20 ಕೋಟಿ ರೂ ವಾರ್ಷಿಕ ವಹಿವಾಟು ಮಾಡುತ್ತಿರುವ ಬೆಂಗಳೂರಿನ ಚಾಮುಂಡಿ ಅಗರಬತ್ತಿ ಬ್ರಾಂಡ್‌

2010 ರಲ್ಲಿ ಚಾಮುಂಡಿ ಅಗರಬತ್ತಿ ಬ್ರಾಂಡ್ ಅನ್ನು ಬೆಂಗಳೂರಿನಲ್ಲಿ ಮೊದಲು 1,200 ಚದರ ಅಡಿ ಜಾಗದಲ್ಲಿ ಪ್ರಾರಂಭಿಸಲಾಯಿತು. ಕಂಪನಿಯು ಇಂದು ತನ್ನ ಅಗರಬತ್ತಿಗಳನ್ನು ವಿವಿಧ ದೇಶಗಳಿಗೆ ರಫ್ತು ಮಾಡುತ್ತದೆ, ಅಲ್ಲದೆ ವಾರ್ಷಿಕವಾಗಿ 20 ಕೋಟಿಯ ವಹಿವಾಟನ್ನು ಮಾಡುತ್ತದೆ.

20 ಕೋಟಿ ರೂ ವಾರ್ಷಿಕ ವಹಿವಾಟು ಮಾಡುತ್ತಿರುವ ಬೆಂಗಳೂರಿನ ಚಾಮುಂಡಿ ಅಗರಬತ್ತಿ ಬ್ರಾಂಡ್‌

Tuesday January 28, 2020,

3 min Read

ಚಾಮುಂಡಿ ಅಗರಬತ್ತಿ ಸ್ಥಾಪಕ ಕಾಂತಿಲಾಲ್ ಪರ್ಮಾಲ್


ಕಾಂತಿಲಾಲ್ ಪರ್ಮಾಲ್ ಅವರ ಸಹೋದರ ರಾಜಸ್ಥಾನದ ಜಲೋರ್ ನಿಂದ ತಮ್ಮ ತಂದೆಯ ಸ್ನೇಹಿತನೊಂದಿಗೆ ಅಗರಬತ್ತಿ ವ್ಯಾಪಾರ ಸಂಸ್ಥೆಯಲ್ಲಿ ಕೆಲಸ ಮಾಡಲು ಬೆಂಗಳೂರಿಗೆ ಬಂದಾಗ ದೊಡ್ಡ ಕನಸುಗಳನ್ನು ಕಂಡಿದ್ದರು.


ಯುವರ್ ಸ್ಟೋರಿಯೊಂದಿಗೆ ಕಾಂತಿಲಾಲ್ ಪರ್ಮಾಲ್ ಮಾತನಾಡಿ,


"ನನ್ನ ಹಿರಿಯ ಸಹೋದರ ಕೆಲಸ ಪ್ರಾರಂಭಿಸಲು ನನ್ನ ಚಿಕ್ಕಪ್ಪ (ತಂದೆಯ ಸ್ನೇಹಿತ)ನ ಜೊತೆ ಬೆಂಗಳೂರಿಗೆ ಬಂದರು. ನಾನು ಆ ಸಮಯದಲ್ಲಿ ಜಲೋರ್‌ನಲ್ಲಿ ಓದುತ್ತಿದ್ದೆ. ನನ್ನ ಶಾಲಾ ಶಿಕ್ಷಣ ಮುಗಿದ ನಂತರ ನಾನು ಸಹ ಅವನಿಗೆ ಸಹಾಯ ಮಾಡಲು ಬಂದೆ. ನಾವು ಕೆಲಸ ಮಾಡುತ್ತಿದ್ದರೂ, ದೊಡ್ಡದಾಗಿ ಏನಾದರೂ ಮಾಡಬೇಕೆಂಬ ಕನಸು ಇತ್ತು,” ಎನ್ನುತ್ತಾರೆ.

