ದೆಹಲಿ-ಎನ್‌ಸಿಆರ್‌ನಲ್ಲಿ ರಿಯಲ್‌ ಟೈಮ್‌ ರಸ್ತೆ-ಮಟ್ಟದ ಗಾಳಿಯ ಗುಣಮಟ್ಟವನ್ನು ಅಳೆಯಲು ಓಲಾ ಮತ್ತು ಮೈಕ್ರೋಸಾಫ್ಟ್ ರಿಸರ್ಚ್ ಪಾಲುದಾರರಾಗಿದ್ದಾರೆ

ದೆಹಲಿ-ಎನ್‌ಸಿಆರ್‌ನಲ್ಲಿ ಗಾಳಿಯ ಗುಣಮಟ್ಟದ ಬಗ್ಗೆ ಮಾಹಿತಿ ಸಂಗ್ರಹಿಸಲು ಓಲಾ ತನ್ನ ವಾಹನಗಳಲ್ಲಿ ಸಂವೇದಕಗಳನ್ನು ಅಳವಡಿಸಲಿದೆ. ಓಲಾ ಮೊಬಿಲಿಟಿ ಇನ್ಸ್ಟಿಟ್ಯೂಟ್ ಮತ್ತು ಮೈಕ್ರೋಸಾಫ್ಟ್ ರಿಸರ್ಚ್ ಜಂಟಿ ಸಂಶೋಧನೆ ನಡೆಸಿ ಮಾಹಿತಿಯನ್ನು ಸಂಶೋಧಕರಿಗೆ ಮತ್ತು ನೀತಿ ನಿರೂಪಕರಿಗೆ ಸಾರ್ವಜನಿಕವಾಗಿ ಲಭ್ಯವಾಗುವಂತೆ ಮಾಡಲಿದೆ.

ದೆಹಲಿ-ಎನ್‌ಸಿಆರ್‌ನಲ್ಲಿ ರಿಯಲ್‌ ಟೈಮ್‌ ರಸ್ತೆ-ಮಟ್ಟದ ಗಾಳಿಯ ಗುಣಮಟ್ಟವನ್ನು ಅಳೆಯಲು ಓಲಾ ಮತ್ತು ಮೈಕ್ರೋಸಾಫ್ಟ್ ರಿಸರ್ಚ್ ಪಾಲುದಾರರಾಗಿದ್ದಾರೆ

Tuesday November 19, 2019,

2 min Read

ದೆಹಲಿ-ಎನ್‌ಸಿಆರ್‌ನಲ್ಲಿನ ಗಾಳಿಯ ಗುಣಮಟ್ಟದ ಬಗ್ಗೆ ಮಾಹಿತಿಯನ್ನು ಓಲಾ ಮತ್ತು ಮೈಕ್ರೋಸಾಫ್ಟ್ ರಿಸರ್ಚ್ ಪಾಲುದಾರರಾಗಿ ಕೆಲಸ ನಿರ್ವಹಿಸಲಿದ್ದಾರೆ, ಈ ಪ್ರದೇಶದಲ್ಲಿನ ವಾಯುಮಾಲಿನ್ಯದ ಅಪಾಯವನ್ನು ಎದುರಿಸಲು ಸರ್ಕಾರ ನಡೆಸುತ್ತಿರುವ ಪ್ರಯತ್ನಗಳಿಗೆ ಇದು ಸಹಾಯ ಮಾಡಲಿದೆ.


ಈ ಪಾಲುದಾರಿಕೆಯ ಭಾಗವಾಗಿ, ಓಲಾ ಮೊಬಿಲಿಟಿ ಇನ್ಸ್ಟಿಟ್ಯೂಟ್ ಮತ್ತು ಮೈಕ್ರೋಸಾಫ್ಟ್ ರಿಸರ್ಚ್ ಜಂಟಿಯಾಗಿ ಸಂಶೋಧನೆ ನಡೆಸಲು ಮತ್ತು ಸಂಗ್ರಹಿಸಿದ ಮಾಹಿತಿಯ ಆಧಾರದ ಮೇಲೆ ವರದಿಗಳು ಮತ್ತು ಒಳನೋಟಗಳನ್ನು ಪ್ರಕಟಿಸುತ್ತಾರೆ.


ಈ ತಿಂಗಳಿನಿಂದ ಪ್ರಾರಂಭವಾಗಲಿರುವ ಈ ಯೋಜನೆಯಿಂದ ದೆಹಲಿಯ ವಾಯುಮಾಲಿನ್ಯದಲ್ಲಿನ ವ್ಯತ್ಯಾಸವನ್ನು ವೀಕ್ಷಿಸಲು ಒಂದು ವರ್ಷದ ಅವಧಿಯಲ್ಲಿ ಲಕ್ಷಾಂತರ ಮಾಹಿತಿಗಳು ಸಂಗ್ರಹವಾಗಿರುತ್ತವೆ ಎಂದು ನಿರೀಕ್ಷಿಸಲಾಗಿದೆ.


