ಮೈಲ್ಯಾಬ್‌ನ ಕೋವಿಡ್‌-19 ಆಂಟಿಜೆನ್‌ ಟೆಸ್ಟ್‌ ಕಿಟ್‌ಗೆ ಐಸಿಎಮ್‌ಆರ್‌ ಅನುಮತಿ

ಮೈಲ್ಯಾಬ್‌ನ ಪಾಥೋಕ್ಯಾಚ್‌ ಕೋವಿಡ್‌-19 ಆಂಟಿಜೆನ್‌ ರ‍್ಯಾಪಿಡ್‌ ಟೆಸ್ಟಿಂಗ್‌ ಕಿಟ್‌ ಅನ್ನು ಭಾರತದಲ್ಲೆ ಅಭಿವೃದ್ಧಿಪಡಿಸಿ, ತಯಾರಿಸಲಾಗುತ್ತಿದ್ದು, ಅದರ ಬೆಲೆ ಸುಮಾರು 450 ರೂ. ಅಷ್ಟಿರಲಿದೆ.

ಮೈಲ್ಯಾಬ್‌ನ ಕೋವಿಡ್‌-19 ಆಂಟಿಜೆನ್‌ ಟೆಸ್ಟ್‌ ಕಿಟ್‌ಗೆ ಐಸಿಎಮ್‌ಆರ್‌ ಅನುಮತಿ

Thursday July 23, 2020,

1 min Read

ಪುಣೆಯ ಮೈಲ್ಯಾಬ್‌ ಡಿಸ್ಕವರಿ ಸೋಲುಷನ್‌ನ ಕೋವಿಡ್‌-19 ಆಂಟಿಜೆನ್‌ ಟೆಸ್ಟ್‌ ಕಿಟ್‌ಗೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್‌)ಯಿಂದ ಬುಧವಾರ ಅನುಮತಿ ದೊರೆತಿದೆ ಎಂದು ಕಂಪನಿ ಹೇಳಿಕೊಂಡಿದೆ.


ಮೈಲ್ಯಾಬ್‌ನ ಪಾಥೋಕ್ಯಾಚ್‌ ಕೋವಿಡ್‌-19 ಆಂಟಿಜೆನ್‌ ರ‍್ಯಾಪಿಡ್‌ ಟೆಸ್ಟಿಂಗ್‌ ಕಿಟ್‌ ಅನ್ನು ಭಾರತದಲ್ಲೆ ಅಭಿವೃದ್ಧಿಪಡಿಸಿ, ತಯಾರಿಸಲಾಗುತ್ತಿದ್ದು, ಅದರ ಬೆಲೆ ಸುಮಾರು 450 ರೂ. ಅಷ್ಟಿರಲಿದೆ ಎಂದು ಪ್ರಕಟಣೆಯಲ್ಲಿ ಮೈಲ್ಯಾಬ್‌ ತಿಳಿಸಿದೆ.




ಕಿಟ್‌ಗಳು ಈ ಕ್ಷಣದಿಂದಲೆ ಆರ್ಡರ್‌ ಮಾಡಲು ಲಭ್ಯವಿರಲಿವೆ.


ಕೋವಿಡ್‌-19 ಪರೀಕ್ಷೆ ಮಾಡಲು ಇರುವ ಕಂಪನಿಯ ಉತ್ಪನ್ನಗಳ ಪಟ್ಟಿಗೆ ಈ ಹೊಸ ಕಿಟ್‌ ಸೇರ್ಪಡೆಗೊಳ್ಳುತ್ತದೆ ಎಂದು ಉಲ್ಲೇಖಿಸಲಾಗಿದೆ.


