ಅಮೇರಿಕದ ವಿಜ್ಞಾನ ಸಂಸ್ಥೆಯನ್ನು ಮುನ್ನಡೆಸಲಿದ್ದಾರೆ ಭಾರತೀಯ ಮೂಲದ ವಿಜ್ಞಾನಿ

ಅಮೇರಿಕಾದ ಪ್ರತಿಷ್ಠಿತ ರಾಷ್ಟೀಯ ವಿಜ್ಞಾನ ಪ್ರತಿಷ್ಠಾನದ ನೇತೃತ್ವ ವಹಿಸಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತೀಯ-ಅಮೇರಿಕನ್ ಕಂಪ್ಯೂಟರ್ ವಿಜ್ಞಾನಿ ಸೇತುರಾಮನ್ ಪಂಚನಾಥನ್ ಅವರನ್ನು ಆಯ್ಕೆ ಮಾಡಿದ್ದಾರೆ.

ಅಮೇರಿಕದ ವಿಜ್ಞಾನ ಸಂಸ್ಥೆಯನ್ನು ಮುನ್ನಡೆಸಲಿದ್ದಾರೆ ಭಾರತೀಯ ಮೂಲದ ವಿಜ್ಞಾನಿ

Saturday December 21, 2019,

2 min Read

ರಾಷ್ಟ್ರೀಯ ವಿಜ್ಞಾನ ಪ್ರತಿಷ್ಠಾನ(ಎನ್ಎಸ್ಎಫ್) ಅಮೇರಿಕಾದ ಸರ್ಕಾರಿ ಸಂಸ್ಥೆಯಾಗಿದ್ದು, ಇದು ಮೂಲಭೂತವಾಗಿ ವಿಜ್ಞಾನ ಮತ್ತು ಇಂಜಿನಿಯರಿಂಗ್‌ ಸೇರಿದಂತೆ ಎಲ್ಲಾ ವೈದ್ಯಕೀಯೇತರ ಕ್ಷೇತ್ರಗಳಲ್ಲಿನ ಸಂಶೋಧನಾ ಕಾರ್ಯ ಮತ್ತು ಶಿಕ್ಷಣವನ್ನು ಬೆಂಬಲಿಸುತ್ತದೆ. ಇದರ ವೈದ್ಯಕೀಯ ಪ್ರತಿರೂಪವೆ ರಾಷ್ಟೀಯ ಆರೋಗ್ಯ ಸಂಸ್ಥೆ (ಎನ್ಐಹೆಚ್).


"ಡಾ. ಸೇತುರಾಮನ್ ಪಂಚನಾಥನ್ ಈ ಸ್ಥಾನಕ್ಕೆ ತಮ್ಮ ಸಂಶೋಧನೆ, ನಾವೀನ್ಯತೆ, ಶೈಕ್ಷಣಿಕ ಹಿನ್ನೆಲೆ ಹಾಗೂ ಸುದೀರ್ಘ ಮತ್ತು ವಿಶಿಷ್ಟ ವೃತ್ತಿಜೀವನದಿಂದ ಆಯ್ಕೆಯಾಗಿದ್ದಾರೆ," ಎಂದು ಶ್ವೇತಭವನದ ವಿಜ್ಞಾನ ಮತ್ತು ತಾಂತ್ರಿಕ ನೀತಿಯ ನಿರ್ದೇಶಕ ಕೆಲ್ವಿನ್ ಡ್ರೋಜೆಮಿಯರ್ ಗುರುವಾರ ಹೇಳಿದರು.


ಡಾ. ಸೇತುರಾಮನ್ ಪಂಚನಾಥನ್




ಎನ್ಎಸ್ಎಫ್ ನಿರ್ದೇಶಕರಾಗಿ ಆರು ವರ್ಷಗಳ ಕಾಲ ಕಾರ್ಯ ನಿರ್ವಹಿಸಿದ ಫ್ರಾನ್ಸ್ ಕಾರ್ಡೊವಾರ ನಂತರ 2020ರಿಂದ ಮುಂದಿನ ಉತ್ತಾರಾಧಿಕಾರಿಯಾಗಿ ೫೮ರ ಪಂಚನಾಥನ್ ಆಯ್ಕೆಯಾಗಿದ್ದಾರೆ. ಎನ್ಎಸ್ಎಫ್ ನಿರ್ದೇಶಕ ಹುದ್ದೆಯು ಆಡಳಿತ ಮಂಡಳಿಯಿಂದ ಧೃಡಪಡಿಸುವಂತಹ ಹುದ್ದೆಯಾಗಿದೆ.


