್ಲಿ ಅವುಗಳನ್ನು ಆಹಾರ ಪದಾರ್ಥಗಳಿಗೆ ಸೇರಿಸುವುದಾಗಿದೆ.


ಇತ್ತೀಚಿನ ದಿನಗಳಲ್ಲಿ, ತ್ವರಿತ ಮಸಾಲೆ ಮಿಶ್ರಣ ಹೆಚ್ಚಿನ ಬಳಕೆಯಲ್ಲಿದೆ. ಈ ಪೂರ್ವತಯಾರಿ ಮಸಾಲೆ ಮಿಶ್ರಣಗಳು ಜನರಿಗೆ ರುಬ್ಬುವ ಮತ್ತು ಮಿಶ್ರಣಗಳನ್ನು ಮಿಕ್ಸ್ ಮಾಡುವುದರಿಂದ ತಪ್ಪಿಸುತ್ತದೆ.


ದೊಡ್ಡ ಕಂಪನಿಗಳಾದ ಎಂಡಿಹೆಚ್, ಎಂಟಿಆರ್ ಮತ್ತು ಎವರೆಸ್ಟ್ ಎಲ್ಲರೂ ಈ ಕ್ಷೇತ್ರದಲ್ಲಿ ಯಶಸ್ವಿಯಾಗಿದ್ದಾರೆ ಮತ್ತು ಮನೆಗಳಲ್ಲಿ ಹೆಸರುವಾಸಿಯಾಗಿದ್ದಾರೆ.


ಇದೇ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಜನರಿಗೆ ಪರಿಚಿತವಲ್ಲದ ಕಥೆಯೆ 40 ಕೋಟಿ ರೂ. ವಹಿವಾಟಿನ ಬೆಂಗಳೂರಿನ ಒಂದು ಕುಟುಂಬ ನಡೆಸುವ ಮಸಾಲೆ ಬ್ರಾಂಡ್ ಕ್ವಾಲಿಟಿ ಫುಡ್ಸ್.


ಪ್ರಾರಂಭ

1960 ರ ದಶಕದ ಉತ್ತರಾರ್ಧದಲ್ಲಿ ಭವರ್ ಲಾಲ್ ಪಗರಿಯಾ ರಾಜಸ್ಥಾನದ ಸೊಜತ್ ಪ್ರದೇಶವನ್ನು ತೊರೆದು ದಕ್ಷಿಣ ಭಾರತದ ಬೆಂಗಳೂರಿಗೆ ತೆರಳಿದಾಗ ಈ ಕಥೆ ಪ್ರಾರಂಭವಾಯಿತು.


ಅವರು ನಗರದಲ್ಲಿ ಮಸಾಲೆಗಳಿಗಾಗಿ ಸಣ್ಣ ಕಿರಾಣಿ ಅಂಗಡಿಯನ್ನು ಪ್ರಾರಂಭಿಸಿದರು ಮತ್ತು ಅದನ್ನು 30 ವರ್ಷಗಳ ಕಾಲ ನಡೆಸಿದರು.


ಆ ವರ್ಷಗಳಲ್ಲಿ, ಅವರ ಮಗ ನರೇಶ್ ತನ್ನ ತಂದೆ ವ್ಯಾಪಾರ ಮಾಡುವುದನ್ನು ನೋಡುತ್ತಿದ್ದರು. ಒಂದು ದಿನ, ಅವರು ತಮ್ಮ ತಂದೆಗೆ ಮಸಾಲೆಯನ್ನು ನಾವೇ ತಯಾರಿಸುವುದು ವ್ಯಾಪಾರಕ್ಕಿಂತ ಉತ್ತಮವಾಗಿರುತ್ತದೆ ಎಂದು ಹೇಳಿದರು.


“ನಾನಿನ್ನೂ ಅಧ್ಯಯನ ಮಾಡುತ್ತಿದ್ದಾಗ, ನಾವು ಆ ಸಣ್ಣ ಅಂಗಡಿಯಲ್ಲಿ ನಾಲ್ಕು ಬಗೆಯ ಮಸಾಲೆಗಳನ್ನು ತಯಾರಿಸಲು ಪ್ರಾರಂಭಿಸಿದೆವು,” ಎಂದು ನರೇಶ್ ಹೇಳುತ್ತಾರೆ.


