ನಾಸಾದ ಉಪಗ್ರಹ ಟೆಸ್ ಭೂಮಿಯ ಗಾತ್ರದ ವಿಶ್ವವನ್ನು 'ಗೋಲ್ಡಿಲಾಕ್ಸ್ ವಲಯ'ದಲ್ಲಿ ಕಂಡುಹಿಡಿದಿದೆ

ಜನವರಿ 7ರಂದು ನಾಸಾ ತನ್ನ ಗ್ರಹ ಹುಡುಕುವ ಉಪಗ್ರಹ ಟೆಸ್ ನಕ್ಷತ್ರದ ವಾಸಯೋಗ್ಯ ವ್ಯಾಪ್ತಿಯಲ್ಲಿ ಭೂಮಿಯ ಗಾತ್ರದ ಜಗತ್ತನ್ನು ಕಂಡುಹಿಡಿದಿದೆ. ಇಲ್ಲಿ ದ್ರವ ನೀರಿನ ಉಪಸ್ಥಿತಿಯಿದೆ ಎಂದು ಹೇಳಿದ್ದಾರೆ.

ನಾಸಾದ ಉಪಗ್ರಹ ಟೆಸ್ ಭೂಮಿಯ ಗಾತ್ರದ ವಿಶ್ವವನ್ನು 'ಗೋಲ್ಡಿಲಾಕ್ಸ್ ವಲಯ'ದಲ್ಲಿ ಕಂಡುಹಿಡಿದಿದೆ

Wednesday January 08, 2020,

2 min Read

"ಟಿಓಐ 700 ಡಿ" ಎಂದು ಹೆಸರಿಸಲಾದ ಈ ಗ್ರಹವು ಭೂಮಿಗೆ ತುಲನಾತ್ಮಕವಾಗಿ ಹತ್ತಿರದಲ್ಲಿದೆ - ಕೇವಲ 100 ಬೆಳಕಿನ ವರ್ಷಗಳ ದೂರದಲ್ಲಿದೆ ಎಂದು ಹವಾಯಿಯ ಹೊನೊಲುಲು ನಲ್ಲಿ ನಡೆದ ವಾರ್ಷಿಕ ಅಮೇರಿಕನ್ ಖಗೋಳ ಸೊಸೈಟಿ ಸಭೆಯಲ್ಲಿ ನಾಸಾದ ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿ ಘೋಷಿಸಿದೆ.


ಹತ್ತಿರದ ನಕ್ಷತ್ರಗಳನ್ನು ಸುತ್ತುವ ಭೂಮಿಯ ಗಾತ್ರದ ಗ್ರಹಗಳನ್ನು ಕಂಡುಹಿಡಿಯಲು ಟೆಸ್ ಅನ್ನು ವಿಶೇಷವಾಗಿ ವಿನ್ಯಾಸಗೊಳಿಸಿ, ಪ್ರಾರಂಭಿಸಲಾಗಿದೆ ಎಂದು ನಾಸಾ ಖಗೋಳ ಭೌತಶಾಸ್ತ್ರ ವಿಭಾಗದ ನಿರ್ದೇಶಕ ಪಾಲ್ ಹರ್ಟ್ಜ್ ಹೇಳಿದರು.


ಟೆಸ್ ಆರಂಭದಲ್ಲಿ ನಕ್ಷತ್ರವನ್ನು ತಪ್ಪಾಗಿ ವರ್ಗೀಕರಿಸಿತ್ತು, ಏಕೆಂದರೆ ಗ್ರಹಗಳು ಅದರ ನಿಜ ರೂಪಕ್ಕಿಂತ ದೊಡ್ಡದಾಗಿ ಮತ್ತು ಬಿಸಿಯಾಗಿ ಕಾಣಿಸಿದ್ದವು. ಆದರೆ ಟೆಸ್ ತಂಡದ ಸದಸ್ಯರೊಂದಿಗೆ ಕೆಲಸ ಮಾಡುವ ಪ್ರೌಢ ಶಾಲಾ ವಿದ್ಯಾರ್ಥಿ ಆಲ್ಟನ್ ಸ್ಪೆನ್ಸರ್ ಸೇರಿದಂತೆ ಹಲವಾರು ಹವ್ಯಾಸಿ ಖಗೋಳಶಾಸ್ತ್ರಜ್ಞರು ದೋಷವನ್ನು ಗುರುತಿಸಿದ್ದಾರೆ.