ಪಂಚನಾಥನ್ ಪ್ರಸ್ತುತ ಅರಿಜೋನಾ ರಾಜ್ಯ ವಿಶ್ವವಿದ್ಯಾಲಯದ (ಎಎಸ್‌ಯು) ಕಾರ್ಯನಿರತ ಉಪಾಧ್ಯಕ್ಷ ಮತ್ತು ಮುಖ್ಯ ಸಂಶೋಧನೆ ಮತ್ತು ಆವಿಷ್ಕಾರ ಅಧಿಕಾರಿಯಾಗಿದ್ದಾರೆ. ಅಲ್ಲದೇ ಕಾಗ್ನಿಟಿವ್ ಯುಬಿಕ್ವಿಟಸ್ ಕಂಪ್ಯೂಟಿಂಗ್ ಕೇಂದ್ರದ ಸ್ಥಾಪಕ ನಿರ್ದೇಶಕರಾಗಿದ್ದಾರೆ.


2014ರಲ್ಲಿ ರಾಷ್ಟೀಯ ವಿಜ್ಞಾನ ಮಂಡಳಿ(ಎನ್‌ಎಸ್‌ಬಿ)ಯಲ್ಲಿ ನೇಮಕವಾಗಿದ್ದ ಪಂಚನಾಥನ್ ಎನ್‌ಎಸ್‌ಬಿಯ ಕಾರ್ಯತಂತ್ರ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ‌. ಆವಿಷ್ಕಾರ ಮತ್ತು ಉದ್ಯಮಶೀಲತೆಯ ರಾಷ್ಟ್ರೀಯ ಸಲಹಾ ಮಂಡಳಿಯಲ್ಲಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.


"ಡಾ.ಪಂಚನಾಥನ್ ಅವರ ಹಲವಾರು ಸಾಧನೆಗಳನ್ನು ಮಾಡಿದ್ದಾರೆ ಮತ್ತು ಉತ್ತಮ ಮನ್ನಣೆಯನ್ನು ಪಡೆದಿದ್ದಾರೆ, ಇದರಲ್ಲಿ ರಾಷ್ಟ್ರೀಯ ವಿಜ್ಞಾನ ಮಂಡಳಿಯಲ್ಲಿ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದು ಸೇರಿದೆ," ಎಂದು ಡ್ರೋಗ್ಮಿಯರ್‌ ಹೇಳಿದರು.


"ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಅಮೇರಿಕ ಜಾಗತಿಕ ನಾಯಕತ್ವವನ್ನು ಖಾತರಿಪಡಿಸುವತ್ತ ಟ್ರಂಪ್ ಆಡಳಿತವು ತನ್ನ ಅನಿರ್ದಿಷ್ಟ ಗಮನವನ್ನು ಮುಂದುವರೆಸುವಂತೆ, ಡಾ.ಪಂಚನಾಥನ್ ಅವರ ಬದ್ಧತೆ, ಸೃಜನಶೀಲತೆ ಮತ್ತು ಆಳವಾದ ಒಳನೋಟಗಳು ರಾಷ್ಟೀಯ ವಿಜ್ಞಾನ ಪ್ರತಿಷ್ಠಾನ(ಎನ್ಎಸ್ಎಫ್)ವನ್ನು ಸಂಶೋಧನೆ ಮತ್ತು ಆವಿಷ್ಕಾರದ ಹಾದಿಯನ್ನು ಮುನ್ನಡೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ," ಎಂದರು.


ಪಂಚನಾಥನ್ ರವರು ನ್ಯಾಷನಲ್ ಅಕಾಡಮಿ ಅಫ್ ಇನ್ವೆಂಟರ್ಸ್ (ಎನ್ಎಐ)ನ ಕಾರ್ಯತಂತ್ರದ ಉಪಕ್ರಮಗಳ ಉಪಾಧ್ಯಕ್ಷರಾಗಿದ್ದರು. ಸಾರ್ವಜನಿಕ ಮತ್ತು ಭೂ-ಧನಸಹಾಯ ವಿಶ್ವವಿದ್ಯಾಲಯಗಳ ಸಂಘದ ಸಂಶೊಧ‌ನಾ ಮಂಡಳಿಯ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಜಾಗತಿಕ ಫೆಡರೇಷನ್ ಆಫ್ ಕಾಂಪಿಟಿವೆನಸ್ ಕೌನ್ಸಿಲ್ ಹಾಗೂ ಎಕ್ಸ್ಟ್ರೀಮ್ ಇನ್ನೋವೇಶನ್ ಟಾಸ್ಕ್ ಫೋರ್ಸ್ ನ ಸಹ-ಅಧ್ಯಕ್ಷರಾಗಿದ್ದರು.