ಮುಂದುವರೆದು ಮಾತನಾಡುತ್ತಾ, “ನನ್ನ ಅಧ್ಯಯನವನ್ನು ಪೂರ್ಣಗೊಳಿಸಿದ ನಂತರ, ಉತ್ಪಾದನಾ ವ್ಯವಹಾರವನ್ನು ನಡೆಸುವ ನಿರ್ಧಾರವನ್ನು ನಾನು ತೆಗೆದುಕೊಂಡೆ,” ಎಂದರು.


ಕ್ವಾಲಿಟಿ ಫುಡ್ಸ್ ವ್ಯವಸ್ಥಾಪಕ ನಿರ್ದೇಶಕ ನರೇಶ್ ಪಗರಿಯಾ (ಎಡ), ಮತ್ತು ನಿರ್ದೇಶಕ ಧೀರಜ್ ಜೈನ್ (ಬಲ), ಬ್ರಾಂಡ್‌ನ ವಿವಿಧ ಧಾನ್ಯಗಳೊಂದಿಗೆ.


ನರೇಶ್ ಹೆಚ್ಚು ಮಸಾಲೆ ತಯಾರಿಸಲು ನಿರ್ಧರಿಸಿದರು, ಆದರೆ ಅವರಿಗೆ ದೊಡ್ಡ ಸ್ಥಳದ ಅವಶ್ಯಕತೆಯಿತ್ತು. 1998 ರಲ್ಲಿ, ಅವರು ಸಣ್ಣ ಅಂಗಡಿಯಿಂದ ಮಾಗಡಿ ರಸ್ತೆಯ 300 ಚದರ ಅಡಿಯ ದೊಡ್ಡ ಸ್ಥಳಕ್ಕೆ ತೆರಳಿದರು.


ಅವರು ವ್ಯವಹಾರಕ್ಕೆ ಪಗರಿಯಾ ಫುಡ್ಸ್ ಮತ್ತು ಬ್ರಾಂಡ್ಗೆ ಕ್ವಾಲಿಟಿ ಫುಡ್ಸ್ ಎಂದು ಹೆಸರಿಸಿದರು. ಡೈರಿ ಪ್ರೊಸೆಸರ್ ಮತ್ತು ಹ್ಯಾಂಡ್ಲರ್ ಕ್ವಾಲಿಟಿ ಲಿಮಿಟೆಡ್‌ನೊಂದಿಗೆ ಗೊಂದಲಕ್ಕೀಡಾಗಬಾರದು ಎಂದು ಹಾಗೆ ಹೆಸರಿಸಿದರು. ನರೇಶ್ ಅವರ ಕಂಪನಿಯ ಮುಂದಿನ ದಿನಗಳಲ್ಲಿ ಹೆಚ್ಚಿನ ಮಸಾಲೆಗಳನ್ನು ಸೇರಿಸಿದರು.


“ಎಂಟು ಹೊಸ ಉತ್ಪನ್ನಗಳನ್ನು ಸೇರಿಸಲಾಯಿತು ಮತ್ತು ನಾವು ಬೆಂಗಳೂರನ್ನು ದಾಟಿ ಬೇರೆಡೆ ಮಾರಾಟ ಮಾಡಲು ಪ್ರಾರಂಭಿಸಿದೇವು. ತುಮಕುರು ಮತ್ತು ಅನಂತಪುರದಂತಹ ಹತ್ತಿರದ ಪಟ್ಟಣಗಳು ​​ನಮ್ಮ ಮಾರುಕಟ್ಟೆಗಳಾದವು,” ಎಂದು ನರೇಶ್ ಹೇಳುತ್ತಾರೆ.


