Brands
Discover
Events
Newsletter
More

Follow Us

twitterfacebookinstagramyoutube
ADVERTISEMENT
Advertise with us

ಕೋವಿಡ್‌-19 ನಿರ್ಮೂಲನೆಗೆ 6 ವಿಶಿಷ್ಟ ಉತ್ಪನ್ನಗಳನ್ನು ಬಿಡುಗಡೆ ಮಾಡಿದ ಕರ್ನಾಟಕದ ನವೋದ್ಯಮಗಳು

ಕರ್ನಾಟಕ ಸರ್ಕಾರ ಬೆಂಬಲಿತ ನವೋದ್ಯಮಗಳು ಕೊರೊನಾವೈರಸ್‌ ನಿರ್ಮೂಲನೆ ಮಾಡಲು ಸಹಾಯವಾಗುವಂತಹ 6 ಸ್ಥಳೀಯ ಉತ್ಪನ್ನಗಳನ್ನು ತಯಾರಿಸಿದ್ದು, ಅವುಗಳನ್ನು ಈಗ ಆಮದುಮಾಡಿಕೊಳ್ಳಲಾಗುತ್ತಿದೆ ಎಂದು ರಾಜ್ಯದ ಉಪಮುಖ್ಯಮಂತ್ರಿ ಸಿ ಎನ್‌ ಅಶ್ವಥ್‌ ನಾರಾಯಣ ಮಂಗಳವಾರ ತಿಳಿಸಿದರು.

ಕೋವಿಡ್‌-19 ನಿರ್ಮೂಲನೆಗೆ 6 ವಿಶಿಷ್ಟ ಉತ್ಪನ್ನಗಳನ್ನು ಬಿಡುಗಡೆ ಮಾಡಿದ ಕರ್ನಾಟಕದ ನವೋದ್ಯಮಗಳು

Wednesday July 08, 2020 , 2 min Read

ಈ ಉತ್ಪನ್ನಗಳ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಐಟಿ-ಬಿಟಿ, ವಿಜ್ಞಾನ ಮತ್ತು ಉನ್ನತ ಶಿಕ್ಷಣ ಸಚಿವರಾದ ಆಶ್ವಥ್‌ ನಾರಾಯಣರವರು, ಇಂತಹ ಉತ್ಪನ್ನಗಳನ್ನು ಅಭಿವೃದ್ಧಿಪಡಿಸುವಲ್ಲಿ ಕನ್ನಡಿಗರು ಮುಖ್ಯ ಪಾತ್ರ ವಹಿಸಿದ್ದು ರಾಜ್ಯಕ್ಕೆ ಹೆಮ್ಮೆ ಪಡುವಂತಹ ವಿಷಯವಾಗಿದೆ ಎಂದರು.


ಉತ್ಪನ್ನಗಳ ಬಿಡುಗಡೆ ಮಾಡಿದ ಉಪಮುಖ್ಯಮಂತ್ರಿ ಆಶ್ವಥ್‌ ನಾರಾಯಣ. (ಚಿತ್ರಕೃಪೆ: ಟ್ವಿಟ್ಟರ್)



“ಕೊರೊನಾವೈರಸ್‌ ವಿರುದ್ಧ ಹೋರಾಡಲು ದುಬಾರಿ ಬೆಲೆಯ ಸಾಧನಗಳನ್ನು ಮತ್ತು ಉಪಕರಣಗಳನ್ನು ಆಮದು ಮಾಡಿಕೊಳ್ಳುವ ಭಾರವನ್ನು ಈ ಹೊಸ ಉತ್ಪನ್ನಗಳು ಕಡಿಮೆ ಮಾಡುತ್ತವೆ. ಈ ಮಟ್ಟದಲ್ಲಿ ಸಂಶೋಧನೆ ಕೈಗೊಂಡು, ಸ್ಥಳೀಯವಾಗಿ ಉಪಕರಣಗಳನ್ನು ತಯಾರಿಸಿರುವುದಕ್ಕೆ ನಾವೆಲ್ಲಾ ಹೆಮ್ಮೆ ಪಡಬೇಕು,” ಎಂದರು ಉಪಮುಖ್ಯಮಂತ್ರಿ.


