ಪುನರ್ಬಳಕೆ ಕಾರ್ಡ್ ಬೋರ್ಡ್ ಬಳಸಿ ನಿರ್ಮಿಸಿದ ಈ ಕೆಫೆ ಸುಸ್ಥಿರತೆಯನ್ನು ಮುಂದಿನ ಹಂತಕ್ಕೆ ಕೊಂಡೊಯ್ದಿದೆ

ಮೂವತ್ತೆರಡು ವರ್ಷದ ಬಾಣಸಿಗ ಮತ್ತು ಲೇಖಕರಾದ ಅಮಿತ್‌ ಧನಾನಿಯವರಿಂದ ಸ್ಥಾಪಿಸಲ್ಪಟ್ಟ ಮುಂಬೈನ ಈ ಕಾರ್ಡ್‌ ಬೋರ್ಡ್‌ ಕೆಫೆಯು 40,000 ಚದರ ಅಡಿ ವಿಸ್ತೀರ್ಣ ಹೊಂದಿದೆ.

ಪುನರ್ಬಳಕೆ ಕಾರ್ಡ್ ಬೋರ್ಡ್ ಬಳಸಿ ನಿರ್ಮಿಸಿದ ಈ ಕೆಫೆ ಸುಸ್ಥಿರತೆಯನ್ನು ಮುಂದಿನ ಹಂತಕ್ಕೆ ಕೊಂಡೊಯ್ದಿದೆ

Monday July 22, 2019,

2 min Read

ಅತೀಯಾದ ಆನ್‌ಲೈನ್‌ ಶಾಪಿಂಗ್‌ ಮಾಡುವ ನಮಗೆ ಧನ್ಯವಾದಗಳು, ನಮ್ಮ ಮನೆಯಲ್ಲಿ ಕಾರ್ಡ್‌ ಬೋರ್ಡ್‌ಗಳ ರಾಶಿಯೇ ಇರುತ್ತದೆ. ಆದರೆ ಕಾರ್ಡ್‌ ಬೋರ್ಡ್‌ಗಳನ್ನು ಕೇವಲ ಪ್ಯಾಕಿಂಗ್‌ ಮಾಡುವುದಕ್ಕಷ್ಟೇ ಅಲ್ಲದೇ ಇನ್ನೇನಕ್ಕಾದರೂ ಬಳಸಿರುವುದನ್ನೊಮ್ಮೆ ಊಹಿಸಿ. ಕಾರ್ಡ್‌ ಬೋರ್ಡ್‌ ಬಳಸಿ ನಿರ್ಮಿಸಿದ ಕಟ್ಟಡವನ್ನೊಮ್ಮೆ ಊಹಿಸಿ.


ಬಾಕ್ಸ ತಯಾರಿಸುವುದನ್ನ ಹೊರತುಪಡಿಸಿ ಬೇರೆಯದನ್ನೇ ಯೋಚಿಸಿರುವ ಮುಂಬೈನ ಈ ಕೆಫೆ, ಸಂಪೂರ್ಣವಾಗಿ ಪುನರ್ಬಳಕೆ ಕಾರ್ಡ್‌ ಬೋರ್ಡ್‌ನಿಂದ ಮಾಡಲ್ಪಟ್ಟಿದೆ. ಕೆಫೆಯ ಪೀಠೋಪಕರಣಗಳಿಂದ ಹಿಡಿದು, ದೀಪದ ಜೋಡಣೆಗಳು,ಸಂಕೇತ ಫಲಕಗಳು, ಕಟ್ಲರಿಗಳು ಮತ್ತು ಇತ್ಯಾದಿಗಳೆಲ್ಲವೂ ಕಾರ್ಡ್‌ ಬೋರ್ಡ್‌ನಿಂದಲೇ ಮಾಡಲ್ಪಟ್ಟಿವೆ.


ಮೂವತ್ತೆರಡು ವರ್ಷದ ಬಾಣಸಿಗ ಮತ್ತು ಲೇಖಕರಾದ ಅಮಿತ್‌ ಧನಾನಿಯವರು ಸ್ಥಾಪಿಸಿದ ಈ ಕೆಫೆಯು, ನುರು ಕರಿಮ್‌ ಅವರ ಕೈಚಳಕದಿಂದ ವಿನ್ಯಾಸಗೊಂಡಿದೆ, ಮತ್ತು ಇದು ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿದೆ(BKC).


