ಮುಂಬೈ ಮೂಲದ ಈ ಸುಸ್ಥಿರ ಸ್ಟಾರ್ಟಪ್ ಶೂನ್ಯ ತ್ಯಾಜ್ಯ ನಿರ್ವಹಣೆಗೆ ಪರಿಸರ ಸ್ನೇಹಿಯಾದ ಪರಿಹಾರಗಳನ್ನು ಕಂಡುಹಿಡಿದಿದೆ

ದಿವ್ಯಾ ರವಿಚಂದ್ರನ್ ಅವರು 2017 ರಲ್ಲಿ ಸ್ಥಾಪಿಸಿದ ಸ್ಕ್ರ್ಯಾಪ್, ಎಂಬ ಮುಂಬಯಿಯಲ್ಲಿನ ಸಾಮಾಜಿಕ ಸಂಸ್ಥೆ ಮತ್ತು ಇವೆಂಟ್ಸ್‌, ತ್ಯಾಜ್ಯ ರಹಿತ ಸಮಾಜವನ್ನು ಜಾರಿಗೆ ತರಲು ಸಹಾಯ ಮಾಡುತ್ತಿದೆ.

ಮುಂಬೈ ಮೂಲದ ಈ ಸುಸ್ಥಿರ ಸ್ಟಾರ್ಟಪ್ ಶೂನ್ಯ ತ್ಯಾಜ್ಯ ನಿರ್ವಹಣೆಗೆ ಪರಿಸರ ಸ್ನೇಹಿಯಾದ ಪರಿಹಾರಗಳನ್ನು ಕಂಡುಹಿಡಿದಿದೆ

Wednesday January 08, 2020,

3 min Read

ಭಾರತದ ಬಹುತೇಕ ಪ್ರತಿಯೊಂದು ನಗರವು ಹಸಿಯಾದ, ಶುಷ್ಕ ಮತ್ತು ಕೆಲವು ಎಲೆಕ್ಟ್ರಾನಿಕ್ ತ್ಯಾಜ್ಯಗಳು ಸೇರಿದಂತೆ ಸಂಸ್ಕರಿಸದ ವಿಷಕಾರಿ ತ್ಯಾಜ್ಯಗಳಿಂದ ತುಂಬಿದೆ. ಅವು ತುಂಬಾ ದೊಡ್ಡ ತೊಂದರೆಯನ್ನುಂಟು ಮಾಡಬಹುದು ಮತ್ತು ಅದರ ಬಗ್ಗೆ ಕಾಳಜಿ ವಹಿಸುವ ಅಗತ್ಯವಿದೆ. ವಿಶೇಷವಾಗಿ ಮೀಥೇನ್ ಅನಿಲ ಹೆಚ್ಚಿನ ಪ್ರಮಾಣದಲ್ಲಿ ಬಿಡುಗಡೆಯಾಗುತ್ತಿರುವುದರಿಂದ ಮತ್ತು ಭೂಮಿ ಮತ್ತು ಅಂತರ್ಜಲ ಎರಡರ ಮಾಲಿನ್ಯದಿಂದಾಗಿ ಬೆಂಕಿಯ ಅಪಾಯಗಳು ಹೆಚ್ಚಾಗುತ್ತಿವೆ.


ಉತ್ತಮ ತ್ಯಾಜ್ಯ ನಿರ್ವಹಣೆಯೊಂದಿಗೆ ಬಡಲಾವಣೆಯನ್ನು ತರಲು, ದಿವ್ಯಾ ರಾಮಚಂದ್ರನ್ ಅವರು ಮುಂಬೈನಲ್ಲಿನ ಸಂಸ್ಥೆಗಳಲ್ಲಿ, ಕಚೇರಿಗಳಲ್ಲಿ ಮತ್ತು ಕಾರ್ಯಕ್ರಮಗಳಲ್ಲಿ ಶೂನ್ಯ ತ್ಯಾಜ್ಯ ಮತ್ತು ಪರಿಸರ ಸ್ನೇಹಿ ಪರಿಹಾರಗಳನ್ನು ಕಾರ್ಯಗತಗೊಳಿಸಲು ಸಹಾಯ ಮಾಡುವ ಉದ್ದೇಶದಿಂದ 2017 ರಲ್ಲಿ ಸ್ಕ್ರ್ಯಾಪ್ ಎಂಬ ಸುಸ್ಥಿರ ಸ್ಟಾರ್ಟಪ್ ಸ್ಥಾಪಿಸಿದರು. ಇದು 40 ಕ್ಕೂ ಹೆಚ್ಚು ತ್ಯಾಜ್ಯ ಮುಕ್ತ ಕಾರ್ಯಕ್ರಮಗಳನ್ನು ನಡೆಸಿದೆ.