“ವಿದೇಶಿ ಪರೀಕ್ಷಾ ಕಿಟ್‌ಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಿಕೊಳ್ಳಲು ಅಗ್ಗದ ಆರ್‌ಟಿ-ಪಿಸಿಆರ್‌ ಕಿಟ್‌ ಅನ್ನು ಅಭಿವೃದ್ಧಿಪಡಿಸಿದ ನಂತರ ಕೋವಿಡ್‌-19 ಪರೀಕ್ಷೆಗೆ ವೇಗ ನೀಡಲು ನಾವು ಕಾಂಪಾಕ್ಟ್‌ ಎಕ್ಸ್‌ಎಲ್‌ ಬಿಡುಗಡೆಮಾಡಿದೆವು. ಈಗ ಆಂಟಿಜೆನ್‌ ಟೆಸ್ಟ್‌ ಕಿಟ್‌ಗೂ ಅನುಮತಿ ದೊರಕಿರುವುದರಿಂದ ಕೋವಿಡ್‌-19 ಪರೀಕ್ಷೆಯ ಎಲ್ಲ ವಿಭಾಗಗಳನ್ನು ನಾವು ತಲುಪುತ್ತೇವೆ,” ಎಂದರು ಮೈಲ್ಯಾಬ್‌ ಡಿಸ್ಕವರಿ ಸೋಲುಷನ್‌ನ ವ್ಯವಸ್ಥಾಪಕ ನಿರ್ದೇಶಕರಾದ ಹಸ್ಮುಖ್‌ ರಾವಲ್.‌


ಸೋಂಕು ಹರಡುತ್ತಿರುವ ವೇಗಕ್ಕೆ ಸರಿಹೋಗಬೇಕೆಂದರೆ ಭಾರತಕ್ಕೆ ಆಂಟಿಜೆನ್‌ ಮತ್ತು ಆರ್‌ಟಿ-ಪಿಸಿಆರ್‌ ಎರಡೂ ಕಿಟ್‌ಗಳ ಅವಷ್ಯಕತೆ ಇದೆ ಎಂದು ಆರೋಗ್ಯ ಕ್ಷೇತ್ರದ ತಜ್ಞರು ಅಭಿಪ್ರಾಯಟ್ಟಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.


ಇದಕ್ಕೂ ಮುನ್ನ ಏಪ್ರಿಲ್‌ನಲ್ಲಿ, ಮೈಲಾಬ್ ಡಿಸ್ಕವರಿ ಸೊಲ್ಯೂಷನ್ಸ್, ಅದರ ಕಾರ್ಯಾಚರಣೆಗಳನ್ನು ಹೆಚ್ಚಿಸಲು ಮತ್ತು ಕೋವಿಡ್‌-19 ಪರೀಕ್ಷಾ ಕಿಟ್‌ಗಳ ವಿತರಣೆಯನ್ನು ವೇಗಗೊಳಿಸಲು ಸೇರಂ ಇಂಡಿಯಾ ಸಿಇಒ ಅದರ್ ಪೂನವಾಲ್ಲಾ ಮತ್ತು ಎಪಿ ಗ್ಲೋಬಲ್ ಅಧ್ಯಕ್ಷ ಅಭಿಜಿತ್ ಪವಾರ್ ಅವರೊಂದಿಗೆ ಸಹಭಾಗಿತ್ವವನ್ನು ಹೊಂದಿತ್ತು.


ಕಂಪನಿಯ ಪರೀಕ್ಷಾ ಕಿಟ್ ಸಿಡಿಎಸ್‌ಸಿಯಿಂದ ವಾಣಿಜ್ಯ ಅನುಮೋದನೆ ಪಡೆದ ಭಾರತದ ಮೊದಲ ಕಿಟ್ ಆಗಿದ್ದು, ಇದನ್ನು ಮೈಲ್ಯಾಬ್ ಪ್ಯಾಥೊ ಡಿಟೆಕ್ಟ್ ಕೋವಿಡ್‌-19 ಕ್ವಾಲಿಟೇಟಿವ್ ಪಿಸಿಆರ್ ಕಿಟ್ ಎಂದು ಹೆಸರಿಸಲಾಗಿದೆ.

ಮೈಲ್ಯಾಬ್‌ನ ಕೋವಿಡ್‌-19 ಪರೀಕ್ಷಾ ಕಿಟ್‌ ಕೇವಲ 2.5 ಗಂಟೆಗಳಲ್ಲೆ ಪರೀಕ್ಷೆಯ ಫಲಿತಾಂಶವನ್ನು ನೀಡುತ್ತದೆ, ಇದೇ ಪರೀಕ್ಷೆಗೆ ಪ್ರಸ್ತುತ ಬೇರೆ ಕಿಟ್‌ಗಳು 7 ಗಂಟೆಗಳನ್ನು ತೆಗೆದುಕೊಳ್ಳುತ್ತದೆ ಎಂದು ಕಂಪನಿ ಹೇಳಿದೆ.