ಮುಂದಿನ ಒಂದು ವರ್ಷದಲ್ಲಿ, ನರೇಶ್ ಹಿಂದಿನ ಉತ್ಪಾದನ ಘಟಕಕ್ಕಿಂತ ಐದು ಪಟ್ಟು ದೊಡ್ಡದಾದ ಮತ್ತೊಂದು ಉತ್ಪಾದನಾ ಘಟಕವನ್ನು ತೆರೆದರು.


"ಪೌಷ್ಟಿಕ ಮತ್ತು ಕೈಗೆಟುಕುವ ಉತ್ಪನ್ನಗಳ ಅಗತ್ಯವನ್ನು ನಾವು ನೋಡಿದ್ದರಿಂದ ಕಂಪನಿಯನ್ನು ಮಸಾಲೆಗಳೊಂದಿಗೆ ಪ್ರಾರಂಭಿಸಲಾಯಿತು. ನಾವು ಇತರ ಬ್ರಾಂಡ್‌ಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವು,” ಎಂದು ಅವರು ಹೇಳುತ್ತಾರೆ.


ವ್ಯವಹಾರವನ್ನು ವೃದ್ಧಿಸುವುದು

ಕ್ವಾಲಿಟಿ ಕಂಪನಿಯು ರಾಜಾಜಿನಗರದಲ್ಲಿನ ದೊಡ್ಡ ಸ್ಥಳಕ್ಕೆ ಸ್ಥಳಾಂತರಗೊಂಡಾಗ, ಬೇರೆ ಬ್ರಾಂಡ್‌ಗಳು ಬ್ರೇಕ್‌ಫಾಸ್ಟ್ ಸಿರಿಧಾನ್ಯ ಉತ್ಪನ್ನವನ್ನು ಪ್ರಾರಂಭಿಸಿರುವುದನ್ನು ನರೇಶ್ ಗಮನಿಸಿದರು. ಆ ಸಮಯದಲ್ಲಿ ಅದು ಕಷ್ಟವಾಗಿರುವುದರಿಂದ, ಅದೇ ಧಾನ್ಯಗಳನ್ನು ಚೆನ್ನಾಗಿ ಪ್ಯಾಕ್ ಮಾಡಿ ಕೈಗೆಟುಕುವ ದರದಲ್ಲಿ ಮಾರಾಟ ಮಾಡಿದರೆ ಅವು ಉತ್ತಮವಾಗಿ ಬಿಕರಿಯಾಗಬಲ್ಲವು ಎಂದು ನರೇಶ್ ಯೋಚಿಸಿದರು.


ಇದು ಕ್ವಾಲಿಟಿ ಕಂಪನಿಗೆ ತನ್ನ ಅಸ್ತಿತ್ವದಲ್ಲಿರುವ ಉತ್ಪಾದನಾ ಸಾಮರ್ಥ್ಯಗಳ ಮೇಲೆ ಪ್ರಭಾವ ಬೀರಲು ಮತ್ತು ತನ್ನದೇ ಆದ ಶ್ರೇಣಿಯ ಧಾನ್ಯಗಳನ್ನು ಪ್ರಾರಂಭಿಸಲು ಪ್ರೇರೇಪಿಸಿತು. ಅವರು 2002 ರಲ್ಲಿ ಯಶಸ್ವಿ ಕೂಡ ಆದರು ಎಂದು ನರೇಶ್ ಹೇಳುತ್ತಾರೆ.


“ನಮ್ಮ ಮಾರುಕಟ್ಟೆಗಳು ದಕ್ಷಿಣ ಭಾರತದ ಎಲ್ಲಾ ಪ್ರದೇಶಗಳಿಗೆ ತ್ವರಿತವಾಗಿ ವಿಸ್ತರಿಸಲ್ಪಟ್ಟವು. ನನ್ನ ಸೋದರಳಿಯ ಧೀರಜ್ ಜೈನ್ ನಂತರ ಮಾರಾಟ ಮತ್ತು ಮಾರುಕಟ್ಟೆ ನಿರ್ವಹಿಸಲು ವ್ಯವಹಾರಕ್ಕೆ ಸೇರಿಕೊಂಡರು,” ಎಂದು ಅವರು ಹೇಳುತ್ತಾರೆ.