Q

ಚಿತ್ರಕೃಪೆ: ನಾಸಾ

ನಾವು ನಕ್ಷತ್ರದ ಮಾನದಂಡಗಳನ್ನು ಸರಿಪಡಿಸಿದಾಗ ಅದರ ಗ್ರಹಗಳ ಗಾತ್ರವು ಕುಸಿಯಿತು ಮತ್ತು ಅತ್ಯಂತ ಹೊರಗಿನದು ಭೂಮಿಯ ಗಾತ್ರದಷ್ಟಿದೆ ಮತ್ತು ವಾಸಯೋಗ್ಯ ವಲಯದಲ್ಲಿದೆ ಎಂದು ನಾವು ಅರಿತುಕೊಂಡೆವು ಎಂದು ಚಿಕಾಗೊ ವಿಶ್ವವಿದ್ಯಾಲಯದ ಪದವೀಧರ ವಿದ್ಯಾರ್ಥಿ ಎಮಿಲಿ ಗಿಲ್ಬರ್ಟ್ ಹೇಳಿದರು.


ಆವಿಷ್ಕಾರವನ್ನು ನಂತರ ಸ್ಪಿಟ್ಜರ್ ಬಾಹ್ಯಾಕಾಶ ದೂರದರ್ಶಕ ದೃಢ ಪಡಿಸಿತು.


ಇದೇ ರೀತಿಯ ಇನ್ನೂ ಕೆಲವು ಗ್ರಹಗಳನ್ನು ಈ ಹಿಂದೆ ಕಂಡುಹಿಡಿಯಲಾಗಿದೆ, ಅವುಗಳನ್ನು ಮುಖ್ಯವಾಗಿ ಹಿಂದಿನ ಕೆಪ್ಲರ್ ಬಾಹ್ಯಾಕಾಶ ದೂರದರ್ಶಕದಿಂದ ಗುರುತಿಸಲಾಗಿದೆ, ಆದರೆ ಇದು ಟೆಸ್ ಕಂಡುಹಿಡಿದ ಮೊದಲನೆಯ ಗ್ರಹವಾಗಿದೆ. ಇದನ್ನು 2018 ರಲ್ಲಿ ಉಡಾವಣೆ ಮಾಡಲಾಗಿತ್ತು.


ವಸ್ತುಗಳು, ಗ್ರಹಗಳು, ನಕ್ಷತ್ರಗಳನ್ನು ಕಂಡುಹಿಡಿಯಲು ಆಕಾಶದ ಒಂದು ಪ್ರದೇಶದ ಮೇಲೆ ಟೆಸ್ ಸ್ಥಿರವಾಗಿ ನಿಲ್ಲುತ್ತದೆ. ವಸ್ತುಗಳು, ಗ್ರಹಗಳು, ನಕ್ಷತ್ರಗಳ ಮುಂದೆ ಹಾದುಹೋದಾಗ ನಕ್ಷತ್ರಗಳ ಪ್ರಕಾಶದಲ್ಲಿ ತಾತ್ಕಾಲಿಕ ಕುಸಿತ ಕಂಡುಬರುತ್ತದೆ. ಇದು ಟೆಸ್ ಗೆ ಗ್ರಹದ ಉಪಸ್ಥಿತಿ, ಅದರ ಗಾತ್ರ ಮತ್ತು ಕಕ್ಷೆಯನ್ನು ನಿರ್ಣಯಿಸಲು ಅನುವು ಮಾಡಿಕೊಡುತ್ತದೆ.


ಟಿಓಐ 700 ನಕ್ಷತ್ರ ಚಿಕ್ಕದಾಗಿದೆ. ಇದು ನಮ್ಮ ಸೂರ್ಯನ ಗಾತ್ರದ ಸುಮಾರು 40 ಪ್ರತಿಶತದಷ್ಟಿದೆ ಮತ್ತು ಅದರ ಅರ್ಧದಷ್ಟು ಬಿಸಿಯಾಗಿರುತ್ತದೆ.


ಟೆಸ್ ಕಕ್ಷೆಯಲ್ಲಿ ಮೂರು ಗ್ರಹಗಳನ್ನು ಕಂಡುಹಿಡಿದಿದೆ, ಇದನ್ನು ಟಿಓಐ 700 ಬಿ, ಸಿ ಮತ್ತು ಡಿ ಎಂದು ಹೆಸರಿಸಲಾಗಿದೆ. "ಡಿ" ಮಾತ್ರ ವಾಸಯೋಗ್ಯ ವಲಯದಲ್ಲಿದೆ. ಇದು ನಕ್ಷತ್ರದಿಂದ ತುಂಬಾ ದೂರದಲ್ಲಿಲ್ಲ ಹಾಗೂ ಹತ್ತಿರದಲ್ಲೂ ಇಲ್ಲ, ಅಲ್ಲಿ ತಾಪಮಾನವು ದ್ರವ ನೀರಿನ ಉಪಸ್ಥಿತಿಯನ್ನು ಅನುಮತಿಸುತ್ತದೆ.