ಆರಂಭ

ಕಾಂತಿಲಾಲ್ ಅವರ ಸಹೋದರ ಆರಂಭದಲ್ಲಿ ರೋಟೊಗ್ರಾವರ್ ಮುದ್ರಣ ಮಾಡುತ್ತಿದ್ದರು, ಅಲ್ಲಿ ಅವರು ವಿವಿಧ ಅಗರಬತ್ತಿ ತಯಾರಕರ ಪ್ಯಾಕೇಜ್ಗಳನ್ನು ಮುದ್ರಿಸುತ್ತಿದ್ದರು. ನಂತರ 2003 ರಲ್ಲಿ ಅಗರಬತ್ತಿ ತಯಾರಿಕೆಯಲ್ಲಿ ಬಳಸಬಹುದಾದ ಕಚ್ಚಾ ವಸ್ತುಗಳ ವ್ಯಾಪಾರದ ಎರಡು ಶಾಖೆಗಳನ್ನು ಸಹೋದರಿಬ್ಬರೂ ಸೇರಿ ಆರಂಭ ಮಾಡಿದರು.


"ನಾವು ಸುಗಂಧ ದ್ರವ್ಯ, ಪ್ಯಾಕೇಜಿಂಗ್ ಸಾಮಗ್ರಿಗಳಂತಹ ಕಚ್ಚಾ ವಸ್ತುಗಳ ವ್ಯಾಪಾರ ಮಾಡುತ್ತಿದ್ದೇವು ಮತ್ತು ಅಗರಬತ್ತಿ ತಯಾರಿಕೆಗೆ ಬೇಕಾದಂತಹ ಸಾಮಗ್ರಿಗಳನ್ನು ಹೆಚ್ಚು ಬಳಸುತ್ತಿದ್ದೇವು. ಸುಮಾರು ಏಳು ವರ್ಷಗಳ ಕಾಲ ಅದೇ ಕೆಲಸವನ್ನು ಮುಂದುವರೆಸಿ, ನಂತರ ನಮ್ಮ ಸ್ವಂತ ಉತ್ಪಾದನಾ ಘಟಕವನ್ನು ತೆರೆಯಲು ನಿರ್ಧರಿಸಿದೇವು. ವ್ಯಾಪಾರವನ್ನು ಇದೇ ರೀತಿ ಮುಂದುವರೆಸುವ ಬದಲು ಅದನ್ನು ದೊಡ್ಡದಾಗಿ ಆರಂಭಿಸಲು ನಿರ್ಧರಿಸಿದೇವು," ಎನ್ನುತ್ತಾರೆ ಕಾಂತಿಲಾಲ್.


2009 ರಲ್ಲಿ ಬಂಡವಾಳವನ್ನು ಹೊಂದಿಸುವ ಸಲುವಾಗಿ ವೈಯಕ್ತಿಕ ಉಳಿತಾಯದಿಂದ ಮತ್ತು ತಮ್ಮ ಆಸ್ತಿಯನ್ನು ಅಡವಿಟ್ಟು ಸುಮಾರು 1 ಲಕ್ಷ ರೂ.ಗಳನ್ನು ಸಾಲವಾಗಿ ಪಡೆದ ಕಾಂತಿಲಾಲ್ 1,200 ಚದರ ಜಾಗದಲ್ಲಿ ಅಗರಬತ್ತಿ ತಯಾರಿಕಾ ಘಟಕವನ್ನು ಪ್ರಾರಂಭಿಸಿದರು.


ಅಗರಬತ್ತಿ ಉತ್ಪಾದನಾ ಘಟಕವು ಅಲ್ಪ ಬಂಡವಾಳದೊಂದಿಗೆ ಮನೆಯಲ್ಲಿ ಪ್ರಾರಂಭಿಸಲು ಸಾಕಷ್ಟು ಚಿಕ್ಕದಾಗಿದೆ. ಆದಾಗ್ಯೂ ಅದು ವ್ಯವಹಾರವನ್ನು ವೃದ್ಧಿಸಲು ಹಲವಾರು ನಿರ್ಬಂಧನೆಗಳನ್ನು ಒಡ್ಡುತ್ತದೆ ಎನ್ನುತ್ತಾರೆ ಕಾಂತಿಲಾಲ್.