ಪತ್ರಿಕಾ ಪ್ರಕಟಣೆಯ ಪ್ರಕಾರ, ಓಲಾ ಫ್ಲೀಟ್‌ನಲ್ಲಿ ಅಳವಡಿಸಲಾದ ಸಂವೇದಕಗಳ ಮೂಲಕ ಗಾಳಿಯ ಕಣಗಳ (ಪಿಎಂ 2.5) ಮಾಹಿತಿಯನ್ನು ಸಂಗ್ರಹಿಸಲಾಗುವುದು, ಇದಕ್ಕಾಗಿ ಅವುಗಳ ಗರಿಷ್ಠ ಭೌಗೋಳಿಕ ವ್ಯಾಪ್ತಿಯನ್ನು ಖಚಿತಪಡಿಸಿಕೊಳ್ಳಲು ಕಾಂಪ್ಲೆಕ್ಸ್ ಅಲ್ಗೋರಿದಮ್ ಆಧಾರದ ಮೇಲೆ ಕಾರುಗಳನ್ನು ಗುರುತಿಸಲಾಗಿದೆ. ಎಂಜಿನ್ ವಿಭಾಗದಲ್ಲಿ ಅಳವಡಿಸಲಿರುವ ಸಂವೇದಕಗಳನ್ನು ದೆಹಲಿ ಮೂಲದ ಪ್ಯೂರ್ಲಾಜಿಕ್ ಲ್ಯಾಬ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನಿರ್ಮಿಸಿದೆ.


ಪ್ರಾತಿನಿಧ್ಯ ಚಿತ್ರ


ಮೈಕ್ರೋಸಾಫ್ಟ್ ರಿಸರ್ಚ್ ಇಂಡಿಯಾದ ಉಪ ವ್ಯವಸ್ಥಾಪಕ ನಿರ್ದೇಶಕ ವೆಂಕಟ್ ಪದ್ಮನಾಭನ್,


ಮೈಕ್ರೋಸಾಫ್ಟ್ ರಿಸರ್ಚ್ ಇಂಡಿಯಾದಲ್ಲಿ, ಹೊಸ ತಂತ್ರಜ್ಞಾನದೊಂದಿಗೆ ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸುವ ಸಂಶೋಧನೆ ನಡೆಸುವ ದಾಖಲೆಯನ್ನು ನಾವು ಹೊಂದಿದ್ದೇವೆ. ಕ್ಲೌಡ್ ಮತ್ತು ಎಐ (ಎಸ್‌ಸಿಎಐ) ಯೋಜನೆಯ ಮೂಲಕ ಸಾಮಾಜಿಕ ಪ್ರಭಾವ ಬೀರುವಲ್ಲಿ ಸಮಾನ ಮನಸ್ಕ ಸಹಯೋಗಿಗಳೊಂದಿಗೆ ಜೊತೆಗೂಡುತ್ತೇವೆ. ವಾಯುಮಾಲಿನ್ಯವು ಒಂದು ದೊಡ್ಡ ಸವಾಲು, ಐಒಟಿ ಆಧಾರಿತ ಸಂವೇದನೆ ಮತ್ತು ಎಐನಂತಹ ಅತ್ಯಾಧುನಿಕ ತಂತ್ರಜ್ಞಾನಗಳಲ್ಲಿನ ನಮ್ಮ ಪರಿಣಿತಿಯೊಂದಿಗೆ ಕಠಿಣ ಸಂಶೋಧನಾ ಅಧ್ಯಯನವನ್ನು ಮಾಡುವ, ಗುರಿಯೊಂದಿಗೆ ಓಲಾ ಅವರೊಂದಿಗೆ ಪಾಲುದಾರಿಕೆ ಮಾಡಲು ನಾವು ಉತ್ಸುಕರಾಗಿದ್ದೇವೆ. ಇದು ಒಳ್ಳೆಯ ಪರಿಹಾರಗಳನ್ನು ನೀಡುತ್ತದೆ” ಎಂದರು.


ಈ ಯೋಜನೆಗೆ ಶಿಕ್ಷಣ ತಜ್ಞರು, ವಾಯುಮಾಲಿನ್ಯದ ಬಗ್ಗೆ ಪ್ರಮುಖ ಚಿಂತಕರು ಮತ್ತು ಸರ್ಕಾರದ ಅಧಿಕಾರಿಗಳು ತೀವ್ರ ಆಸಕ್ತಿಯನ್ನು ತೋರಿಸಿದ್ದಾರೆ. ಸಂಗ್ರಹಿಸಿದ ಮಾಹಿತಿಗಳನ್ನು ಸರ್ಕಾರಗಳು ಮತ್ತು ಪರಿಸರವಾದಿಗಳ ಪ್ರಸ್ತುತ ಪ್ರಯತ್ನಗಳಿಗೆ ಸಹಾಯವಾಗುತ್ತದೆ ಮತ್ತು ದೆಹಲಿ-ಎನ್‌ಸಿಆರ್‌ನಲ್ಲಿ ವಾಯುಮಾಲಿನ್ಯವನ್ನು ನಿಯಂತ್ರಿಸುವ ದೊಡ್ಡ ಯೋಜನೆಗಳಿಗೆ ಉಪಯೋಗವಾಗುತ್ತದೆ.