ಇದು ಭೂಮಿಗೆ ಹೋಲಿಸಿದರೆ ಸುಮಾರು 20 ಪ್ರತಿಶತ ದೊಡ್ಡದಾಗಿದೆ ಮತ್ತು 37 ದಿನಗಳಲ್ಲಿ ತನ್ನ ನಕ್ಷತ್ರವನ್ನು ಪರಿಭ್ರಮಿಸುತ್ತದೆ. "ಡಿ" ಸೂರ್ಯನಿಂದ ಭೂಮಿಯು ಪಡೆಯುವ ಶೇಖಡಾ 86 ರಷ್ಟು ಶಕ್ತಿಯನ್ನು ಪಡೆಯುತ್ತದೆ.


“ಡಿ” ಗ್ರಹ ಯಾವುದರಿಂದ ರಚಿತವಾಗಿದೆ ಎಂದು ನೋಡಬೇಕಾಗಿದೆ. ವಾತಾವರಣದ ಸಂಯೋಜನೆ ಮತ್ತು ಮೇಲ್ಮೈ ತಾಪಮಾನವನ್ನು ಸಂಶೋಧಕರು ನಕ್ಷತ್ರದ ಗಾತ್ರ ಮತ್ತು ಪ್ರಕಾರವನ್ನು ಆಧರಿಸಿ ಮಾದರಿಗಳನ್ನು ರಚಿಸಿದ್ದಾರೆ.


ಒಂದು ಸಿಮ್ಯುಲೇಶನ್‌ನಲ್ಲಿ, ಗ್ರಹವು ಸಾಗರಗಳಲ್ಲಿ "ದಟ್ಟವಾದ ಇಂಗಾಲದ ಡೈಆಕ್ಸೈಡ್ ಪ್ರಾಬಲ್ಯದ ವಾತಾವರಣದಿಂದ ಆವೃತವಾಗಿದೆ ಎಂದಿದ್ದಾರೆ, ಇದು ವಿಜ್ಞಾನಿಗಳು ಮಂಗಳ ಗ್ರಹವನ್ನು ಅದು ಚಿಕ್ಕದಿರುವಾಗ ಭಾವಿಸಿದಂತಿದೆ," ಎಂದು ನಾಸಾ ವಿವರಿಸಿದೆ.


ಗ್ರಹವು ಉಬ್ಬರವಿಳಿತದಿಂದ ನಕ್ಷತ್ರಕ್ಕೆ ಲಾಕ್ ಆಗಿದೆ, ಅಂದರೆ ಚಂದ್ರ ಮತ್ತು ಭೂಮಿಯಂತೆಯೇ ಗ್ರಹದ ಒಂದು ಭಾಗ ಯಾವಾಗಲೂ ನಕ್ಷತ್ರವನ್ನು ಎದುರಿಸುತ್ತದೆ.


ಈ ಸಿಂಕ್ರೊನಸ್ ತಿರುಗುವಿಕೆಯು ಮತ್ತೊಂದು ಮಾದರಿಯಲ್ಲಿ ಗ್ರಹದ ಒಂದು ಬದಿಯನ್ನು ನಿರಂತರವಾಗಿ ಮೋಡಗಳಿಂದ ಆವರಿಸಿದೆ.


ಮೂರನೆಯ ಸಿಮ್ಯುಲೇಶನ್ ಪೂರ್ತಿಯಾಗಿ ನೆಲವಿರುವ ಪ್ರಪಂಚವನ್ನು ಸೂಚಿಸಿದೆ. ಅಲ್ಲಿ ಗಾಳಿಯು ಗ್ರಹದ ಕತ್ತಲಿನಿಂದ ಬೆಳಕಿನ ಕಡೆಗೆ ಹರಿಯುತ್ತದೆ.


ನಾಸಾದ ಮಾದರಿಗಳಲ್ಲಿ ಒಂದಕ್ಕೆ ಹೊಂದಿಕೆಯಾಗುವ ಹೊಸ ದತ್ತಾಂಶವನ್ನು ಪಡೆಯಲು ಅನೇಕ ಖಗೋಳಶಾಸ್ತ್ರಜ್ಞರು ಗ್ರಹವನ್ನು ಇತರ ಸಾಧನಗಳೊಂದಿಗೆ ವೀಕ್ಷಿಸುತ್ತಾರೆ.