ಈ 6 ಉತ್ಪನ್ನಗಳನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್) ಅನುಮೋದಿಸಿರುವುದರಿಂದ ಇವುಗಳನ್ನು ತಕ್ಷಣವೇ ಬಳಸಬಹುದಾಗಿದೆ. ಮತ್ತು ವಾಣಿಜ್ಯವಾಗಿ ಈ ಉತ್ಪನ್ನಗಳು ಲಭ್ಯವಿವೆ.


ಉತ್ನನ್ನಗಳು ಹೀಗಿವೆ: ಶೀಲ್ಡೆಕ್ಸ್ 24, ರಿವರ್ಸ್ ಟ್ರಾನ್ಸ್‌ಕ್ರಿಪ್ಷನ್-ಪಾಲಿಮರೇಸ್ ಚೈನ್ ರಿಯಾಕ್ಷನ್ (ಆರ್‌ಟಿಪಿಸಿಆರ್) ಪತ್ತೆಗಾಗಿ ಫ್ಲೋರೊಸೆಂಟ್ ಪ್ರೋಬ್ಸ್ ಮತ್ತು ಪಾಲಿಮರೇಸ್ ಚೈನ್ ರಿಯಾಕ್ಷನ್ (ಪಿಸಿಆರ್) ಮಿಶ್ರಣ, ದೂರಸ್ಥ ಭ್ರೂಣದ ಮೇಲ್ವಿಚಾರಣಾ ಸಾಧನವಾದ ದಕ್ಷ, ವೈರಲ್ ಟ್ರಾನ್ಸ್‌ಪೋರ್ಟ್ ಮೀಡಿಯಮ್, ಎಕ್ಸ್-ರೇ ಬಳಸಿಕೊಂಡು ಕೋವಿಡ್‌-19 ಸೋಂಕು ಪತ್ತೆ ಮಾಡುವ ಕೋವ್-ಅಸ್ಟ್ರಾ ಎಐ ಆಧಾರಿತ ಸಾಧನ ಮತ್ತು ಗಿಡಮೂಲಿಕೆಗಳನ್ನು ಒಳಗೊಂಡಿರುವ ಆಂಟಿ-ಮೈಕ್ರೊಬಿಯಲ್ ಫೇಸ್ ವಾಶ್.


ಐಟಿ-ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲದ ಪ್ರಕಾರ ಬಯೋಫಿಯ ರವಿ ಕುಮಾರ್‌ ಅಭಿವೃದ್ಧಿಪಡಿಸಿರುವ ಶಿಲ್ಡೆಕ್ಸ್‌-24, ಯಾವುದೇ ಮೇಲ್ಮೈ ಮೇಲಿರುವ ರೋಗಾಣುಗಳನ್ನು ಕೊಲ್ಲುತ್ತದೆ.


ಡಾ.ಗೋವಿಂದರಾಜನ್ ಮತ್ತು ವಿಎನ್‌ಐಆರ್‌ನ ಡಾ. ಮೆಹರ್ ಪ್ರಕಾಶ್ ಅವರ ಫ್ಲೋರೆಸೆನ್ಸ್ ಪ್ರೋಬ್ಸ್ ಕೋವಿಡ್-19 ಪರೀಕ್ಷಾ ಕಿಟ್‌ಗಳ ಭಾಗವಾಗಿದೆ.