ಕಾರ್ಯಕ್ರಮವೊಂದರಲ್ಲಿ ಸ್ಕ್ರ್ಯಾಪ್ ತಂಡ (ಚಿತ್ರಕೃಪೆ: ಎನ್‌ಡಿಟಿವಿ)


ಈ ಕಾರ್ಯಕ್ರಮಗಳಲ್ಲಿ ಬಕಾರ್ಡಿ ಎನ್ಎಚ್ 7 ವೀಕೆಂಡರ್, ಯೂಟ್ಯೂಬ್ ಫ್ಯಾನ್ ಫೆಸ್ಟ್ 2018, ಮಹೀಂದ್ರಾ ಬ್ಲೂಸ್ ಫೆಸ್ಟಿವಲ್ ಸೇರಿವೆ ಮತ್ತು ಇನ್ಸೈಡರ್.ಇನ್, ಮಿಕ್ಯೂ ಮತ್ತು ಇತರ ಸಂಸ್ಥೆಗಳೊಂದಿಗೆ ಈ ಸ್ಟಾರ್ಟಪ್ ಕೆಲಸ ಮಾಡಿದೆ.


ದಿವ್ಯಾ ಅವರ ಪ್ರಕಾರ, ಶೂನ್ಯ-ತ್ಯಾಜ್ಯ ಈವೆಂಟ್ ಅನ್ನು ಆಯೋಜಿಸಲು ಸ್ಕ್ರ್ಯಾಪ್ ಎಂಟು-ಹಂತದ ಪ್ರಕ್ರಿಯೆಯನ್ನು ಹೊಂದಿದೆ, ಇದನ್ನು ಪ್ರಿ ಈವೆಂಟ್, ಈವೆಂಟ್ ಮತ್ತು ಪೋಸ್ಟ್ ಈವೆಂಟ್ ಎಂದು ಮೂರು ಹಂತಗಳಾಗಿ ವಿಂಗಡಿಸಲಾಗಿದೆ.


ಎನ್‌ಡಿಟಿವಿಯೊಂದಿಗೆ ಮಾತನಾಡಿದ ದಿವ್ಯಾ,


“ಈವೆಂಟ್‌ನ ಯೋಜನೆ ರೂಪಗೊಳ್ಳುತ್ತಿರುವಾಗಲೆ ನಾವು ಅದರಲ್ಲಿ ಭಾಗಿಯಾಗುವುದು ತುಂಬಾ ಪ್ರಮುಖವಾಗುತ್ತದೆ. ಏಕೆಂದರೆ ಅದು ನಮಗೆ ಇಂಥಹ ವಿಷಯಗಳಲ್ಲಿ ಮಧ್ಯಪ್ರವೇಶಿಸಲು ಸೂಕ್ತ ಸಮಯ. ಪ್ರಿ ಈವೆಂಟ್, ಸಂಘಟಕರೊಂದಿಗೆ ಕೆಲಸ ಮಾಡುವುದು ಮತ್ತು ಈವೆಂಟ್ ಸಮಯದಲ್ಲಿ ಬಳಸಬೇಕಾದ ವಸ್ತುಗಳನ್ನು ನಿರ್ಣಯಿಸುವ ಕೆಲಸಗಳನ್ನು ಒಳಗೊಂಡಿದೆ. ನಾವು ಮರುಬಳಕೆ ಮಾಡಲಾಗದ ವಸ್ತುಗಳನ್ನು ಗುರುತಿಸುತ್ತೇವೆ ಮತ್ತು ಮರುಬಳಕೆ ಮಾಡಬಹುದಾದ ಅಥವಾ ೯೦ ದಿನಗಳಲ್ಲಿ ನೈಸರ್ಗಿಕ ಮೂಲವಸ್ತುವಾಗಿ ವಿಘಟಣೆ ಹೊಂದುವಂತಹ ಪರ್ಯಾಯಗಳನ್ನು ಶಿಫಾರಸು ಮಾಡುತ್ತೇವೆ. ಉದಾಹರಣೆಗೆ, ಕೆಲವು ಸಂದರ್ಭದಲ್ಲಿ, ನಾವು ಫುಡ್ ಕೋರ್ಟ್ ಅನ್ನು ಪ್ಲಾಸ್ಟಿಕ್ ಮುಕ್ತ ವಲಯವನ್ನಾಗಿ ಮಾಡಲು ಬಯಸುತ್ತೇವೆ,” ಎಂದರು.


