ಮಗನನ್ನು ಬಲಿ ತಗೆದುಕೊಂಡ ರಸ್ತೆ ಗುಂಡಿಗಳನ್ನು ಮುಚ್ಚುತ್ತಾ ಸಮಾಜ ಸೇವೆ ಮಾಡುತ್ತಿರುವ ದಾದಾರಾವ್ ಬಿಲ್ಹೋರೆ
ಗುಂಡಿಯಿಂದ ಉಂಟಾದ ರಸ್ತೆ ಅಪಘಾತದಲ್ಲಿ ದಾದಾರಾವ್ ಬಿಲ್ಹೋರೆ ಅವರ ಏಕೈಕ ಪುತ್ರ ಮೃತಪಟ್ಟಾಗ, ಅವರು ಖುದ್ದು ತಾವೇ ಸಮಸ್ಯೆಗಳನ್ನು ಪರಿಹರಿಸಲು ಮುಂದೆ ಬಂದರು. ಗುಂಡಿಗಳನ್ನು ತುಂಬುವುದರ ಹೊರತಾಗಿ, ಜನರನ್ನು ವರದಿ ಮಾಡಲು ಆಹ್ವಾನಿಸುವಂತಹ ಅಪ್ಲಿಕೇಶನ್ ಅನ್ನು ಅವರು ರಚಿಸಿದ್ದಾರೆ.
ಜುಲೈ 28, 2015 ರಂದು, ದಾದಾರಾವ್ ಬಿಲ್ಹೋರೆ ಭಯಾನಕ ಸುದ್ದಿ ಕೇಳಬೇಕಾಯಿತು. ಮುಂಬೈನ ಜೋಗೇಶ್ವರಿ-ವಿಕ್ರೊಲಿ ಲಿಂಕ್ ರಸ್ತೆಯಲ್ಲಿ (ಜೆವಿಎಲ್ಆರ್) ಗುಂಡಿ ಇದ್ದುದರಿಂದ ಅಪಘಾತಕ್ಕೀಡಾದಾಗ ಅವರ 16 ವರ್ಷದ ಮಗ ಪ್ರಾಣ ಕಳೆದುಕೊಂಡಿದ್ದ. ತಮ್ಮ ಏಕೈಕ ಮಗನ ಮರಣದಿಂದ ಚೂರುಚೂರಾದ ಅವರು ಸ್ವತಃ ತಾನೇ ಸಾಧ್ಯವಿರುವ ಪ್ರತಿಯೊಂದು ಗುಂಡಿಗಳನ್ನು ತುಂಬುವ ಜವಾಬ್ದಾರಿಯನ್ನು ತೆಗೆದುಕೊಂಡರು.
ಮಳೆನೀರಿನಿಂದ-ಮುಚ್ಚಿಹೋಗಿರುವ ಲಿಂಕ್ ರಸ್ತೆಯಲ್ಲಿ ಬೈಕು ಆಳವಾದ ಗುಂಡಿಗೆ ಬಿದ್ದು ದಾದಾರಾವ್ ಅವರ ಪುತ್ರ ಪ್ರಕಾಶ್ ಮೃತಪಟ್ಟರು. ಬೃಹತ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಗೆ ಪದೇ ಪದೇ ಭೇಟಿ ನೀಡಿದ್ದರೂ, ಈ ಸಮಸ್ಯೆಯನ್ನು ಪರಿಹರಿಸಲು ಸಾಕಷ್ಟು ಪ್ರಯತ್ನಗಳು ನಡೆಯದಿರುವುದನ್ನು ಅವರು ಗಮನಿಸಿದರು. ಆದ್ದರಿಂದ ಸ್ವತಃ ಅವರು ಪೇವರ್ ಬ್ಲಾಕ್‌ಗಳು, ಟ್ರೊವೆಲ್ ಮತ್ತು ನಿರ್ಮಾಣ ಮರಳನ್ನು ಒಳಗೊಂಡಿರುವ ಕಿಟ್‌ನೊಂದಿಗೆ ಕೆಲಸ ಮಾಡಲು ಇಳಿದರು. ಆಗಾಗ್ಗೆ ಪ್ರಕಾಶ್‌ನ ಸ್ನೇಹಿತರು ಮತ್ತು ಇವರು ಏನು ಮಾಡುತ್ತಿದ್ದಾರೆ ಎಂಬುದನ್ನು ಗಮನಿಸಿದ ರಸ್ತೆಯಲ್ಲಿ ಓಡಾಡುವ ಅಪರಿಚಿತರು ಅವರೊಂದಿಗೆ ಗುಂಡಿ ಮುಚ್ಚುವ ಕೆಲಸದಲ್ಲಿ ಸೇರಿಕೊಳ್ಳುತ್ತಿದ್ದರು.
