ಮಹಾರಾಷ್ಟ್ರದ ಗ್ರಾಮೀಣ ಭಾಗದ ಜನರಿಗೆ ನಿಸ್ವಾರ್ಥವಾಗಿ ಚಿಕಿತ್ಸೆ ನೀಡುತ್ತಿರುವ 80 ರ ವೈದ್ಯ

ಕಳೆದ 60 ವರ್ಷಗಳಿಂದ 87 ವರ್ಷದ ಹೊಮಿಯೋಪಥಿ ವೈದ್ಯ ರಾಮ್‌ಚಂದ್ರ ದಾಂಡೆಕರ್‌ ಅವರು ದೂರದ ಹಳ್ಳಿಗಳಿಗೆ ತೆರಳಿ ಚಿಕಿತ್ಸೆ ನೀಡುತ್ತಿದ್ದಾರೆ.

ಮಹಾರಾಷ್ಟ್ರದ ಗ್ರಾಮೀಣ ಭಾಗದ ಜನರಿಗೆ ನಿಸ್ವಾರ್ಥವಾಗಿ ಚಿಕಿತ್ಸೆ ನೀಡುತ್ತಿರುವ 80 ರ ವೈದ್ಯ

Thursday October 29, 2020,

2 min Read

ಕೊರನಾ ನಡುವೆ ಅದರಲ್ಲೂ ವೃದ್ಧಿರಿಗೆ ಅದರಿಂದ ಅಪಾಯ ಹೆಚ್ಚಾಗಿರುವಾಗಲೂ ಮಹಾರಾಷ್ಟ್ರದ ಚಂದಾಪೂರ್‌ ಜಿಲ್ಲೆಯ ವೃದ್ಧ ವೈದ್ಯರೊಬ್ಬರು ರೋಗಿಗಳಿಗೆ ಚಿಕಿತ್ಸೆ ನೀಡಲು ಪ್ರತಿದಿನ ಹಳ್ಳಿಗೆ ಪ್ರಯಾಣಿಸುತ್ತಿದ್ದಾರೆ.


ಕಳೆದ 60 ವರ್ಷಗಳಿಂದ 87 ವರ್ಷದ ಹೊಮಿಯೋಪಥಿ ವೈದ್ಯ ರಾಮ್‌ಚಂದ್ರ ದಾಂಡೆಕರ್‌ ಅವರು ದೂರದ ಹಳ್ಳಿಗಳಿಗೆ ತೆರಳಿ ಚಿಕಿತ್ಸೆ ನೀಡುತ್ತಿದ್ದಾರೆ. ಇವರು ಪ್ರತಿದಿನ ಹಳ್ಳಿಗೆ ತೆರಳಿ ಪಟ್ಟಣ ನಗರಗಳಿಗೆ ಹೋಗಲಾಗದ ರೋಗಿಗಳಿಗೆ ಚಿಕಿತ್ಸೆ ನೀಡುವುದು ಇವರ ದೈನಿಕ ಚಟುವಟಿಕೆಯಾಗಿದೆ.


“ಚಂದ್ರಾಪುರ ದೂರದ ಕಾಡು ಪ್ರದೇಶದಲ್ಲಿರುವ ಊರು, ಅಲ್ಲಿ ಬಸ್‌ ಹೋಗುವುದಿಲ್ಲ.‌ ಹಾಗಾಗಿ ಅಲ್ಲಿನ ಹಳ್ಳಿಗೆ ತೆರಳಿ ಜನರಿಗೆ ಚಿಕಿತ್ಸೆ ನೀಡಬೇಕೆಂದರೆ ನಡೆದುಕೊಂಡೊ ಅಥವಾ ಬೈಸಿಕಲ್‌ನಲ್ಲೆ ಹೋಗಬೇಕು. ಈ ಸಾಂಕ್ರಾಮಿಕದ ನಡುವೆ ತುಂಬಾ ಜನರಿಗೆ ಆಸ್ಪತ್ರೆಗೆ ಹೋಗಲಾಗದು ಹಾಗಾಗಿ ನಾನೆ ಅವರ ಮನೆಗೆ ಹೋಗಿ ಚಿಕಿತ್ಸೆ ನೀಡಲು ನಿರ್ಧರಿಸಿದೆ,” ಎಂದು ರಾಮಚಂದ್ರ ದಿ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌ಗೆ ಹೇಳಿದರು.