ಜಾನಿಟ್ರಿಯ ಡಾ.ಅರುಣ್ ಅಗರ್‌ವಾಲ್ ಅಭಿವೃದ್ಧಿಪಡಿಸಿದ ದಕ್ಷ ಸಾಧನವು ಕೋವಿಡ್-19 ಸೋಂಕು ತಗುಲಿರುವ ಗರ್ಭಿಣಿ ಮಹಿಳೆಯರ ಭ್ರೂಣದ ದೂರಸ್ಥ ಮೇಲ್ವಿಚಾರಣೆಗೆ ಸಹಾಯ ಮಾಡುತ್ತದೆ.


ಐಬಿಎಬಿಯ ಡೆನೊ ಬಯೋ ಲ್ಯಾಬ್‌ಗಳಿಂದ ಮಂಜುನಾಥ ಮತ್ತು ದಿನೇಶ್ ಅಭಿವೃದ್ಧಿಪಡಿಸಿದ ವೈರಲ್ ಟ್ರಾನ್ಸ್‌ಪೋರ್ಟ್ ಮೀಡಿಯಂ, ಲೈವ್ ವೈರಸ್ ಮಾದರಿಯನ್ನು ಮಾದರಿ ಸಂಗ್ರಹ ಕೇಂದ್ರದಿಂದ ಪರೀಕ್ಷಾ ಪ್ರಯೋಗಾಲಯಕ್ಕೆ ಸುರಕ್ಷಿತವಾಗಿ ಸಾಗಿಸಲು ಸಹಾಯ ಮಾಡುತ್ತದೆ.


ಕೊರೊನಾವೈರಸ್ ಪತ್ತೆಗಾಗಿ ಎಐ ಆಧಾರಿತ ಸಾಧನವಾದ ಕೋವ್-ಅಸ್ತ್ರಾವನ್ನು ಐಂದ್ರಾದ ಆದರ್ಶ್ ನರರಾಜನ್ ಅಭಿವೃದ್ಧಿಪಡಿಸಿದ್ದಾರೆ. ಇದು ಎಕ್ಸರೆ ಮೂಲಕ ಕೋವಿಡ್-19 ಸೋಂಕನ್ನು ಪತ್ತೆಹಚ್ಚಬಲ್ಲ ಮಹತ್ವದ ಪ್ರಗತಿಯೆಂದು ಪರಿಗಣಿಸಲಾಗಿದೆ ಮತ್ತು ಜನರನ್ನು ಪರೀಕ್ಷಿಸುವ ಸಾಂಪ್ರದಾಯಿಕ ಗಂಟಲಿನ ದ್ರವ ಪರೀಕ್ಷೆಯ ವಿಧಾನಕ್ಕೆ ಪರ್ಯಾಯವಾಗಿದೆ.


ಪರೀಕ್ಷೆಯ ವೆಚ್ಚ ಗಣನೀಯವಾಗಿ ಅಗ್ಗವಾಗಿದ್ದು, ಒಂದು ಪರೀಕ್ಷೆಗೆ ರೂ. 150 ರಿಂದ 250 ಯಷ್ಟು ಖರ್ಚಾಗುತ್ತದೆ.


ಡಾ. ಲತಾ ಡ್ಯಾಮ್ಲೆ ಮತ್ತು ಆಟ್ರಿಮೆಡ್‌ನ ತಂಡವು ಅಭಿವೃದ್ಧಿಪಡಿಸಿದ ಗಿಡಮೂಲಿಕೆಗಳನ್ನು ಒಳಗೊಂಡಿರುವ ಆಂಟಿ-ಮೈಕ್ರೋಬಿಯಲ್ ಫೇಸ್ ವಾಶ್, ಕೋವಿಡ್-19 ವೈರಸ್ ಸೇರಿದಂತೆ ಯಾವುದೇ ವೈರಸ್‌ನ್ನು ಯಾವುದೇ ವ್ಯಕ್ತಿಯ ಮುಖದಿಂದ ಕೆಲವೆ ಸೆಕೆಂಡುಗಳಲ್ಲಿ ಕೊಲ್ಲಬಹುದು ಎಂದು ಇಲಾಖೆ ತಿಳಿಸಿದೆ.