ಎ ಎನ್ ಐ ಜೊತೆ ಮಾತನಾಡುತ್ತ ಅವರು,
ನನ್ನ ಮಗನ ರೀತಿ ಯಾರಿಗೂ ಅಪಘಾತ ಸಂಭವಿಸಬಾರದು. ಅದಕ್ಕಾಗಿ ನಾನು ಭಾರತವನ್ನು ಗುಂಡಿ-ಮುಕ್ತವಾಗುವ ತನಕ ಕೆಲಸ ಮಾಡುತ್ತೇನೆ. ನಮ್ಮ ರಾಷ್ಟ್ರವು ಭಾರಿ ಜನಸಂಖ್ಯೆಯನ್ನು ಹೊಂದಿದೆ. ಒಂದು ಲಕ್ಷ ಜನರು ಗುಂಡಿಗಳನ್ನು ಭರ್ತಿ ಮಾಡುತ್ತಾರೆ, ಭಾರತವು ಗುಂಡಿ-ಮುಕ್ತವಾಗಲಿದೆ. ನಾನು ದಣಿದಿದ್ದೇನೆ, ಆದರೆ ನಾನು ನಿಲ್ಲುವುದಿಲ್ಲ" ಎಂದು ಹೇಳಿದರು.
47 ವರ್ಷ ವಯಸ್ಸಿನವರು ಸ್ಪಾಟ್ ಹೊಲ್ ಎಂಬ ಮೊಬೈಲ್ ಆಪ್ ಅನ್ನು ಸಹ ಮಾಡಿದ್ದಾರೆ, ಇದು ರಸ್ತೆ ಗುಂಡಿಗಳನ್ನು ಪತ್ತೆಹಚ್ಚಲು ನಾಗರೀಕರಿಗೆ ಅನುವು ಮಾಡಿ ಕೊಡುತ್ತದೆ ಮತ್ತು ಸಮಸ್ಯೆಯನ್ನು ಪರಿಹರಿಸಲು ಸಹಾಯ ಮಾಡುತ್ತದೆ. ಅವರು ಗುಂಡಿಗಳನ್ನು ಮುಚ್ಚಲು ನಿರ್ಮಾಣದ ಸೈಟ್ಗಳಲ್ಲಿ ಕಂಡುಬರುವ ಮಣ್ಣಿನ, ಶಿಲಾಖಂಡರಾಶಿಗಳು ಮತ್ತು ಪೇವರ್ ಬ್ಲಾಳನ್ನು ಬಳಸುತ್ತಾರೆ ಎಂದು ಏಷಿಯನ್ ಏಜ್ ವರದಿ ತಿಳಿಸಿದೆ.
“ಮೊಬೈಲ್ ಕ್ಯಾಮೆರಾ, ಜಿಪಿಎಸ್ ಮತ್ತು ಇಂಟರ್ನೆಟ್ ಸಂಪರ್ಕ - ಸ್ಮಾರ್ಟ್‌ಫೋನ್‌ನಲ್ಲಿ ಈಗಾಗಲೇ ಲಭ್ಯವಿರುವ ಮೂರು ಮೂಲಭೂತ ವೈಶಿಷ್ಟ್ಯಗಳನ್ನು ಈ ಅಪ್ಲಿಕೇಶನ್ ಬಳಸುತ್ತದೆ ಮತ್ತು ಜನಸಮೂಹ ಮೂಲದ ಮಾದರಿಗೆ ಶಕ್ತಿ ಮತ್ತು ಹೆಚ್ಚು ಅಗತ್ಯವಿರುವ ಜವಾಬ್ದಾರಿಯನ್ನು ವಿತರಿಸುವ ಮೂಲಕ ನಾಗರಿಕರಿಗೆ ಅರ್ಧದಷ್ಟು ಕೆಲಸವನ್ನು ಸಾಧಿಸಲು ಅನುವು ಮಾಡಿಕೊಡುತ್ತದೆ. ಗುಂಡಿ ಸರಿಪಡಿಸಲು ಮೊದಲ ಹೆಜ್ಜೆ ಅದನ್ನು ಗುರುತಿಸುವುದು. ಗುಂಡಿಗಳನ್ನು ಬಿಎಂಸಿಗೆ ತೋರಿಸಲು ಸ್ಪಾಟ್ ಹೊಲ್ ನಿಮಗೆ ಸಹಾಯ ಮಾಡುತ್ತವೆ, ನಂತರ ಅವರು ಅದನ್ನು ಗುರುತಿಸಿ ಅದನ್ನು ಸರಿಪಡಿಸಬಹುದು.”
ಈ ಗುಂಡಿಗಳಿಂದ ಸಾವು ಸಂಭವಿಸುವುದು ಸಾಮಾನ್ಯವಾಗಿದೆ, ಇದನ್ನೆಲ್ಲ ನೋಡಿ ಮೂಕವಾಗಿರುವ ಸರ್ಕಾರ ಮತ್ತು ನಾಗರೀಕರ ಮಧ್ಯ, ದಾದಾರಾವ್ ಬಿಲ್ಹೋರೆ ಅವರ ಕಥೆಯು ಒಬ್ಬ ಮನುಷ್ಯನು ಸಹ ಹೇಗೆ ವ್ಯತ್ಯಾಸವನ್ನುಂಟುಮಾಡಬಹುದು ಎಂಬುದಕ್ಕೆ ಉದಾಹರಣೆಯಾಗಿದೆ.