ಕಾರ್ಡ್‌ ಬೋರ್ಡ್‌ ಎಂದೇ ಕರೆಯಲ್ಪಡುವ ಈ ಕೆಫೆಯು, 40,000 ಚದರ ಅಡಿ ವಿಸ್ತೀರ್ಣ ಹೊಂದಿದ್ದು ಕೇವಲ ಏಳು ತಿಂಗಳಲ್ಲಿ ನಿರ್ಮಾಣ ಹೊಂದಿದೆ. ಕೆಫೆಯಲ್ಲಿ ಪರಿಸರ ಸ್ನೇಹಿ ಮತ್ತು ಪುನರ್ಬಳಕೆ ವಸ್ತುಗಳ ಬಳಕೆಗೆ ಮತ್ತು ಸಸ್ಯಹಾರಿ ಆಹಾರಕ್ಕೆ ಉತ್ತೇಜನ ಕೊಡಲಾಗಿದೆ.


ಕ

ಮುಂಬೈನ ಕಾರ್ಡ್‌ಬೋರ್ಡ್ ಕೆಫೆಯು ಸಸ್ಯಹಾರಿ ಆಹಾರವನ್ನು ತಯಾರಿಸುತ್ತದೆ (ಚಿತ್ರ:ಲೈಫ್‌ಬಜ್‌)

ಎನ್‌ಡಿಟಿವಿ ಯೊಂದಿಗೆ ಮಾತನಾಡುತ್ತಾ ಅಮಿತ್‌ರವರು ಹೇಳುತ್ತಾರೆ


“ಕಾರ್ಡ್‌ ಬೋರ್ಡ್‌ ಕಡಿಮೆ ಬೆಲೆಯ ಉತ್ಪನ್ನವಾಗಿದೆ. ಮನೆ ಬದಲಾಯಿಸುವ ಸಂದರ್ಭದಲ್ಲಿ ಮತ್ತು ವಿವಿಧ ವಸ್ತುಗಳ ಪ್ಯಾಕಿಂಗ್‌ಗಾಗಿ ಮಾತ್ರ ಕಾರ್ಡ್ ಬೋರ್ಡ್‌ ಬಳಸಲಾಗುತ್ತದೆಂಬುದು ಜನರ ನಂಬಿಕೆಯಾಗಿದೆ. ಆದರೆ ಕಾರ್ಡ್‌ ಬೋರ್ಡ್ ನಿಜವಾಗಿಯೂ ಪರಿಸರ ಸ್ನೇಹಿಯಾಗಿದ್ದು – ಇದನ್ನು ಶೇಕಡಾ 100 ರಷ್ಟು ಪುನರ್ಬಳಕೆ ಮಾಡಬಹುದಾಗಿದೆ ಮತ್ತು ಅದು ಮುಖ್ಯವಾಗಿ 50 ಪ್ರತಿಶತ ಗಾಳಿಯಿಂದ ತುಂಬಿದೆ. ಇದೆಲ್ಲದಕ್ಕಿಂತ ಹೆಚ್ಚಾಗಿ ಇದರ ಬೆಲೆಯು ಅತ್ಯಂತ ಕಡಿಮೆಯಾಗಿದೆ, ದೀರ್ಘ ಕಾಲ ಬಾಳಿಕೆಗೆ ಬರುತ್ತದೆ, ಹಗುರವಾಗಿದೆ, ನಿರೋಧಕ ಶಕ್ತಿಯಿದೆ ಮತ್ತು ಶಬ್ಧ ನಿರೋಧಕ ಗುಣ ಲಕ್ಷಣ ಹೊಂದಿದ್ದು ನಿಜವಾಗಿಯೂ ಅಕೌಸ್ಟಿಕ್‌ ಸ್ನೇಹಿಯಾಗಿದೆ. ಮತ್ತು ಈ ಕೆಫೆಯ ಮೂಲಕ, ಕಾರ್ಡ್‌ ಬೋರ್ಡ್‌ನಿಂದ ಹೆಚ್ಚಿನ ಗುಣಮಟ್ಟದ ವಸ್ತುಗಳನ್ನು ತಯಾರಿಸಿ ಅಥವಾ ಪುನರ್ಬಳಕೆ ಮಾಡಿ, ದೈನಂದಿನ ಜೀವನದಲ್ಲಿ ಇದರ ಬಳಕೆಯನ್ನು ಉತ್ತೇಜಿಸಿವುದು ನಮ್ಮ ಉದ್ದೇಶವಾಗಿತ್ತು.”