ಕ್ವಾಲಿಟಿ ಫುಡ್ಸ್ ಮಸಾಲಗಳ ಶ್ರೇಣಿ


ಮತ್ತು 2006 ರಿಂದ, ನರೇಶ್ ಮತ್ತು ಅವರ ವ್ಯವಹಾರವು ವ್ಯಾಪಾರಕ್ಕಾಗಿ, ಆಧುನಿಕ ವ್ಯಾಪಾರ, ಸಾಮಾನ್ಯ ವ್ಯಾಪಾರ, ಇಕಾಮರ್ಸ್ ಮತ್ತು ರಫ್ತು ಎಂಬ ನಾಲ್ಕು ಚಾನೆಲ್‌ಗಳನ್ನು ನಿರ್ಮಿಸಲು ಕೇಂದ್ರೀಕರಿಸಿತು.


“ಸಾಮಾನ್ಯ ವ್ಯಾಪಾರದಲ್ಲಿ, ನಾವು ದಕ್ಷಿಣ ಭಾರತ ಮತ್ತು ಪಶ್ಚಿಮ ಭಾರತದಾದ್ಯಂತ 450 ಕ್ಕೂ ಹೆಚ್ಚು ವಿತರಕರನ್ನು ಹೊಂದಿದ್ದೇವೆ ಮತ್ತು 35,000 ಕ್ಕೂ ಹೆಚ್ಚು ದೇಶೀಯ ಚಿಲ್ಲರೆ ವ್ಯಾಪಾರಿಗಳನ್ನು ಹೊಂದಿದ್ದೇವೆ. ಆಧುನಿಕ ವ್ಯಾಪಾರದಲ್ಲಿ, ಕಂಪನಿಯು ಡಿಮಾರ್ಟ್, ಬಿಗ್ ಬಜಾರ್, ಮೆಟ್ರೋ ಕ್ಯಾಶ್ ಅಂಡ್ ಕ್ಯಾರಿ, ರಿಲಯನ್ಸ್, ಮೋರ್ (ಆದಿತ್ಯ ಬಿರ್ಲಾ ಗ್ರೂಪ್), ವಾಲ್ಮಾರ್ಟ್, ಸೇರಿದಂತೆ ಹೆಚ್ಚಿನ ಆಧುನಿಕ ವ್ಯಾಪಾರ ಕೇಂದ್ರಗಳಿಗೆ ಸರಬರಾಜು ಮಾಡುತ್ತದೆ,” ಎಂದು ನರೇಶ್ ವಿವರಿಸುತ್ತಾರೆ.


ಕ್ವಾಲಿಟಿ ತನ್ನ ಮಸಾಲೆ ಮತ್ತು ಸಿರಿಧಾನ್ಯಗಳನ್ನು ಅಮೆಜಾನ್ ಇಂಡಿಯಾ, ಫ್ಲಿಪ್‌ಕಾರ್ಟ್ ಮತ್ತು ಬಿಗ್‌ಬಾಸ್ಕೆಟ್‌ಗಳಲ್ಲಿ ಮಾರಾಟ ಮಾಡುತ್ತದೆ. ಇದು 20 ಕ್ಕೂ ಹೆಚ್ಚು ದೇಶಗಳಿಗೆ ರಫ್ತು ಕೂಡ ಮಾಡುತ್ತದೆ, ಅಲ್ಲದೇ ಕ್ವಾಲಿಟಿ ಉತ್ಪನ್ನಗಳು 5,000 ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಮಳಿಗೆಗಳಲ್ಲಿ ಲಭ್ಯವಿದೆ ಎಂದು ನರೇಶ್ ಹೇಳುತ್ತಾರೆ.