15 ಜನ ಕೆಲಸಗಾರರೊಂದಿಗೆ ಪುಟ್ಟದಾಗಿ ಕಂಪನಿಯು ಆರಂಭವಾಯಿತು.


q

ಚಾಮುಂಡಿ ಅಗರಬತ್ತಿ

“ನಮಗೆ ಮಾರುಕಟ್ಟೆಯಲ್ಲಿ ಸಂಪರ್ಕಗಳಿದ್ದರೂ ಆರಂಭದಲ್ಲಿ ಆರ್ಡರ್‌ ಪಡೆಯಲು ಕಷ್ಟವಾಯಿತು. ಇಡೀ ವರ್ಷ ನಾವು ಕಷ್ಟಪಟ್ಟಿದ್ದೇವೆ, ನಂತರ ಉತ್ತಮ ಪ್ರತಿಕ್ರಿಯೆ ಪಡೆಯಲಾರಂಭಿಸಿದೆವು,” ಎನ್ನುತ್ತಾರೆ ಕಾಂತಿಲಾಲ್.


ನಿಧಾನ ಮತ್ತು ಸ್ಥಿರ ಬೆಳವಣಿಗೆ

ಕ್ರಮೇಣ ಕಂಪನಿಯು ಬೆಳೆಯಲು ಆರಂಭಿಸಿತು. 2012 ರ ಹೊತ್ತಿಗೆ ಅದು 320-ವಿತರಕರನ್ನು ಹೊಂದಿರುವ ಜಾಲವಾಗಿ ಬೆಳೆಯಿತು. ಮಾರುಕಟ್ಟೆಯ ಉತ್ತಮ ಪ್ರತಿಕ್ರಿಯೆಯನ್ನು ನೋಡಿದ ಕಾಂತಿಲಾಲ್ ನಂತರ ದಿಟ್ಟ ಹೆಜ್ಜೆ ಇಡಲು ನಿರ್ಧರಿಸಿ, 8,000 ಚದರ ಅಡಿ ಜಾಗದಲ್ಲಿ ಮತ್ತೊಂದು ಉತ್ಪಾದನಾ ಘಟಕವನ್ನು ಸ್ಥಾಪಿಸಿದರು.


“ಹಳೆಯ ಘಟಕದಿಂದ ಆರ್ಡರ್‌ಗಳನ್ನು ಪೂರೈಸುವುದು ಕಷ್ಟಕರವಾಗಿತ್ತು. ಕಚ್ಚಾ ವಸ್ತುಗಳನ್ನು ಇಡಲು ಸಾಕಷ್ಟು ಸ್ಥಳವೂ ಇರಲಿಲ್ಲ. ಬೆಳೆಯುತ್ತಿರುವಾಗ ಉದ್ಯಮವನ್ನು ವಿಸ್ತರಿಸಲು ನಾವು ಯೋಚಿಸಿದೇವು,” ಎನ್ನುತ್ತಾರೆ ಕಾಂತಿಲಾಲ್.


ಕಂಪನಿಯು ತನ್ನ ಉತ್ಪನ್ನಗಳನ್ನು ಮಾರುಕಟ್ಟೆಗೆ ತರಲು 50 ಕಾರ್ಮಿಕರು ಮತ್ತು 20 ಮಾರಾಟ ಪ್ರತಿನಿಧಿಗಳನ್ನು ನೇಮಿಸಿಕೊಂಡು ನಿಧಾನವಾಗಿ ಬೆಳೆಯಿತು,


ಕಾಂತಿಲಾಲ್ ಅವರು 2012 ರಲ್ಲಿ ಎಂಎಸ್‌ಎಂಇ ಯೋಜನೆಯಡಿ ಚಾಮುಂಡಿ ಅಗರಬತ್ತಿಯನ್ನು ನೊಂದಾಯಿಸಿದರು ಮತ್ತು ಪ್ರಾರಂಭವಾದ ಮೂರು ವರ್ಷಗಳಲ್ಲಿ ಬ್ರ್ಯಾಂಡೆಡ್ ಅಗರಬತ್ತಿಯ ಉನ್ನತ ತಯಾರಕರಲ್ಲಿ ಒಬ್ಬರಾದರು. ಇಂದು ಇದು 20 ಕೋಟಿ ರೂಪಾಯಿಗಳ ವಾರ್ಷಿಕ ಆದಾಯ ಹೊಂದಿದೆ.