ಹೊಮಿಯೊಪಥಿಯಲ್ಲಿ ಡಿಪ್ಲೋಮಾ ಪಡೆದಿರುವ ಇವರು ಒಂದು ವರ್ಷ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡಿ ನಂತರ ಅವರ ಪರಿಚಯಸ್ಥರೊಬ್ಬರು ನೀವು ಗ್ರಾಮೀಣ ಭಾಗದಲ್ಲಿ ಕೆಲಸ ಮಾಡಿ ಎಂದಾಗ ಅದನ್ನು ತೊರೆದು ಅಂದಿನಿಂದ ಗ್ರಾಮೀಣ ಭಾಗದಲ್ಲಿ ತಮ್ಮ ಸೇವೆಯನ್ನು ನಡೆಸಿಕೊಂಡು ಬಂದಿದ್ದಾರೆ.

ರಾಮಚಂದ್ರ ದಾಂಡೇಕರ್‌ (ಚಿತ್ರಕೃಪೆ: ದಿ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌)


ಇವರು ಬೆಳಿಗ್ಗೆ 6:30 ಕ್ಕೆ ಬರಿಗಾಲಿನಲ್ಲಿ ಸೈಕಲ್‌ ಮೇಲೆ ಎರಡು ಔಷಧಿಗಳ ಬ್ಯಾಗ್‌, ಪರೀಕ್ಷಾ ಕಿಟ್‌ ಹಿಡಿದು ಹೊರಡುತ್ತಾರೆ, 12:30-1 ಗಂಟೆಗೆ ಮರಳುತ್ತಾರೆ. ಮತ್ತೆನಾದರೂ ಅವಷ್ಯಕತೆ ಇದ್ದರೆ ಇನ್ನೊಮ್ಮೆ ಹಳ್ಳಿಗೆ ಹೋಗಿ ಬರುತ್ತಾರೆ.


ಸಾಂಕ್ರಾಮಿಕದ ನಡುವೆಯೂ ಅವರು ಹಳ್ಳಿಗಳಿಗೆ ಹೋಗುವುದು ನಿಲ್ಲದೆ ಸಾಗಿದೆ.


ಪಿಟಿಐ ನೊಂದಿಗೆ ಮಾತನಾಡುತ್ತಾ ಅವರು, “ನನ್ನ ದಿನಚರಿ ಮೊದಲಿನಂತೆಯೆ ಇದೆ. ಹಳ್ಳಿಯ ಬಡವರಿಗೆ ಸೇವೆ ಮಾಡುವುದನ್ನು ಹೀಗೆ ಮುಂದುವರೆಸ ಬಯಸುತ್ತೇನೆ ನಾನು,” ಎಂದರು.


ಇಲ್ಲಿಯವರೆಗೂ ಸಾವಿರಾರು ರೋಗಿಗಳಿಗೆ ಐಚ್ಛಿಕವಾದ ಶುಲ್ಕ ಪಡೆದು ಚಿಕಿತ್ಸೆ ನೀಡಿದ್ದಾರೆ. ಅದು ರೋಗಿಯ ಕುಟುಂಬದ ಮೇಲೆ ಅವಲಂಬಿತವಾಗಿರುತ್ತದೆ. ಇದರ ಹೊರತಾಗಿಯೂ ಅವರು ತಮ್ಮ ನಿತ್ಯದ ಕಾಯಕವನ್ನು ಮುನ್ನಡೆಸಿಕೊಂಡು ಬಂದಿದ್ದಾರೆ.

“ನನಗೆ 87 ವಯಸ್ಸು ಆದರೆ ಸುಸ್ತಾಗಿಲ್ಲ, ನನಗೆ ಆರಾಮ ಮಾಡಬೇಕೆಂದು ಅನಿಸುವುದಿಲ್ಲ. ಜನರ ಸೇವೆ ಮಾಡಲು ಬಯಸುತ್ತೇನೆ; ಅದು ನನಗೆ ಶಕ್ತಿಯನ್ನು ನೀಡುತ್ತದೆ,” ಎನ್ನುತ್ತಾರೆ ಅವರು.