ವ್ಯವಹಾರದ ಮಂತ್ರ

ಕ್ವಾಲಿಟಿ ಫುಡ್ಸ್ನ ಪ್ರಧಾನ ಕಚೇರಿ ಬೆಂಗಳೂರಿನ ಚಾಮರಾಜ್‌ಪೇಟೆಯಲ್ಲಿದೆ ಮತ್ತು ಹಾರೋಹಳ್ಳಿಯಲ್ಲಿ ಎರಡು ಎಕರೆ ಉತ್ಪಾದನಾ ಘಟಕವನ್ನು ಹೊಂದಿದೆ.


ಈ ಸ್ಥಳೀಯ ಉತ್ಪಾದನೆಯೇ ನರೇಶ್ ಯಶಸ್ಸಿಗೆ ಒಂದು ಕಾರಣ ಎಂದು ಹೇಳುತ್ತಾರೆ.


"ಭಾರತದಲ್ಲಿ ವಸ್ತುಗಳನ್ನು ತಯಾರಿಸುವ ಕ್ರಾಂತಿಕಾರಿ ಬದಲಾವಣೆಯೊಂದಿಗೆ, ನಮ್ಮ ಮಾರಾಟದ ಮುಖ್ಯ ಅಂಶವೆಂದರೆ ನಾವು ಭಾರತದಲ್ಲಿ ತಯಾರಿಸುತ್ತೇವೆ. ಇದಲ್ಲದೆ, ನಾವು ಯಾವುದೇ ಕೃತಕ ಬಣ್ಣ/ರುಚಿ ಅಥವಾ ಸಂರಕ್ಷಕಗಳನ್ನು ಉತ್ಪನ್ನಗಳಿಗೆ ಸೇರಿಸುವುದಿಲ್ಲ,” ಎಂದು ನರೇಶ್ ಹೇಳುತ್ತಾರೆ.


ಉಪಾಹಾರ ಧಾನ್ಯಗಳ ಬಹುಪಾಲು ಸೇವೆಯು ಶ್ರೇಣಿ I ಮತ್ತು ಶ್ರೇಣಿ II ನಗರಗಳಲ್ಲಿ ನಡೆಯುವುದರಿಂದ, ಕ್ವಾಲಿಟಿಯ ಗಮನವು ಅಲ್ಲಿಯೇ ಉಳಿದಿದೆ. ನರೇಶ್ ಅವರ ಪ್ರಕಾರ, ದೀರ್ಘ ಕೆಲಸದ ಸಮಯ ಮತ್ತು ಕಷ್ಟಪಟ್ಟು ದುಡಿಯುವ ಮಹಿಳೆಯರ ಹೆಚ್ಚಿನ ಪಾಲು ಈ ಬಳಕೆಗಳ ಮಾದರಿಯ ಹಿಂದಿನ ಕೆಲವು ಕಾರಣಗಳಾಗಿವೆ.


ಕರ್ನಾಟಕದ ಹೋರಾಹಳ್ಳಿಯಲ್ಲಿರುವ ಕ್ವಾಲಿಟಿ ಫುಡ್ಸ್ ಕಾರ್ಖಾನೆ


“ಇದಲ್ಲದೆ, ಶ್ರೀಮಂತ ಗ್ರಾಹಕರನ್ನು ಎಲ್ಲಾ ಆಧುನಿಕ ವ್ಯಾಪಾರ ಮತ್ತು ಎ-ಕ್ಲಾಸ್ ಮಳಿಗೆಗಳಿಂದ ಪಡೆಯಬಹುದು. ಅವು ನಮ್ಮ ಪ್ರಮುಖ ಮಾರುಕಟ್ಟೆ,” ಎಂದು ನರೇಶ್ ಹೇಳುತ್ತಾರೆ.


ಮಾರ್ಕೆಟಿಂಗ್‌ಗಾಗಿ ಡಿಜಿಟಲ್ ಮಾಧ್ಯಮಗಳತ್ತ ಸಾಗುವುದರೊಂದಿಗೆ, ಕ್ವಾಲಿಟಿ ಕಂಪನಿಯು ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಟ್ವಿಟರ್ ಮೂಲಕ ಗ್ರಾಹಕರನ್ನು ತಲುಪುವುದು ಲಾಭದಾಯಕವೆಂದು ಕಂಡುಕೊಂಡಿದೆ. ಇದು ಅಮೆಜಾನ್‌ನಲ್ಲಿ ತನ್ನ ಮಾರಾಟವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ.