2018ರಲ್ಲಿ ಅರಿಜೋನಾದ ಗವರ್ನರ್ ಡೌಗ್ ಡ್ಯೂಸಿರವರು‌ ವಿಜ್ಞಾನ ಮತ್ತು ತಂತ್ರಜ್ಞಾನದ ಹಿರಿಯ ಸಲಹೆಗಾರರಾಗಿ ಇವರನ್ನು ನೇಮಕ ಮಾಡಿದ್ದರು.


ಎನ್ಎಸ್ಎಫ್ ನಿರ್ದೇಶಕರಾಗಿ ಆಯ್ಕೆಯಾಗಿದ್ದಕ್ಕೆ ಪಂಚನಾಥನ್ "ವಿನಮ್ರವಾಗಿದೆ ಹಾಗೂ ಗೌರವಯುತವಾಗಿದೆ" ಎಂದು ಹೇಳಿಕೆಯೊಂದರಲ್ಲಿ ತಮ್ಮ ಖುಷಿಯನ್ನು ವ್ಯಕ್ತಪಡಿಸಿದ್ದಾರೆ.


ಪಂಚನಾಥನ್ 1981ರಲ್ಲಿ ಮದ್ರಾಸ್ ವಿಶ್ವವಿದ್ಯಾಲಯದಿಂದ ಭೌತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಹಾಗೂ 1984ರಲ್ಲಿ ಬೆಂಗಳೂರು ಮೂಲದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್ಸಿ)ನಿಂದ ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯೂನಿಕೇಶನ್ಸ್ ವಿಷಯದಲ್ಲಿ ಇಂಜನಿಯರಿಂಗ್ ಪದವಿ ಪಡೆದಿದ್ದಾರೆ.


ಮುಂದುವರೆದಂತೆ‌ 1986ರಲ್ಲಿ ಐಐಟಿ-ಮದ್ರಾಸ್‌ನಿಂದ ಎಲೆಕ್ಟ್ರಿಕಲ್ ಇಂಜನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದರು ಮತ್ತು 1989ರಲ್ಲಿ ಕೆನಡಾ ಮೂಲದ ಒಟ್ಟಾವಾ ವಿಶ್ವವಿದ್ಯಾಲಯದಿಂದ ಎಲೆಕ್ಟ್ರಿಕಲ್ ಮತ್ತು ಕಂಪ್ಯೂಟರ್ ಇಂಜನಿಯರಿಂಗ್‌ನಲ್ಲಿ ಪಿಎಚ್‌ಡಿ ಪದವಿಯನ್ನು ಗಳಿಸಿದರು.


"ಡಾ. ಪಂಚನಾಥನ್ ರವರ ಪರಿಣಿತಿ, ಸಮರ್ಪಣಾ ಮನೋಭಾವ, ನಾವೀನ್ಯತೆ ಮತ್ತು ತಾಂತ್ರಿಕತೆ ಎನ್ಎಸ್ಎಫ್ ಪ್ರೇರಕ ಶಕ್ತಿಯಾಗಿ ಮುಂದುವರೆಯುತ್ತದೆ ಎಂದು ಖಚಿತಪಡಿಸುತ್ತದೆ. ಕೃತಕ ಬುದ್ಧಿಮತ್ತೆಯಿಂದ ಕ್ವಾಂಟಮ್ ಮಾಹಿತಿ ವಿಜ್ಞಾನ ಮತ್ತು ಹೆಚ್ಚಿನ ಕಾರ್ಯಕ್ಷಮತೆಯ ಕಂಪ್ಯೂಟಿಂಗ್ ಅನುಕೂಲವಾಗುವ ಎಲ್ಲಾ ಅಮೇರಿಕನ್ ರಿಗೆ ತಂತ್ರಜ್ಞಾನಗಳ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಪಂಚನಾಥನ್ ಪ್ರಮುಖ ಪಾಲುದಾರರಾಗುತ್ತಾರೆ," ಎಂದು ಯುಎಸ್ ನ ಮುಖ್ಯ ತಂತ್ರಜ್ಞಾನ ಅಧಿಕಾರಿ ಮೈಕೆಲ್ ಕ್ರಾಟ್ಸಿಯೊಸ್ ಹೇಳಿದರು.