ಮೌಂಟ್ ಎವರೆಸ್ಟ್ನ ಪರಿಷ್ಕೃತ ಎತ್ತರ 8,848.86 ಮೀಟರ್
ನೇಪಾಳ ಮತ್ತು ಚೀನಾ ಜಂಟಿಯಾಗಿ ವಿಶ್ವದ ಅತೀ ಎತ್ತರದ ಪರ್ವತ ಮೌಂಟ್ ಎವರೆಸ್ಟ್ನ ಹೊಸ ಎತ್ತರ 8,848.86 ಮೀಟರ್ ಎಂದು ಮಂಗಳವಾರ ಘೋಷಿಸಿದೆ.
ಮಂಗಳವಾರ ನೇಪಾಳ ಮತ್ತು ಚೀನಾ ಜಂಟಿಯಾಗಿ ವಿಶ್ವದ ಅತೀ ಎತ್ತರದ ಪರ್ವತ ಮೌಂಟ್ ಎವರೆಸ್ಟ್ನ ಹೊಸ ಎತ್ತರ 8,848.86 ಮೀಟರ್ ಎಂದು ಘೋಷಿಸಿದ್ದು, ಇದು 1954ರಲ್ಲಿ ಭಾರತ ನಡೆಸಿದ ಅಳತೆಗಿಂತ 86 ಸೆಂಟಿ ಮೀಟರ್ ಅಧಿಕವಾಗಿದೆ.
2015ರಲ್ಲಿನ ಭೂಕಂಪನ ಸೇರಿದಂತೆ ಹಲವು ಕಾರಣಗಳಿಂದ ಪರ್ವತದ ಎತ್ತರದಲ್ಲಿ ಬದಲಾವಣೆಯಾಗಿದೆ ಎಂಬ ವಾದಗಳಿಂದ ನೇಪಾಳ ಸರ್ಕಾರ ಮೌಂಟ್ ಎವರೆಸ್ಟ್ನ ನಿಖರವಾದ ಎತ್ತರವನ್ನು ಅಳೆಯಲು ನಿರ್ಧರಿಸಿತ್ತು.
ನೇಪಾಳ ಮತ್ತು ಚೀನಾ ಜಂಟಿಯಾಗಿ ವಿಶ್ವದ ಅತೀ ಎತ್ತರದ ಪರ್ವತ ಮೌಂಟ್ ಎವರೆಸ್ಟ್ನ ಹೊಸ ಎತ್ತರ 8,848.86 ಮೀಟರ್ ಎಂದು ಮಂಗಳವಾರ ಘೋಷಿಸಿದೆ ಎಂದು ಚೀನಾದ ಕ್ಷಿನ್ಯೂಆ ಸುದ್ದಿ ಸಂಸ್ಥೆ ವರದಿಮಾಡಿದೆ.
ಹೊಸ ಎತ್ತರವನ್ನು ನೇಪಾಳನ ವಿದೇಶಾಂಗ ಸಚಿವ ಪ್ರದೀಪ್ ಗ್ಯಾವಲಿ ಕಠ್ಮಂಡುವಿನಲ್ಲಿ ಘೋಷಿಸಿದರು.
ಚೀನಾದ ಹಳೆ ಸಮೀಕ್ಷೆಯ ಪ್ರಕಾರ ಮೌಂಟ್ ಎವರೆಸ್ಟ್ನ ಎತ್ತರ 8,844.43 ಮೀಟರ್ ಆಗಿದ್ದು, ನೇಪಾಳ ನೀಡಿರುವ ಹೊಸ ಎತ್ತರಕ್ಕಿಂತ 4 ಮೀ. ಕಡಿಮೆಯಿದೆ.
ಚೀನಾದ ಸರ್ವೇಯರಗಳು 1975 ಮತ್ತು 2005ರಲ್ಲಿ ಮೌಂಟ್ ಎವರೆಸ್ಟ್ ಮೇಲೆ ಆರು ಸುತ್ತಿನ ವೈಜ್ಞಾನಿಕ ಅಧ್ಯಯನ ಮತ್ತು ಮಾಪನ ನಡೆಸಿದ್ದು, ಅದರ ಪ್ರಕಾರ ಪರ್ವತದ ಎತ್ತರದ ಕ್ರಮವಾಗಿ 8,848.13 ಮೀಟರ್ ಮತ್ತು 8,844.43 ಮೀಟರ್ ಎಂದು ಹಿಂದೆ ಉಲ್ಲೇಖಿಸಲಾಗಿತ್ತು.
ಮೌಂಟ್ ಎವರೆಸ್ಟ್ನ ತುದಿಯಲ್ಲಿ ಹಾದುಹೋಗುವ ಗಡಿ ರೇಖೆಗೆ ಒಪ್ಪಿಗೆ ಸೂಚಿಸುವುದರ ಮೂಲಕ 1961 ರಲ್ಲಿ ಚೀನಾ ಮತ್ತು ನೇಪಾಳ ಗಡಿ ವಿವಾದಕ್ಕೆ ತೆರೆ ಎಳೆದಿತ್ತು.
“ಮೌಂಟ್ ಎವರೆಸ್ಟ್ನ ಎತ್ತರವನ್ನು ನಿಖರವಾಗಿ ಅಳೆಯುವುದರಿಂದ ಹಿಮಾಲಯ ಮತ್ತು ಕ್ವಿನ್ಘೈ ಟಿಬೇಟ್ನಲ್ಲಿನ ಹವಾಮಾನ ಬದಲಾವಣೆಗಳ ಅಧ್ಯಯನಕ್ಕೆ ಸಹಾಯವಾಗುತ್ತದೆ,” ಎಂದು ಚೈನೀಸ್ ಅಕ್ಯಾಡೆಮಿ ಆಪ್ ಸೈನ್ಸ್ನ ವಾತಾವರಣ ಭೌತಶಾಸ್ತ್ರಜ್ಞ ಗಾವೋ ದೆಂಗ್ಯಿ ಹೇಳಿದ್ದಾರೆ.