ನೀವು ಪಾನೀಯ, ಆಹಾರ, ನೀರನ್ನು ಹೇಗೆ ಪೂರೈಸುತ್ತೀರಿ?" ಎಂಬಂತಹ ಮೂಲ ವಿವರಗಳನ್ನು ಪಡೆಯಲು ನಾವು ಕೆಲವೊಂದು ಪ್ರಶ್ನೆಗಳನ್ನು ಕೇಳುತ್ತೇವೆ. ಅವರ ಆರಂಭಿಕ ಆದ್ಯತೆಯ ಆಧಾರದ ಮೇಲೆ, ಪ್ಲಾಸ್ಟಿಕ್ ಅನ್ನು ಮರುಬಳಕೆ ಮಾಡಬಹುದಾದ ಕಟ್ಲರಿ ಮತ್ತು ಸ್ಟೀಲ್ ಮತ್ತು ಸೆರಾಮಿಕ್ ನಂತಹ ಟೇಬಲ್ವೇರ್ ನೊಂದಿಗೆ ಬದಲಾಯಿಸಲು ನಾವು ಸಲಹೆ ನೀಡುತ್ತೇವೆ, ಅದು ಕಾರ್ಯಸಾಧ್ಯವಾಗದಿದ್ದರೆ, ನಾವು ೯೦ ದಿನಗಳಲ್ಲಿ ನೈಸರ್ಗಿಕ ಮೂಲವಸ್ತುವಾಗಿ ವಿಘಟಿಣೆ ಹೊಂದುವಂತಹ ಉತ್ಪನ್ನಗಳಾದ ಅರೆಕಾ ಅಥವಾ ಬಾಳೆಹಣ್ಣು ಅಥವಾ ಕಬ್ಬಿನ ಬಾಗಾಸೆ ಬಳಸಿ ತಯಾರಿಸಲಾಗುತ್ತದೆ. ಅಂತಿಮವಾಗಿ, ಪಾಲ್ಗೊಳ್ಳುವವರು, ಆಹಾರ ಮಾರಾಟಗಾರರು ಮತ್ತು ಉತ್ಪಾದನಾ ಮಳಿಗೆಗಳು ಸೇರಿದಂತೆ ವಿವಿಧ ಪಾಲುದಾರರಿಗಾಗಿ ನಾವು ಶೂನ್ಯ ತ್ಯಾಜ್ಯದ ಕರಡುಗಳನ್ನು ಹಂಚಿಕೊಳ್ಳುತ್ತೇವೆ ಎಂದರು.”


ಚಿತ್ರಕೃಪೆ: ಎನ್‌ಡಿಟಿವಿ




ನಂತರ, ಸ್ಕ್ರ್ಯಾಪ್ ತಂಡವು ಮೂಲದಲ್ಲಿ ತ್ಯಾಜ್ಯವನ್ನು ಬೇರ್ಪಡಿಸಲು ಹಸಿ ಮತ್ತು ಒಣ ತ್ಯಾಜ್ಯಕ್ಕಾಗಿ ಬೇರೆ ಬೇರೆ ಬಣ್ಣದ ಕಸದ ಬುಟ್ಟಿಗಳನ್ನು ಇಡುತ್ತದೆ. ತ್ಯಾಜ್ಯ ನಿರ್ವಹಣಾ ಪ್ರಕ್ರಿಯೆಯನ್ನು ನಿರ್ವಹಿಸಲು ಕೆಲಸಗಾರರು ಮತ್ತು ಆಹಾರ ಮಳಿಗೆ ಮಾರಾಟಗಾರರಿಗೆ ತರಬೇತಿಯನ್ನು ಸಹ ಸ್ಟಾರ್ಟಪ್ ನೀಡುತ್ತದೆ. ಈ ತಂಡವು ತನ್ನ ಕಾರ್ಯಾಚರಣೆಯನ್ನು ವಿಸ್ತರಿಸಲು ವಿವಿಧ ಎನ್‌ಜಿಒಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ.