ಸಂಗ್ರಹಿಸಿದ ಮಾಹಿತಿಯನ್ನು ಡ್ಯಾಶ್‌ಬೋರ್ಡ್‌ಗಳು ಮತ್ತು ವರದಿಗಳ ರೂಪದಲ್ಲಿ ಸಾರ್ವಜನಿಕಗೊಳಿಸಲಾಗುತ್ತದೆ ಮತ್ತು ಈ ಪ್ರದೇಶದಲ್ಲಿನ ಸಂಶೋಧನೆಯನ್ನು ಬೆಂಬಲಿಸಲು ಕಚ್ಚಾ ಮಾಹಿತಿಯನ್ನು ತೆರೆದ ದತ್ತಾಂಶ ಸ್ವರೂಪಗಳಲ್ಲಿ ಒದಗಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.


ಪಾಲುದಾರಿಕೆಯ ಕುರಿತು ಮಾತನಾಡಿದ ಓಲಾ ಮೊಬಿಲಿಟಿ ಸಂಸ್ಥೆಯ ಮುಖ್ಯಸ್ಥ ಆನಂದ್ ಶಾ,


“ವಾಯುಮಾಲಿನ್ಯವು ಪರಿಸರದ ದೊಡ್ಡ ಸವಾಲುಗಳಲ್ಲಿ ಒಂದಾಗಿದೆ. ಈಗಿನ ಗಾಳಿಯ -ಗುಣಮಟ್ಟದ ಸಂವೇದಕಗಳು ಸುತ್ತುವರಿದ ಗಾಳಿಯ ಗುಣಮಟ್ಟವನ್ನು ಅಳೆಯುತ್ತವೆ ಆದರೆ ಇದು ಜನರು ಪ್ರತಿದಿನವೂ ಅನುಭವಿಸುತವ ರಸ್ತೆ ಮಟ್ಟದ ಮಾಲಿನ್ಯವನ್ನು ತೋರಿಸುವುದಿಲ್ಲ. ಈ ಯೋಜನೆಯು ಓಲಾ ಸಿಟಿ ಸೆನ್ಸ್‌ನ ಒಂದು ಭಾಗವಾಗಿದೆ, ಇದು ನಗರಗಳಿಗೆ ಒಳ್ಳೆಯ ಮಾಹಿತಿ ಆಧಾರಿತ ಒಳನೋಟಗಳನ್ನು ಒದಗಿಸುವ ಕಾರ್ಯಕ್ರಮವಾಗಿದೆ. ಈ ಅಧ್ಯಯನದಿಂದ ಪಡೆದ ಮಾಹಿತಿಯು ವಾಯುಮಾಲಿನ್ಯದ ಬಗ್ಗೆ ಈಗಾಗಲೇ ತಿಳಿದಿರುವ ಜ್ಞಾನಕ್ಕೆ ಹೊಸ ಆಯಾಮವನ್ನು ಸೇರಿಸುತ್ತದೆ ಮತ್ತು ಹೈಪರ್-ಲೋಕಲ್ ತಂತ್ರಗಳ ಮೂಲಕ ಸಮಸ್ಯೆಯನ್ನು ಎದುರಿಸಲು ಸಹಾಯ ಮಾಡುತ್ತದೆ ಎಂದು ನಮಗೆ ವಿಶ್ವಾಸವಿದೆ" ಎಂದರು.


ಈ ಮಾಹಿತಿಯು ಸಂಚಾರ ಮತ್ತು ವೇಗದ ಮಾಹಿತಿಯೊಂದಿಗೆ ನಗರದ ಪ್ರತಿಕೂಲ ಗಾಳಿಯ ಗುಣಮಟ್ಟದ ಹಾಟ್‌ಸ್ಪಾಟ್‌ಗಳ ಮಾಹಿತಿಯನ್ನು ಒದಗಿಸುತ್ತದೆ. ರಾಷ್ಟ್ರೀಯ ಶುದ್ಧ ವಾಯು ಕಾರ್ಯಕ್ರಮದ ಅನುಷ್ಠಾನವನ್ನು ಬೆಂಬಲಿಸಲು ಈ ಯೋಜನೆಯು ಇತರ ನಗರಗಳಲ್ಲಿ ಪುನರಾವರ್ತಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.