ಡಿಜಿಟಲ್‌ಗೆ ವರ್ಗಾವಣೆಯಾಗುವುದು ಯಾವುದೇ ಬ್ರ್ಯಾಂಡ್‌ಗೆ ಸವಾಲಾಗಿ ಪರಿಣಮಿಸುತ್ತದೆ, ಆದರೆ ಕ್ವಾಲಿಟಿಯ ಒಟ್ಟಾರೆ ಬ್ರಾಂಡ್ ತಂತ್ರ ಮತ್ತು ಪ್ರತಿಕ್ರಿಯೆ ಒಳ್ಳೆಯ ಲಾಭವನ್ನು ನೀಡಿದೆ.


ಎಸ್‌ಎಂಇ ಫೋರಂ ಪ್ರಶಸ್ತಿ 2013, ಅತ್ಯುತ್ತಮ ಉದಯೋನ್ಮುಖ ಎಸ್‌ಎಂಇಗಾಗಿ ಡನ್ ಮತ್ತು ಬ್ರಾಡ್‌ಸ್ಟ್ರೀಟ್ ಪ್ರಶಸ್ತಿ ಮತ್ತು ಇನ್ವೆಸ್ಟ್ ಕರ್ನಾಟಕ ಶೃಂಗಸಭೆಯಲ್ಲಿ ಅತ್ಯುತ್ತಮ ಉತ್ಪಾದನಾ ಶ್ರೇಷ್ಠತೆ ಪ್ರಶಸ್ತಿ (ಆಹಾರ ವಿಭಾಗ) ಸೇರಿದಂತೆ ಈ ಬ್ರ್ಯಾಂಡ್ ಹಲವಾರು ಪ್ರಶಸ್ತಿಗಳನ್ನು ಗೆದ್ದಿದೆ ಎನ್ನುತ್ತಾರೆ ನರೇಶ್.


ಈಗ, ಕ್ವಾಲಿಟಿ ಕಂಪನಿ ಸವಾಲುಗಳ ಮುಂದೆ ಉಳಿಯಲು ಮತ್ತು ರುಚಿಕರ ಮತ್ತು ಉತ್ತಮ ಗುಣಮಟ್ಟದ ಸಿರಿಧಾನ್ಯಗಳು, ಮಸಾಲೆಗಳು ಮತ್ತು ತ್ವರಿತ ಮಿಶ್ರಣಗಳನ್ನು ನೀಡುವುದನ್ನು ಮುಂದುವರೆಸುವ ಗುರಿ ಹೊಂದಿದೆ. “ನಾವು ಟ್ರೆಂಡ್‌ಗಿಂತ ವೇಗವಾಗಿ ಬೆಳೆಯುತ್ತೇವೆ ಮತ್ತು ಭಾರತದ ಎಲ್ಲಾ ಮೆಟ್ರೋ ನಗರಗಳಿಗೆ ನಮ್ಮ ವ್ಯವಹಾರವನ್ನು ವಿಸ್ತರಿಸುತ್ತೇವೆ. ಆದರೆ ಕಾರ್ಯತಂತ್ರದ ಅಡಿಯಲ್ಲಿ, ನಮ್ಮ ಉತ್ಪನ್ನಗಳು ಆರೋಗ್ಯಕರ, ಪೌಷ್ಟಿಕ ಮತ್ತು ಕೈಗೆಟುಕುವ ದರದಲ್ಲಿಯೆ ಇರುವಂತೆ ಕಾಯ್ದುಕೊಳ್ಳುತ್ತೇವೆ,” ಎಂದು ನರೇಶ್ ಹೇಳುತ್ತಾರೆ.Want to make your startup journey smooth? YS Education brings a comprehensive Funding Course, where you also get a chance to pitch your business plan to top investors. Click here to know more.

  • +0
Share on
close
  • +0
Share on
close
Share on
close

Our Partner Events

Hustle across India