ಈ ಕುರಿತು ವೆರ್ವ್ ನಿಯತಕಾಲಿಕೆಯೊಂದಿಗೆ ಮಾತನಾಡಿದ ದಿವ್ಯಾ,


“ಇದು ಭಾರತದಲ್ಲಿ ಒಂದು ದೊಡ್ಡ ಸವಾಲಾಗಿದೆ ಏಕೆಂದರೆ ಬಹಳಷ್ಟು ಜನರಿಗೆ ಪ್ರತ್ಯೇಕತೆ ಎಂಬ ಪದಗಳ ಪರಿಚಯವಿಲ್ಲ. ತ್ಯಾಜ್ಯ ಬೇರ್ಪಡಿಸಲು ಅವರಿಗೆ ಸಾಧ್ಯವಾದಷ್ಟು ಸಹಾಯಮಾಡುವುದು ನಮ್ಮ ಉದ್ದೇಶ. ನಾವು ನಮ್ಮ ಸ್ವಯಂಸೇವಕರನ್ನು ಸಹ ಅಲ್ಲಿ ಇರುವ ವ್ಯವಸ್ಥೆ ಮಾಡುತ್ತೇವೆ, ಇದರಿಂದ ಅವರು ತ್ಯಾಜ್ಯವನ್ನು ತ್ವರಿತವಾಗಿ ಬೇರ್ಪಡಿಸುತ್ತಾರೆ ಮತ್ತು ಜನರಿಗೆ ಮಾರ್ಗದರ್ಶನ ನೀಡುತ್ತಾರೆ. ಕೆಲವು ರೀತಿಯ ಹಸ್ತಕ್ಷೇಪಗಳು ಇದ್ದಾಗ ಮತ್ತು ಯಾರಾದರೂ ತೊಟ್ಟಿಗಳ ಮೇಲ್ವಿಚಾರಣೆ ಮಾಡುವಾಗ, ಜನರು ಉತ್ತಮವಾಗಿ ಅಥವಾ ಕೆಟ್ಟದಾಗಿ ನಡೆದುಕೊಳ್ಳುತ್ತಾರೆ. ಅಲ್ಲದೇ ಅವರು ತ್ಯಾಜ್ಯವನ್ನು ಬೇರ್ಪಡಿಸಲು ಹೆಚ್ಚಿನ ಪ್ರಯತ್ನವನ್ನು ಮಾಡುತ್ತಾರೆ.”


ತಮ್ಮ ಕಾರ್ಯಕ್ರಮಗಳ ಬಗ್ಗೆ ಶೂನ್ಯ-ತ್ಯಾಜ್ಯ-ಉತ್ಸವಗಳು, ಅದರ ಅರ್ಥವೇನು ಮತ್ತು ತ್ಯಾಜ್ಯ ನಿರ್ವಹಣೆಗೆ ಪಾಲ್ಗೊಳ್ಳುವವರು ಹೇಗೆ ಸಹಾಯ ಮಾಡಬಹುದು ಎಂದು ಸ್ಟಾರ್ಟಪ್ ತಿಳಿಸುತ್ತದೆ. ಕಂಪನಿ ನಡೆಸುತ್ತಿರುವ ಶೂನ್ಯ-ತ್ಯಾಜ್ಯ ಕಾರ್ಯಕ್ರಮದ ಕುರಿತು ಸಾಮಾಜಿಕ ಮಾಧ್ಯಮದ ಮಾರ್ಕೆಟಿಂಗ್ ಅನ್ನು ಸಹ ತಂಡವು ಆಯೋಜಿಸುತ್ತದೆ.


ನಿಮ್ಮ ಬಳಿಯೂ ಆಸಕ್ತಿದಾಯಕ ಕಥೆಗಳಿವೆಯೆ? ಇದ್ದರೆ, [email protected] ಗೆ ಬರೆದು ಕಳುಹಿಸಿ. ಮತ್ತಷ್ಟು ಸಕಾರಾತ್ಮಕ ಸುದ್ದಿಗಳಿಗಾಗಿ ನಮ್ಮನ್ನು ಫೇಸ್‌ಬುಕ್‌ ಹಾಗೂ ಟ್ವಿಟರ್‌ ನಲ್ಲಿ ಫಾಲೊ ಮಾಡಿ.