ವಿಪರೀತ ಹವಾಮಾನ ಮತ್ತು ಸೋರಿಕೆಗಳಿಂದ ರಕ್ಷಿಸಲು ಇದರ ಮೇಲೆ ಮೇಣವನ್ನು ಬಳಿಯಲಾಗಿದೆ.


ಕೆಫೆಯಲ್ಲಿ ಬಳಸಿರುವ ಎಲ್ಲ ವಸ್ತುಗಳ ಗುಣಮಟ್ಟ ಮತ್ತು ಬಾಳಿಕೆಯನ್ನು ತಿಳಿದುಕೊಳ್ಳಲು ಎಲ್ಲ ಹಂತದ ಪರೀಕ್ಷೆ ನಡೆಸಲಾಗಿದೆ.


ಕ

ವಿಪರೀತ ಹವಾಮಾನ ಮತ್ತು ಸೋರಿಕೆಗಳಿಂದ ರಕ್ಷಿಸಲು ಕಾರ್ಡ್ ಬೋರ್ಡ್‌ನ ಮೇಲೆ ಮೇಣವನ್ನು ಬಳಿಯಲಾಗಿದೆ. (ಚಿತ್ರ: ದಿ ಹಿಂದೂ)


ಪ್ಯಾಕಿಂಗ್‌ ಸಂದರ್ಭದಲ್ಲಿ, ಅಥವಾ ಆಹಾರವನ್ನು ಹೊರಗೆ ಕೊಂಡೊಯ್ಯುವ ಸಂದರ್ಭದಲ್ಲಿ ಪೇಪರ್‌ ಬಾಕ್ಸ್‌ ಮೂಲಕ ನೀಡಲಾಗುತ್ತದೆ, ಮತ್ತು ಪ್ಲಾಸ್ಟಿಕ್‌ ಬಳಕೆ ಮಾಡಲಾಗುತ್ತಿಲ್ಲ. ಸರಿಯಾದ ಆಹಾರ ತ್ಯಾಜ್ಯ ವ್ಯವಸ್ಥೆ ಕಲ್ಪಿಸುವ ಯೋಚನೆಯನ್ನೂ ಮಾಡಲಾಗಿದೆ. ವರದಿಗಾರರು, ದಿ ಹಿಂದೂ.


ಮುಂದುವರೆದು ಅಮಿತ್‌ರವರು ಹೇಳುತ್ತಾರೆ,

“ಇದಲ್ಲದೇ ರೆಸ್ಟೋರೆಂಟ್‌ನಲ್ಲಿ ಆಹಾರ ಅಥವಾ ಉತ್ಪನ್ನ ತಯಾರಿಸುವಾಗ ಶೂನ್ಯ-ತ್ಯಾಜ್ಯ ಸರಪಳಿ ವಿಧಾನ ಅಳವಡಿಸಿಕೊಳ್ಳಲಾಗುತ್ತದೆ. ಇದಲ್ಲದೇ ನಮ್ಮ ರೆಸ್ಟೋರೆಂಟ್‌ನಲ್ಲಿ ಪ್ಲಾಸ್ಟಿಕ್‌ ಬಳಕೆಯನ್ನು ನಿರ್ಬಂಧಿಸಿದ್ದೇವೆ, ಮತ್ತು ಯಾವುದನ್ನ ಕಸದ ತೊಟ್ಟಿಗೆ ಹಾಕಬೇಕೆಂಬುದನ್ನು ಬಹಳ ನಿರ್ದಿಷ್ಟವಾಗಿ ಗುರುತಿಸಿದ್ದೇವೆ.”