ಅಗರಬತ್ತಿ ತಯಾರಿಕೆಗೆ ಕಂಪನಿ ಅಹಮದಾಬಾದ್‌ನಿಂದ ಮರದ ಪುಡಿಯಂತಹ ಕಚ್ಚಾ ವಸ್ತುಗಳನ್ನು, ಹಾಗೂ ಕ್ರಮವಾಗಿ ವಿಯೆಟ್ನಾಂ ಮತ್ತು ಚೀನಾದಿಂದ ಜಾಸ್ ಪೌಡರ್ ಮತ್ತು ಬಿದಿರಿನ ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತದೆ. ಇತರ ಕಚ್ಚಾ ವಸ್ತುಗಳನ್ನು ಜೈಪುರ, ಮುಂಬೈ ಮತ್ತು ಇತರ ಸ್ಥಳಗಳಿಂದ ಪಡೆಯಲಾಗುತ್ತದೆ.


ಪ್ರಸ್ತುತ ಕಂಪನಿಯು ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ, ಕರ್ನಾಟಕ, ಆಂಧ್ರಪ್ರದೇಶ, ಮತ್ತು ಕೇರಳ ಸೇರಿದಂತೆ ಭಾರತದ ಎಲ್ಲಾ ಪ್ರಮುಖ ಮಾರುಕಟ್ಟೆಗಳಲ್ಲಿ ವಿತರಕರು ಮತ್ತು ಸಣ್ಣ ಚಿಲ್ಲರೆ ವ್ಯಾಪಾರಿಗಳ ಮೂಲಕ ಅಸ್ತಿತ್ವದಲ್ಲಿದೆ. ಸದ್ಯ ಇದು ಸುಮಾರು 70 ಕಾರ್ಮಿಕರ ಕಾರ್ಯಪಡೆ ಮತ್ತು 50 ಸದಸ್ಯರ ಮಾರಾಟ ಪಡೆಯನ್ನು ಹೊಂದಿದೆ.



ಚಾಮುಂಡಿ ಅಗರಬತ್ತಿಯ ಧೂಪದ ಬತ್ತಿಗಳು


ಬ್ರ್ಯಾಂಡ್, ಬ್ರ್ಯಾಂಡಿಂಗ್ ಇಲ್ಲದೆ ಏಜೆಂಟರ ಮೂಲಕ ಮಲೇಷಿಯಾ, ಮಾರಿಷಸ್ ಮತ್ತು ಶ್ರೀಲಂಕಾದ ಅಂತರರಾಷ್ಟ್ರೀಯ ಮಾರುಕಟ್ಟೆಗಳಿಗೆ ರಫ್ತು ಮಾಡುತ್ತದೆ. ಅಗರಬತ್ತಿಯಿಂದ ಧೂಪಗಳು, ಧೂಪದ್ರವ್ಯ ಶಂಕುಗಳು, ಕಪ್ ಧೂಪಗಳು, ಮಸಾಲ ಅಗರಬತ್ತಿ, ಹೂವಿನ ಧೂಪದ್ರವ್ಯಗಳನ್ನು ತಯಾರಿಸುತ್ತಾ ಕಂಪನಿಯು ಇನ್ನೂ ವೈವಿಧ್ಯಮಯವಾಗಿ ಬೆಳೆಯಿತು.


ಸ್ಪರ್ಧೆ ಮತ್ತು ಸವಾಲುಗಳು

ಉದ್ಯಮದ ದೊಡ್ಡ ಸವಾಲು ಎಂದರೆ ದುಡ್ಡಿಲ್ಲದೆ ಮುಂಗಡವಾಗಿ ಸರಕು ಕೊಡುವುದು ಎಂದು ಕಾಂತಿಲಾಲ್ ಹೇಳುತ್ತಾರೆ.


ಆರಂಭದಲ್ಲಿ, ದೀರ್ಘಾವಧಿಯವರೆಗೆ ಸಾಲವನ್ನು ನೀಡುವುದು ತುಂಬಾ ಕಷ್ಟಕರವಾಗಿತ್ತು. ಆದರೆ, ನಾವು ಸ್ಕೇಲ್ ಮಾಡಿದಾಗ ಏಳು ದಿನಗಳು, 15 ದಿನಗಳು ಅಥವಾ 21 ದಿನಗಳವರೆಗೆ ನಿಗದಿತ ಅವಧಿಗೆ ಕ್ರೆಡಿಟ್ ನೀಡಲು ಪ್ರಾರಂಭಿಸಿದ್ದೇವೆ, ವಿತರಕರು ಮಾಡುವ ಪಾವತಿಗೆ ಆಫರ್‌ ನೀಡುತ್ತೇವೆ.”


ಇಂದು ಸಂಘಟಿತ ಭಾರತೀಯ ಅಗರಬತ್ತಿ ಉದ್ಯಮವು 3,000 ಕೋಟಿ ರೂ. ಯಷ್ಟಿದೆ.


ಉತ್ಪನ್ನಗಳನ್ನು ಸಮರ್ಥವಾಗಿ ಮಾರಾಟ ಮಾಡುವ ಮೂಲಕ ಮತ್ತು ಉತ್ತಮ ಗುಣಮಟ್ಟವನ್ನು ಅತ್ಯಂತ ಸಮಂಜಸವಾದ ಬೆಲೆಯಲ್ಲಿ ಒದಗಿಸುವ ಮೂಲಕ ಬ್ರಾಂಡ್ ತನ್ನ ಪ್ರತಿಸ್ಪರ್ಧಿಗಳಿಂದ ಭಿನ್ನವಾಗಿದೆ ಎಂದು ಕಾಂತಿಲಾಲ್ ಹೇಳುತ್ತಾರೆ.

ಭವಿಷ್ಯದ ಯೋಜನೆಗಳು

ಕಾಂತಿಲಾಲ್ ದೊಡ್ಡ ಕನಸು ಕಾಣುತ್ತಲಿದ್ದಾರೆ. ಅವರು ಪ್ರಸ್ತುತ ವಿತರಕರ ಮೂಲಕ ವ್ಯವಹರಿಸುತ್ತಿದ್ದಾರೆ ಮತ್ತು ಭವಿಷ್ಯದಲ್ಲಿ ಬಿಗ್ ಬಜಾರ್, ಡಿಮಾರ್ಟ್, ರಿಲಯನ್ಸ್ ಮತ್ತು ಹೆಚ್ಚಿನವುಗಳಲ್ಲಿ ಶೆಲ್ಫ್ ಜಾಗದ ಮೂಲಕ ಚಿಲ್ಲರೆ ವಿಭಾಗಕ್ಕೆ ಪ್ರವೇಶಿಸಲು ಬಯಸುತ್ತೇನೆ ಎಂದು ಅವರು ಹೇಳುತ್ತಾರೆ. ಈ ಪ್ರದೇಶದಲ್ಲಿ ಮತ್ತು ಅದರಾಚೆ ಬ್ರಾಂಡ್ ಅನ್ನು ಮಾರಾಟ ಮಾಡಲು ಅವರು ತಮ್ಮ ಊರು ಜಲೋರ್‌ನಲ್ಲಿ ಮತ್ತೊಂದು ಕಚೇರಿ ತೆರೆಯುವ ಕೆಲಸದಲ್ಲು ತೊಡಗಿದ್ದಾರೆ.



Share on
close